ಐ.ಎನ್.ಎಸ್. ವಿಕ್ರಾಂತ್ ನಲ್ಲಿ ದೀಪಾವಳಿ ಆಚರಣೆಯ ಕ್ಷಣಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ
October 21st, 09:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಐ.ಎನ್.ಎಸ್. ವಿಕ್ರಾಂತ್ ನಲ್ಲಿ ಭಾರತೀಯ ನೌಕಾಪಡೆಯೊಂದಿಗೆ ಆಚರಿಸಿದ ದೀಪಾವಳಿ ಆಚರಣೆಯ ಕ್ಷಣಗಳನ್ನು ಹಂಚಿಕೊಂಡರು. ಈ ದಿನವು ಒಂದು ಗಮನಾರ್ಹ ದಿನ, ಒಂದು ಗಮನಾರ್ಹ ಕ್ಷಣ ಮತ್ತು ಒಂದು ಗಮನಾರ್ಹ ದೃಶ್ಯವಾಗಿತ್ತು ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಒಂದು ಕಡೆ ವಿಶಾಲ ಸಾಗರ ಮತ್ತು ಇನ್ನೊಂದು ಕಡೆ ಭಾರತ ಮಾತೆಯ ಧೈರ್ಯಶಾಲಿ ಸೈನಿಕರ ಅಗಾಧ ಶಕ್ತಿಯನ್ನು ಪ್ರದರ್ಶಿಸುತ್ತದೆ. ಒಂದು ಕಡೆ ಅನಂತ ದಿಗಂತ ಮತ್ತು ಮಿತಿಯಿಲ್ಲದ ಆಕಾಶವನ್ನು ಪ್ರಸ್ತುತಪಡಿಸಿದರೆ, ಇನ್ನೊಂದು ಕಡೆ ಅನಂತ ಶಕ್ತಿಯನ್ನು ಸಾಕಾರಗೊಳಿಸುವ ಐ.ಎನ್.ಎಸ್. ವಿಕ್ರಾಂತ್ ನ ಬೃಹತ್ ಶಕ್ತಿಯನ್ನು ಪ್ರದರ್ಶಿಸುತ್ತದೆ. ಸಮುದ್ರದ ಮೇಲಿನ ಸೂರ್ಯನ ಬೆಳಕಿನ ಹೊಳಪು ದೀಪಾವಳಿಯ ಸಮಯದಲ್ಲಿ ವೀರ ಸೈನಿಕರು ಬೆಳಗಿದ ದೀಪಗಳನ್ನು ಹೋಲುತ್ತದೆ, ಇದು ದೀಪಗಳ ದೈವಿಕ ಹಾರವನ್ನು ಸ್ಪಷ್ಟವಾಗಿ ರೂಪಿಸುತ್ತದೆ ಎಂದು ಹೇಳಿದರು. ಭಾರತೀಯ ನೌಕಾಪಡೆಯ ಧೈರ್ಯಶಾಲಿ ಸಿಬ್ಬಂದಿಯ ಜೊತೆಗೆ ಈ ದೀಪಾವಳಿ ಹಬ್ಬವನ್ನು ಆಚರಿಸಲು ದೊರಕಿದ ಅವಕಾಶವನ್ನು ಬಹುದೊಡ್ಡ ಸೌಭಾಗ್ಯವೆಂದು ಅವರು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.ಐ.ಎನ್.ಎಸ್ ವಿಕ್ರಾಂತ್ ನಲ್ಲಿ ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಭಾಷಣ
October 20th, 10:30 am
ಇಂದು ಅದ್ಭುತ ದಿನ, ಈ ಕ್ಷಣವನ್ನು ಮರೆಯಲಾಗದು, ಇವತ್ತಿನ ಈ ದೃಶ್ಯ ಅಸಾಧಾರಣವಾಗಿದೆ. ನನ್ನ ಒಂದು ಬದಿಯಲ್ಲಿ ವಿಶಾಲವಾದ ಅಮಿತ ಸಾಗರವಿದೆ, ಇನ್ನೊಂದು ಬದಿಯಲ್ಲಿ ಭಾರತ ಮಾತೆಯ ಧೈರ್ಯಶಾಲಿ ಸೈನಿಕರ ಅಪಾರ ಶಕ್ತಿಯೇ ಇದೆ. ನನ್ನ ಒಂದು ಬದಿಯಲ್ಲಿ ಅನಂತ ದಿಗಂತ ಮತ್ತು ಅಂತ್ಯ ಕಾಣದ ಆಗಸವಿದೆ, ಇನ್ನೊಂದು ಬದಿಯಲ್ಲಿ ತನ್ನೊಳಗೆ ಅನಂತ ಶಕ್ತಿಯನ್ನು ಸಾಕಾರಗೊಳಿಸುವ ಪ್ರಬಲ ಮತ್ತು ಭವ್ಯವಾದ ಐಎನ್ಎಸ್ ವಿಕ್ರಾಂತ್ ನೆಲೆ ನಿಂತಿದೆ. ಸಾಗರ ನೀರಿನ ಮೇಲೆ ಸೂರ್ಯನ ಬೆಳಕಿನ ಹೊಳಪು, ಒಂದು ರೀತಿಯಲ್ಲಿ, ನಮ್ಮ ಧೈರ್ಯಶಾಲಿ ಸೈನಿಕರು ಬೆಳಗಿದ ದೀಪಾವಳಿ ದೀಪಗಳಂತೆ ಕಾಣುತ್ತಿದ್ದಾರೆ. ಇವು ನಮ್ಮ ದೈವಿಕ ಬೆಳಕಿನ ಹಾರಗಳಾಗಿವೆ. ಈ ಬಾರಿ ನಾನು ನಮ್ಮ ನೌಕಾಪಡೆಯ ಅಪ್ರತಿಮ ಯೋಧರ ನಡುವೆ ದೀಪಾವಳಿಯ ಪವಿತ್ರ ಹಬ್ಬ ಆಚರಿಸುತ್ತಿರುವುದು ನನ್ನ ಪಾಲಿನ ದೊಡ್ಡ ಅದೃಷ್ಟವೇ ಆಗಿದೆ.PM Modi celebrates Diwali on board the INS Vikrant
October 20th, 10:00 am
In his address to the armed forces personnel on board INS Vikrant, PM Modi extended heartfelt Diwali greetings to the countrymen. He highlighted that, inspired by Chhatrapati Shivaji Maharaj, the Indian Navy has adopted a new flag. Recalling various operations, the PM emphasized that India stands ready to provide humanitarian assistance anywhere in the world. He also noted that over 100 districts have now fully emerged from Maoist terror.ವಾಯುಪಡೆ ದಿನದಂದು ವಾಯು ಯೋಧರು ಮತ್ತು ಅವರ ಕುಟುಂಬಗಳಿಗೆ ಶುಭ ಕೋರಿದ ಪ್ರಧಾನಮಂತ್ರಿ
October 08th, 09:58 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾಯುಪಡೆ ದಿನದಂದು ಎಲ್ಲಾ ಧೈರ್ಯಶಾಲಿ ವಾಯು ಯೋಧರು ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ.ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಮಂತ್ರಿ ಸಂವಾದ
August 19th, 09:43 am
ಹಾಗಾದರೆ, ಆಸನ ವ್ಯವಸ್ಥೆಗೆ ಸಂಬಂಧಿಸಿದಂತೆ, ಅದು ಹಾಗೆಯೇ ಉಳಿದಿದೆಯೇ?ಗಗನಯಾತ್ರಿ ಶುಭಾಂಶು ಶುಕ್ಲಾ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
August 19th, 09:42 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ನಿನ್ನೆ ಗಗನಯಾತ್ರಿ ಶುಭಾಂಶು ಶುಕ್ಲಾ ಅವರೊಂದಿಗೆ ಸಂವಾದ ನಡೆಸಿದರು. ಬಾಹ್ಯಾಕಾಶ ಪಯಣದ ಪರಿವರ್ತನಾತ್ಮಕ ಅನುಭವಗಳ ಬಗ್ಗೆ ಬೆಳಕು ಚೆಲ್ಲಿದ, ಪ್ರಧಾನಮಂತ್ರಿ ಅವರು, ಇಂತಹ ಮಹತ್ವದ ಪ್ರಯಾಣವನ್ನು ಕೈಗೊಂಡ ನಂತರ, ಒಬ್ಬರ ಬದಲಾವಣೆಯನ್ನು ಅನುಭವಿಸಬೇಕು ಎಂದು ಹೇಳಿದರು ಮತ್ತು ಗಗನಯಾತ್ರಿಗಳು ಈ ಪರಿವರ್ತನೆಯನ್ನು ಹೇಗೆ ಗ್ರಹಿಸುತ್ತಾರೆ ಮತ್ತು ಅನುಭವಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಪ್ರಧಾನಮಂತ್ರಿ ಅವರ ಮಾತಿಗೆ ಪ್ರತಿಕ್ರಿಯಿಸಿದ ಶುಭಾಂಶು ಶುಕ್ಲಾ, ಬಾಹ್ಯಾಕಾಶದಲ್ಲಿನ ಪರಿಸರವು ಅತ್ಯಂತ ವಿಭಿನ್ನವಾಗಿದೆ, ಗುರುತ್ವಾಕರ್ಷಣೆಯ ಅನುಪಸ್ಥಿತಿಯು ಪ್ರಮುಖ ಅಂಶವಾಗಿದೆ ಎಂದು ಹೇಳಿದರು.ಫಿಲಿಪೈನ್ಸ್ ಗಣರಾಜ್ಯದ ಅಧ್ಯಕ್ಷರ ಭಾರತ ಭೇಟಿ: ಫಲಪ್ರದತೆಯ ವಿವರ
August 05th, 04:31 pm
ಭಾರತ ಗಣರಾಜ್ಯ ಮತ್ತು ಫಿಲಿಪೈನ್ಸ್ ಗಣರಾಜ್ಯದ ನಡುವೆ ಕಾರ್ಯತಂತ್ರದ ಸಹಭಾಗಿತ್ವದ ಸ್ಥಾಪಿಸುವ ಘೋಷಣೆಆದಂಪುರ ವಾಯುನೆಲೆಯಲ್ಲಿ ವೀರ ವಾಯುಪಡೆ ಯೋಧರು ಮತ್ತು ಸಮರ ವೀರರೊಂದಿಗೆ ಪ್ರಧಾನಮಂತ್ರಿ ಸಂವಾದ
May 13th, 03:45 pm
ಈ ಘೋಷಣೆಯ ಶಕ್ತಿಯನ್ನು ಜಗತ್ತು ಇದೀಗವಷ್ಟೇ ನೋಡಿದೆ. ಭಾರತ್ ಮಾತಾ ಕಿ ಜೈ ಎಂಬುದು ಕೇವಲ ಘೋಷಣೆಯಲ್ಲ, ಭಾರತ ಮಾತೆಯ ಗೌರವ ಮತ್ತು ಘನತೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡುವ ದೇಶದ ಪ್ರತಿಯೊಬ್ಬ ಸೈನಿಕನ ಪ್ರಮಾಣವಚನ ಇದಾಗಿದೆ. ದೇಶಕ್ಕಾಗಿ ಬದುಕಲು ಬಯಸುವ, ಏನನ್ನಾದರೂ ಸಾಧಿಸಲು ಬಯಸುವ ದೇಶದ ಪ್ರತಿಯೊಬ್ಬ ನಾಗರಿಕನ ಧ್ವನಿ ಇದಾಗಿದೆ. ಭಾರತ್ ಮಾತಾ ಕಿ ಜೈ ಎಂಬುದು ಯುದ್ಧಭೂಮಿಯಲ್ಲಿ ಮತ್ತು ಕಾರ್ಯಾಚರಣೆಯಲ್ಲಿ ಪ್ರತಿಧ್ವನಿಸುತ್ತದೆ. ಭಾರತದ ಸೈನಿಕರು ಭಾರತ್ ಮಾತಾ ಕಿ ಜೈ ಎಂದು ಜಪಿಸಿದಾಗ, ಶತ್ರುಗಳ ಹೃದಯ ನಡುಗುತ್ತದೆ. ನಮ್ಮ ಡ್ರೋನ್‌ಗಳು ಶತ್ರುಗಳ ಕೋಟೆಯ ಗೋಡೆಗಳನ್ನು ಉರುಳಿಸಿದಾಗ, ನಮ್ಮ ಕ್ಷಿಪಣಿಗಳು ಭಾರಿ ಶಬ್ದದೊಂದಿಗೆ ಗುರಿ ತಲುಪಿದಾಗ, ಶತ್ರು ಕೇಳುತ್ತಾನೆ - ಭಾರತ್ ಮಾತಾ ಕಿ ಜೈ! ಘೋಷಣೆಯನ್ನ. ರಾತ್ರಿಯ ಕಗ್ಗತ್ತಲೆಯಲ್ಲೂ ನಾವು ಸೂರ್ಯನನ್ನು ಬೆಳಗಿದಾಗ, ಶತ್ರು ನೋಡುತ್ತಾನೆ - ಭಾರತ್ ಮಾತಾ ಕಿ ಜೈ! ನಮ್ಮ ಪಡೆಗಳು ಪರಮಾಣು ಬೆದರಿಕೆಯನ್ನು ಹುಸಿಗೊಳಿಸಿದಾಗ, ಆಕಾಶದಿಂದ ಭೂಗತ ಲೋಕಕ್ಕೆ ಒಂದೇ ಒಂದು ವಿಷಯ ಪ್ರತಿಧ್ವನಿಸುತ್ತದೆ, ಅದೇ - ಭಾರತ್ ಮಾತಾ ಕಿ ಜೈ!ಆದಂಪುರ ವಾಯುಪಡೆ ನಿಲ್ದಾಣದಲ್ಲಿ ಧೈರ್ಯಶಾಲಿ ವಾಯುಪಡೆ ಯೋಧರು ಮತ್ತು ಸೈನಿಕರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ
May 13th, 03:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆದಂಪುರದ ವಾಯುಪಡೆ ನಿಲ್ದಾಣದಲ್ಲಿಂದು ವೀರ ವಾಯುಪಡೆ ಯೋಧರು ಮತ್ತು ಸೈನಿಕರನ್ನು ಭೇಟಿ ಮಾಡಿ ಸಂವಾದ ನಡೆಸಿದರು. ಅವರ ಜತೆ ಮಾತನಾಡಿದ ಅವರು, 'ಭಾರತ್ ಮಾತಾ ಕಿ ಜೈ' ಘೋಷಣೆಯ ಶಕ್ತಿಯನ್ನು ಜಗತ್ತು ಇದೀಗಷ್ಟೇ ಕಂಡಿದೆ. ಇದು ಕೇವಲ ಮಂತ್ರವಲ್ಲ, ಭಾರತ ಮಾತೆಯ ಘನತೆ ಎತ್ತಿಹಿಡಿಯಲು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಪ್ರತಿಯೊಬ್ಬ ಸೈನಿಕನು ತೆಗೆದುಕೊಳ್ಳುವ ಗಂಭೀರ ಪ್ರಮಾಣವಚನ ಇದಾಗಿದೆ. ಈ ಘೋಷಣೆಯು ರಾಷ್ಟ್ರಕ್ಕಾಗಿ ಬದುಕಲು ಮತ್ತು ಅರ್ಥಪೂರ್ಣ ಕೊಡುಗೆ ನೀಡಲು ಬಯಸುವ ಪ್ರತಿಯೊಬ್ಬ ನಾಗರಿಕನ ಧ್ವನಿಯಾಗಿದೆ. 'ಭಾರತ್ ಮಾತಾ ಕಿ ಜೈ' ಯುದ್ಧಭೂಮಿಯಲ್ಲಿ ಮತ್ತು ನಿರ್ಣಾಯಕ ಕಾರ್ಯಾಚರಣೆಗಳಲ್ಲಿ ಪ್ರತಿಧ್ವನಿಸುತ್ತದೆ. ಭಾರತೀಯ ಸೈನಿಕರು 'ಭಾರತ್ ಮಾತಾ ಕಿ ಜೈ' ಎಂದು ಜಪಿಸಿದಾಗ, ಅದು ಶತ್ರುಗಳ ಬೆನ್ನುಮೂಳೆಯಲ್ಲಿ ನಡುಕ ಉಂಟುಮಾಡುತ್ತದೆ. ಅವರು ಭಾರತದ ಸೇನಾ ಶಕ್ತಿಯನ್ನು ಶ್ಲಾಘಿಸಿದ ಅವರು, ಭಾರತೀಯ ಡ್ರೋನ್‌ಗಳು ಶತ್ರುಗಳ ಕೋಟೆಗಳನ್ನು ಕೆಡವಿದಾಗ ಮತ್ತು ಕ್ಷಿಪಣಿಗಳು ನಿಖರವಾಗಿ ದಾಳಿ ಮಾಡಿದಾಗ, ಶತ್ರುವು 'ಭಾರತ್ ಮಾತಾ ಕಿ ಜೈ' ಎಂಬ ಒಂದೇ ಒಂದು ಪದ ಕೇಳುತ್ತಾನೆ. ಅತ್ಯಂತ ಕತ್ತಲೆಯ ರಾತ್ರಿಗಳಲ್ಲೂ ಭಾರತವು ಆಕಾಶವನ್ನು ಬೆಳಗಿಸುವ ಸಾಮರ್ಥ್ಯ ಹೊಂದಿದೆ, ಶತ್ರುಗಳು ರಾಷ್ಟ್ರದ ಅದಮ್ಯ ಚೈತನ್ಯವನ್ನು ವೀಕ್ಷಿಸುವಂತೆ ಮಾಡಿದೆ. ಭಾರತದ ಪಡೆಗಳು ಪರಮಾಣು ಬೆದರಿಕೆಯನ್ನು ಕಳಚಿದಾಗ, 'ಭಾರತ್ ಮಾತಾ ಕಿ ಜೈ' ಎಂಬ ಸಂದೇಶವು ಆಕಾಶ ಮತ್ತು ಆಳದಲ್ಲಿ ಪ್ರತಿಧ್ವನಿಸಿದೆ ಎಂದು ಅವರು ಘೋಷಿಸಿದರು.ರಾಷ್ಟ್ರವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
May 12th, 08:48 pm
ಕಳೆದ ಕೆಲ ದಿನಗಳಲ್ಲಿ ದೇಶದ ಶಕ್ತಿ ಮತ್ತು ಸಂಯಮ ಎರಡನ್ನೂ ನಾವೆಲ್ಲರೂ ನೋಡಿದ್ದೇವೆ. ಮೊದಲನೆಯದಾಗಿ, ಪ್ರತಿಯೊಬ್ಬ ಭಾರತೀಯನ ಪರವಾಗಿ ನಾನು ಭಾರತದ ಬಲಿಷ್ಠ ಪಡೆಗಳಿಗೆ, ನಮ್ಮ ಸಶಸ್ತ್ರ ಪಡೆಗಳಿಗೆ, ನಮ್ಮ ಗುಪ್ತಚರ ಸಂಸ್ಥೆಗಳಿಗೆ ಮತ್ತು ನಮ್ಮ ವಿಜ್ಞಾನಿಗಳಿಗೆ ನಮಸ್ಕರಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು
May 12th, 08:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಭಾರತದ ಶಕ್ತಿ ಮತ್ತು ಸಂಯಮ ಎರಡನ್ನೂ ದೇಶ ಕಂಡಿದೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು. ಪ್ರತಿಯೊಬ್ಬ ಭಾರತೀಯ ನಾಗರಿಕನ ಪರವಾಗಿ ಅವರು ದೇಶದ ಅಜೇಯ ಸಶಸ್ತ್ರ ಪಡೆಗಳು, ಗುಪ್ತಚರ ಸಂಸ್ಥೆಗಳು ಮತ್ತು ವಿಜ್ಞಾನಿಗಳಿಗೆ ತಮ್ಮ ನಮನ ಸಲ್ಲಿಸಿದರು. ಆಪರೇಷನ್ ಸಿಂಧೂರದ ಉದ್ದೇಶಗಳನ್ನು ಸಾಧಿಸುವಲ್ಲಿ ಭಾರತದ ವೀರಯೋಧರು ಪ್ರದರ್ಶಿಸಿದ ಅಚಲ ಧೈರ್ಯವನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು, ಅವರ ಶೌರ್ಯ, ದೃಢತೆ ಮತ್ತು ಅದಮ್ಯ ಚೈತನ್ಯವನ್ನು ಶ್ಲಾಘಿಸಿದರು. ಪ್ರಧಾನಿಯವರು ಈ ಅಪ್ರತಿಮ ಶೌರ್ಯವನ್ನು ದೇಶದ ಪ್ರತಿಯೊಬ್ಬ ತಾಯಿ, ಸಹೋದರಿ ಮತ್ತು ಮಗಳಿಗೆ ಅರ್ಪಿಸಿದರು.ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ಸಶಸ್ತ್ರ ಪಡೆಗಳು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ವಿಶಿಷ್ಟ ರೀತಿಯಲ್ಲಿ ಗೌರವಿಸಿರುವುದು ವಿಶೇಷ ಕ್ಷಣಗಳಾಗಿವೆ : ಪ್ರಧಾನಮಂತ್ರಿ
January 30th, 07:00 pm
ಸಶಸ್ತ್ರ ಪಡೆಗಳು ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ವಿಶಿಷ್ಟ ರೀತಿಯಲ್ಲಿ ಗೌರವಿಸಿದ ಗಣತಂತ್ರ ಆಚರಣೆಯ ಸಮಾರೋಪ (ಬೀಟಿಂಗ್ ರಿಟ್ರೀಟ್ ) ಸಮಾರಂಭದ ವಿಶೇಷ ಕ್ಷಣಗಳನ್ನು ಸೆರೆಹಿಡಿಯುವ ವೀಡಿಯೊವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ಪ್ರಧಾನಮಂತ್ರಿ ಭಾಗಿ
January 29th, 10:35 pm
ಗಣರಾಜ್ಯೋತ್ಸವ ಕಾರ್ಯಕ್ರಮಗಳ ಸಮಾರೋಪದ ಅಂಗವಾಗಿ ನಡೆಯುವ ಬೀಟಿಂಗ್ ದಿ ರಿಟ್ರೀಟ್ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದರು.ಗುಜರಾತ್‌ನ ಅಮ್ರೇಲಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
October 28th, 04:00 pm
ವೇದಿಕೆಯಲ್ಲಿರುವ ಗುಜರಾತಿನ ಗೌರವಾನ್ವಿತ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಜಿ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಜಿ, ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿ ಸಿ.ಆರ್. ಪಾಟೀಲ್ ಜಿ, ಗುಜರಾತ್‌ನ ನನ್ನ ಸಹೋದರ ಸಹೋದರಿಯರೆ ಮತ್ತು ವಿಶೇಷವಾಗಿ ಅಮ್ರೇಲಿಯ ನನ್ನ ಸಹೋದರ ಸಹೋದರಿಯರೆ,ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನ ಅಮ್ರೇಲಿಯಲ್ಲಿ 4,900 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು
October 28th, 03:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನ ಅಮ್ರೇಲಿಯಲ್ಲಿಂದು 4,900 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಇಂದಿನ ಅಭಿವೃದ್ಧಿ ಯೋಜನೆಗಳು ರೈಲು, ರಸ್ತೆ, ಜಲ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳನ್ನು ಒಳಗೊಂಡಿವೆ. ರಾಜ್ಯದ ಅಮ್ರೇಲಿ, ಜಾಮ್‌ನಗರ, ಮೊರ್ಬಿ, ದೈವಭೂಮಿ ದ್ವಾರಕಾ, ಜುನಾಗಢ್, ಪೋರಬಂದರ್, ಕಚ್ ಮತ್ತು ಬೊಟಾಡ್ ಜಿಲ್ಲೆಗಳ ನಾಗರಿಕರಿಗೆ ಪ್ರಯೋಜನ ನೀಡುತ್ತವೆ.The dreams of crores of women, poor and youth are Modi's resolve: PM Modi
February 18th, 01:00 pm
Addressing the BJP National Convention 2024 at Bharat Mandapam, Prime Minister Narendra Modi said, “Today is February 18th, and the youth who have reached the age of 18 in this era will vote in the country's 18th Lok Sabha election. In the next 100 days, you need to connect with every new voter, reach every beneficiary, every section, every community, and every person who believes in every religion. We need to gain the trust of everyone.PM Modi addresses BJP Karyakartas during BJP National Convention 2024
February 18th, 12:30 pm
Addressing the BJP National Convention 2024 at Bharat Mandapam, Prime Minister Narendra Modi said, “Today is February 18th, and the youth who have reached the age of 18 in this era will vote in the country's 18th Lok Sabha election. In the next 100 days, you need to connect with every new voter, reach every beneficiary, every section, every community, and every person who believes in every religion. We need to gain the trust of everyone.ಅಕ್ಟೋಬರ್ 30-31ರಂದು ಗುಜರಾತ್ ಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
October 29th, 02:20 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 30-31ರಂದು ಗುಜರಾತ್ ಗೆ ಭೇಟಿ ನೀಡಲಿದ್ದಾರೆ. ಅಕ್ಟೋಬರ್ 30 ರಂದು ಬೆಳಗ್ಗೆ 10:30 ಕ್ಕೆ ಅಂಬಾಜಿ ದೇವಸ್ಥಾನದಲ್ಲಿ ಪೂಜೆ ಮತ್ತು ದರ್ಶನ ಪಡೆಯಲಿದ್ದಾರೆ. ನಂತರ ಮಧ್ಯಾಹ್ನ 12 ಗಂಟೆಗೆ ಮೆಹ್ಸಾನಾದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುವರು. ಅಕ್ಟೋಬರ್ 31 ರಂದು ಬೆಳಗ್ಗೆ 8 ಗಂಟೆಗೆ ಅವರು ಕೆವಾಡಿಯಾಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಅವರು ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ನಂತರ ಅವರು ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಹಾಗೂ ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ನಂತರ, ಬೆಳಗ್ಗೆ 11:15 ರ ಸುಮಾರಿಗೆ, ಅವರು ಪ್ರಾರಂಭ 5.0 ನಲ್ಲಿ 98 ನೇ ಕಾಮನ್ ಫೌಂಡೇಶನ್ ಕೋರ್ಸ್ ನ ಅಧಿಕಾರಿ ತರಬೇತಿದಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಸಿಂಧಿಯಾ ಶಾಲೆಯ 125ನೇ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ
October 21st, 11:04 pm
ಮಧ್ಯಪ್ರದೇಶದ ಗೌರವಾನ್ವಿತ ರಾಜ್ಯಪಾಲ ಶ್ರೀ ಮಂಗುಭಾಯ್ ಪಟೇಲ್ ಅವರೇ, ಈ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಹಾಗೂ ಸಿಂಧಿಯಾ ಶಾಲಾ ಮಂಡಳಿಯ ನಿರ್ದೇಶಕರಾದ ಶಿವರಾಜ್ ಸಿಂಗ್ ಚೌಹಾಣ್ ಅವರೇ ಮತ್ತು ನನ್ನ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ, ಶ್ರೀ ನರೇಂದ್ರ ಸಿಂಗ್ ತೋಮರ್, ಡಾ. ಜಿತೇಂದ್ರ ಸಿಂಗ್ ಅವರೇ, ಶಾಲಾ ಆಡಳಿತ ಮಂಡಳಿಯ ಸಹೋದ್ಯೋಗಿಗಳೇ, ಎಲ್ಲಾ ಸಿಬ್ಬಂದಿ, ಶಿಕ್ಷಕರು, ಪೋಷಕರು ಮತ್ತು ಆತ್ಮೀಯ ಯುವ ಸ್ನೇಹಿತರೇ!ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸಿಂಧಿಯಾ ಶಾಲೆಯ 125ನೇ ಸ್ಥಾಪಕರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣ
October 21st, 05:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ 'ದಿ ಸಿಂಧಿಯಾ ಶಾಲೆಯ' 125ನೇ ಸ್ಥಾಪಕರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಭಾಗವಾಗಿ ಪ್ರಧಾನಮಂತ್ರಿಯವರು ಶಾಲೆಯಲ್ಲಿ 'ವಿವಿಧೋದ್ದೇಶ ಕ್ರೀಡಾ ಸಂಕೀರ್ಣ'ಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ, ಪ್ರತಿಭಾವಂತ ಹಳೆಯ ವಿದ್ಯಾರ್ಥಿಗಳು ಮತ್ತು ಉನ್ನತ ಸಾಧಕರಿಗೆ ಶಾಲೆಯ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಸಿಂಧಿಯಾ ಶಾಲೆಯನ್ನು 1897ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಐತಿಹಾಸಿಕ ಗ್ವಾಲಿಯರ್ ಕೋಟೆಯ ಮೇಲಿದೆ. ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಸ್ಮರಣಾರ್ಥ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿದರು.