ಜಾಗತಿಕ ಸಹಕಾರಿ ಸಂಸ್ಥೆಗಳ ಶ್ರೇಯಾಂಕದಲ್ಲಿ 1 ಮತ್ತು 2ನೇ ಸ್ಥಾನಗಳನ್ನು ಪಡೆದಿದ್ದಕ್ಕಾಗಿ ಅಮುಲ್ ಮತ್ತು ಇಫ್ಕೊ ಸಂಸ್ಥೆಗಳನ್ನು ಅಭಿನಂದಿಸಿದ ಪ್ರಧಾನಮಂತ್ರಿ

November 05th, 10:41 pm

ಜಾಗತಿಕ ಸಹಕಾರಿ ಸಂಸ್ಥೆಗಳ ಶ್ರೇಯಾಂಕದಲ್ಲಿ ಕ್ರಮವಾಗಿ 1 ಮತ್ತು 2ನೇ ಸ್ಥಾನಗಳನ್ನು ಪಡೆದಿದ್ದಕ್ಕಾಗಿ ಭಾರತದ ಎರಡು ಪ್ರಮುಖ ಸಹಕಾರಿ ಸಂಸ್ಥೆಗಳಾದ ಅಮುಲ್ ಮತ್ತು ಇಫ್ಕೊ ಸಂಸ್ಥೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಭಾರತದ ಸಹಕಾರಿ ಕ್ಷೇತ್ರವು ಚೈತನ್ಯಶೀಲವಾಗಿದೆ ಮತ್ತು ಹಲವಾರು ಕುಟುಂಬಗಳನ್ನು ಪರಿವರ್ತಿಸುತ್ತಿದೆ. ನಮ್ಮ ಸರ್ಕಾರವು ಮುಂದಿನ ದಿನಗಳಲ್ಲಿ ಈ ವಲಯವನ್ನು ಮತ್ತಷ್ಟು ಪ್ರೋತ್ಸಾಹಿಸಲು ಹಲವಾರು ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳುತ್ತಿದೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ನವೆಂಬರ್ 25 ರಂದು ICA ಗ್ಲೋಬಲ್ ಕೋಆಪರೇಟಿವ್ ಕಾನ್ಫರೆನ್ಸ್ 2024 ಅನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ

November 24th, 05:54 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ICA ಗ್ಲೋಬಲ್ ಕೋಆಪರೇಟಿವ್ ಕಾನ್ಫರೆನ್ಸ್ 2024 ಅನ್ನು ಉದ್ಘಾಟಿಸಲಿದ್ದಾರೆ ಮತ್ತು ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಸಹಕಾರಿ ವರ್ಷ 2025 ಅನ್ನು ನವೆಂಬರ್ 25 ರಂದು ಮಧ್ಯಾಹ್ನ 3 ಗಂಟೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ಪ್ರಾರಂಭಿಸಲಿದ್ದಾರೆ.