ಭಾರತ-ಫ್ರಾನ್ಸ್ ಜಂಟಿ ಹೇಳಿಕೆ
February 18th, 08:10 am
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ಫ್ರೆಂಚ್ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ ಎಮ್ಯಾನುಯೆಲ್ ಮ್ಯಾಕ್ರನ್ ಅವರು 2026ರ ಫೆಬ್ರವರಿ 17 ರಿಂದ 19 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದರು ಮತ್ತು ʻಕೃತಕ ಬುದ್ಧಿಮತ್ತೆ ಪರಿಣಾಮ ಶೃಂಗಸಭೆ-2026ʼರಲ್ಲಿ ಭಾಗವಹಿಸಿದರು. ಭೇಟಿಯ ಸಮಯದಲ್ಲಿ, ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿದರು ಮತ್ತು ಫೆಬ್ರವರಿ 17ರಂದು ಮುಂಬೈನಲ್ಲಿ ʻಭಾರತ-ಫ್ರಾನ್ಸ್ ನಾವೀನ್ಯತೆಯ ವರ್ಷ-2026ʼ ಅನ್ನು ಜಂಟಿಯಾಗಿ ಉದ್ಘಾಟಿಸಿದರು. ಇದು ಅಧ್ಯಕ್ಷ ಮ್ಯಾಕ್ರನ್ ಅವರ 4ನೇ ಭಾರತ ಭೇಟಿಯಾಗಿದ್ದು, ಫೆಬ್ರವರಿ 2025ರಲ್ಲಿ ಪ್ರಧಾನಿ ಮೋದಿಯವರ ಫ್ರಾನ್ಸ್ ಭೇಟಿಯ ನಂತರ ಇದು ನೆರವೇರಿದೆ.ಪ್ರಧಾನಿ ಮೋದಿ ಅವರ ಫ್ರಾನ್ಸ್ ಭೇಟಿ: ಕಾರ್ಯತಂತ್ರದ ಪಾಲುದಾರಿಕೆಗಳನ್ನು ಬಲಪಡಿಸುವುದು ಮತ್ತು ಎಐ ಸಹಯೋಗವನ್ನು ಪ್ರವರ್ತಿಸುವುದು
February 13th, 03:06 pm
ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಫ್ರಾನ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ ರಾಜತಾಂತ್ರಿಕ ಪ್ರವಾಸವು ಭಾರತದ ಜಾಗತಿಕ ಮೈತ್ರಿಗಳನ್ನು ಬಲಪಡಿಸುವಲ್ಲಿ ಗಮನಾರ್ಹ ಪರಿಣಾಮ ಬೀರಿತು, ಕೃತಕ ಬುದ್ಧಿಮತ್ತೆ (ಎಐ), ಆರ್ಥಿಕ ಸುಧಾರಣೆಗಳು ಮತ್ತು ಐತಿಹಾಸಿಕ ಸಂಬಂಧಗಳನ್ನು ಗೌರವಿಸುವ ಮೇಲೆ ಸ್ಪಷ್ಟ ಗಮನ ಹರಿಸಲಾಗಿದೆ. ಈ ಸಮಗ್ರ ಭೇಟಿಯು ಜವಾಬ್ದಾರಿಯುತ ಎಐ ಅಭಿವೃದ್ಧಿ, ಆರ್ಥಿಕ ಸಹಯೋಗ ಮತ್ತು ಕಾರ್ಯತಂತ್ರದ ಪಾಲುದಾರಿಕೆಗಳನ್ನು ಆಳಗೊಳಿಸುವ ಬಗ್ಗೆ ಭಾರತದ ಬದ್ಧತೆಯನ್ನು ಪ್ರದರ್ಶಿಸಿತು.ಪ್ಯಾರೀಸ್ ನಲ್ಲಿ ಭಾರತ-ಫ್ರಾನ್ಸ್ ಸಿಇಒ ಫೋರಂ ಉದ್ದೇಶಿಸಿ ಪ್ರಧಾನಮಂತ್ರಿ ಮಾಡಿದ ಭಾಷಣದ ಅನುವಾದ
February 12th, 12:45 am
ಇಲ್ಲಿ ಉಪಸ್ಥಿತರಿರುವ ಭಾರತ ಮತ್ತು ಫ್ರಾನ್ಸ್ ನ ಕೈಗಾರಿಕಾ ನಾಯಕರೇ,14ನೇ ಭಾರತ-ಫ್ರಾನ್ಸ್ ಸಿಇಒ ಫೋರಂ ಉದ್ದೇಶಿಸಿ ಪ್ರಧಾನಮಂತ್ರಿ ಯವರಿಂದ ಭಾಷಣ
February 12th, 12:25 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಘನತೆವೆತ್ತ ಶ್ರೀ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ಇಂದು ಪ್ಯಾರಿಸ್ ನಲ್ಲಿ 14ನೇ ಭಾರತ-ಫ್ರಾನ್ಸ್ ಸಿಇಒ ಫೋರಂ ಅನ್ನು ಉದ್ದೇಶಿಸಿ ಜಂಟಿಯಾಗಿ ಮಾತನಾಡಿದರು. ರಕ್ಷಣೆ, ಏರೋಸ್ಪೇಸ್, ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಮೂಲಸೌಕರ್ಯ, ಸುಧಾರಿತ ಉತ್ಪಾದನೆ, ಕೃತಕ ಬುದ್ಧಿಮತ್ತೆ, ಜೀವನ-ವಿಜ್ಞಾನ, ಕ್ಷೇಮ ಮತ್ತು ಜೀವನಶೈಲಿ ಮತ್ತು ಆಹಾರ ಮತ್ತು ಆತಿಥ್ಯ ಮುಂತಾದ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ, ಎರಡೂ ಕಡೆಯ ಕಂಪನಿಗಳ ವೈವಿಧ್ಯಮಯ ಗುಂಪಿನ ಸಿಇಒಗಳನ್ನು ಫೋರಂ ಒಟ್ಟುಗೂಡಿಸಿತು.