ಹುಲ್ ದಿವಸದ ಸಂದರ್ಭದಲ್ಲಿ ಬುಡಕಟ್ಟು ವೀರರಿಗೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ
June 30th, 02:28 pm
ಹುಲ್ ದಿವಸದ ಸಂದರ್ಭದಲ್ಲಿ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಭಾರತದ ಬುಡಕಟ್ಟು ಸಮುದಾಯದ ಅದಮ್ಯ ಧೈರ್ಯ ಮತ್ತು ಅಸಾಧಾರಣ ಶೌರ್ಯಕ್ಕೆ ಹೃತ್ಪೂರ್ವಕವಾಗಿ ಗೌರವ ಸಲ್ಲಿಸಿದರು. ಐತಿಹಾಸಿಕವಾದ ಸಂತಾಲ್ ದಂಗೆಯನ್ನು ಸ್ಮರಿಸುವ ಮೂಲಕ, ಪ್ರಧಾನ ಮಂತ್ರಿಯವರು ಪೂಜ್ಯ ಸ್ವಾತಂತ್ರ್ಯ ಹೋರಾಟಗಾರರಾದ ಸಿಡೋ-ಕನ್ಹು, ಚಾಂದ್-ಭೈರವ ಮತ್ತು ಫುಲೋ-ಜಾನೋ ಅವರ ಪರಂಪರೆಯನ್ನು ಮುಂದುವರೆಸಿ ವಸಾಹತುಶಾಹಿ ದಬ್ಬಾಳಿಕೆಯನ್ನು ಧಿಕ್ಕರಿಸಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಅಸಂಖ್ಯಾತ ಇತರ ಧೈರ್ಯಶಾಲಿ ಬುಡಕಟ್ಟು ಹುತಾತ್ಮರಿಗೂ ಗೌರವಸಲ್ಲಿಸಿದರು.ಹುಲ್ ದಿವಸ್ ಅಂಗವಾಗಿ ಪ್ರಧಾನಮಂತ್ರಿ ಅವರಿಂದ ಬುಡಕಟ್ಟು ವೀರರಿಗೆ ಗೌರವ ನಮನ
June 30th, 02:32 pm
ಪ್ರಧಾನಮಂತ್ರಿ ಶ್ರೀ.ನರೇಂದ್ರ ಮೋದಿ ಅವರು ಬ್ರಿಟಿಷ್ ಸಾಮ್ರಾಜ್ಯದ ದೌರ್ಜನ್ಯದ ವಿರುದ್ಧ ಸ್ವಾಭಿಮಾನ ಮತ್ತು ಧೈರ್ಯದಿಂದ ಹೋರಾಡಿ ಸಿಧು-ಕನ್ಹು, ಚಂದ್-ಭೈರವ್ ಮತ್ತು ಫೂಲೋ-ಝಾನೋರಂತಹ ಬುಡಕಟ್ಟು ವೀರರಿಗೆ ಗೌರವ ನಮನ ಸಲ್ಲಿಸಿದ್ದಾರೆ. ನಮ್ಮ ಬುಡಕಟ್ಟು ಸಮುದಾಯದ ಅನನ್ಯ ಶೌರ್ಯ, ಹೋರಾಟ ಮತ್ತು ತ್ಯಾಗಗಳಿಗೆ ಅರ್ಪಣೆಯಾಗಿರುವ ವಿಶೇಷ ಸಂದರ್ಭ ಹುಲ್ ದಿವಸ್ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲವಾದ ನಂಬಿಕೆಯನ್ನು ಪುನರುಚ್ಚರಿಸಿದ ದೇಶವಾಸಿಗಳಿಗೆ ಕೃತಜ್ಞತೆಗಳು: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ
June 30th, 11:00 am
'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮಕ್ಕೆ ಕೆಲವು ತಿಂಗಳ ತನಕ ವಿರಾಮ ನೀಡಿರಬಹುದು. ಆದರೆ ದೇಶ ಮತ್ತು ಸಮಾಜದಲ್ಲಿ 'ಮನ್ ಕಿ ಬಾತ್' ಮನೋಭಾವ, ಪ್ರತಿದಿನ ಮಾಡುವ ಒಳ್ಳೆಯ ಕೆಲಸ, ನಿಸ್ವಾರ್ಥ ಮನೋಭಾವದಿಂದ ಮಾಡುವ ಕೆಲಸ, ಕೆಲಸದಿಂದ ಸಮಾಜದ ಮೇಲಾಗುವ ಸಕಾರಾತ್ಮಕ ಪರಿಣಾಮ – ಇವೆಲ್ಲವನ್ನೂ ಪಟ್ಟುಬಿಡದೆ ನಡೆಸಿತು. ಚುನಾವಣೆಯ ಸುದ್ದಿಗಳ ನಡುವೆ, ಹೃದಯ ಸ್ಪರ್ಶಿಸುವ ಇಂತಹ ಸುದ್ದಿಗಳನ್ನು ನೀವು ಖಂಡಿತವಾಗಿಯೂ ಗಮನಿಸಿದ್ದೀರಿ ಎಂದು ನಾನು ಭಾವಿಸುವೆ.