ಬೆಲ್ಜಿಯಂನ ಘನತೆವೆತ್ತ ದೊರೆ ಫಿಲಿಪ್‌ ಅವರೊಂದಿಗೆ ಪ್ರಧಾನಮಂತ್ರಿ ಮಾತುಕತೆ

March 27th, 08:59 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಲ್ಜಿಯಂನ ಘನತೆವೆತ್ತ ದೊರೆ ಫಿಲಿಪ್‌ ಅವರೊಂದಿಗೆ ಮಾತುಕತೆ ನಡೆಸಿದರು. ಶ್ರೀ ನರೇಂದ್ರ ಮೋದಿ ಅವರು ಇತ್ತೀಚೆಗೆ ಎಚ್‌ಆರ್‌ಎಚ್‌ ರಾಜಕುಮಾರಿ ಆಸ್ಟ್ರಿಡ್‌ ನೇತೃತ್ವದ ಬೆಲ್ಜಿಯಂ ಆರ್ಥಿಕ ನಿಯೋಗವನ್ನು ಶ್ಲಾಘಿಸಿದರು. ಇಬ್ಬರೂ ನಾಯಕರು ಬಲವಾದ ದ್ವಿಪಕ್ಷೀಯ ಸಂಬಂಧಗಳನ್ನು ಆಳಗೊಳಿಸುವುದು, ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವುದು ಮತ್ತು ನಾವೀನ್ಯತೆ ಮತ್ತು ಸುಸ್ಥಿರತೆಯಲ್ಲಿಸಹಯೋಗವನ್ನು ಮುಂದುವರಿಸುವ ಬಗ್ಗೆ ಚರ್ಚಿಸಿದರು.

ಬೆಲ್ಜಿಯಂ ರಾಜಕುಮಾರಿ ಆಸ್ಟ್ರಿಡ್ ಅವರನ್ನು ಭೇಟಿಯಾದ ಪ್ರಧಾನಮಂತ್ರಿ ನರೇಂದ್ರ ಮೋದಿ

March 04th, 05:49 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಮಾರ್ಚ್ 1ರಿಂದ 8ರವರೆಗೆ ಭಾರತಕ್ಕೆ ಉನ್ನತ ಮಟ್ಟದ ಬೆಲ್ಜಿಯಂ ಆರ್ಥಿಕ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಬೆಲ್ಜಿಯಂನ ರಾಜಕುಮಾರಿ ಆಸ್ಟ್ರಿಡ್ ಅವರನ್ನು ಇಂದು ಭೇಟಿ ಮಾಡಿದರು.