ಪ್ಯಾರಿಸ್‌ನಲ್ಲಿ ನಡೆದ ವಿವಾಟೆಕ್ 2026ರ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಅನುವಾದ
June 18th, 06:15 pm
ಈ ವರ್ಷ ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷವನ್ನು ಪ್ರಾರಂಭಿಸುವುದರೊಂದಿಗೆ, ಫ್ರಾನ್ಸ್, ಭಾರತ ಮತ್ತು ಯುರೋಪಿನ ತಾಂತ್ರಿಕ ಪರಿಸರ ವ್ಯವಸ್ಥೆಗಳನ್ನು ಹತ್ತಿರ ತರುವ ಪ್ರಮುಖ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಕೆಲವು ದಿನಗಳ ಹಿಂದೆ ನೈಸ್‌ನಲ್ಲಿ ನಡೆದ ಭಾರತ್ ಇನ್ನೋವೇಟ್ಸ್‌ನಿಂದ ಇಂದು ಪ್ಯಾರಿಸ್‌ನ ವಿವಾ ಟೆಕ್‌ವರೆಗೆ, ನಿಮ್ಮ ನವೋದ್ಯಮಗಳು ಅನೇಕ ಹೊಸ ಪಾಲುದಾರಿಕೆಗಳನ್ನು ರೂಪಿಸುತ್ತಿವೆ.ವಿವಾಟೆಕ್ 2026ರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ
June 18th, 06:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಗೌರವಾನ್ವಿತ ಶ್ರೀ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಇಂದು ಪ್ಯಾರಿಸ್ ನಲ್ಲಿ ನಡೆದ ಯುರೋಪಿನ ಅತಿದೊಡ್ಡ ತಂತ್ರಜ್ಞಾನ ಮತ್ತು ಸ್ಟಾರ್ಟ್-ಅಪ್ ಕಾರ್ಯಕ್ರಮವಾದ ವಿವಾಟೆಕ್ 2026 ರಲ್ಲಿ ಭಾಗವಹಿಸಿದರು.ಜಿ-7 ಶೃಂಗಸಭೆಯ ನೇಪಥ್ಯದಲ್ಲಿ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರು ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಸಭೆ
June 17th, 06:43 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎವಿಯಾನ್‌ನಲ್ಲಿ ನಡೆದ ಜಿ-7 ಶೃಂಗಸಭೆಯ ನೇಪಥ್ಯದಲ್ಲಿ ಇಂದು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರಾದ ಮಾನ್ಯ ಶ್ರೀ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷರಾದ ಮಾನ್ಯ ಶ್ರೀಮತಿ ಉರ್ಸುಲಾ ವಾನ್ ಡೆರ್ ಲೇಯೆನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.ಎವಿಯಾನ್ ನಲ್ಲಿ ಜಿ 7 ಶೃಂಗಸಭೆಯ ನೇಪಥ್ಯದಲ್ಲಿ ಜರ್ಮನಿಯ ಫೆಡರಲ್ ರಿಪಬ್ಲಿಕ್ ನ ಚಾನ್ಸೆಲರ್ ಅವರೊಂದಿಗೆ ಪ್ರಧಾನಮಂತ್ರಿ ಸಭೆ
June 17th, 05:34 pm
ಫ್ರಾನ್ಸ್ ನ ಎವಿಯಾನ್ ನಲ್ಲಿ ನಡೆದಿರುವ ಜಿ 7 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜರ್ಮನಿಯ ಫೆಡರಲ್ ರಿಪಬ್ಲಿಕ್ ನ ಚಾನ್ಸೆಲರ್ ಮಾನ್ಯ ಶ್ರೀ ಫ್ರೆಡ್ರಿಕ್ ಮೆರ್ಜ್ ಅವರನ್ನು ಭೇಟಿ ಮಾಡಿದರು. ಈ ವರ್ಷದಲ್ಲಿ ಉಭಯ ನಾಯಕರ ನಡುವಿನ ಎರಡನೇ ಭೇಟಿ ಇದಾಗಿದೆ.ಫ್ರಾನ್ಸ್ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಅವರ ಅಧಿಕೃತ ಮಾತುಕತೆ
June 14th, 08:37 pm
ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳ ವಿವಿಧ ಅಂಶಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಎಲ್ಲಾ ರಂಗಗಳಲ್ಲಿ ದ್ವಿಪಕ್ಷೀಯ ರಕ್ಷಣಾ ಸಹಯೋಗದ ಅತ್ಯುತ್ತಮ ಬೆಳವಣಿಗೆ ಮತ್ತು ಆಳದ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. ರಕ್ಷಣಾ ವೇದಿಕೆಗಳು ಮತ್ತು ಸುಧಾರಿತ ತಂತ್ರಜ್ಞಾನಗಳ ಸಹ ವಿನ್ಯಾಸ ಸಹ ಅಭಿವೃದ್ಧಿಮತ್ತು ಸಹ ಉತ್ಪಾದನೆಗೆ ಒತ್ತು ನೀಡುವ ಮೂಲಕ ಇದನ್ನು ಮತ್ತಷ್ಟು ತೀವ್ರಗೊಳಿಸಲು ಉಭಯ ನಾಯಕರು ಒಪ್ಪಿಕೊಂಡರು. ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಹಕಾರದ ಸುದೀರ್ಘ ಪರಂಪರೆಯನ್ನು ಉಭಯ ನಾಯಕರು ನೆನೆದರು ಮತ್ತು ಮಾನವಸಹಿತ ಬಾಹ್ಯಾಕಾಶ ಯಾನ ಹಾಗೂ ಬಾಹ್ಯಾಕಾಶ ಪರಿಸ್ಥಿತಿಯ ಜಾಗೃತಿ ಕುರಿತು ಸಹಯೋಗವನ್ನು ಮುಂದುವರಿಸುವ ಬಗ್ಗೆ ಚರ್ಚಿಸಿದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಸಹಯೋಗವನ್ನು ವಿಸ್ತರಿಸುವ ಮಾರ್ಗಗಳ ಬಗ್ಗೆಯೂ ಅವರು ಚರ್ಚಿಸಿದರು. ನಾಗರಿಕ ಪರಮಾಣು ಇಂಧನ ಕ್ಷೇತ್ರದಲ್ಲಿ, ಭಾರತದ ಶಾಂತಿ ಕಾಯ್ದೆಯು ಸಣ್ಣ ಮತ್ತು ಸುಧಾರಿತ ಮಾಡ್ಯುಲರ್ ರಿಯಾಕ್ಟರ್ ಗಳು ಸೇರಿದಂತೆ ಹೊಸ ಸಹಯೋಗದ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಗಮನಿಸಿದರು.ಫ್ರಾನ್ಸ್ ಮತ್ತು ಸ್ಲೋವಾಕಿಯಾಕ್ಕೆ ಭೇಟಿ ನೀಡುವ ಮುನ್ನ ಪ್ರಧಾನಮಂತ್ರಿ ಅವರ ಹೇಳಿಕೆ
June 13th, 10:03 am
ಫ್ರೆಂಚ್ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಸ್ಲೋವಾಕ್ ಗಣರಾಜ್ಯದ ಪ್ರಧಾನಮಂತ್ರಿ ಶ್ರೀ ರಾಬರ್ಟ್ ಫಿಕೊ ಅವರ ಆಹ್ವಾನದ ಮೇರೆಗೆ, ನಾನು 2026ರ ಜೂನ್ 13 ರಿಂದ 18 ರವರೆಗೆ ಫ್ರಾನ್ಸ್ ಮತ್ತು ಸ್ಲೋವಾಕ್ ಗಣರಾಜ್ಯಕ್ಕೆ ಅಧಿಕೃತ ಭೇಟಿ ಕೈಗೊಳ್ಳುತ್ತಿದ್ದೇನೆ.ಸೈಪ್ರಸ್ ಅಧ್ಯಕ್ಷರ ಅಧಿಕೃತ ಭಾರತ ಭೇಟಿ ಕುರಿತು ಜಂಟಿ ಹೇಳಿಕೆ
May 22nd, 09:31 pm
ಸೈಪ್ರಸ್ ಗಣರಾಜ್ಯದ ಅಧ್ಯಕ್ಷರಾದ ಶ್ರೀ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ 2026 ಮೇ 20-23ರ ವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದರು. ಐರೋಪ್ಯ ಒಕ್ಕೂಟ ಮಂಡಳಿ ಸಭೆಯು ಸೈಪ್ರಸ್ ಅಧ್ಯಕ್ಷತೆಯ ಅವಧಿಯಲ್ಲಿ ನಡೆಯುವುದರಿಂದ ಈ ಭೇಟಿ ನಿರ್ದಿಷ್ಟ ಮತ್ತು ವಿಶೇಷ ಮಹತ್ವ ಹೊಂದಿದೆ.ಸೈಪ್ರಸ್ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾ ಹೇಳಿಕೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ
May 22nd, 01:00 pm
ನಿಮ್ಮ ಸಂಪೂರ್ಣ ಭೇಟಿ ಸಮಯದಲ್ಲಿ, ನಾವು ನಿಜವಾಗಿಯೂ ನಿಮ್ಮ ಬೆಚ್ಚಗಿನ ಸ್ನೇಹ ಮತ್ತು ಭಾರತದೊಂದಿಗಿನ ಬಲವಾದ ಸಂಪರ್ಕವನ್ನು ಅನುಭವಿಸಿದ್ದೇವೆ. ಇಂದು ನಿಮ್ಮ ಭಾರತ ಭೇಟಿಯು ನಮ್ಮ ಹಂಚಿಕೆಯ ಪ್ರಯಾಣದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ಸೂಚಿಸುತ್ತದೆ.ಭಾರತ-ಇಟಲಿ ಜಂಟಿ ಘೋಷಣೆ
May 20th, 10:28 pm
ಇಟಲಿಯ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು 19-20 ಮೇ 2026 ರಂದು ಇಟಲಿಗೆ ಅಧಿಕೃತ ಭೇಟಿ ನೀಡಿದರು. ಜಿ7 ಶೃಂಗಸಭೆಗಾಗಿ ಜೂನ್ 2024ರಲ್ಲಿ ಪ್ರಧಾನಮಂತ್ರಿ ಮೋದಿ ಅವರು ಇಟಲಿಗೆ ನೀಡಿದ್ದ ಭೇಟಿ ಮತ್ತು 2023ರಲ್ಲಿ ಜಿ20 ಶೃಂಗಸಭೆಗಾಗಿ ಪ್ರಧಾನಮಂತ್ರಿ ಮೆಲೋನಿ ಅವರು ಭಾರತಕ್ಕೆ ನೀಡಿದ್ದ ಭೇಟಿಯ ಮುಂದುವರಿಕೆಯಾಗಿ ನಡೆದ ಈ ಭೇಟಿಯು, ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಉತ್ತೇಜನವನ್ನು ನೀಡಿತು. ಉಭಯ ನಾಯಕರು ಭಾರತ-ಇಟಲಿ ಸಂಬಂಧಗಳನ್ನು 'ವಿಶೇಷ ಕಾರ್ಯತಂತ್ರದ ಪಾಲುದಾರಿಕೆ'ಯ ಮಟ್ಟಕ್ಕೆ ಏರಿಸಲು ನಿರ್ಧರಿಸಿದರು.ಪ್ರಧಾನಮಂತ್ರಿ ಅವರು ಇಟಲಿಯ ಪ್ರಧಾನಮಂತ್ರಿ ಅವರನ್ನು ಭೇಟಿಯಾದರು
May 20th, 07:21 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಟಲಿ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀಮತಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಮೇ 20, 2026 ರಂದು ರೋಮ್ ನಲ್ಲಿ ಅಧಿಕೃತ ಮಾತುಕತೆ ನಡೆಸಿದರು.ಇಟಲಿ ಪ್ರಧಾನಮಂತ್ರಿ ಜತೆ ಜಂಟಿ ಪತ್ರಿಕಾ ಹೇಳಿಕೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ
May 20th, 05:00 pm
ಕಳೆದ ಸುಮಾರು ಮೂರೂವರೆ ವರ್ಷಗಳಲ್ಲಿ ಪ್ರಧಾನಮಂತ್ರಿ ಮೆಲೋನಿ ಅವರನ್ನು ಭೇಟಿ ಮಾಡಲು ನನಗೆ ಹಲವಾರು ಅವಕಾಶಗಳು ಸಿಕ್ಕಿವೆ. ಇದು ಭಾರತ ಮತ್ತು ಇಟಲಿ ನಡುವಿನ ನಿಕಟ ಸಹಕಾರ ಮತ್ತು ತಿಳಿವಳಿಕೆಯನ್ನು ಪ್ರತಿಬಿಂಬಿಸುತ್ತದೆ. ಅವರ ನಾಯಕತ್ವದಲ್ಲಿ, ನಮ್ಮ ಸಂಬಂಧಗಳು ಹೊಸ ಆವೇಗ, ಹೊಸ ದಿಕ್ಕು ಮತ್ತು ನವೀಕೃತ ವಿಶ್ವಾಸವನ್ನು ಪಡೆದುಕೊಂಡಿವೆ. ನಾವು ನಮ್ಮ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಂತೆ, ನಾವು ವಿಶೇಷ ಕಾರ್ಯತಂತ್ರ ಪಾಲುದಾರಿಕೆಯನ್ನು ಘೋಷಿಸುತ್ತಿದ್ದೇವೆ ಎಂಬುದರಿಂದ ನನಗೆ ಸಂತೋಷವಾಗಿದೆ.3ನೇ ಭಾರತ-ನಾರ್ಡಿಕ್ ಶೃಂಗಸಭೆಯ ಸಂದರ್ಭದಲ್ಲಿ ಫಿನ್ ಲ್ಯಾಂಡ್ ಪ್ರಧಾನಮಂತ್ರಿಯೊಂದಿಗೆ ಪ್ರಧಾನಮಂತ್ರಿಯವರ ಸಭೆ
May 19th, 06:42 pm
2026ರ ಮೇ 19 ರಂದು ಓಸ್ಲೋದಲ್ಲಿ ನಡೆದ 3ನೇ ಭಾರತ-ನಾರ್ಡಿಕ್ ಶೃಂಗಸಭೆಯ ಸಂದರ್ಭದ ನೇಪಥ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫಿನ್ ಲ್ಯಾಂಡ್ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಪೆಟ್ಟೇರಿ ಓರ್ಪೊ ಅವರನ್ನು ಭೇಟಿಯಾದರು.3ನೇ ಭಾರತ-ನಾರ್ಡಿಕ್ ಶೃಂಗಸಭೆಯ ಜಂಟಿ ಪತ್ರಿಕಾ ಹೇಳಿಕೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ
May 19th, 04:25 pm
ಇಂದು 3ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಮೊದಲನೆಯದಾಗಿ, ಈ ಶೃಂಗಸಭೆ ಆಯೋಜಿಸಿದ್ದಕ್ಕಾಗಿ ನಾರ್ವೆ ಪ್ರಧಾನಮಂತ್ರಿ ಅವರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ. ಇಲ್ಲಿ ಉಪಸ್ಥಿತರಿರುವ ಎಲ್ಲಾ ನಾರ್ಡಿಕ್ ನಾಯಕರನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.ಯುರೋಪ್ ದುಂಡು ಮೇಜಿನ ಕೈಗಾರಿಕಾ ಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
May 18th, 05:00 am
ಮೊದಲನೆಯದಾಗಿ, ಈ ದುಂಡು ಮೇಜಿನ ಸಭೆಗೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಸ್ವೀಡನ್ ಪ್ರಧಾನಮಂತ್ರಿ ಉಲ್ಫ್ ಕ್ರಿಸ್ಟರ್ಸನ್ ಅವರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ. ಈ ಸಭೆ ಗೋಥೆನ್‌ಬರ್ಗ್‌ನಲ್ಲಿ ನಡೆಯುತ್ತಿರುವುದು ನನಗೆ ಸಂತೋಷ ತಂದಿದೆ. ಇದು ನಾವೀನ್ಯತೆಗೆ ಹೆಸರುವಾಸಿಯಾಗಿದೆ ಮಾತ್ರವಲ್ಲದೆ, ಯುರೋಪಿನ ಉತ್ಪಾದನಾ ಮನೋಭಾವದ ಚೈತನ್ಯಶೀಲ ಸಂಕೇತವಾಗಿಯೂ ನಿಂತಿದೆ.ಯುರೋಪ್ ದುಂಡು ಮೇಜಿನ ಕೈಗಾರಿಕಾ ಸಭೆಯಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ
May 17th, 11:43 pm
ಸ್ವಲ್ಪ ಸಮಯದ ಹಿಂದೆ, ನನಗೆ ಸ್ವೀಡನ್‌ನ ಅತ್ಯುನ್ನತ ಗೌರವವಾದ ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್ ನೀಡಲಾಯಿತು. ಈ ಗೌರವ ನನಗೆ ಮಾತ್ರವಲ್ಲ, ಇದು 1.4 ಶತಕೋಟಿ ಭಾರತೀಯರಿಗೆ ಸಂದ ಗೌರವವಾಗಿದೆ. ಭಾರತ - ಸ್ವೀಡನ್ ಸಂಬಂಧಗಳನ್ನು ಶ್ರೀಮಂತಗೊಳಿಸಿದ ಮತ್ತು ಅವರಿಗೆ ಬಲವಾದ ಅಡಿಪಾಯ ಹಾಕಿದ ಸ್ವೀಡನ್‌ನಲ್ಲಿರುವ ನಮ್ಮ ಎಲ್ಲಾ ಸ್ನೇಹಿತರಿಗೆ ಸಂದ ಗೌರವ ಇದಾಗಿದೆ.ಭಾರತದ ಪ್ರಧಾನಮಂತ್ರಿ ಅವರ ನೆದರ್‌ಲ್ಯಾಂಡ್ಸ್ ಭೇಟಿ ಕುರಿತು ಭಾರತ- ನೆದರ್‌ಲ್ಯಾಂಡ್ಸ್ ಜಂಟಿ ಹೇಳಿಕೆ
May 17th, 03:45 am
ನೆದರ್‌ಲ್ಯಾಂಡ್ಸ್ ಪ್ರಧಾನಮಂತ್ರಿ ಶ್ರೀ ರಾಬ್ ಜೆಟ್ಟನ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026 ಮೇ 16-17ರಂದು ನೆದರ್‌ಲ್ಯಾಂಡ್ಸ್ ಗೆ ಅಧಿಕೃತ ಭೇಟಿ ನೀಡಿದ್ದರು. ಇದು ಪ್ರಧಾನಮಂತ್ರಿ ಮೋದಿ ಅವರು ನೆದರ್‌ಲ್ಯಾಂಡ್ಸ್ ಗೆ ನೀಡುತ್ತಿರುವ 2ನೇ ಭೇಟಿಯಾಗಿದೆ.ನೆದರ್‌ಲ್ಯಾಂಡ್ಸ್ ಪ್ರಧಾನಮಂತ್ರಿ ಅವರ ಜೊತೆ ಅಧಿಕೃತ ಮಾತುಕತೆ ನಡೆಸಿದ ಪ್ರಧಾನಮಂತ್ರಿ
May 17th, 02:35 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನೆದರ್‌ಲ್ಯಾಂಡ್ಸ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ರಾಬ್ ಜೆಟ್ಟನ್ ಅವರೊಂದಿಗೆ ಹೇಗ್ ನಲ್ಲಿರುವ ಡಚ್ ಪ್ರಧಾನಮಂತ್ರಿಯವರ ಅಧಿಕೃತ ನಿವಾಸದಲ್ಲಿ (ಕ್ಯಾಟ್ಶುಯಿಸ್) ಅಧಿಕೃತ ಮಾತುಕತೆ ನಡೆಸಿದರು.ಯೂರೋಪ್ ದುಂಡು ಮೇಜಿನ ಕೈಗಾರಿಕಾ ಸಭೆ (ಇಆರ್‌ಟಿ) ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
May 17th, 12:12 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026 ಮೇ 17ರಂದು ಗೋಥೆನ್‌ಬರ್ಗ್‌ನಲ್ಲಿ ನಡೆದ ಯೂರೋಪ್ ದುಂಡು ಮೇಜಿನ ಕೈಗಾರಿಕಾ ಸಭೆ(ಇಆರ್‌ಟಿ)ಯನ್ನು ಉದ್ದೇಶಿಸಿ ಮಾತನಾಡಿದರು. ಸ್ವೀಡನ್ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಉಲ್ಫ್ ಕ್ರಿಸ್ಟರ್ಸನ್, ಐರೋಪ್ಯ ಒಕ್ಕೂಟ ಆಯೋಗದ ಅಧ್ಯಕ್ಷರಾದ ಶ್ರೀಮತಿ ಉರ್ಸುಲಾ ವಾನ್ ಡೆರ್ ಲೇಯೆನ್, ಯೂರೋಪಿನ ಹಿರಿಯ ಉದ್ಯಮ ಮುಖಂಡರು ಮತ್ತು ಪ್ರಮುಖ ಯೂರೋಪ್ ಮತ್ತು ಭಾರತೀಯ ಕಂಪನಿಗಳ ಪ್ರತಿನಿಧಿಗಳು ವೋಲ್ವೊ ಸಮೂಹ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿದ್ದರು.ನೆದರ್‌ಲ್ಯಾಂಡ್ಸ್ ಪ್ರಧಾನಮಂತ್ರಿ ರಾಬ್ ಜೆಟ್ಟನ್ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆ
May 16th, 11:58 pm
ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸುಮಾರು 1 ದಶಕದ ನಂತರ ನೆದರ್‌ಲ್ಯಾಂಡ್ಸ್ ಗೆ ಭೇಟಿ ನೀಡಿರುವುದು ನನಗೆ ಸಂತೋಷ ತಂದಿದೆ. ಕಳೆದ 10 ವರ್ಷಗಳಲ್ಲಿ ಭಾರತ- ನೆದರ್‌ಲ್ಯಾಂಡ್ಸ್ ಪಾಲುದಾರಿಕೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ.ನೆದರ್‌ಲ್ಯಾಂಡ್ಸ್‌ನಲ್ಲಿ ನಡೆದ ಸಿಇಒಗಳ ದುಂಡುಮೇಜಿನ ಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
May 16th, 10:00 pm
ವಿಶ್ವದ ಕೆಲವು ಅತ್ಯಂತ ನವೀನ ಕಂಪನಿಗಳ ನಾಯಕರ ಜತೆ ಇಂದು ನಾನು ಇಲ್ಲಿರುವುದು ನನಗೆ ತುಂಬಾ ಸಂತೋಷ ತಂದಿದೆ. ಇಂದು 300ಕ್ಕೂ ಹೆಚ್ಚು ಡಚ್ ಕಂಪನಿಗಳು ಭಾರತದ ಯಶೋಗಾಥೆಯ ಭಾಗವಾಗಿವೆ. ಭಾರತದ ಮೇಲಿನ ನಿಮ್ಮ ದೃಷ್ಟಿಕೋನ ಮತ್ತು ವಿಶ್ವಾಸದಿಂದಾಗಿ, ಯುರೋಪ್ ಪೈಕಿ ನೆದರ್‌ಲ್ಯಾಂಡ್ಸ್ ಭಾರತದ ಅತಿದೊಡ್ಡ ಹೂಡಿಕೆದಾರರಾಗಿ ಮತ್ತು 2ನೇ ಅತಿದೊಡ್ಡ ವ್ಯಾಪಾರ ಪಾಲುದಾರರಾಗಿ ಮಾರ್ಪಟ್ಟಿದೆ.