ಮಲೇಷ್ಯಾದ ಪ್ರಧಾನಮಂತ್ರಿ ಅವರೊಂದಿಗೆ ಅಧಿಕೃತ ಮಾತುಕತೆ ನಡೆಸಿದ ಪ್ರಧಾನಮಂತ್ರಿ ಮೋದಿ
February 08th, 11:19 am
ನಾಯಕರು ವ್ಯಾಪಕ ಚರ್ಚೆಗಳನ್ನು ನಡೆಸಿದರು ಮತ್ತು 2024ರಲ್ಲಿ ಉಭಯ ದೇಶಗಳ ನಡುವೆ ಸ್ಥಾಪಿಸಲಾದ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಸಹಮತ ವ್ಯಕ್ತಪಡಿಸಿದರು. ಪಾಲುದಾರಿಕೆ ಮತ್ತು ಜನರ ನಡುವಿನ ನಿಕಟ ಸಂಬಂಧದಲ್ಲಿ ನೆಲೆಯೂರಿರುವ ಭಾರತ-ಮಲೇಷ್ಯಾ ಹಳೆಯ ಬಾಂಧವ್ಯವನ್ನು ಅವರು ಸ್ಮರಿಸಿದರು. ವ್ಯಾಪಾರ, ಹೂಡಿಕೆ, ರಕ್ಷಣೆ, ಭದ್ರತೆ, ಸಮುದ್ರ, ಶುದ್ಧ ಇಂಧನ, ಮೂಲಸೌಕರ್ಯ, ನವೋದ್ಯಮಗಳು, ಕೃಷಿ, ಶಿಕ್ಷಣ, ಆರೋಗ್ಯ, ಆಯುರ್ವೇದ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಸಂಪರ್ಕಗಳಂತಹ ಆದ್ಯತೆಯ ಕ್ಷೇತ್ರಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ಆಯಾಮವನ್ನು ನಾಯಕರು ಪರಿಶೀಲಿಸಿದರು. ಸೆಮಿಕಂಡಕ್ಟರ್‌ಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಬಗ್ಗೆಯೂ ಅವರು ಚರ್ಚಿಸಿದರು. 'ದ್ವಿಪಕ್ಷೀಯ ಡಿಜಿಟಲ್ ಮಂಡಳಿ' ಮೂಲಕ ಉಭಯ ದೇಶಗಳ ನಡುವಿನ ಡಿಜಿಟಲ್ ಸಹಕಾರದ ಸ್ಥಿರ ಪ್ರಗತಿಯನ್ನು ನಾಯಕರು ಶ್ಲಾಘಿಸಿದರು. ಇದೇವೇಳೆ 'ಫಿನ್‌ಟೆಕ್' ಕ್ಷೇತ್ರದಲ್ಲಿ ಸಹಯೋಗವನ್ನು ಹೆಚ್ಚಿಸಲು 'ಯುಪಿಐ' ಮತ್ತು 'ಪೇ-ನೆಟ್' ನಡುವಿನ ಒಪ್ಪಂದವನ್ನು ಅವರು ಸ್ವಾಗತಿಸಿದರು.ಕುವೈತ್ ನ ಕಾರ್ಮಿಕ ಶಿಬಿರಕ್ಕೆ ಪ್ರಧಾನಮಂತ್ರಿಯವರ ಭೇಟಿ
December 21st, 07:00 pm
ಕುವೈತ್ ಭೇಟಿಯ ಮೊದಲ ಕಾರ್ಯಕ್ರಮವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕುವೈತ್ ನ ಮಿನಾ ಅಬ್ದುಲ್ಲಾ ಪ್ರದೇಶದಲ್ಲಿರುವ ಸುಮಾರು 1500 ಭಾರತೀಯ ಪ್ರಜೆಗಳ ಕಾರ್ಮಿಕ ಶಿಬಿರಕ್ಕೆ ಭೇಟಿ ನೀಡಿದರು. ಪ್ರಧಾನಮಂತ್ರಿಯವರು ಭಾರತದ ವಿವಿಧ ರಾಜ್ಯಗಳ ಅನೇಕ ವರ್ಗದ ಭಾರತೀಯ ಕಾರ್ಮಿಕರೊಂದಿಗೆ ಸಂವಾದ ನಡೆಸಿ, ಅವರ ಯೋಗಕ್ಷೇಮವನ್ನು ವಿಚಾರಿಸಿದರು.Smiles and snacks in Qatar
June 04th, 10:28 pm
PM visits Workers Camp in Doha
June 04th, 09:54 pm