Cabinet approves GOBARdhan, India’s National Unified Scheme for Compressed Biogas, with an outlay of Rs.23,731 crore
August 06th, 04:08 pm
Marking a defining moment in India’s clean energy journey, the Union Cabinet, chaired by PM Modi, has approved GOBARdhan, the National Circular Bioenergy Scheme, with a total outlay of Rs.23,731 crore from FY 2026-27 to FY 2035-36. The scheme reflects the Government’s commitment to energy security, farmers and rural enterprises, waste-to-wealth, Atmanirbhar Bharat and the vision of Viksit Bharat.ವಿಧಿ 370 ಮತ್ತು 35(ಎ) ರದ್ದತಿಗೆ ಏಳು ವರ್ಷ ಸಂದಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ
August 05th, 02:25 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಧಿ 370 ಮತ್ತು 35(ಎ) ರದ್ದತಿಯ ಐತಿಹಾಸಿಕ ದಿನಕ್ಕೆ ಏಳು ವರ್ಷಗಳು ಸಂದಿದ್ದನ್ನು ಇಂದು ಸ್ಮರಿಸಿದರು. 2019ರ ಆಗಸ್ಟ್ 5 ಅನ್ನು ಭಾರತದ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯತ್ತ ಪಯಣದಲ್ಲಿ ನಿರ್ಣಾಯಕ ಮೈಲುಗಲ್ಲು ಎಂದು ಅವರು ಬಣ್ಣಿಸಿದರು.ಆಸ್ಟ್ರೇಲಿಯಾದಲ್ಲಿ ನಡೆದ ಸಮುದಾಯ ಕಾರ್ಯಕ್ರಮವೊಂದರಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
July 09th, 03:22 pm
ನಾವು ಭೇಟಿಯಾಗುವ ಭೂಮಿಯ ಸಾಂಪ್ರದಾಯಿಕ ಮಾಲೀಕರನ್ನು ಗುರುತಿಸುವ ಮೂಲಕ ನಾನು ಇಂದು ಮಾತು ಆರಂಭಿಸಲು ಬಯಸುತ್ತೇನೆ ಮತ್ತು ಅವರ ಹಿಂದಿನ, ವರ್ತಮಾನ ಮತ್ತು ಉದಯೋನ್ಮುಖ ಹಿರಿಯರಿಗೆ ನನ್ನ ಗೌರವವನ್ನು ಸಲ್ಲಿಸುತ್ತೇನೆ.ಆಸ್ಟ್ರೇಲಿಯಾದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
July 09th, 03:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೆಲ್ಬೋರ್ನ್ ನ ಮಾರ್ವೆಲ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯದ ಬೃಹತ್ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ವಿಶೇಷ ಸದ್ಭಾವನೆಯ ಸಂಕೇತವಾಗಿ, ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಆಂಥೋನಿ ಅಲ್ಬನೀಸ್ ಅವರೂ ಸಹ ಈ ಭಾರತೀಯ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಪ್ರಧಾನಮಂತ್ರಿ ಅವರು ಆಸ್ಟ್ರೇಲಿಯಾದ ಗವರ್ನರ್ ಜನರಲ್ ಅವರನ್ನು ಭೇಟಿ ಮಾಡಿದರು
July 09th, 01:55 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೆಲ್ಬೋರ್ನ್ ನಲ್ಲಿ ಆಸ್ಟ್ರೇಲಿಯಾದ ಗವರ್ನರ್ ಜನರಲ್ ಗೌರವಾನ್ವಿತ ಸ್ಯಾಮ್ ಮೋಸ್ಟಿನ್ ಎಸಿ ಅವರನ್ನು ಭೇಟಿ ಮಾಡಿದರು.ಇಂಡೋನೇಷ್ಯಾದಲ್ಲಿ ನಡೆದ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
July 07th, 11:47 pm
ಇಂಡೋನೇಷ್ಯಾದಲ್ಲಿ ನಡೆದ ಈ ಮೂರು ಕಾರ್ಯಕ್ರಮಗಳಲ್ಲೂ 'ಪಂದ್ಯ ಶ್ರೇಷ್ಠ' ಪ್ರಶಸ್ತಿ ಒಂದೇ ಆಗಿತ್ತು - ನೀವೆಲ್ಲರೂ ಇಂಡೋನೇಷ್ಯಾದಲ್ಲಿ ವಾಸಿಸುತ್ತಿದ್ದೀರಿ. ನಿಮ್ಮಲ್ಲಿ ಪ್ರತಿಯೊಬ್ಬರೂ ನಿಜವಾದ 'ಪಂದ್ಯ ಶ್ರೇಷ್ಠರು'!ಜಕಾರ್ತದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ
July 07th, 05:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಕಾರ್ತದಲ್ಲಿಂದು ನಡೆದ ಅನಿವಾಸಿ ಭಾರತೀಯ ಸಮುದಾಯದ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಅವರಿಗೆ, ಅನಿವಾಸಿ ಭಾರತೀಯರು ಮತ್ತು ಭಾರತದ ಇಂಡೋನೇಷ್ಯಾದ ಸ್ನೇಹಿತರು ದೊಡ್ಡ ಸಂಖ್ಯೆಯಲ್ಲಿ ಸೇರಿ ಆತ್ಮೀಯ ಮತ್ತು ಉತ್ಸಾಹಭರಿತ ಸ್ವಾಗತ ನೀಡಿದರು. ವಿಶೇಷ ಗೌರವದ ಸಂಕೇತವಾಗಿ ಇಂಡೋನೇಷ್ಯಾ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಪ್ರಬೋವೊ ಸುಬಿಯಾಂಟೊ ಅವರು ಕೂಡ ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರೊಂದಿಗೆ ಪಾಲ್ಗೊಂಡರು.ಭಾರತ-ಜಪಾನ್ ಉದ್ಯಮ ವ್ಯಾಪಾರ ವೇದಿಕೆ ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣ
July 02nd, 03:35 pm
ಭಾರತ-ಜಪಾನ್ ಸಂಬಂಧ ನಿಜಕ್ಕೂ ವಿಶೇಷವಾದದ್ದು.ನವದೆಹಲಿಯಲ್ಲಿ ಆಯೋಜಿತವಾಗಿದ್ದ ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್ ಗಾರ್ ಯೋಜನೆಯ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
June 19th, 05:15 pm
ನನ್ನ ಸಂಪುಟ ಸಹೋದ್ಯೋಗಿ ಶ್ರೀ ಮನ್ಸುಖ್ ಮಾಂಡವೀಯ ಜಿ, ಸಹೋದರಿ ಶೋಭಾ ಜಿ, ದೇಶಾದ್ಯಂತ ವಿವಿಧ ಕಾರ್ಯಕ್ರಮಗಳು ಮತ್ತು ತಂತ್ರಜ್ಞಾನದೊಂದಿಗೆ ಸಂಪರ್ಕ ಹೊಂದಿದ ಎಲ್ಲಾ ಗಣ್ಯ ವ್ಯಕ್ತಿಗಳೆ, ದೂರದಿಂದಲೇ ಈ ಕಾರ್ಯಕ್ರಮದೊಂದಿಗೆ 200 ಸ್ಥಳಗಳಿಂದ ಸಂಪರ್ಕ ಹೊಂದಿರುವ ಸುಮಾರು 2 ಲಕ್ಷ ಜನರಿಗೆ ನಾನು ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ, ಇಂದು ಇಲ್ಲಿ ಕೈಗಾರಿಕಾ ಕ್ಷೇತ್ರದ ಅನೇಕ ಗಣ್ಯ ವ್ಯಕ್ತಿಗಳು ಹಾಜರಿರುವುದನ್ನು ನಾನು ನೋಡುತ್ತಿದ್ದೇನೆ. ಸಹಜವಾಗಿ ಯುವ ಸಮುದಾಯ ಇಲ್ಲಿ ಉತ್ಸಾಹದಿಂದ ದೊಡ್ಡ ಸಂಖ್ಯೆಯಲ್ಲಿ ಇರುವುದು ಗೋಚರಿಸುತ್ತಿದೆ.ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್ ಗಾರ್ ಯೋಜನೆ ಅಡಿಯಲ್ಲಿ ಸುಮಾರು ₹2,400 ಕೋಟಿ ಮೌಲ್ಯದ ಪ್ರೋತ್ಸಾಹಕ ಧನವನ್ನು ವಿತರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
June 19th, 05:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 'ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್ ಗಾರ್ ಯೋಜನೆ'ಯ ಫಲಾನುಭವಿಗಳು, ಉದ್ಯಮದ ಪ್ರತಿನಿಧಿಗಳು ಮತ್ತು ಪಾಲುದಾರರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ, ದೇಶದ ಯುವಕರನ್ನು ಸಬಲೀಕರಣಗೊಳಿಸಲು ಮತ್ತು ದೇಶಾದ್ಯಂತ ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸಲು ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಭಾರತ ಸರ್ಕಾರದ ಪ್ರಮುಖ ಉದ್ಯೋಗ-ಸಂಯೋಜಿತ ಪ್ರೋತ್ಸಾಹಕ ಯೋಜನೆಯಾದ ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್ ಗಾರ್ ಯೋಜನೆ (PM-VBRY) ಅನುಷ್ಠಾನದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುವ ಸಲುವಾಗಿ ಮತ್ತು ವಿವಿಧ ವಲಯಗಳಲ್ಲಿ ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ವಿಸ್ತರಿಸಲು, ಶ್ರೀ ಮೋದಿ ಅವರು PM-VBRY ಅಡಿಯಲ್ಲಿ ಸುಮಾರು ₹2,400 ಕೋಟಿ ಮೌಲ್ಯದ ಪ್ರೋತ್ಸಾಹಕ ಧನವನ್ನು ವಿತರಿಸಿದರು. ಈ ಪ್ರೋತ್ಸಾಹಕ ಧನವು ದೇಶಾದ್ಯಂತ 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿಗೆ ಬೆಂಬಲ ನೀಡಿದೆ.ಫ್ರಾನ್ಸ್‌ನ ಎವಿಯನ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ "ಎಲ್ಲರಿಗೂ ಸಮತೋಲಿತ, ಹಂಚಿಕೆಯ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವ" ಎಂಬ ವಿಷಯದ ಕುರಿತು ಪ್ರಧಾನಮಂತ್ರಿ ಅವರ ಭಾಷಣ
June 18th, 05:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಫ್ರಾನ್ಸ್‌ನ ಎವಿಯನ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಎಲ್ಲರಿಗೂ ಸಮತೋಲಿತ, ಹಂಚಿಕೆಯ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವ ಎಂಬ ವಿಷಯದ ಕುರಿತ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು.ಜಿ-7 ಶೃಂಗಸಭೆ-ಜನಸಂಪರ್ಕ ಅಧಿವೇಶನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಯ ಇಂಗ್ಲಿಷ್ ಅನುವಾದ: ಎಲ್ಲರಿಗೂ ಸಮತೋಲಿತ, ಹಂಚಿಕೆಯ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವುದು
June 17th, 06:07 pm
ಫ್ರಾನ್ಸ್‌ನ ಜಿ-7 ಅಧ್ಯಕ್ಷತೆಯು ಎಲ್ಲರನ್ನೂ ಒಳಗೊಳ್ಳುವ ಮತ್ತು ಸುಸ್ಥಿರ ಬೆಳವಣಿಗೆಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಿದೆ ಎಂಬುದು ನನಗೆ ಸಂತೋಷ ತಂದಿದೆ. ಜಗತ್ತು ಅನೇಕ ಸವಾಲುಗಳು ಮತ್ತು ಅನಿಶ್ಚಿತತೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ, ಈ ವೇದಿಕೆಯಿಂದ ಹೊರಹೊಮ್ಮುವ ಸಂದೇಶವು ಎಲ್ಲಾ ಮಾನವೀಯತೆಯ ಯೋಗಕ್ಷೇಮ ಮತ್ತು ಭವಿಷ್ಯಕ್ಕೆ ಮುಖ್ಯವಾಗಿದೆ.Today, the world does not suffer from a shortage of resources; it suffers from a shortage of trust: PM Modi at G7 Summit in Evian, France
June 16th, 10:12 pm
Addressing the Outreach Session on “Forging New Partnerships and Rebuilding International Solidarity” at the G7 Summit in France, PM Modi emphasized that building trust, transparency and stronger international partnerships is essential in an interconnected world. He highlighted India’s “Humanity First” approach, called for greater global solidarity, and stressed the importance of dialogue, diplomacy and respect for international law in ensuring peace and stability.ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ “ಹೊಸ ಪಾಲುದಾರಿಕೆಗಳನ್ನು ರೂಪಿಸುವುದು ಮತ್ತು ಅಂತಾರಾಷ್ಟ್ರೀಯ ಒಗ್ಗಟ್ಟಿನ ಪುನರ್ ನಿರ್ಮಾಣ’’ ಕುರಿತ ಗೋಷ್ಠಿಯನ್ನುದ್ದೇಶಿ ಭಾಷಣ ಮಾಡಿದ ಪ್ರಧಾನಮಂತ್ರಿ
June 16th, 10:07 pm
ಪ್ರಧಾನಮಂತ್ರಿ ತಮ್ಮ ಭಾಷಣದಲ್ಲಿ ಇಂಧನ, ಆಹಾರ, ಆರೋಗ್ಯ, ಸೈಬರ್ ಮತ್ತು ಆರ್ಥಿಕ ಭದ್ರತೆ ಬೆಸೆದುಕೊಂಡಿರುವ ಅಂತರ ಸಂಪರ್ಕಿತ ಜಗತ್ತಿನಲ್ಲಿ ಅಂತಾರಾಷ್ಟ್ರೀಯ ಪಾಲುದಾರಿಕೆಗಳನ್ನು ನಿರ್ಮಿಸುವುದು ಮಾನವೀಯತೆಯ ಪ್ರಗತಿ ಮತ್ತು ಸಮೃದ್ಧಿಗೆ ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು. ಅನಿಶ್ಚಿತತೆಯ ಜಗತ್ತಿನಲ್ಲಿ ವ್ಯಾಪಾರ ಮತ್ತು ತಂತ್ರಜ್ಞಾನವನ್ನು ಸಂಕುಚಿತ ಹಿತಾಸಕ್ತಿಗಳಿಗಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ, ಇದು ಅಂತಾರಾಷ್ಟ್ರೀಯ ರಂಗದಲ್ಲಿ ನಂಬಿಕೆಯ ಕೊರತೆಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು. ಕೋವಿಡ್ ಸಾಂಕ್ರಾಮಿಕ ರೋಗದಿಂದ ಕಲಿತ ಪಾಠಗಳನ್ನು ಉಲ್ಲೇಖಿಸಿದ ಅವರು, ಜಾಗತಿಕ ಪಾಲುದಾರಿಕೆಗಳಲ್ಲಿ ನಂಬಿಕೆ ಮತ್ತು ಪಾರದರ್ಶಕತೆಯನ್ನು ನಿರ್ಮಿಸುವತ್ತ ಗಮನಹರಿಸಲು ರಾಷ್ಟ್ರಗಳಿಗೆ ಕರೆ ನೀಡಿದರು.ದಮನ್‌ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಶಿಲಾನ್ಯಾಸ/ರಾಷ್ಟ್ರಕ್ಕೆ ಸಮರ್ಪಣೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅವತರಣಿಕೆ
June 05th, 07:20 pm
ನೀವು ಇಲ್ಲಿ ನೆರೆದಿರುವಂತೆಯೇ, ಲಕ್ಷದ್ವೀಪದಲ್ಲಿಯೂ ಸಹ ಹೆಚ್ಚಿನ ಸಂಖ್ಯೆಯ ಜನರು ವೀಡಿಯೊ ಮೂಲಕ ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ, ಏಕೆಂದರೆ ಇಂದು ಲಕ್ಷದ್ವೀಪದಲ್ಲಿ ಅಭಿವೃದ್ಧಿಯ ಹೊಸ ಆರಂಭ, ಲಕ್ಷದ್ವೀಪದ ಜನರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರುವ ಹೊಸ ಯೋಜನೆ, ಉದ್ಘಾಟನೆಗೊಂಡಿದೆ ಮತ್ತು ಕೆಲವು ಯೋಜನೆಗಳಿಗೆ ಅಡಿಪಾಯ ಹಾಕಲಾಗಿದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಾಮನ್‌ನಲ್ಲಿ ಸುಮಾರು ₹2,970 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಅರ್ಪಿಸಿ ಮತ್ತು ಶಿಲಾನ್ಯಾಸ ನೆರವೇರಿಸಿದರು
June 05th, 07:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಾಮನ್‌ನಲ್ಲಿ ಸುಮಾರು ₹2,970 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಿ ಮತ್ತು ಶಿಲಾನ್ಯಾಸ ನೆರವೇರಿಸಿದರು. ಸ್ಥಳೀಯ ನಾಯಕರು ಮತ್ತು ನಾಗರಿಕರ ಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಅಗಾಧವಾದ ಸಾರ್ವಜನಿಕ ಭಾಗವಹಿಸುವಿಕೆಗೆ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ತಮ್ಮ ಹಿಂದಿನ ಭೇಟಿಯನ್ನು ನೆನಪಿಸಿಕೊಳ್ಳುತ್ತಾ, ತಮ್ಮ ಹಿಂದಿನ ಅವಲೋಕನವು ಹೇಗೆ ವಾಸ್ತವಕ್ಕೆ ಪರಿವರ್ತನೆಯಾಯಿತು ಎಂಬುದರತ್ತ ಗಮನ ಸೆಳೆದರು, ಈ ಪ್ರದೇಶವು ಈಗ ಹೆಮ್ಮೆಯಿಂದ ರಾಷ್ಟ್ರದ ವೈವಿಧ್ಯಮಯ ಮತ್ತು ಚೈತನ್ಯಶೀಲ ಸಾರವನ್ನು ಪ್ರತಿನಿಧಿಸುತ್ತಿದೆ ಎಂದರು. ದಾಮನ್ ಮಿನಿ ಭಾರತದ ಜೀವಂತ ಉದಾಹರಣೆಯಾಗಿದೆ, ಇಲ್ಲಿ ವಿವಿಧ ಪ್ರದೇಶಗಳ ಜನರ ವಾಸ್ತವ್ಯವು ಇಡೀ ದೇಶದ ಸುಂದರ ನೋಟವನ್ನು ಒದಗಿಸುತ್ತದೆ ಎಂದೂ ಶ್ರೀ ಮೋದಿ ಹೇಳಿದರು.Cabinet approves a highway construction project in Odisha worth Rs.8300.79 crore
June 03rd, 03:10 pm
Under PM Modi’s leadership, the Cabinet approved an ₹8,300 crore coastal highway project in Odisha connecting Rameshwar to Paradeep across 160 km. The project will boost connectivity, reduce travel time by nearly 2.5 hours, strengthen logistics under PM GatiShakti and promote regional economic growth while lowering fuel consumption and carbon emissions.ರೋಜ್‌ಗಾರ್ ಮೇಳದ ನೇಮಕಾತಿ ಪತ್ರಗಳ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
May 23rd, 11:15 am
ಈ ಹಂತವನ್ನು ತಲುಪಲು ನೀವು ದೀರ್ಘ ತಯಾರಿ ಮತ್ತು ಕಠಿಣ ಪರಿಶ್ರಮದ ಮೂಲಕ ಬಂದಿದ್ದೀರಿ. ಈ ಸಾಧನೆಗಾಗಿ ನಾನು ನಿಮಗೆ ಮತ್ತು ನಿಮ್ಮ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮನ್ನು ಇಲ್ಲಿಗೆ ಕರೆತರುವಲ್ಲಿ ನಿಮ್ಮ ಪೋಷಕರು ಮತ್ತು ಕುಟುಂಬಗಳ ಕೊಡುಗೆ ಅಪಾರವಾಗಿದೆ. ನಾವು ಈ ಹಂತಕ್ಕೆ ತಲುಪಲು ಕುಟುಂಬ ಮತ್ತು ಸಮಾಜ ಮಾತ್ರವೇ ದೊಡ್ಡ ಪಾತ್ರವನ್ನು ವಹಿಸಿರುವುದಿಲ್ಲ. ನಾವು ಇಲ್ಲಿಗೆ ಬಂದಿರುವುದು ನಮ್ಮಿಂದಾಗಿ ಅಥವಾ ನಮ್ಮ ಕುಟುಂಬಗಳಿಂದಾಗಿ ಮಾತ್ರ ಅಲ್ಲ. ಈ ವಿಶಾಲ ರಾಷ್ಟ್ರದ 140 ಕೋಟಿ ನಾಗರಿಕರ ಕೊಡುಗೆಯೂ ಸಹ ಬಹಳ ಮಹತ್ವದ್ದಾಗಿದೆ. ಆದ್ದರಿಂದ, ನಮ್ಮ ಜವಾಬ್ದಾರಿ ನಮ್ಮ ಮತ್ತು ನಮ್ಮ ಕುಟುಂಬಗಳ ಕಡೆಗೆ ಮಾತ್ರವಲ್ಲ, ಇಡೀ ಸಮಾಜದ ಕಡೆಗೂ ಹೋಗಬೇಕು. ಈ ಎಲ್ಲಾ ಕೆಲಸಗಳಿಗೆ ನೀವು ಇನ್ನಷ್ಟು ಸಮರ್ಥರಾಗುತ್ತೀರಿ ಎಂಬ ವಿಶ್ವಾಸ ನನಗಿದೆ. ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ.ಉದ್ಯೋಗ ಮೇಳದ ಅಡಿಯಲ್ಲಿ ಸರ್ಕಾರಿ ಇಲಾಖೆಗಳಿಗೆ ಹೊಸದಾಗಿ ಆಯ್ಕೆಯಾದ ಯುವಕರಿಗೆ, 51,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
May 23rd, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ, ಬೆಳಿಗ್ಗೆ 11 ಗಂಟೆಗೆ ನಡೆದ 19ನೇ ಉದ್ಯೋಗ ಮೇಳದಲ್ಲಿ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಹೊಸದಾಗಿ ಆಯ್ಕೆಯಾದ ಯುವಕರಿಗೆ, 51,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಂದರ್ಭವನ್ನು ದೇಶಾದ್ಯಂತದ ಸಾವಿರಾರು ಯುವಕರಿಗೆ ಅತ್ಯಂತ ಮಹತ್ವದ ದಿನ ಎಂದು ಬಣ್ಣಿಸಿದರು. ಸರ್ಕಾರಿ ಸೇವೆಗೆ ಹೊಸದಾಗಿ ಸೇರಿದವರನ್ನು ಸ್ವಾಗತಿಸಿದ ಅವರು, ರೈಲ್ವೆ, ಬ್ಯಾಂಕಿಂಗ್, ರಕ್ಷಣೆ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತದ ಅಭಿವೃದ್ಧಿಗೆ ಅವರು ನೀಡಲಿರುವ ಮುಂಬರುವ ಕೊಡುಗೆಯ ಬಗ್ಗೆ ಒತ್ತಿಹೇಳಿದರು. ಮುಂಬರುವ ವರ್ಷಗಳಲ್ಲಿ, ವಿಕಸಿತ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ನೀವೆಲ್ಲರೂ ನಿರ್ಣಾಯಕ ಪಾತ್ರ ವಹಿಸಲಿದ್ದೀರಿ ಎಂದು ಶ್ರೀ ಮೋದಿ ಪ್ರತಿಪಾದಿಸಿದರು.3ನೇ ಭಾರತ-ನಾರ್ಡಿಕ್ ಶೃಂಗಸಭೆಯ ಸಂದರ್ಭದಲ್ಲಿ ಫಿನ್ ಲ್ಯಾಂಡ್ ಪ್ರಧಾನಮಂತ್ರಿಯೊಂದಿಗೆ ಪ್ರಧಾನಮಂತ್ರಿಯವರ ಸಭೆ
May 19th, 06:42 pm
2026ರ ಮೇ 19 ರಂದು ಓಸ್ಲೋದಲ್ಲಿ ನಡೆದ 3ನೇ ಭಾರತ-ನಾರ್ಡಿಕ್ ಶೃಂಗಸಭೆಯ ಸಂದರ್ಭದ ನೇಪಥ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫಿನ್ ಲ್ಯಾಂಡ್ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಪೆಟ್ಟೇರಿ ಓರ್ಪೊ ಅವರನ್ನು ಭೇಟಿಯಾದರು.