ಜೋಹಾನ್ಸ್‌ಬರ್ಗ್‌ ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷರನ್ನು ಪ್ರಧಾನಮಂತ್ರಿ ಅವರು ಭೇಟಿ ಮಾಡಿದರು

November 23rd, 02:18 pm

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೋಹಾನ್ಸ್‌ಬರ್ಗ್‌ ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಸಿರಿಲ್ ರಾಮಫೋಸಾ ಅವರನ್ನು ಇಂದು ಭೇಟಿ ಮಾಡಿದರು. ಶೃಂಗಸಭೆಯ ಆತ್ಮೀಯ ಆತಿಥ್ಯ ಮತ್ತು ಯಶಸ್ವಿ ನಡವಳಿಕೆಗಳಿಗಾಗಿ ಅಧ್ಯಕ್ಷ ಶ್ರೀ ರಾಮಫೋಸಾ ಅವರಿಗೆ ಪ್ರಧಾನಮಂತ್ರಿ ಅವರು ಧನ್ಯವಾದ ಅರ್ಪಿಸಿದರು. ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಮತ್ತು ನೂತನ ಹಂತ ನಿರ್ಮಿಸಲು ದಕ್ಷಿಣ ಆಫ್ರಿಕಾದ ಜಿ20 ಮಾಡಿರುವ ಪ್ರಯತ್ನಗಳನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು.