ಹೈದರಾಬಾದ್‌ನಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ಎನ್. ಚಂದ್ರಬಾಬು ನಾಯ್ಡು ಮತ್ತು ಅವರ ಕುಟುಂಬವನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
May 10th, 10:07 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೈದರಾಬಾದ್‌ನಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ಎನ್. ಚಂದ್ರಬಾಬು ನಾಯ್ಡು ಮತ್ತು ಅವರ ಕುಟುಂಬವನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು.PM Modi's strong appeal to every Indian amid global challenges
May 10th, 08:39 pm
PM Modi addressed a public gathering in Hyderabad where he spoke about the global economic challenges triggered by recent conflicts and supply chain disruptions, and called for collective national responsibility to strengthen India’s resilience. He urged citizens to reduce fuel consumption, promote carpooling, use public transport and prioritise electric vehicles to help reduce pressure on imports and save foreign exchange.ಪ್ರಧಾನಮಂತ್ರಿ ಅವರಿಂದ ಹೈದರಾಬಾದ್ ನಲ್ಲಿ ಸಿಂಧು ಆಸ್ಪತ್ರೆ ಉದ್ಘಾಟನೆ
May 10th, 07:10 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಹೈದರಾಬಾದ್ ನಲ್ಲಿ ಸಿಂಧು ಆಸ್ಪತ್ರೆಯನ್ನು ಉದ್ಘಾಟಿಸಿದರು.People are fed up off Congress and BRS' politics of nepotism: PM Modi in Hyderabad
May 10th, 06:05 pm
PM Modi addressed a massive public rally in Hyderabad, Telangana, where he spoke on India’s rising global stature, the significance of BJP’s recent electoral victories and the country’s collective responsibility during ongoing global economic and geopolitical challenges.PM Modi’s massive rally in Hyderabad focuses on self-reliance and a Viksit Telangana
May 10th, 06:00 pm
PM Modi addressed a massive public rally in Hyderabad, Telangana, where he spoke on India’s rising global stature, the significance of BJP’s recent electoral victories and the country’s collective responsibility during ongoing global economic and geopolitical challenges.ಹೈದರಾಬಾದ್‌ನಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ
May 10th, 03:45 pm
ಸೈಬರಾಬಾದ್‌ನ ಶಕ್ತಿ ರಾಷ್ಟ್ರೀಯ ಮತ್ತು ಜಾಗತಿಕವಾಗಿದೆ. ಇದು ತೆಲಂಗಾಣದ ಮತ್ತು ದೇಶದ ತ್ವರಿತ ಅಭಿವೃದ್ಧಿಯ ಪ್ರಮುಖ ಕೇಂದ್ರವಾಗಿದೆ. ಆದ್ದರಿಂದ, ಇಂದು ಸೈಬರಾಬಾದ್‌ನಿಂದ, ತೆಲಂಗಾಣವನ್ನು ರಾಷ್ಟ್ರದ ದೊಡ್ಡ ಉತ್ಪಾದನಾ ಶಕ್ತಿ ಕೇಂದ್ರವನ್ನಾಗಿ ಮಾಡಲು ಅನೇಕ ಪ್ರಮುಖ ಯೋಜನೆಗಳನ್ನು ಪ್ರಾರಂಭಿಸಲಾಗುತ್ತಿದೆ. ಇಂದು ಅಡಿಪಾಯ ಮತ್ತು ಉದ್ಘಾಟನೆಗಳು ನಡೆದ ಯೋಜನೆಗಳು ಇಲ್ಲಿ ಸಾವಿರಾರು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಮತ್ತು ತೆಲಂಗಾಣದ ಸಂಪರ್ಕವು ಸಹ ಬಲಗೊಳ್ಳುತ್ತದೆ. ಈ ಯೋಜನೆಗಳಿಗಾಗಿ ತೆಲಂಗಾಣದ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ತೆಲಂಗಾಣದ ಹೈದರಾಬಾದ್‌ನಲ್ಲಿ ಸುಮಾರು ₹9,400 ಕೋಟಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
May 10th, 03:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತೆಲಂಗಾಣದ ಹೈದರಾಬಾದ್‌ನಲ್ಲಿ ಸುಮಾರು ₹9,400 ಕೋಟಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದರು ಮತ್ತು ದೇಶಕ್ಕೆ ಸಮರ್ಪಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ರಾಷ್ಟ್ರೀಯ ಮತ್ತು ಜಾಗತಿಕ ಪ್ರಾಮುಖ್ಯತೆಯ ಕೇಂದ್ರವಾಗಿ ಹೈದರಾಬಾದ್‌ನ ಪರಿವರ್ತನಾ ಮಹತ್ವವನ್ನು ಉಲ್ಲೇಖಿಸಿದರು. ತೆಲಂಗಾಣ ಮತ್ತು ಇಡೀ ರಾಷ್ಟ್ರಕ್ಕೆ ತ್ವರಿತ ಅಭಿವೃದ್ಧಿಯನ್ನು ನೀಡುವಲ್ಲಿ ಈ ಪ್ರದೇಶದ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದ ಅವರು, ಇಂದು ಪ್ರಾರಂಭಿಸಲಾದ ಬಹು ದೊಡ್ಡ ಪ್ರಮಾಣದ ಯೋಜನೆಗಳು ತೆಲಂಗಾಣವನ್ನು ಪ್ರಮುಖ ಉತ್ಪಾದನಾ ಕೇಂದ್ರವಾಗಿ ಹೇಗೆ ರೂಪಿಸುತ್ತವೆ/ಸ್ಥಾಪಿಸುತ್ತವೆ ಎಂಬುದನ್ನು ವಿವರಿಸಿದರು. ಈ ಯೋಜನೆಗಳ ಉದ್ಘಾಟನೆಗಳು ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುವುದರ ಜೊತೆಗೆ ಸಾವಿರಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಹೇಳಿದ ಪ್ರಧಾನಮಂತ್ರಿ, ಈ ಯೋಜನೆಗಳಿಗಾಗಿ ತೆಲಂಗಾಣದ ಜನರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.ಪ್ರಧಾನಮಂತ್ರಿ ಮೇ 10 ರಂದು ಕರ್ನಾಟಕ ಮತ್ತು ತೆಲಂಗಾಣಕ್ಕೆ ಭೇಟಿ
May 09th, 11:17 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಮೇ 10 ರಂದು ಕರ್ನಾಟಕ ಮತ್ತು ತೆಲಂಗಾಣಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನ ಮಂತ್ರಿ ಬೆಳಿಗ್ಗೆ ಸುಮಾರು 11 ಗಂಟೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಆರ್ಟ್ ಆಫ್ ಲಿವಿಂಗ್‌ನ 45ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ, ಅಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಪ್ರಧಾನಮಂತ್ರಿ ಹೈದರಾಬಾದ್‌ಗೆ ಪ್ರಯಾಣಿಸಲಿದ್ದಾರೆ ಮತ್ತು ಮಧ್ಯಾಹ್ನ 3 ಗಂಟೆಗೆ ಸುಮಾರು 9,400 ಕೋಟಿ ರೂ. ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ 3:45 ರ ಸುಮಾರಿಗೆ ಪ್ರಧಾನಮಂತ್ರಿ ಹೈದರಾಬಾದ್‌ನಲ್ಲಿರುವ ಸಿಂಧು ಆಸ್ಪತ್ರೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.ಭಾರತ-ಕೆನಡಾ ಸಿಇಒ ವೇದಿಕೆಯಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಯ ಕನ್ನಡ ಅನುವಾದ
March 02nd, 02:30 pm
ಭಾರತ - ಕೆನಡಾ ಸಿಇಒ ವೇದಿಕೆಯಲ್ಲಿ ನಿಮ್ಮೆಲ್ಲರೊಂದಿಗೆ ಸೇರಲು ನನಗೆ ಸಂತೋಷವಾಗುತ್ತಿದೆ. ತಮ್ಮ ಸಕಾರಾತ್ಮಕ ಆಲೋಚನೆಗಳನ್ನು ಹಂಚಿಕೊಂಡಿದ್ದಕ್ಕಾಗಿ ನಾನು ಪ್ರಧಾನಮಂತ್ರಿ ಕಾರ್ನೆ ಅವರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ.ತಮಿಳುನಾಡಿನ ಮಧುರೈನಲ್ಲಿ ವಿವಿಧ ಮೂಲಸೌಕರ್ಯ ಕಾಮಗಾರಿಗಳ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಅನುವಾದ
March 01st, 03:30 pm
ಶ್ರೀ ಆರ್.ಎನ್. ರವಿ, ಎಲ್. ಮುರುಗನ್, ಎಡಪ್ಪಾಡಿ ಕೆ. ಪಳನಿಸ್ವಾಮಿ, ನೈನಾರ್ ನಾಗೇಂದ್ರನ್, ಇ.ವಿ. ವೇಲು, ಮತ್ತು ತಮಿಳುನಾಡಿನ ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ವನಕ್ಕಂ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧುರೈನಲ್ಲಿ 4,400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಿ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಮಧುರೈನ ಮೂಲಸೌಕರ್ಯ ಕಾಮಗಾರಿಗಳು ಸಂಪರ್ಕವನ್ನು ಸುಧಾರಿಸಲಿವೆ ಮತ್ತು ತಮಿಳುನಾಡಿನಾದ್ಯಂತ ಜನರಿಗೆ ಗಮನಾರ್ಹ ಪ್ರಯೋಜನವನ್ನು ನೀಡಲಿವೆ: ಪ್ರಧಾನಮಂತ್ರಿ
March 01st, 03:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿನ ಮಧುರೈನಲ್ಲಿ 4,400 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿದರು. ಪವಿತ್ರ ನಗರವಾದ ಮಧುರೈನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಇಂದು ತಮಿಳುನಾಡಿನ ಅಭಿವೃದ್ಧಿ ಪ್ರಯಾಣದಲ್ಲಿ ಹೆಮ್ಮೆಯ ಅಧ್ಯಾಯವಾಗಿದೆ ಎಂದು ಹೇಳಿದರು. ಈ ಯೋಜನೆಗಳು ಸಂಪರ್ಕವನ್ನು ಪರಿವರ್ತಿಸುವುದು, ಆರ್ಥಿಕತೆಯನ್ನು ಹೆಚ್ಚಿಸುವುದು ಮತ್ತು ಯುವಕರಿಗೆ ಗಮನಾರ್ಹ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ರಾಜ್ಯದ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸುವ ಗುರಿಯನ್ನು ಹೊಂದಿವೆ. ಉತ್ತಮ ಗುಣಮಟ್ಟದ ಮೂಲಸೌಕರ್ಯವನ್ನು ನಿರ್ಮಿಸುವುದು ಮೂಲಭೂತವಾಗಿ ಜನರನ್ನು ಸಬಲೀಕರಣಗೊಳಿಸುವುದಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಬೆಳವಣಿಗೆಗಳು ರೈತರು ಮಾರುಕಟ್ಟೆಗಳನ್ನು ತಲುಪಲು ಉತ್ತಮ ರಸ್ತೆಗಳು, ಯಾತ್ರಿಕರು ಮತ್ತು ಪ್ರವಾಸಿಗರಿಗೆ ಸುಲಭ ಪ್ರಯಾಣ ಮತ್ತು ವ್ಯವಹಾರಗಳಿಗೆ ವೇಗವಾದ ಸಾರಿಗೆಯನ್ನು ಅರ್ಥೈಸುತ್ತವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.Cabinet approves the widening of National Highway-167 in Telangana worth Rs.3175.08 crore
February 14th, 01:00 pm
The Cabinet Committee on Economic Affairs, chaired by PM Modi, has approved the widening of National Highway-167 from Gudebellur to Mahabubnagar on the Hyderabad-Panaji Economic Corridor to 4-lane standards in Telangana, worth Rs. 3175.08 crore. It will provide seamless connectivity to key economic, social and logistics nodes across Telangana and provide employment opportunities.ಹೈದರಾಬಾದ್‌ನಲ್ಲಿ ಸಫ್ರಾನ್ ಏರ್‌ಕ್ರಾಫ್ಟ್ ಎಂಜಿನ್ ಸರ್ವೀಸಸ್ ಇಂಡಿಯಾದ ಸೌಲಭ್ಯ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ವೀಡಿಯೊ ಕಾನ್ಫರೆನ್ಸ್ ಭಾಷಣ
November 26th, 10:10 am
ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಜಿ, ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಜಿ, ಸಫ್ರಾನ್ ಗ್ರೂಪ್‌ನೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೈದರಾಬಾದ್‌ನಲ್ಲಿ ‘ಸಫ್ರಾನ್ ಏರ್‌ಕ್ರಾಫ್ಟ್ ಎಂಜಿನ್ ಸರ್ವೀಸಸ್ ಇಂಡಿಯಾʼ (ಎಸ್ಎಇಎಸ್ಐ) ಘಟಕವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು
November 26th, 10:00 am
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ʻಜಿಎಂಆರ್ ಏರೋಸ್ಪೇಸ್ ಮತ್ತು ಇಂಡಸ್ಟ್ರಿಯಲ್ ಪಾರ್ಕ್ʼ – ವಿಶೇಷ ಆರ್ಥಿಕ ವಲಯದಲ್ಲಿರುವ ʻಸಫ್ರಾನ್ ಏರ್‌ಕ್ರಾಫ್ಟ್ ಎಂಜಿನ್ ಸರ್ವೀಸಸ್ ಇಂಡಿಯಾʼ (ಎಸ್ಎಇಎಸ್ಐ) ಘಟಕವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದಿನಿಂದ ಭಾರತದ ವಿಮಾನಯಾನ ಕ್ಷೇತ್ರವು ಹೊಸ ಎತ್ತರಕ್ಕೆ ತಲುಪುತ್ತಿದೆ. ʻಸಫ್ರಾನ್ʼ ಸಂಸ್ಥೆಯ ಹೊಸ ಘಟಕವು ಭಾರತವನ್ನು ಜಾಗತಿಕ ʻನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷೆʼ(ಎಂಆರ್‌ಒ) ಕೇಂದ್ರವಾಗಿ ನೆಲೆಗೊಳಿಸಲು ಸಹಾಯ ಮಾಡುತ್ತದೆ,ʼʼ ಎಂದು ಹೇಳಿದರು. ಈ ʻಎಂಆರ್‌ಒʼ ಘಟಕವು ಅತ್ಯಾಧುನಿಕ ವಿಮಾನಯಾನ ಕ್ಷೇತ್ರದಲ್ಲಿ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ನವೆಂಬರ್ 24 ರಂದು ʻಸಫ್ರಾನ್ʼ ಆಡಳಿತ ಮಂಡಳಿಯ ಜೊತೆಗಿನ ತಮ್ಮ ಭೇಟಿಯನ್ನು ಪ್ರಧಾನಮಂತ್ರಿ ಸ್ಮರಿಸಿದರು. ಈ ಹಿಂದೆಯೂ ಆಡಳಿತ ಮಂಡಳಿ ಜೊತೆಗಿನ ಪ್ರತಿಯೊಂದು ಚರ್ಚೆಯಲ್ಲೂ ಭಾರತದ ಬಗ್ಗೆ ಸಂಸ್ಥೆಯ ವಿಶ್ವಾಸ ಮತ್ತು ಭರವಸೆಯನ್ನು ತಾವು ನೋಡಿರುವುದಾಗಿ ಮೋದಿ ಹೇಳಿದರು. ಭಾರತದಲ್ಲಿ ʻಸಫ್ರಾನ್ʼನ ಹೂಡಿಕೆಯು ಅದೇ ವೇಗದಲ್ಲಿ ಮುಂದುವರಿಯುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಹೊಸ ಘಟಕದ ಉದ್ಘಾಟನೆಗಾಗಿ ʻಸಫ್ರಾನ್ʼ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದ ಮೋದಿ ಅವರು ತಮ್ಮ ಶುಭಾಶಯ ಕೋರಿದರು.ನವೆಂಬರ್ 26ರಂದು ʻಸಫ್ರಾನ್ ಏರ್‌ಕ್ರಾಫ್ಟ್ ಎಂಜಿನ್ ಸರ್ವೀಸಸ್ ಇಂಡಿಯಾʼ ಘಟಕವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ
November 25th, 04:16 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 26ರಂದು ಬೆಳಗ್ಗೆ 10ಗಂಟೆಗೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ʻಜಿಎಂಆರ್ ಏರೋಸ್ಪೇಸ್ ಮತ್ತು ಕೈಗಾರಿಕಾ ಪಾರ್ಕ್ʼ - ವಿಶೇಷ ಆರ್ಥಿಕ ವಲಯದಲ್ಲಿರುವ ʻಸಫ್ರಾನ್ ಏರ್‌ಕ್ರಾಫ್ಟ್ ಎಂಜಿನ್ ಸರ್ವೀಸಸ್ ಇಂಡಿಯಾʼ (ಎಸ್ಎಇಎಸ್ಐ) ಘಟಕವನ್ನು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ.'ವಂದೇ ಮಾತರಂ' ನ ಚೈತನ್ಯವು ಭಾರತದ ಅಮರ ಪ್ರಜ್ಞೆಗೆ ಸಂಬಂಧಿಸಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
October 26th, 11:30 am
ಈ ತಿಂಗಳ ಮನ್ ಕಿ ಬಾತ್ ಭಾಷಣದಲ್ಲಿ, ಅಕ್ಟೋಬರ್ 31 ರಂದು ನಡೆದ ಸರ್ದಾರ್ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯಂದು ಪ್ರಧಾನಿ ಮೋದಿ ಅವರಿಗೆ ಗೌರವ ಸಲ್ಲಿಸಿದರು. ಛಠ್ ಪೂಜಾ ಉತ್ಸವ, ಪರಿಸರ ಸಂರಕ್ಷಣೆ, ಭಾರತೀಯ ನಾಯಿ ತಳಿಗಳು, ಭಾರತೀಯ ಕಾಫಿ, ಬುಡಕಟ್ಟು ಸಮುದಾಯದ ನಾಯಕರು ಮತ್ತು ಸಂಸ್ಕೃತ ಭಾಷೆಯ ಪ್ರಾಮುಖ್ಯತೆಯಂತಹ ಆಸಕ್ತಿದಾಯಕ ವಿಷಯಗಳನ್ನು ಅವರು ಸ್ಪರ್ಶಿಸಿದರು. 'ವಂದೇ ಮಾತರಂ' ಹಾಡಿನ 150 ನೇ ವರ್ಷದ ಬಗ್ಗೆ ಪ್ರಧಾನಿಯವರು ವಿಶೇಷವಾಗಿ ಉಲ್ಲೇಖಿಸಿದರು.ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
September 21st, 06:09 pm
ಶಕ್ತಿಯನ್ನು ಆರಾಧಿಸುವ ಹಬ್ಬವಾದ ನವರಾತ್ರಿ ಇಂದಿನಿಂದ ಪ್ರಾರಂಭವಾಗುತ್ತಿದೆ. ನಿಮ್ಮೆಲ್ಲರಿಗೂ ಶುಭಾಶಯಗಳು! ನವರಾತ್ರಿಯ ಮೊದಲ ದಿನದಿಂದ, ದೇಶವು ಸ್ವಾವಲಂಬಿ ಭಾರತ ಅಭಿಯಾನದತ್ತ ಮತ್ತೊಂದು ಪ್ರಮುಖ ಮತ್ತು ದಿಟ್ಟ ಹೆಜ್ಜೆ ಇಡುತ್ತಿದೆ. ಇಂದು, ಸೆಪ್ಟೆಂಬರ್ 22ರಂದು, ನವರಾತ್ರಿಯ ಮೊದಲ ದಿನ ಸೂರ್ಯೋದಯದೊಂದಿಗೆ, ಹೊಸ ಅಥವಾ ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು ಜಾರಿಗೆ ಬರುತ್ತಿವೆ. ಒಂದು ರೀತಿಯಲ್ಲಿ, ಇಂದಿನಿಂದ ದೇಶದಲ್ಲಿ ಜಿಎಸ್‌ಟಿ ಉಳಿತಾಯ ಹಬ್ಬ ಆರಂಭವಾಗುತ್ತಿದೆ. ಈ ಜಿಎಸ್ಟಿ ಉಳಿತಾಯ ಹಬ್ಬವು ನಿಮ್ಮ ಉಳಿತಾಯವನ್ನು ಹೆಚ್ಚಿಸುತ್ತದೆ, ನೀವು ಬಯಸುವ ವಸ್ತುಗಳನ್ನು ಹೆಚ್ಚು ಸುಲಭವಾಗಿ ಖರೀದಿಸಲು ಸಾಧ್ಯವಾಗುತ್ತದೆ. ಬಡವರು, ಮಧ್ಯಮ ವರ್ಗದ ಜನರು, ನವ ಮಧ್ಯಮ ವರ್ಗ, ಯುವಕರು, ರೈತರು, ಮಹಿಳೆಯರು, ವರ್ತಕರು, ಉದ್ಯಮಶೀಲರು, ನಮ್ಮ ದೇಶದ ಉದ್ಯಮಿಗಳು, ಪ್ರತಿಯೊಬ್ಬರೂ ಈ ಉಳಿತಾಯ ಹಬ್ಬದಿಂದ ಸಾಕಷ್ಟು ಪ್ರಯೋಜನ ಪಡೆಯುತ್ತಾರೆ. ಇದರರ್ಥ ಈ ಹಬ್ಬದ ಸಮಯದಲ್ಲಿ ಎಲ್ಲರಿಗೂ ತಿನ್ನಲು ಸಿಹಿ ಇರುತ್ತದೆ, ದೇಶದ ಪ್ರತಿಯೊಂದು ಕುಟುಂಬವೂ ಆಶೀರ್ವದಿಸಲ್ಪಡುತ್ತದೆ. ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು ಮತ್ತು ಈ ಉಳಿತಾಯ ಹಬ್ಬಕ್ಕಾಗಿ ದೇಶದ ಕೋಟ್ಯಂತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ. ಈ ಸುಧಾರಣೆಗಳು ಭಾರತದ ಬೆಳವಣಿಗೆಯ ಯಶೋಗಾಥೆಯನ್ನು ವೇಗಗೊಳಿಸುತ್ತವೆ, ವ್ಯವಹಾರ ಮಾಡುವುದನ್ನು ಸುಲಭಗೊಳಿಸುತ್ತವೆ, ಹೂಡಿಕೆಯನ್ನು ಹೆಚ್ಚು ಆಕರ್ಷಕವಾಗಿಸುತ್ತವೆ ಮತ್ತು ಅಭಿವೃದ್ಧಿಯ ಓಟದಲ್ಲಿ ಪ್ರತಿಯೊಂದು ರಾಜ್ಯವನ್ನು ಸಮಾನ ಪಾಲುದಾರರನ್ನಾಗಿ ಮಾಡುತ್ತವೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು
September 21st, 05:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಶಕ್ತಿ ಆರಾಧನೆಯ ಹಬ್ಬವಾದ ನವರಾತ್ರಿಯ ಶುಭಾರಂಭದ ಸಂದರ್ಭದಲ್ಲಿ ಎಲ್ಲಾ ನಾಗರಿಕರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ವ್ಯಕ್ತಪಡಿಸಿದ ಅವರು, ನವರಾತ್ರಿಯ ಮೊದಲ ದಿನದಿಂದಲೇ ರಾಷ್ಟ್ರವು ಆತ್ಮನಿರ್ಭರ ಭಾರತ ಅಭಿಯಾನದತ್ತ ಒಂದು ಪ್ರಮುಖ ಹೆಜ್ಜೆ ಇಡುತ್ತಿದೆ ಎಂದು ಹೇಳಿದರು. ಸೆಪ್ಟೆಂಬರ್ 22 ರ ಸೂರ್ಯೋದಯದಿಂದ ದೇಶವು ಮುಂದಿನ ಪೀಳಿಗೆಯ ಜಿ ಎಸ್ ಟಿ ಸುಧಾರಣೆಗಳನ್ನು ಜಾರಿಗೆ ತರಲಿದೆ. ಇದು ಭಾರತದಾದ್ಯಂತ ಜಿ ಎಸ್ ಟಿ ಉಳಿತಾಯ ಉತ್ಸವದ ಆರಂಭವನ್ನು ಸೂಚಿಸುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಈ ಉತ್ಸವವು ಉಳಿತಾಯವನ್ನು ಹೆಚ್ಚಿಸುತ್ತದೆ ಮತ್ತು ಜನರು ತಮ್ಮ ನೆಚ್ಚಿನ ವಸ್ತುಗಳನ್ನು ಖರೀದಿಸುವುದನ್ನು ಸುಲಭಗೊಳಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಉಳಿತಾಯ ಉತ್ಸವವು ಬಡವರು, ಮಧ್ಯಮ ವರ್ಗ, ನವ-ಮಧ್ಯಮ ವರ್ಗ, ಯುವಜನರು, ರೈತರು, ಮಹಿಳೆಯರು, ಅಂಗಡಿಯವರು, ವ್ಯಾಪಾರಿಗಳು ಮತ್ತು ಉದ್ಯಮಿಗಳು ಸೇರಿದಂತೆ ಎಲ್ಲರಿಗೂ ಪ್ರಯೋಜನವನ್ನು ನೀಡುತ್ತದೆ ಎಂದು ಶ್ರೀ ಮೋದಿ ಹೇಳಿದರು. ಈ ಹಬ್ಬವು ಪ್ರತಿ ಮನೆಗೆ ಸಂತೋಷ ಮತ್ತು ಸಿಹಿಯನ್ನು ತರುತ್ತದೆ ಎಂದು ಅವರು ಹೇಳಿದರು. ದೇಶಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಮುಂದಿನ ಪೀಳಿಗೆಯ ಜಿ ಎಸ್ ಟಿ ಸುಧಾರಣೆಗಳು ಮತ್ತು ಜಿ ಎಸ್ ಟಿ ಉಳಿತಾಯ ಉತ್ಸವದ ಶುಭಾಶಯಗಳನ್ನು ಕೋರಿದರು. ಈ ಸುಧಾರಣೆಗಳು ಭಾರತದ ಬೆಳವಣಿಗೆಯ ಕಥೆಯನ್ನು ವೇಗಗೊಳಿಸುತ್ತವೆ, ವ್ಯಾಪಾರ ಕಾರ್ಯಾಚರಣೆಗಳನ್ನು ಸರಳಗೊಳಿಸುತ್ತವೆ, ಹೂಡಿಕೆಗಳನ್ನು ಹೆಚ್ಚು ಆಕರ್ಷಕವಾಗಿಸುತ್ತವೆ ಮತ್ತು ಅಭಿವೃದ್ಧಿಯ ಓಟದಲ್ಲಿ ಪ್ರತಿಯೊಂದು ರಾಜ್ಯವೂ ಸಮಾನ ಪಾಲುದಾರರಾಗುವುದನ್ನು ಖಚಿತಪಡಿಸುತ್ತವೆ ಎಂದು ಅವರು ಒತ್ತಿ ಹೇಳಿದರು.‘ವೋಕಲ್ ಫಾರ್ ಲೋಕಲ್’ – ಮನ್ ಕಿ ಬಾತ್ ನಲ್ಲಿ, ಪ್ರಧಾನಿ ಮೋದಿ ಸ್ವದೇಶಿ ಹೆಮ್ಮೆಯಿಂದ ಹಬ್ಬಗಳನ್ನು ಆಚರಿಸಲು ಒತ್ತಾಯಿಸಿದರು
August 31st, 11:30 am
ಈ ತಿಂಗಳ ಮನ್ ಕಿ ಬಾತ್ ಭಾಷಣದಲ್ಲಿ, ಪ್ರಧಾನಿ ಮೋದಿ ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೊಳಗಾದವರಿಗೆ ಸಹಾಯ ಮಾಡಿದ ಭದ್ರತಾ ಪಡೆಗಳು ಮತ್ತು ನಾಗರಿಕರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರೀಡಾಕೂಟಗಳು, ಸೌರಶಕ್ತಿ, ‘ಆಪರೇಷನ್ ಪೋಲೊ’ ಮತ್ತು ಭಾರತೀಯ ಸಂಸ್ಕೃತಿಯ ಜಾಗತಿಕ ಹರಡುವಿಕೆಯಂತಹ ಪ್ರಮುಖ ವಿಷಯಗಳನ್ನು ಸಹ ಅವರು ಪ್ರಸ್ತಾಪಿಸಿದರು. ಹಬ್ಬದ ಋತುವಿನಲ್ಲಿ ಮೇಡ್-ಇನ್-ಇಂಡಿಯಾ ಉತ್ಪನ್ನಗಳನ್ನು ಖರೀದಿಸುವ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಪ್ರಧಾನಿ ನಾಗರಿಕರಿಗೆ ನೆನಪಿಸಿದರು.ತೆಲಂಗಾಣದ ಹೈದರಾಬಾದ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಜೀವಹಾನಿ: ಪ್ರಧಾನಮಂತ್ರಿ ಸಂತಾಪ
May 18th, 12:00 pm
ತೆಲಂಗಾಣದ ಹೈದರಾಬಾದ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಜೀವಹಾನಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಅವಘಡದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಶ್ರೀ ಮೋದಿ ಅವರು ಹಾರೈಸಿದ್ದಾರೆ.