ರಾಜ್ಯಸಭೆಯಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆ
April 17th, 11:10 am
ಸದನದ ಪರವಾಗಿ ಮತ್ತು ನನ್ನ ಪರವಾಗಿ, ನಾನು ಶ್ರೀ ಹರಿವಂಶ್ ಅವರಿಗೆ ಅನೇಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ. ರಾಜ್ಯಸಭೆ ಉಪಸಭಾಪತಿಯಾಗಿ ಸತತ 3ನೇ ಬಾರಿಗೆ ಆಯ್ಕೆಯಾಗಿರುವುದು, ಈ ಸದನವು ನಿಮ್ಮ ಮೇಲೆ ಹೊಂದಿರುವ ಆಳವಾದ ನಂಬಿಕೆಗೆ ಸಾಕ್ಷಿಯಾಗಿದೆ. ಹಿಂದಿನ ಅವಧಿಯಲ್ಲಿ ನಿಮ್ಮ ಅನುಭವ ಮತ್ತು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ನಿಮ್ಮ ಪ್ರಯತ್ನಗಳಿಂದ ಪಡೆದ ಪ್ರಯೋಜನಕ್ಕೆ ಸದನವು ಪರಿಣಾಮಕಾರಿಯಾಗಿ ತನ್ನ ಅನುಮೋದನೆಯ ಮುದ್ರೆ ಹೊತ್ತಿದೆ. ಇದು ಅನುಭವಕ್ಕೆ ಸಂದ ಗೌರವ, ಸ್ವಾಭಾವಿಕ ಕಾರ್ಯ ಶೈಲಿಗೆ ಸಂದ ಗೌರವ ಮತ್ತು ಆ ಸ್ವಾಭಾವಿಕ ಕಾರ್ಯ ಶೈಲಿಯ ಸ್ವೀಕಾರವೂ ಆಗಿದೆ. ಹರಿವಂಶ್ ಜಿ ಅವರ ನಾಯಕತ್ವದಲ್ಲಿ ಸದನದ ಶಕ್ತಿ ಹೆಚ್ಚು ಪರಿಣಾಮಕಾರಿಯಾಗುವುದನ್ನು ನಾವೆಲ್ಲರೂ ನೋಡಿದ್ದೇವೆ. ಅವರು ಸದನದ ಕಲಾಪಗಳನ್ನು ಕೇವಲ ನಡೆಸುವುದಿಲ್ಲ ಎಂದು ನಾನು ಹೇಳಬಲ್ಲೆ; ಅವರು ತಮ್ಮ ಹಿಂದಿನ ಜೀವನದ ಅನುಭವಗಳನ್ನು ಸದನವನ್ನು ಉತ್ಕೃಷ್ಟಗೊಳಿಸಲು ಅತ್ಯಂತ ನಿಖರವಾದ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಅವರ ಅನುಭವವು ಸದನದ ಸಂಪೂರ್ಣ ಕಲಾಪಗಳು, ನಡವಳಿಕೆ ಮತ್ತು ವಾತಾವರಣವನ್ನು ಹೆಚ್ಚು ಪ್ರಬುದ್ಧಗೊಳಿಸುತ್ತದೆ. ಉಪಸಭಾಪತಿಯ ಹೊಸ ಅವಧಿಯು ಅದೇ ಮನೋಭಾವ, ಸಮತೋಲನ ಮತ್ತು ಸಮರ್ಪಣೆಯೊಂದಿಗೆ ಮುಂದುವರಿಯುತ್ತದೆ. ನಮ್ಮ ಎಲ್ಲಾ ಪ್ರಯತ್ನಗಳ ಮೂಲಕ ಸದನದ ಘನತೆ ಹೊಸ ಎತ್ತರವನ್ನು ತಲುಪುತ್ತದೆ ಎಂಬ ವಿಶ್ವಾಸ ನನಗಿದೆ.ರಾಜ್ಯಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
April 17th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜ್ಯಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು ಮತ್ತು ಐತಿಹಾಸಿಕ ಸತತ ಮೂರನೇ ಅವಧಿಗೆ ರಾಜ್ಯಸಭೆಯ ಉಪಸಭಾಪತಿಯಾಗಿ ಆಯ್ಕೆಯಾದ ಶ್ರೀ ಹರಿವಂಶ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಈ ಐತಿಹಾಸಿಕ ಸಾಧನೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ಇದು ಶ್ರೀ ಹರಿವಂಶ್ ಅವರ ಮೇಲಿನ ಸದನದ ಆಳವಾದ ನಂಬಿಕೆ ಮತ್ತು ಸಂಸ್ಥೆಗೆ ಅವರು ತಂದಿರುವ ಅಮೂಲ್ಯ ಅನುಭವವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. “ಸತತ ಮೂರನೇ ಅವಧಿಗೆ ಆಯ್ಕೆಯಾಗಿರುವುದು ಅವರ ಅನುಭವ, ಎಲ್ಲರನ್ನೂ ಒಳಗೊಳ್ಳುವ ವಿಧಾನ ಮತ್ತು ಅವರ ಘನತೆಯ ಕಾರ್ಯ ಶೈಲಿಗೆ ಸದನದಿಂದ ಅನುಮೋದನೆಯ ಮುದ್ರೆಯಾಗಿದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.ದೆಹಲಿಯ ಯಶೋಭೂಮಿಯಲ್ಲಿ ನಡೆದ ಇಂಡಿಯಾ ಮೊಬೈಲ್ ಸಮ್ಮೇಳನ(ಕಾಂಗ್ರೆಸ್) 2025 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
October 04th, 10:45 am
ನನ್ನ ಸಂಪುಟ ಸಹೋದ್ಯೋಗಿ ಜ್ಯೋತಿರಾದಿತ್ಯ ಸಿಂಧಿಯಾ ಜಿ, ರಾಜ್ಯ ಸಚಿವ ಚಂದ್ರ ಶೇಖರ್ ಪೆಮ್ಮಸಾನಿ ಜಿ, ಇಲ್ಲಿರುವ ವಿವಿಧ ರಾಜ್ಯಗಳ ಪ್ರತಿನಿಧಿಗಳೆ, ವಿದೇಶಗಳಿಂದ ಬಂದಿರುವ ನಮ್ಮ ಅತಿಥಿಗಳೆ, ದೂರಸಂಪರ್ಕ ವಲಯಕ್ಕೆ ಸಂಬಂಧಿಸಿದ ಎಲ್ಲಾ ಗಣ್ಯರೆ, ಇಲ್ಲಿ ಉಪಸ್ಥಿತರಿರುವ ವಿವಿಧ ಕಾಲೇಜುಗಳ ನನ್ನ ಯುವ ಸ್ನೇಹಿತರೆ, ಮಹಿಳೆಯರೆ ಮತ್ತು ಮಹನೀಯರೆ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ 'ಕೌಶಲ್ ದೀಕ್ಷಾಂತ್ ಸಮಾರೋಹ್' ಉದ್ದೇಶಿಸಿ ಭಾಷಣ; ರೂ. 62,000 ಕೋಟಿಗೂ ಹೆಚ್ಚು ಮೌಲ್ಯದ ಯುವಕೇಂದ್ರಿತ ಯೋಜನೆಗಳಿಗೆ ಚಾಲನೆ
October 04th, 10:29 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 'ಕೌಶಲ್ ದೀಕ್ಷಾಂತ್ ಸಮಾರೋಹ್' ಕಾರ್ಯಕ್ರಮದಲ್ಲಿ ರೂ. 62,000 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಯುವಕೇಂದ್ರಿತ ಯೋಜನೆಗಳಿಗೆ ಚಾಲನೆ ನೀಡಿದರು. ದೇಶಾದ್ಯಂತ ಐ.ಟಿ.ಐಗಳಿಗೆ ಸಂಬಂಧಿಸಿದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಹಾಗೂ ಬಿಹಾರದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶುಭಾಶಯ ಕೋರಿದ ಪ್ರಧಾನಮಂತ್ರಿ ಅವರು, ಕೆಲವು ವರ್ಷಗಳ ಹಿಂದೆ ಸರ್ಕಾರವು ಐ.ಟಿ.ಐ ವಿದ್ಯಾರ್ಥಿಗಳಿಗಾಗಿ ಬೃಹತ್ ಪ್ರಮಾಣದಲ್ಲಿ ಘಟಿಕೋತ್ಸವ ಸಮಾರಂಭಗಳನ್ನು ಆಯೋಜಿಸುವ ಹೊಸ ಸಂಪ್ರದಾಯವನ್ನು ಆರಂಭಿಸಿದ್ದನ್ನು ಸ್ಮರಿಸಿದರು. ಇಂದಿನ ದಿನವು ಆ ಸಂಪ್ರದಾಯದಲ್ಲಿ ಮತ್ತೊಂದು ಮೈಲಿಗಲ್ಲು ಎಂದು ಅವರು ಬಣ್ಣಿಸಿದರು.