'ಬಾರ್ಬಡೋಸ್ ನ ಹಾನರರಿ ಆರ್ಡರ್ ಆಫ್ ಫ್ರೀಡಂ' ಪ್ರಶಸ್ತಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ
March 07th, 10:02 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 'ಬಾರ್ಬಡೋಸ್ ನ ಹಾನನರಿ ಆರ್ಡರ್ ಆಫ್ ಫ್ರೀಡಂ' ಪ್ರಶಸ್ತಿಗಾಗಿ ಬಾರ್ಬಡೋಸ್ ಸರ್ಕಾರ ಮತ್ತು ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಶ್ರೀ ನರೇಂದ್ರ ಮೋದಿ ಅವರು ಈ ಗೌರವವನ್ನು 1.4 ಶತಕೋಟಿ ಭಾರತೀಯರಿಗೆ ಮತ್ತು ಭಾರತ ಮತ್ತು ಬಾರ್ಬಡೋಸ್ ನಡುವಿನ ನಿಕಟ ಸಂಬಂಧಕ್ಕೆ ಸಮರ್ಪಿಸಿದ್ದಾರೆ.