ಫ್ರಾನ್ಸ್‌ನಲ್ಲಿ ನಡೆದ ಭಾರತ್ ಇನ್ನೋವೇಟ್ಸ್ 2026 ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ
June 14th, 04:36 pm
ಈ ಸಂದರ್ಭದಲ್ಲಿ ಇಲ್ಲಿ ಉಪಸ್ಥಿತರಿದ್ದದ್ದಕ್ಕಾಗಿ ನನ್ನ ಸ್ನೇಹಿತ ಅಧ್ಯಕ್ಷ ಮ್ಯಾಕ್ರನ್ ಅವರಿಗೆ ನಾನು ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಧ್ಯಕ್ಷ ಮ್ಯಾಕ್ರನ್, ಈ ಶತಮಾನದ ಸವಾಲುಗಳನ್ನು ಎದುರಿಸಲು ಭಾರತ ಮತ್ತು ಫ್ರಾನ್ಸ್ ಒಟ್ಟಾಗಿ ಬರಬೇಕು ಎಂದು ನೀವು ಹೇಳಿದ್ದೀರಿ. ಇಂದು, ಈ ಉಪಕ್ರಮವು ಆ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ.2026ರ ಭಾರತ್ ಇನ್ನೋವೇಟ್ಸ್ ನಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ
June 14th, 03:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರಾದ ಗೌರವಾನ್ವಿತ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಇಂದು ನೈಸ್‌ನ ಪಲೈಸ್ ಡೆಸ್ ಎಕ್ಸ್‌ಪೊಸಿಷನ್ಸ್‌ನಲ್ಲಿ ಭಾರತ್ ಇನ್ನೋವೇಟ್ಸ್ 2026 ಅನ್ನು ಜಂಟಿಯಾಗಿ ಉದ್ಘಾಟಿಸಿದರು. ಮೂರು ದಿನಗಳ ಕಾರ್ಯಕ್ರಮವಾದ ಭಾರತ್ ಇನ್ನೋವೇಟ್ಸ್, ಜಾಗತಿಕ ನಾವೀನ್ಯತೆ ನಿಧಿಗಳು ಮತ್ತು ಹೆಜ್ಜೆಗುರುತನ್ನು ಹೊಂದಿರುವ ಭಾರತೀಯ ಡೀಪ್-ಟೆಕ್ ನವೋದ್ಯಮಗಳು (ಸ್ಟಾರ್ಟ್-ಅಪ್‌ಗಳು), ನಾವೀನ್ಯಕಾರರು, ಸಂಶೋಧಕರು ಮತ್ತು ಹೂಡಿಕೆದಾರರನ್ನು ಒಟ್ಟುಗೂಡಿಸುತ್ತದೆ. ಇದು ಜಾಗತಿಕ ಹಂತದಲ್ಲಿ ಭಾರತದ ಪ್ರಮುಖ ಡೀಪ್ ಟೆಕ್ ತಂತ್ರಜ್ಞಾನವನ್ನು ಪ್ರದರ್ಶಿಸುತ್ತದೆ, ಜಾಗತಿಕ ಪ್ರಾಮುಖ್ಯತೆಯ 13 ನಿರ್ಣಾಯಕ ತಂತ್ರಜ್ಞಾನ ಸ್ತಂಭಗಳಲ್ಲಿ 120 ಪಥ-ಭಂಜಕ (ಹೊಸ ಹಾದಿ ತೋರುವ) ಸ್ಟಾರ್ಟ್-ಅಪ್‌ಗಳು ಮತ್ತು 20ಕ್ಕೂ ಹೆಚ್ಚು ಶ್ರೇಷ್ಠತಾ ಸಂಸ್ಥೆಗಳನ್ನು ಪ್ರಸ್ತುತಪಡಿಸುತ್ತದೆ. ಪ್ರಪಂಚದಾದ್ಯಂತದ 350ಕ್ಕೂ ಹೆಚ್ಚು ಉನ್ನತ ಹೂಡಿಕೆದಾರರು ಮತ್ತು ಸಾಹಸೋದ್ಯಮ (ವೆಂಚರ್) ಬಂಡವಾಳಗಾರರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.ಫ್ರೆಂಚ್ ಗಣರಾಜ್ಯದ ಅಧ್ಯಕ್ಷರ ಭಾರತ ಭೇಟಿಯ ಫಲಶ್ರುತಿಯ ವಿವರಗಳು ಹೀಗಿವೆ
February 17th, 07:00 pm
ಭಾರತ-ಫ್ರಾನ್ಸ್ ಸಂಬಂಧವನ್ನು ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಗೆ ಮೇಲ್ದರ್ಜೆಗೇರಿಸುವುದುಪ್ರಧಾನಮಂತ್ರಿಯವರಿಂದ ಫ್ರಾನ್ಸ್ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ
February 12th, 03:24 pm
ಉಭಯ ನಾಯಕರ ನಡುವಿನ ವೈಯಕ್ತಿಕ ಬಾಂಧವ್ಯವನ್ನು ಪ್ರತಿಬಿಂಬಿಸುವ ವಿಶೇಷ ಸಂದರ್ಭವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಶ್ರೀ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ನಿನ್ನೆ ಫ್ರಾನ್ಸ್ ಅಧ್ಯಕ್ಷೀಯ ವಿಮಾನದಲ್ಲಿ ಪ್ಯಾರಿಸ್ ನಿಂದ ಮಾರ್ಸೆಲ್ಲೆಗೆ ಒಟ್ಟಿಗೆ ಪ್ರಯಾಣಿಸಿದರು. ಅವರು ದ್ವಿಪಕ್ಷೀಯ ಸಂಬಂಧಗಳು ಮತ್ತು ಪ್ರಮುಖ ಜಾಗತಿಕ ಮತ್ತು ಪ್ರಾದೇಶಿಕ ಸಮಸ್ಯೆಗಳನ್ನು ಕುರಿತು ಚರ್ಚಿಸಿದರು. ಇದಾದ ಬಳಿಕ ಮಾರ್ಸೆಲ್ಲೆ ತಲುಪಿದ ಬಳಿಕ ನಿಯೋಗ ಮಟ್ಟದ ಮಾತುಕತೆ ನಡೆಯಿತು. ಕಳೆದ 25 ವರ್ಷಗಳಲ್ಲಿ ಬಹು ಆಯಾಮದ ಸಂಬಂಧವಾಗಿ ವಿಕಸನಗೊಂಡಿರುವ ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಗೆ ತಮ್ಮ ಬಲವಾದ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು.ಪ್ರಧಾನಮಂತ್ರಿಯವರ ಫ್ರಾನ್ಸ್ ಭೇಟಿಯ ಫಲಿತಾಂಶಗಳು
February 12th, 03:20 pm
ಕೃತಕ ಬುದ್ಧಿಮತ್ತೆ (ಎಐ) ಕುರಿತು ಭಾರತ ಫ್ರಾನ್ಸ್ ಘೋಷಣೆ