ವಿಶ್ವ ಹತ್ಯಾಕಾಂಡದ ಸ್ಮಾರಕ ಕೇಂದ್ರ - ಯಾದ್ ವಶೆಮ್ ಗೆ ಪ್ರಧಾನಮಂತ್ರಿ ಭೇಟಿ
February 26th, 09:02 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಮಂತ್ರಿ ಮಾನ್ಯ ಶ್ರೀ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಇಂದು ಜೆರುಸಲೇಮ್ ನಲ್ಲಿರುವ ವಿಶ್ವ ಹತ್ಯಾಕಾಂಡದ ಸ್ಮಾರಕ ಕೇಂದ್ರವಾದ ಯಾದ್ ವಾಶೆಮ್ ಗೆ ಭೇಟಿ ನೀಡಿ, ಹತ್ಯಾಕಾಂಡದಲ್ಲಿ ಮೃತಪಟ್ಟವರಿಗೆ ಗೌರವ ನಮನ ಸಲ್ಲಿಸಿದರು. ಪ್ರಧಾನಮಂತ್ರಿಯವರು ಸ್ಮಾರಕ ಭವನದಲ್ಲಿ ನಡೆದ ಔಪಚಾರಿಕ ದುಃಖಕರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಧಿಕೃತ ಧಾರ್ಮಿಕ ಕಾರ್ಯಕ್ರಮ ಕ್ಯಾಂಟರ್ ನಲ್ಲಿ ಎಲ್ ಮಾಲೆಹ್ ರಹಮೀಮ್ ನ ಹೃದಯಸ್ಪರ್ಶಿ ಪಠಣ ನಡೆಯಿತು. ಹತ್ಯಾಕಾಂಡದಲ್ಲಿ ಪ್ರಾಣತೆತ್ತವರ ವೈಯಕ್ತಿಕ ಜೀವನಗಾಥೆಗಳನ್ನು ಪ್ರದರ್ಶಿಸುವ ಹೆಸರುಗಳ ಪುಸ್ತಕ ಸಭಾಂಗಣಕ್ಕೂ ಪ್ರಧಾನಮಂತ್ರಿ ಭೇಟಿ ನೀಡಿದರು.ನೆಸ್ಸೆಟ್ ಅನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
February 25th, 08:20 pm
ಈ ಗೌರವಾನ್ವಿತ ಸದನದ ಮುಂದೆ ನಿಂತಿರುವುದು ನನಗೆ ಸಂದ ಗೌರವ ಮತ್ತು ಸೌಭಾಗ್ಯವಾಗಿದೆ. ನಾನು ಭಾರತದ ಪ್ರಧಾನಮಂತ್ರಿಯಾಗಿ ಮಾತ್ರವಲ್ಲದೆ, ಒಂದು ಪ್ರಾಚೀನ ನಾಗರಿಕತೆಯ ಪ್ರತಿನಿಧಿಯಾಗಿ ಮತ್ತೊಂದು ಪ್ರಾಚೀನ ನಾಗರಿಕತೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ನಾನು ನಿಮ್ಮ ಬಳಿಗೆ 140 ಕೋಟಿ ಭಾರತೀಯರ ಶುಭಾಶಯಗಳು ಹಾಗೂ ಸ್ನೇಹ, ಗೌರವ ಮತ್ತು ಸಹಭಾಗಿತ್ವದ ಸಂದೇಶವನ್ನು ಹೊತ್ತು ತಂದಿದ್ದೇನೆ.ಇಸ್ರೇಲ್ ಸಂಸತ್ತನ್ನು (ನೆಸ್ಸೆಟ್) ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
February 25th, 08:00 pm
ಕನೆಸೆಟ್‌ಗೆ ಆಗಮಿಸಿದ ಪ್ರಧಾನಮಂತ್ರಿಯವರನ್ನು ನೆಸ್ಸೆಟ್ ನ ಸ್ಪೀಕರ್ ಘನತೆವೆತ್ತ ಅಮೀರ್ ಓಹಾನಾ ಸ್ವಾಗತಿಸಿದರು ಮತ್ತು ವಿಧ್ಯುಕ್ತ ಸ್ವಾಗತ ನೀಡಿದರು. ಇಸ್ರೇಲ್ ಪ್ರಧಾನಮಂತ್ರಿ, ಘನತೆವೆತ್ತ ಶ್ರೀ ಬೆಂಜಮಿನ್ ನೆತನ್ಯಾಹು; ವಿರೋಧ ಪಕ್ಷದ ನಾಯಕರಾದ ಘನತೆವೆತ್ತ ಶ್ರೀ ಯಾಯಿರ್ ಲಾಪಿಡ್; ಮತ್ತು ಸ್ಪೀಕರ್ ಒಹಾನಾ ಅವರು ಪ್ರಧಾನಮಂತ್ರಿಯವರ ಭಾಷಣಕ್ಕೂ ಮುನ್ನ ಅಧಿವೇಶನದಲ್ಲಿ ಮಾತನಾಡಿ, ಭಾರತ-ಇಸ್ರೇಲ್ ಸಂಬಂಧಗಳಿಗೆ ಬಲವಾದ ದ್ವಿಪಕ್ಷೀಯ ಬೆಂಬಲವನ್ನು ವ್ಯಕ್ತಪಡಿಸಿದರು.ಇಸ್ರೇಲ್ ಜೊತೆ ನಮ್ಮ ಸಂಬಂಧ ಪರಸ್ಪರ ವಿಶ್ವಾಸ ಮತ್ತು ಸ್ನೇಹಾಚಾರದಿಂದ ಕೂಡಿದೆ
July 05th, 10:38 pm
ಪ್ರಧಾನಿ ನರೇಂದ್ರ ಮೋದಿ ಟೆಲ್ ಅವಿವ್ ನಲ್ಲಿ ಸಮುದಾಯ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡಿದರು. ಇಸ್ರೇಲ್ ನ ಅಭಿವೃದ್ಧಿಯ ಪ್ರಯಾಣವನ್ನು ಪ್ರಶಂಸಿಸುತ್ತಾ, ಪ್ರಧಾನಿ ಮೋದಿ ಅವರು, ಗಾತ್ರಕ್ಕಿಂತ ಹೆಚ್ಚಿನದು, ಅದು ಮುಖ್ಯವಾದದ್ದು ಎಂದು ಇಸ್ರೇಲ್ ತೋರಿಸಿದೆ. ಯಹೂದಿ ಸಮುದಾಯವು ವಿವಿಧ ಕ್ಷೇತ್ರಗಳಲ್ಲಿ ಅವರ ಕೊಡುಗೆಗಳಿಂದ ಭಾರತವನ್ನು ಪುಷ್ಟೀಕರಿಸಿದೆ ಎಂದು ಅವರು ಹೇಳಿದರು. ಪ್ರಧಾನಿ ನೇತನ್ಯಾಹು ಮತ್ತು ಇಸ್ರೇಲ್ ಸರ್ಕಾರಕ್ಕೆ ಆತಿಥ್ಯಕ್ಕಾಗಿ ಧನ್ಯವಾದ ಸಲ್ಲಿಸಿದರು.ಇಸ್ರೇಲ್ ನಲ್ಲಿ ಸಮುದಾಯಗಳ ಆತಿಥ್ಯ ಸತ್ಕಾರಕೂಟದಲ್ಲಿ ಪ್ರಧಾನಿಯವರು ಮಾಡಿದ ಭಾಷಣ
July 05th, 06:56 pm
ಭಾರತದ ಪ್ರಧಾನಿಯವರು 70 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಇಲ್ಲಿಗೆ ಆಗಮಿಸಿರುವುದು ಸಂತೋಷ ಮತ್ತು ಕುತೂಹಲದ ಮಿಶ್ರ ಭಾವನೆಯನ್ನು ಮೂಡಿಸಿದೆ. ಬಹಳ ಧೀರ್ಘ ಅವಧಿಯ ಬಳಿಕ ನೀವು, ತೀರಾ ನಿಕಟ ವ್ಯಕ್ತಿಯನ್ನು ಭೇಟಿಯಾಗುವಾಗ ಮನುಷ್ಯ ಸ್ವಭಾವಕ್ಕೆ ಒದಗುವ ಅನುಭವವಿದು, ಆಗ ಮೊದಲ ವಾಕ್ಯ ನಾವು ಭೇಟಿಯಾಗದೆ ಬಹಳ ಕಾಲವಾಯಿತು ಎಂಬ ತಪ್ಪೊಪ್ಪಿಗೆಯಂತಿದ್ದರೆ ಆ ಬಳಿಕದ್ದು ಎಲ್ಲ ಹೇಗಿದೆ ಎಂದು ಕೇಳುವಂತಹ ರೀತಿಯದ್ದು. ನಾನು ನನ್ನ ಭಾಷಣವನ್ನು ಬಹಳ ಧೀರ್ಘಾವಧಿಯಿಂದ ಭೇಟಿಯಾಗದಿರುವ ಈ ತಪ್ಪೊಪ್ಪಿಗೆಯೊಂದಿಗೆ ಆರಂಭಿಸುತ್ತೇನೆ.ವಾಸ್ತವವಾಗಿ ಇದು 10,20 ಅಥವ 50 ವರ್ಷಗಳನ್ನು ತೆಗೆದುಕೊಂಡದ್ದಲ್ಲ, 70 ವರ್ಷಗಳ ಧೀರ್ಘಾವಧಿ.ಇಸ್ರೇಲ್ ನ ಜೆರುಸಲೆಮ್ ನ ಯಾದ್ ವಶೆಮ್ ಸಾಮೂಹಿಕ ಬಲಿದಾನದ ಸ್ಮಾರಕಕ್ಕೆ ಪ್ರಧಾನಿ ಭೇಟಿ ನೀಡಿದರು
July 04th, 08:58 pm
ಇಂದು ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ನ ಜೆರುಸಲೆಮ್ ನ ಯಾದ್ ವಶೆಮ್ ಸಾಮೂಹಿಕ ಬಲಿದಾನದ ಸ್ಮಾರಕಕ್ಕೆ ಭೇಟಿ ನೀಡಿದರು.