ಪ್ಯಾರಿಸ್‌ನಲ್ಲಿ ನಡೆದ ವಿವಾಟೆಕ್ 2026ರ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಅನುವಾದ
June 18th, 06:15 pm
ಈ ವರ್ಷ ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷವನ್ನು ಪ್ರಾರಂಭಿಸುವುದರೊಂದಿಗೆ, ಫ್ರಾನ್ಸ್, ಭಾರತ ಮತ್ತು ಯುರೋಪಿನ ತಾಂತ್ರಿಕ ಪರಿಸರ ವ್ಯವಸ್ಥೆಗಳನ್ನು ಹತ್ತಿರ ತರುವ ಪ್ರಮುಖ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಕೆಲವು ದಿನಗಳ ಹಿಂದೆ ನೈಸ್‌ನಲ್ಲಿ ನಡೆದ ಭಾರತ್ ಇನ್ನೋವೇಟ್ಸ್‌ನಿಂದ ಇಂದು ಪ್ಯಾರಿಸ್‌ನ ವಿವಾ ಟೆಕ್‌ವರೆಗೆ, ನಿಮ್ಮ ನವೋದ್ಯಮಗಳು ಅನೇಕ ಹೊಸ ಪಾಲುದಾರಿಕೆಗಳನ್ನು ರೂಪಿಸುತ್ತಿವೆ.ವಿವಾಟೆಕ್ 2026ರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ
June 18th, 06:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಗೌರವಾನ್ವಿತ ಶ್ರೀ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಇಂದು ಪ್ಯಾರಿಸ್ ನಲ್ಲಿ ನಡೆದ ಯುರೋಪಿನ ಅತಿದೊಡ್ಡ ತಂತ್ರಜ್ಞಾನ ಮತ್ತು ಸ್ಟಾರ್ಟ್-ಅಪ್ ಕಾರ್ಯಕ್ರಮವಾದ ವಿವಾಟೆಕ್ 2026 ರಲ್ಲಿ ಭಾಗವಹಿಸಿದರು.ಭಾರತ-ಫ್ರಾನ್ಸ್ ನಾವೀನ್ಯತೆ ನೀಲನಕ್ಷೆ 2030
June 15th, 05:42 am
2026ರ ಫೆಬ್ರವರಿ 17 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರನ್ ದ್ವಿಪಕ್ಷೀಯ ಸಂಬಂಧವನ್ನು ”ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ’ ಯ ಎತ್ತರಕ್ಕೆ ಏರಿಸಿದರು ಮತ್ತು ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷ 2026 ಅನ್ನು ಜಂಟಿಯಾಗಿ ಉದ್ಘಾಟಿಸಿದರು. ಉಭಯ ನಾಯಕರು ಕೃತಕ ಬುದ್ಧಿಮತ್ತೆ, ನಾವೀನ್ಯತೆ ಸಂಶೋಧನೆ, ತಂತ್ರಜ್ಞಾನ, ಡಿಜಿಟಲ್ ತಂತ್ರಜ್ಞಾನ ಮತ್ತು ಸೈಬರ್ ಸ್ಪೇಸ್, ಆರೋಗ್ಯ, ಸಂಸ್ಕೃತಿ, ಆರ್ಥಿಕತೆ, ಶೈಕ್ಷಣಿಕ ಸಂಪರ್ಕಗಳು ಮತ್ತು ಜನರಿಂದ ಜನರ ನಡುವಿನ ಸಂಬಂಧಗಳಂತಹ ವಲಯಗಳಲ್ಲಿ ವಿಸ್ತೃತ ಮತ್ತು ವೈವಿಧ್ಯಮಯ ಸಹಕಾರಕ್ಕೆ ಕರೆ ನೀಡಿದರು.ಫಲಿತಾಂಶಗಳ ಪಟ್ಟಿ: ಪ್ರಧಾನ ಮಂತ್ರಿಯವರ ಫ್ರಾನ್ಸ್ ಭೇಟಿ
June 14th, 09:32 pm
ಭಾರತ-ಫ್ರಾನ್ಸ್ ನಾವೀನ್ಯತೆ ಮಾರ್ಗಸೂಚಿ 2030 ಅಳವಡಿಕೆಮುಂಬೈನಲ್ಲಿ ನಡೆದ ಭಾರತ-ಫ್ರಾನ್ಸ್ ನಾವೀನ್ಯತೆ ವೇದಿಕೆಯ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಅನುವಾದ
February 18th, 12:07 pm
ಇಂದು, ವಿಶ್ವದ ಎರಡು ಮಹಾನ್ ನಾವೀನ್ಯತೆ ಕೇಂದ್ರಗಳು ಒಟ್ಟಿಗೆ ಬರುತ್ತಿವೆ. ನಾವು ಭಾರತ ಮತ್ತು ಫ್ರಾನ್ಸ್ ಬಗ್ಗೆ ಮಾತನಾಡುವಾಗ, ನಮ್ಮ ಸಂಬಂಧವು ನಾವೀನ್ಯತೆ ಬಗ್ಗೆ ಮಾತ್ರವಲ್ಲ, ನಂಬಿಕೆ ಮತ್ತು ಹಂಚಿಕೆಯ ಮೌಲ್ಯಗಳ ಬಗ್ಗೆಯೂ ಆಗಿದೆ. ಈ ಮನೋಭಾವದಿಂದ, ಅಧ್ಯಕ್ಷ ಮ್ಯಾಕ್ರನ್ ಮತ್ತು ನಾನು 2026 ಅನ್ನು ಭಾರತ-ಫ್ರಾನ್ಸ್ ನಾವೀನ್ಯತೆಯ ವರ್ಷವೆಂದು ಆಚರಿಸಲು ನಿರ್ಧರಿಸಿದ್ದೇವೆ. ಇದು ಕೇವಲ ಆಚರಣೆಯಲ್ಲ; ಇದು ನಮ್ಮ ಹಂಚಿಕೆಯ ಬದ್ಧತೆ - ನಾವೀನ್ಯತೆಗಾಗಿ ಬದ್ಧತೆ, ಮುನ್ನಡೆಸಲು ಬದ್ಧತೆ.ಭಾರತಕ್ಕೆ ಆಗಮಿಸಿದ ಫ್ರಾನ್ಸ್ ಅಧ್ಯಕ್ಷರನ್ನು ಸ್ವಾಗತಿಸಿದ ಪ್ರಧಾನಮಂತ್ರಿ, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಪ್ರಸ್ತಾಪ
February 17th, 09:57 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಆತ್ಮೀಯ ಸ್ವಾಗತ ಕೋರಿದರು. ಈ ಭೇಟಿ ಭಾರತ-ಫ್ರಾನ್ಸ್ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬ ವಿಶ್ವಾಸವಿದೆ ತಿಳಿಸಿದರು.