ಕ್ರೀಡಾ ಸಹಭಾಗಿತ್ವಕ್ಕಾಗಿ ಭಾರತ-ಆಸ್ಟ್ರೇಲಿಯಾ ನೀಲನಕ್ಷೆ
July 10th, 10:07 am
ಕ್ರೀಡೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರಬಲ ಸೇತುವೆಯಾಗಿದ್ದು, ಸಮುದಾಯಗಳನ್ನು ಒಗ್ಗೂಡಿಸುತ್ತದೆ ಮತ್ತು ಪಾಲುದಾರಿಕೆಗೆ ಹೊಸ ಮಾರ್ಗಗಳನ್ನು ತೆರೆಯುತ್ತಿದೆ.ಕ್ರೀಡಾ ಕಾರ್ಯಕ್ರಮಕ್ಕಾಗಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ
July 10th, 08:21 am
ಭಾರತ-ಆಸ್ಟ್ರೇಲಿಯಾ ನಡುವಿನ ಕ್ರೀಡಾ ಸಂಬಂಧಗಳನ್ನು ಆಚರಿಸುವ ಕಾರ್ಯಕ್ರಮಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಆಂಥೋನಿ ಅಲ್ಬನೀಸ್ ಮತ್ತು ವಿಕ್ಟೋರಿಯಾದ ಪ್ರೀಮಿಯರ್ ಗೌರವಾನ್ವಿತ ಜೆಸಿಂತಾ ಅಲನ್ ಅವರೊಂದಿಗೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ ಭೇಟಿ ನೀಡಿದರು. ಶ್ರೀ ಸ್ಟೀವ್ ವಾ ಮತ್ತು ಶ್ರೀಮತಿ ಲಿಸಾ ಸ್ಥಾಲೇಕರ್ ಸೇರಿದಂತೆ ಹಲವು ಆಸ್ಟ್ರೇಲಿಯಾದ ಕ್ರೀಡಾ ದಿಗ್ಗಜರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಭಾರತ-ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಆಧಾರಸ್ತಂಭಗಳಾಗಿ ಕ್ರೀಡೆ, ಸಾಂಸ್ಕೃತಿಕ ವಿನಿಮಯ ಮತ್ತು ಜನರ ನಡುವಿನ ಸಂಬಂಧ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಈ ಭೇಟಿ ಬಲವಾಗಿ ಪ್ರತಿಪಾದಿಸಿತು.ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಅವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ
July 09th, 11:15 am
ಈ ಹಂಚಿಕೆಯ ಗುಣಲಕ್ಷಣಗಳು ಮತ್ತು ನಮ್ಮ ಸಾಮಾನ್ಯ ವಿಶ್ವ ದೂರದೃಷ್ಟಿಯು ಆಳವಾದ ಪರಸ್ಪರ ನಂಬಿಕೆಯೊಂದಿಗೆ ಮುಂದುವರಿಯಲು ನಮಗೆ ಸ್ಫೂರ್ತಿ ನೀಡುತ್ತದೆ. ಕಳೆದ ಕೆಲವು ವರ್ಷಗಳಿಂದ ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಅಭೂತಪೂರ್ವ ಪ್ರಗತಿಯನ್ನು ಕಂಡಿದೆ ಮತ್ತು ಇಂದು ಮೂರನೇ ವಾರ್ಷಿಕ ಶೃಂಗಸಭೆಯು ನಮ್ಮ ಸಹಕಾರಕ್ಕೆ ಹಲವು ಹೊಸ ಆಯಾಮಗಳನ್ನು ಸೇರ್ಪಡೆ ಮಾಡಿದೆ.India-Australia Joint Statement on Energy Security
July 09th, 11:02 am
The India-Australia Joint Statement on Energy Security noted the two countries' deep concern over the situation in the Middle East. They shared their commitment to working together to strengthen energy supply chain resilience, including by deepening regional cooperation, accelerating the energy transition, promoting the uptake of renewable energy resources and upholding open trade arrangements for energy and liquid fuels.Third India-Australia Annual Summit Joint Statement
July 09th, 10:58 am
At the invitation of Australian PM Anthony Albanese, PM Modi visited Australia from 8-10 July 2026 for the Third Australia-India Annual Summit in Melbourne. The two leaders reaffirmed their shared commitment to further consolidate and expand the India-Australia Comprehensive Strategic Partnership (CSP) and explore new areas of cooperation for the peace, prosperity and stability of the shared region.ರಕ್ಷಣೆ ಮತ್ತು ಭದ್ರತಾ ಸಹಕಾರ ಕುರಿತು ಭಾರತ-ಆಸ್ಟ್ರೇಲಿಯಾ ಜಂಟಿ ಘೋಷಣೆ
July 09th, 10:55 am
ನಾವು, ಭಾರತ ಮತ್ತು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿಗಳಾದ ನಾವು, ನಮ್ಮ ನಿರಂತರವಾಗಿ ಬೆಳೆಯುತ್ತಿರುವ ದ್ವಿಪಕ್ಷೀಯ ಬಾಂಧವ್ಯದಿಂದ ಒಗ್ಗೂಡಿದ್ದೇವೆ. ನಮ್ಮ ರಾಷ್ಟ್ರಗಳ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ದೃಢಸಂಕಲ್ಪ ಮಾಡಿದ್ದೇವೆ. ಮುಕ್ತ, ಶಾಂತಿಯುತ, ಸ್ಥಿರ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್‌ಗಾಗಿರುವ ಸಾಮಾನ್ಯ ಮಹತ್ವಾಕಾಂಕ್ಷೆಯಿಂದ ಪ್ರೇರಿತರಾಗಿ, ಈ ಮೂಲಕ ರಕ್ಷಣೆ ಮತ್ತು ಭದ್ರತಾ ಸಹಕಾರದ ಜಂಟಿ ಘೋಷಣೆಗೆ ಬದ್ಧರಾಗಿದ್ದೇವೆ.ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ಪ್ರಧಾನಮಂತ್ರಿ ಭೇಟಿ
July 03rd, 08:42 pm
ಇಂಡೋನೇಷ್ಯಾ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಪ್ರಬೋವೊ ಸುಬಿಯಾಂಟೊ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜುಲೈ 6-8, 2026 ರವರೆಗೆ ಇಂಡೋನೇಷ್ಯಾಕ್ಕೆ ಭೇಟಿ ನೀಡಲಿದ್ದಾರೆ. ಇದು ಇಂಡೋನೇಷ್ಯಾಕ್ಕೆ ಪ್ರಧಾನಮಂತ್ರಿಯವರ ನಾಲ್ಕನೇ ಭೇಟಿ ಮತ್ತು ಮೇ 2018ರಲ್ಲಿ ಭಾರತ-ಇಂಡೋನೇಷ್ಯಾ ಸಂಬಂಧಗಳು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಏರಿದ ನಂತರ ಅವರ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಭೇಟಿಯ ಸಮಯದಲ್ಲಿ, ಪ್ರಧಾನಿಯವರು ಅಧ್ಯಕ್ಷ ಪ್ರಬೋವೊ ಅವರೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಲಿದ್ದಾರೆ ಮತ್ತು ಪಾಲುದಾರಿಕೆಯಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ.Minister for Foreign Affairs of Australia Senator Penny Wong meets Prime Minister
May 26th, 08:19 pm
The Prime Minister, Shri Narendra Modi expressed happiness on meeting Senator Penny Wong, Minister for Foreign Affairs of Australia.ಐತಿಹಾಸಿಕ ಎರಡನೇ ಅವಧಿಗೆ ಆಯ್ಕೆಯಾದ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಆಂಥೋನಿ ಅಲ್ಬನೀಸ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ
May 06th, 02:41 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗೌರವಾನ್ವಿತ ಆಂಥೋನಿ ಅಲ್ಬನೀಸ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು ಮತ್ತು ಆಸ್ಟ್ರೇಲಿಯಾದ 32ನೇ ಪ್ರಧಾನಮಂತ್ರಿಯಾಗಿ ಐತಿಹಾಸಿಕ ರೀತಿಯಲ್ಲಿ ಪುನರಾಯ್ಕೆಗೊಂಡುದಕ್ಕಾಗಿ ಅವರನ್ನು ಅಭಿನಂದಿಸಿದರು.ಜಂಟಿ ಹೇಳಿಕೆ: ಭಾರತ-ಆಸ್ಟ್ರೇಲಿಯಾ 2ನೇ ವಾರ್ಷಿಕ ಶೃಂಗಸಭೆ
November 19th, 11:22 pm
ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಗೌರವಾನ್ವಿತ ಆಂಥೋನಿ ಅಲ್ಬನೀಸ್ ಎಂಪಿ ಅವರು 2024ರ ನವೆಂಬರ್ 19ರಂದು ರಿಯೋ ಡಿ ಜನೈರೊದಲ್ಲಿ ನಡೆದ ʻಗ್ರೂಪ್ ಆಫ್ 20ʼ (ಜಿ 20) ಶೃಂಗಸಭೆಯ ನೇಪಥ್ಯದಲ್ಲಿ ಎರಡನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆ ನಡೆಸಿದರು.ಆಸ್ಟ್ರೇಲಿಯಾ ಪ್ರಧಾನಮಂತ್ರಿ ಆಂಥೋನಿ ಅಲ್ಬನೀಸ್ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತುಕತೆ
August 26th, 01:02 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಶ್ರೀ ಆಂಥೋನಿ ಅಲ್ಬನೀಸ್ ಅವರೊಂದಿಗೆ ಮಾತುಕತೆ ನಡೆಸಿದರು. ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳಲ್ಲಿನ ಪ್ರಗತಿ ಮತ್ತು ಕ್ವಾಡ್ ಸೇರಿದಂತೆ ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರದ ಬಗ್ಗೆ ಮಾತುಕತೆ ನಡೆಸಿದರು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಮಂತ್ರಿಯವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿ ಹೇಳಿಕೆಯ ಇಂಗ್ಲೀಷ್ ಅನುವಾದ
May 24th, 06:41 am
ನನ್ನ ಆಸ್ಟ್ರೇಲಿಯಾ ಭೇಟಿಯ ಸಂದರ್ಭದಲ್ಲಿ ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತಿಥ್ಯ ಮತ್ತು ಗೌರವಕ್ಕಾಗಿ ನಾನು ಆಸ್ಟ್ರೇಲಿಯದ ಜನರಿಗೆ ಮತ್ತು ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುಸುತ್ತೇನೆ. ನನ್ನ ಸ್ನೇಹಿತರಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಭಾರತಕ್ಕೆ ಭೇಟಿ ನೀಡಿದ ಎರಡು ತಿಂಗಳೊಳಗೆ ನಾನು ಆಸ್ಟ್ರೇಲಿಯಾಕ್ಕೆ ಭೇಟಿ ನೀಡುತ್ತಿದ್ದೇನೆ. ಕಳೆದ ಒಂದು ವರ್ಷದಲ್ಲಿ ಇದು ನಮ್ಮ ಆರನೇ ಸಭೆಯಾಗಿದೆ.