17ನೇ ನಾಗರಿಕ ಸೇವಾ ದಿನದಂದು ಪ್ರಧಾನಮಂತ್ರಿಯವರ ಭಾಷಣ
April 21st, 11:30 am
ನನ್ನ ಸಂಪುಟ ಸಹೋದ್ಯೋಗಿ ಡಾ. ಜಿತೇಂದ್ರ ಸಿಂಗ್ ಜಿ, ಶ್ರೀ ಶಕ್ತಿಕಾಂತ ದಾಸ್ ಜಿ, ಡಾ. ಸೋಮನಾಥನ್ ಜಿ, ಇತರ ಹಿರಿಯ ಅಧಿಕಾರಿಗಳು, ದೇಶಾದ್ಯಂತ ನಾಗರಿಕ ಸೇವೆಗಳ ಎಲ್ಲಾ ಸಹೋದ್ಯೋಗಿಗಳು, ಮಹಿಳೆಯರೇ ಮತ್ತು ಮಹನೀಯರೇ!17ನೇ ನಾಗರಿಕ ಸೇವಾ ದಿನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
April 21st, 11:00 am
ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ನಡೆದ 17ನೇ ನಾಗರಿಕ ಸೇವಾ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಗರಿಕ ಸೇವೆಗಳ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನಮಂತ್ರಿಯವರ ಪ್ರಶಸ್ತಿಗಳನ್ನು ಸಹ ಅವರು ಪ್ರದಾನ ಮಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ನಾಗರಿಕ ಸೇವಾ ದಿನದ ಸಂದರ್ಭದಲ್ಲಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು ಮತ್ತು ಸಂವಿಧಾನದ 75ನೇ ವರ್ಷ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜಯಂತಿಯಾದ ಈ ವರ್ಷದ ಆಚರಣೆಯ ಮಹತ್ವವನ್ನು ಎತ್ತಿ ತೋರಿಸಿದರು. ಏಪ್ರಿಲ್ 21, 1947 ರಂದು ಸರ್ದಾರ್ ಪಟೇಲ್ ಅವರು 'ಭಾರತದ ಉಕ್ಕಿನ ಚೌಕಟ್ಟು' ಎಂದು ನಾಗರಿಕ ಸೇವಕರನ್ನು ಬಣ್ಣಿಸಿದ ಐತಿಹಾಸಿಕ ಹೇಳಿಕೆಯನ್ನು ಸ್ಮರಿಸಿದ ಶ್ರೀ ಮೋದಿ, ಶಿಸ್ತು, ಪ್ರಾಮಾಣಿಕತೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವ, ಅತ್ಯಂತ ಸಮರ್ಪಣಾಬಾವದಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಅಧಿಕಾರಶಾಹಿಯನ್ನು ಕುರಿತ ಪಟೇಲ್ ಅವರ ದೃಷ್ಟಿಕೋನವನ್ನು ಒತ್ತಿ ಹೇಳಿದರು. ಭಾರತವು ವಿಕಸಿತ ಭಾರತವಾಗುವ ಸಂಕಲ್ಪದ ಸಂದರ್ಭದಲ್ಲಿ ಸರ್ದಾರ್ ಪಟೇಲ್ ಅವರ ಆದರ್ಶಗಳ ಪ್ರಸ್ತುತತೆಯನ್ನು ಅವರು ಒತ್ತಿ ಹೇಳಿದರು ಮತ್ತು ಸರ್ದಾರ್ ಪಟೇಲ್ ಅವರ ದೃಷ್ಟಿಕೋನ ಮತ್ತು ಪರಂಪರೆಗೆ ಹೃತ್ಪೂರ್ವಕ ಗೌರವ ಸಲ್ಲಿಸಿದರು.ಸಿಲ್ವಾಸ್ಸಾದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿ ಭಾಷಣ
March 07th, 03:00 pm
ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು ಆಡಳಿತಾಧಿಕಾರಿ ಶ್ರೀ ಪ್ರಫುಲ್ಭಾಯಿ ಪಟೇಲ್, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಶ್ರೀಮತಿ ಕಲ್ಬೆನ್ ಡೆಲ್ಕರ್, ಎಲ್ಲಾ ಗಣ್ಯರೇ, ಸಹೋದರ ಸಹೋದರಿಯರೇ, ನಮಸ್ಕಾರ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಲ್ವಾಸ್ಸಾ, ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯುಗಳಲ್ಲಿ 2580 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು ಮತ್ತು ಚಾಲನೆ ನೀಡಿದರು
March 07th, 02:45 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಲ್ವಾಸ್ಸಾ, ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯುಗಳಲ್ಲಿ 2580 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಅವರು ಸಿಲ್ವಾಸ್ಸಾದಲ್ಲಿ ನಮೋ ಆಸ್ಪತ್ರೆಯನ್ನು ಉದ್ಘಾಟಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಪ್ರದೇಶದೊಂದಿಗೆ ಸಂಪರ್ಕ ಸಾಧಿಸಲು ಮತ್ತು ತೊಡಗಿಸಿಕೊಳ್ಳಲು ಅವಕಾಶ ನೀಡಿದ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯುಗಳ ಸಮರ್ಪಿತ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಜನರೊಂದಿಗೆ ತಾವು ಹೊಂದಿರುವ ಆತ್ಮೀಯತೆ ಮತ್ತು ದೀರ್ಘಕಾಲದ ಸಂಪರ್ಕವನ್ನು ಅವರು ನೆನಪಿಸಿಕೊಂಡರು, ಈ ಪ್ರದೇಶದೊಂದಿಗಿನ ತಮ್ಮ ಬಂಧವು ದಶಕಗಳಷ್ಟು ಹಳೆಯದು ಎಂಬುದನ್ನವರು ಹಂಚಿಕೊಂಡರು. 2014 ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ಪ್ರದೇಶವು ಸಾಧಿಸಿದ ಪ್ರಗತಿಯನ್ನು ಅವರು ಎತ್ತಿ ತೋರಿಸಿದರು, ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯುಗಳ ಸಾಮರ್ಥ್ಯವನ್ನು ಆಧುನಿಕತೆ ಮತ್ತು ಪ್ರಗತಿಯ ಗುರುತಾಗಿ ಪರಿವರ್ತಿಸಿರುವುದನ್ನು ಅವರು ಪ್ರಸ್ತಾಪಿಸಿದರು.ಬಾಗೇಶ್ವರ ಧಾಮ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಯ ಶಿಲಾನ್ಯಾಸ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
February 23rd, 06:11 pm
ಸಹೋದರ ಸಹೋದರಿಯರೆ, ನೀವೆಲ್ಲಾ ದಯಮಾಡಿ ಮಾತಂಗೇಶ್ವರನಿಗೆ ಜೈ, ಬಾಗೇಶ್ವರ ಧಾಮಕ್ಕೆ ಜೈ, ಜಟಾಶಂಕರ ಧಾಮಕ್ಕೆ ಜೈ ಎಂದು ಹೇಳಿ, ನಾನು ನನ್ನ ಎರಡೂ ಕೈಗಳನ್ನು ಎತ್ತಿ ಹಿಡಿದು ನಿಮ್ಮ ಪರವಾಗಿ ನಮಿಸುತ್ತಿದ್ದೇನೆ, ಜೋರಾಗಿ ರಾಮ್-ರಾಮ್ ಎಂದು ಹೇಳಿ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಾಗೇಶ್ವರ ಧಾಮ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಗೆ ಶಂಕುಸ್ಥಾಪನೆ ಮಾಡಿದರು
February 23rd, 04:25 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಛತ್ತರಪುರ ಜಿಲ್ಲೆಯ ಗರ್ಹಾ ಗ್ರಾಮದಲ್ಲಿ ಬಾಗೇಶ್ವರ ಧಾಮ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಯ ಶಂಕುಸ್ಥಾಪನೆ ನೆರವೇರಿಸಿದರು. ಅಲ್ಪಾವಧಿಯಲ್ಲಿಯೇ ಎರಡನೇ ಬಾರಿಗೆ ಬುಂದೇಲಖಂಡಕ್ಕೆ ಮತ್ತೆ ಬಂದಿರುವುದು ತಮ್ಮ ಅದೃಷ್ಟ ಎಂದು ಹೇಳಿದ ಶ್ರೀ ಮೋದಿ, ಆಧ್ಯಾತ್ಮಿಕ ಕೇಂದ್ರ ಬಾಗೇಶ್ವರ ಧಾಮ ಶೀಘ್ರದಲ್ಲೇ ಆರೋಗ್ಯ ಕೇಂದ್ರವಾಗಲಿದೆ ಎಂದು ಹೇಳಿದರು. ಬಾಗೇಶ್ವರ ಧಾಮ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಯನ್ನು 10 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುವುದು ಮತ್ತು ಮೊದಲ ಹಂತದಲ್ಲಿ 100 ಹಾಸಿಗೆಗಳ ಸೌಲಭ್ಯ ಸಿದ್ಧವಾಗಲಿದೆ ಎಂದು ಅವರು ಹೇಳಿದರು. ಶ್ರೀ ಧೀರೇಂದ್ರ ಶಾಸ್ತ್ರಿ ಅವರ ಉದಾತ್ತ ಕಾರ್ಯಕ್ಕಾಗಿ ಅವರು ಅವರನ್ನು ಅಭಿನಂದಿಸಿದರು ಮತ್ತು ಬುಂದೇಲಖಂಡದ ಜನರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು.ಕಾರ್ಗಿಲ್‌ನಲ್ಲಿ ನಾವು ಕೇವಲ ಯುದ್ಧವನ್ನು ಗೆಲ್ಲಲಿಲ್ಲ; ನಾವು ಸತ್ಯ, ಸಂಯಮ ಮತ್ತು ಸಾಮರ್ಥ್ಯದ ನಂಬಲಾಗದ ಶಕ್ತಿಯನ್ನು ಪ್ರದರ್ಶಿಸಿದ್ದೇವೆ: ಲಡಾಖ್‌ನಲ್ಲಿ ಪ್ರಧಾನಿ ಮೋದಿ
July 26th, 09:30 am
ಲಡಾಖ್‌ನಲ್ಲಿ 25 ನೇ ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಕರ್ತವ್ಯದ ಸಾಲಿನಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ಧೀರರಿಗೆ ಪ್ರಧಾನಿ ಮೋದಿ ನಮನ ಸಲ್ಲಿಸಿದರು. ಕಾರ್ಗಿಲ್‌ನಲ್ಲಿ ನಾವು ಯುದ್ಧವನ್ನು ಗೆದ್ದಿದ್ದಷ್ಟೇ ಅಲ್ಲ, ಸತ್ಯ, ಸಂಯಮ ಮತ್ತು ಶಕ್ತಿಯ ಅದ್ಭುತ ಉದಾಹರಣೆಯನ್ನು ನೀಡಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ʻಕಾರ್ಗಿಲ್ ವಿಜಯ ದಿನʼದ ಅಂಗವಾಗಿ ಹುತಾತ್ಮ ವೀರ ಯೋಧರಿಗೆ ಪ್ರಧಾನ ಮಂತ್ರಿಗಳು ಗೌರವ ನಮನ ಸಲ್ಲಿಸಿದರು ಮತ್ತು ಲಡಾಖ್‌ನಲ್ಲಿ ನಡೆದ ಶ್ರದ್ಧಾಂಜಲಿ ಸಮಾರಂಭದಲ್ಲಿ ಭಾಗಿಯಾದರು
July 26th, 09:20 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲಡಾಖ್‌ನಲ್ಲಿ ನಡೆದ 25ನೇ ʻಕಾರ್ಗಿಲ್ ವಿಜಯ ದಿನʼದ ಸಂದರ್ಭದಲ್ಲಿ ಕರ್ತವ್ಯದ ವೇಳೆ ಪರಮೋಚ್ಚ ತ್ಯಾಗ ಮಾಡಿದ ವೀರ ಕಲಿಗಳಿಗೆ ಗೌರವ ನಮನ ಸಲ್ಲಿಸಿದರು. ಕಾರ್ಗಿಲ್ ವೀರ ಯೋಧರ ಶ್ರದ್ಧಾಂಜಲಿ ಸಮಾರಂಭದಲ್ಲಿ ಪ್ರಧಾನಿ ಭಾಗವಹಿಸಿದರು. ಕಾರ್ಗಿಲ್ ಯುದ್ಧದ ಬಗ್ಗೆ ʻಎನ್‌ಸಿಓʼಗಳ ಸಂಕ್ಷಿಪ್ತ ವಿವರಣೆಯಾದ ʻಗೌರವ್ ಗಾಥಾʼವನ್ನು ಪ್ರಧಾನಮಂತ್ರಿಯವರು ಆಲಿಸಿದರು. ಅಲ್ಲದೆ, ʻಅಮರ್ ಸಂಸ್ಮರಣ್: ನೆನಪಿನ ಗುಡಿಸಲುʼ ಹಾಗೂ ʻವೀರ ಭೂಮಿʼಗೂ ಅವರು ಭೇಟಿ ನೀಡಿದರು.