ಅಸ್ಸಾಂನ ಸಿಲ್ಚಾರ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
March 14th, 11:10 am
ಸಂಸ್ಕೃತಿ, ಧೈರ್ಯ ಮತ್ತು ಚೈತನ್ಯದಿಂದ ತುಂಬಿರುವ ಬರಾಕ್ ಕಣಿವೆಯ ಕುಟುಂಬಗಳನ್ನು ನೋಡಲು ಇಲ್ಲಿಗೆ ಬರುವುದು ನನಗೆ ಯಾವಾಗಲೂ ವಿಶೇಷ ಅನುಭವ ತರುತ್ತದೆ. ಸಿಲ್ಚಾರ್ ಅನ್ನು ಬರಾಕ್ ಕಣಿವೆಯ ಪ್ರವೇಶದ್ವಾರ ಎಂದು ಕರೆಯಲಾಗುತ್ತದೆ. ಇತಿಹಾಸ, ಭಾಷೆ, ಸಂಸ್ಕೃತಿ ಮತ್ತು ಉದ್ಯಮಗಳು ಒಟ್ಟಾಗಿ ಒಂದು ವಿಶಿಷ್ಟ ಗುರುತು ಸೃಷ್ಟಿಸಿದ ಸ್ಥಳ ಇದು. ಇಲ್ಲಿ ಬಂಗಾಳಿ ಮಾತನಾಡುತ್ತಾರೆ, ಅಸ್ಸಾಮಿಯ ಅನುರಣನ ಕೇಳುತ್ತದೆ ಮತ್ತು ಇತರೆ ಬುಡಕಟ್ಟು ಸಂಪ್ರದಾಯಗಳು ಸಹ ಪ್ರವರ್ಧಮಾನಕ್ಕೆ ಬರುತ್ತವೆ. ಈ ವೈವಿಧ್ಯತೆಯನ್ನು ಶಕ್ತಿಯಾಗಿ ಪರಿವರ್ತಿಸುವ ಮೂಲಕ, ನೀವೆಲ್ಲರೂ ಈ ಇಡೀ ಪ್ರದೇಶವನ್ನು ಸಹೋದರತ್ವ ಮತ್ತು ಸಾಮರಸ್ಯದಿಂದ ಅಭಿವೃದ್ಧಿಪಡಿಸುತ್ತಿದ್ದೀರಿ. ಇದು ಬರಾಕ್ ಕಣಿವೆಯ ದೊಡ್ಡ ಸಾಮರ್ಥ್ಯವಾಗಿದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಸ್ಸಾಂನ ಸಿಲ್ಚಾರ್ ನಲ್ಲಿ 23,550 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು
March 14th, 10:45 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಸಿಲ್ಚಾರ್ ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಉದ್ಘಾಟಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಮೋದಿ, ತನ್ನ ಸಂಸ್ಕೃತಿ ಮತ್ತು ಚೈತನ್ಯದಿಂದ ವ್ಯಾಖ್ಯಾನಿಸಲ್ಪಟ್ಟ ಭೂಮಿಯಾದ ಬರಾಕ್ ಕಣಿವೆಗೆ ಭೇಟಿ ನೀಡುವುದು ಸದಾ ತಮಗೆ ಆಳವಾದ ವಿಶೇಷ ಅನುಭವವನ್ನು ತರುತ್ತದೆ ಎಂದು ಹೇಳಿದರು. ಇತಿಹಾಸ ಮತ್ತು ಭಾಷೆ ವಿಲೀನಗೊಂಡು ವಿಶಿಷ್ಟ ಪ್ರಾದೇಶಿಕ ಗುರುತನ್ನು ಸೃಷ್ಟಿಸಲು ಸಿಲ್ಚಾರ್ ಈ ಕಣಿವೆಯ ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಧಾನಿ ಹೇಳಿದರು. ಬಂಗಾಳಿ, ಅಸ್ಸಾಮಿ ಮತ್ತು ಬುಡಕಟ್ಟು ಸಂಪ್ರದಾಯಗಳು ಸಾಮರಸ್ಯದಿಂದ ಜೊತೆಗೆ ಬೆಳೆಯುವ ವೈವಿಧ್ಯತೆಯಲ್ಲಿ ಈ ಪ್ರದೇಶದ ಶಕ್ತಿ ಅಡಗಿದೆ ಎಂದು ಶ್ರೀ ಮೋದಿ ಹೇಳಿದರು. ಬರಾಕ್ ಕಣಿವೆಯ ವೈವಿಧ್ಯತೆಯು ಅದರ ದೊಡ್ಡ ಆಸ್ತಿಯಾಗಿದ್ದು, ಅದರ ನಾಗರಿಕರಲ್ಲಿ ಸಹೋದರತ್ವದ ಮನೋಭಾವವನ್ನು ಬೆಳೆಸುತ್ತದೆ ಎಂದು ಶ್ರೀ ಮೋದಿ ದೃಢಪಡಿಸಿದರು.ಅಸ್ಸಾಂನ ಕೊಕ್ರಝಾರ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ವೀಡಿಯೊ ಕಾನ್ಫರೆನ್ಸ್ ಭಾಷಣ
March 13th, 03:00 pm
ಪ್ರತೀಕೂಲ ಹವಾಮಾನದಿಂದಾಗಿ ನಾನು ಕೊಕ್ರಝಾರ್‌ಗೆ ಬರಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ನಿಮ್ಮೆಲ್ಲರ ಕ್ಷಮೆ ಯಾಚಿಸುತ್ತೇನೆ. ಗುವಾಹತಿಯಿಂದ ಇಲ್ಲಿ ನಿಮ್ಮೊಂದಿಗೆ ಸಂವಹನ ನಡೆಸಲು ಸಾಧ್ಯವಾಯಿತು. ನಾನು ದೆಹಲಿಯಿಂದ ನಿಮ್ಮ ಬಳಿಗೆ ಬರಲು ಹೊರಟಿದ್ದೆ, ಆದರೆ ನಾನು ಗುವಾಹತಿಯಲ್ಲೇ ಇಳಿಯಬೇಕಾಯಿತು. ಈಗ ಗುವಾಹತಿಯಿಂದಲೇ ನಾನು ನಿಮ್ಮ ದರ್ಶನ ಪಡೆಯುತ್ತಿದ್ದೇನೆ, ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಅಸ್ಸಾಂ ಮುಖ್ಯಮಂತ್ರಿ, ಸಹೋದರ ಹಿಮಂತ ಬಿಸ್ವಾ ಶರ್ಮಾ ಜಿ, ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿ ಸರ್ಬಾನಂದ ಸೋನೋವಾಲ್ ಜಿ, ಬೋಡೋಲ್ಯಾಂಡ್ ಪ್ರಾದೇಶಿಕ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಸದಸ್ಯ ಹಗ್ರಾಮ ಮೊಹಿಲರಿ ಜಿ, ಅಸ್ಸಾಂ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಜಿ, ಅಸ್ಸಾಂ ಸರ್ಕಾರದ ಸಚಿವರೆ, ಸಂಸದರೆ ಮತ್ತು ಶಾಸಕರೆ, ಬಿ.ಟಿ.ಸಿ.ಯ ಎಲ್ಲಾ ಪ್ರತಿನಿಧಿಗಳೆ, ಸಮಾಜದ ಎಲ್ಲಾ ಹಿರಿಯ ಸದಸ್ಯರೆ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೆ!ಅಸ್ಸಾಂನ ಕೊಕ್ರಝಾರ್‌ನಲ್ಲಿ ₹4,570 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
March 13th, 02:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಅಸ್ಸಾಂನ ಕೊಕ್ರಝಾರ್‌ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಪ್ರತಿಕೂಲ ಹವಾಮಾನದಿಂದಾಗಿ ಕೊಕ್ರಝಾರ್‌ಗೆ ಭೇಟಿ ನೀಡಲು ಸಾಧ್ಯವಾಗಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು ಮತ್ತು ನೆರೆದಿದ್ದ ನಾಗರಿಕರಿಗೆ ಕ್ಷಮೆಯಾಚಿಸಿದರು. ಗುವಾಹಟಿಯಿಂದ ಮಾತನಾಡುತ್ತಿರುವುದಾಗಿ ಪ್ರಧಾನಿ ಮೋದಿ ಹೇಳಿದರು. ಬೋಡೋಫಾ ಉಪೇಂದ್ರನಾಥ ಬ್ರಹ್ಮ ಮತ್ತು ರೂಪನಾಥ್ ಬ್ರಹ್ಮ ಅವರಂತಹ ಮಹಾನ್ ವ್ಯಕ್ತಿಗಳಿಗೆ ನಾನು ನಮಿಸುತ್ತೇನೆ ಎಂದು ಶ್ರೀ ಮೋದಿ ತಿಳಿಸಿಸಿದರು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವುದು ನನ್ನ ಮೇಲಿನ ಋಣವಾಗಿದೆ, ಅದನ್ನು ಸಮರ್ಪಿತ ಸೇವೆ ಮತ್ತು ಪ್ರಾದೇಶಿಕ ಅಭಿವೃದ್ಧಿಯ ಮೂಲಕ ಮರುಪಾವತಿಸುತ್ತೇನೆ ಎಂದು ಹೇಳಿದರು. ನಿಮಗೆ ಸೇವೆ ಸಲ್ಲಿಸುವ ಮೂಲಕ ಮತ್ತು ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಮೂಲಕ ಈ ಋಣವನ್ನು ತೀರಿಸುವುದು ನನ್ನ ಪ್ರಯತ್ನವಾಗಿದೆ ಎಂದು ಪ್ರಧಾನಮಂತ್ರಿ ಮೋದಿ ದೃಢಪಡಿಸಿದರು.ಗುವಾಹತಿಯಲ್ಲಿ “ಬಾಗುರೂಂಬಾ ದೊಹೊ” ಸಾಂಪ್ರದಾಯಿಕ ಬೋಡೊ ಸಾಂಸ್ಕೃತಿಕ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
January 17th, 06:30 pm
ಅಸ್ಸಾಂ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರೇ, ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಅವರೇ, ಕೇಂದ್ರ ಸರ್ಕಾರದ ನನ್ನ ಸಹೋದ್ಯೋಗಿಗಳಾದ ಶ್ರೀ ಸರ್ಬಾನಂದ ಸೋನೋವಾಲ್ ಅವರೇ, ಪಬಿತ್ರ ಮಾರ್ಗರಿಟಾ ಅವರೇ, ಅಸ್ಸಾಂ ವಿಧಾನಸಭೆ ಸ್ಪೀಕರ್ ಶ್ರೀ ಬಿಸ್ವಾಜಿತ್ ಡೈಮರಿ ಅವರೇ, ಬೋಡೊಲ್ಯಾಂಡ್ ಪ್ರಾದೇಶಿಕ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಸದಸ್ಯ ಹಗ್ರಾಮ ಮೊಹಿಲರಿ ಅವರೇ, ರಾಜ್ಯ ಸರ್ಕಾರದ ಸಚಿವರೆ, ಎಲ್ಲಾ ಗೌರವಾನ್ವಿತ ನಾಗರಿಕ ಸಹೋದರ ಸಹೋದರಿಯರೆ ಮತ್ತು ಅಸ್ಸಾಂನ ನನ್ನ ಸಹೋದರ ಸಹೋದರಿಯರೆ,ಅಸ್ಸಾಂನ ಗುವಾಹಟಿಯಲ್ಲಿ ನಡೆದ "ಬಾಗುರೂಂಬಾ ದೊಹೊ," ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು
January 17th, 06:00 pm
ಗುವಾಹಟಿಯ ಸರುಸಜೈ ಕ್ರೀಡಾಂಗಣದಲ್ಲಿ ಬೋಡೋ ಸಮುದಾಯದ ಶ್ರೀಮಂತ ಪರಂಪರೆಯನ್ನು ಆಚರಿಸುವ ಐತಿಹಾಸಿಕ ಸಾಂಸ್ಕೃತಿಕ ಕಾರ್ಯಕ್ರಮವಾದ ಬಾಗುರೂಂಬಾ ದೊಹೊ 2026 ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಅಸ್ಸಾಂನ ಸಂಸ್ಕೃತಿಯನ್ನು ವೀಕ್ಷಿಸುವುದು ಮತ್ತು ಬೋಡೋ ಸಮುದಾಯದ ಸಂಪ್ರದಾಯಗಳನ್ನು ಸೂಕ್ಷ್ಮವಾಗಿ ಗಮನಿಸುವುದು ತಮ್ಮ ಸೌಭಾಗ್ಯ ಎಂದು ಹೇಳಿದರು. ಈ ಹಿಂದಿನ ಯಾವುದೇ ಪ್ರಧಾನಮಂತ್ರಿಗಳು, ಅಸ್ಸಾಂಗೆ ತಾವು ಭೇಟಿ ನೀಡಿದಷ್ಟು ಬಾರಿ ಭೇಟಿ ನೀಡಲಿಲ್ಲ ಎಂದು ಹೇಳಿದ ಶ್ರೀ ಮೋದಿ ಅವರು, ಅಸ್ಸಾಂನ ಕಲೆ ಮತ್ತು ಸಂಸ್ಕೃತಿ ದೊಡ್ಡ ವೇದಿಕೆಯನ್ನು ಪಡೆಯಬೇಕು ಮತ್ತು ಭವ್ಯ ಆಚರಣೆಗಳ ಮೂಲಕ ರಾಷ್ಟ್ರ ಮತ್ತು ಪ್ರಪಂಚದಾದ್ಯಂತ ಮನ್ನಣೆ ಪಡೆಯಬೇಕು ಎಂಬ ತಮ್ಮ ನಿರಂತರ ಆಶಯವನ್ನು ಒತ್ತಿ ಹೇಳಿದರು. ದೊಡ್ಡ ಪ್ರಮಾಣದ ಬಿಹು ಉತ್ಸವಗಳು, ಜುಮೋಯಿರ್ ಬಿನೋಂದಿನಿಯ ಅಭಿವ್ಯಕ್ತಿ, ಒಂದೂವರೆ ವರ್ಷಗಳ ಹಿಂದೆ ನವದೆಹಲಿಯಲ್ಲಿ ನಡೆದ ಭವ್ಯ ಬೋಡೋ ಮಹೋತ್ಸವ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಈ ದಿಕ್ಕಿನಲ್ಲಿ ನಿರಂತರ ಪ್ರಯತ್ನಗಳು ನಡೆದಿವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಅಸ್ಸಾಂನ ಕಲೆ ಮತ್ತು ಸಂಸ್ಕೃತಿಯ ವಿಶಿಷ್ಟತೆ , ವೈವಿಧ್ಯತೆಗಳ ಆನಂದವನ್ನು ಅನುಭವಿಸುವ ಅವಕಾಶವನ್ನು ತಾವು ಎಂದಿಗೂ ಕಳೆದುಕೊಳ್ಳುವುದಿಲ್ಲ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಮತ್ತೊಮ್ಮೆ, ಬಾಗುರುಂಬಾ ಉತ್ಸವವನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು, ಇದು ಅನನ್ಯ ಬೋಡೋ ಗುರುತಿನ ವೈವಿಧ್ಯಮಯ ಆಚರಣೆ ಮತ್ತು ಅಸ್ಸಾಂನ ಪರಂಪರೆಗೆ ಗೌರವ ತುಂಬುತ್ತದೆ ಎಂದು ಅವರು ಬಣ್ಣಿಸಿದರು. ಈ ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ, ವಿಶೇಷವಾಗಿ ಕಲಾವಿದರಿಗೆ ಶ್ರೀ ಮೋದಿ ಅವರು ತಮ್ಮ ಶುಭಾಶಯಗಳು ಮತ್ತು ಅಭಿನಂದನೆಗಳನ್ನು ವ್ಯಕ್ತಪಡಿಸಿದರು.ಅಸ್ಸಾಂನ ನಮ್ರಪ್‌ನಲ್ಲಿ ಯೂರಿಯಾ ಉತ್ಪಾದನಾ ಸ್ಥಾವರದ ಭೂಮಿಪೂಜೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
December 21st, 04:25 pm
ಸೌಲುಂಗ್ ಸುಕಫಾ ಮತ್ತು ಮಹಾವೀರ್ ಲಚಿತ್ ಬೋರ್ಫುಕನ್ ಅವರಂತಹ ವೀರರ ಈ ಭೂಮಿ, ಭಿಂಬರ್ ದೇವೂರಿ, ಹುತಾತ್ಮ ಕುಸಲ್ ಕುವರ್, ಮೋರನ್ ರಾಜಾ ಬೊಡೌಸಾ, ಮಾಲತಿ ಮೇಮ್, ಇಂದಿರಾ ಮಿರಿ, ಸ್ವರ್ಗದೇವ್ ಸರ್ಬಾನಂದ ಸಿಂಗ್ ಮತ್ತು ಯೋಧ ಮಹಿಳೆ ಸತಿ ಸಾಧ್ನಿ ಅವರ ಈ ತಪೋಭೂಮಿ, ಉಜಾನಿ ಅಸ್ಸಾಂನ ಈ ಪುಣ್ಯ ಭೂಮಿಗೆ ನಾನು ಭಕ್ತಿಯಿಂದ ನಮಸ್ಕರಿಸುತ್ತೇನೆ.ಅಸ್ಸಾಂನ ನಮ್ರೂಪ್‌ನಲ್ಲಿ ಅಸ್ಸಾಂ ವ್ಯಾಲಿ ಫರ್ಟಿಲೈಜರ್ ಮತ್ತು ಕೆಮಿಕಲ್ ಕಂಪನಿ ಲಿಮಿಟೆಡ್‌ನ ಅಮೋನಿಯಾ-ಯೂರಿಯಾ ರಸಗೊಬ್ಬರ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
December 21st, 12:00 pm
ಅಸ್ಸಾಂನ ದಿಬ್ರುಗಢದ ನಮ್ರೂಪ್‌ನಲ್ಲಿ ಇಂದು ಅಸ್ಸಾಂ ವ್ಯಾಲಿ ಫರ್ಟಿಲೈಜರ್ ಮತ್ತು ಕೆಮಿಕಲ್ ಕಂಪನಿ ಲಿಮಿಟೆಡ್‌ನ ಅಮೋನಿಯಾ-ಯೂರಿಯಾ ರಸಗೊಬ್ಬರ ಯೋಜನೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ಇದು ಚೌಲುಂಗ್ ಸುಖಪಾ ಮತ್ತು ಮಹಾವೀರ್ ಲಚಿತ್ ಬೋರ್ಫುಕನ್ ಅವರಂತಹ ಮಹಾನ್ ವೀರರ ಭೂಮಿ ಎಂದು ಹೇಳಿದರು. ಭಿಂಬರ್ ದೇವೂರಿ, ಶಹೀದ್ ಕುಶಾಲ್ ಕುನ್ವರ್, ಮೋರನ್ ರಾಜ ಬೊಡೌಸಾ, ಮಾಲತಿ ಮೇಮ್, ಇಂದಿರಾ ಮಿರಿ, ಸ್ವರ್ಗದೇವ್ ಸರ್ಬಾನಂದ ಸಿಂಗ್ ಮತ್ತು ಧೀರ ಸತಿ ಸಾಧನಿ ಅವರ ಕೊಡುಗೆಗಳನ್ನು ಅವರು ಎತ್ತಿ ತೋರಿಸಿದರು. ಶೌರ್ಯ ಮತ್ತು ತ್ಯಾಗದ ಈ ಮಹಾನ್ ಭೂಮಿಯಾದ ಉಜಾನಿ ಅಸ್ಸಾಂನ ಪವಿತ್ರ ಮಣ್ಣಿಗೆ ನಾನು ಶಿರಬಾಗಿ ನಮಸ್ಕರಿಸುತ್ತೇನೆ ಎಂದು ಪ್ರಧಾನಮಂತ್ರಿ ಹೇಳಿದರು.ಅಸ್ಸಾಂನ ಗುವಾಹತಿಯಲ್ಲಿ ಲೋಕಪ್ರಿಯ ಗೋಪಿನಾಥ್ ಬಾರ್ಡೋಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
December 20th, 03:20 pm
ಅಸ್ಸಾಂ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಜಿ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜಿ, ಕೇಂದ್ರ ಸರ್ಕಾರದ ನನ್ನ ಸಹೋದ್ಯೋಗಿಗಳೆ, ನಮ್ಮ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಜಿ, ರಾಮ್ ಮೋಹನ್ ನಾಯ್ಡು ಜಿ, ಮುರಳೀಧರ್ ಮೊಹೋಲ್ ಜಿ, ಪಬಿತ್ರ ಮಾರ್ಗರಿಟಾ ಜಿ, ಅಸ್ಸಾಂ ಸರ್ಕಾರದ ಸಚಿವರೆ, ಇತರ ಗಣ್ಯರೆ, ಸಹೋದರ ಸಹೋದರಿಯರೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಸ್ಸಾಂನ ಗುವಾಹಟಿಯಲ್ಲಿರುವ ಲೋಕಪ್ರಿಯ ಗೋಪಿನಾಥ್ ಬಾರ್ಡೋಲೋಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದರು
December 20th, 03:10 pm
ಅಸ್ಸಾಂನ ಸಂಪರ್ಕ, ಆರ್ಥಿಕ ವಿಸ್ತರಣೆ ಮತ್ತು ಜಾಗತಿಕ ತೊಡಗಿಸಿಕೊಳ್ಳುವಿಕೆಯಲ್ಲಿ ಪರಿವರ್ತನಾತ್ಮಕ ಹೆಜ್ಜೆ ಗುರುತನ್ನು ಮೂಡಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುವಾಹಟಿಯಲ್ಲಿ ಲೋಕಪ್ರಿಯ ಗೋಪಿನಾಥ್ ಬಾರ್ಡೋಲೋಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ಇಂದಿನ ದಿನ ಅಸ್ಸಾಂ ಮತ್ತು ಈಶಾನ್ಯದ ಅಭಿವೃದ್ಧಿ ಹಾಗು ಪ್ರಗತಿಯ ಹಬ್ಬವಾಗಿದೆ ಎಂದು ಹೇಳಿದರು. ಪ್ರಗತಿಯ ಬೆಳಕು ಜನರನ್ನು ತಲುಪಿದಾಗ, ಜೀವನದ ಪ್ರತಿಯೊಂದು ಹಾದಿಯೂ ಹೊಸ ಎತ್ತರವನ್ನು ಮುಟ್ಟಲು ಪ್ರಾರಂಭಿಸುತ್ತದೆ ಎಂದು ಅವರು ತಿಳಿಸಿದರು. ಅಸ್ಸಾಂ ನೆಲದೊಂದಿಗಿನ ತಮ್ಮ ಆಳವಾದ ಬಾಂಧವ್ಯ, ಅದರ ಜನರ ಪ್ರೀತಿ ಮತ್ತು ವಾತ್ಸಲ್ಯ, ಮತ್ತು ವಿಶೇಷವಾಗಿ ಅಸ್ಸಾಂ ಮತ್ತು ಈಶಾನ್ಯದ ತಾಯಂದಿರು ಮತ್ತು ಸಹೋದರಿಯರ ಹೃದಯಸ್ಪರ್ಶಿ ಭಾವನೆ ಮತ್ತು ಆತ್ಮೀಯತೆ ನಿರಂತರವಾಗಿ ತಮ್ಮನ್ನು ಪ್ರೇರೇಪಿಸುತ್ತದೆ ಮತ್ತು ಪ್ರದೇಶದ ಅಭಿವೃದ್ಧಿಗಾಗಿ ಸಾಮೂಹಿಕ ಸಂಕಲ್ಪವನ್ನು ಬಲಪಡಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ಮತ್ತೊಮ್ಮೆ ಅಸ್ಸಾಂನ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯವನ್ನು ಸೇರಿಸಲಾಗುತ್ತಿದೆ ಎಂದು ಅವರು ತಿಳಿಸಿದರು ದರು. ಭಾರತ ರತ್ನ ಭೂಪೇನ್ ಹಜಾರಿಕಾ ಅವರ ಸಾಲುಗಳನ್ನು ಉಲ್ಲೇಖಿಸಿದ, ಶ್ರೀ ಮೋದಿ ಅವರು ಇದರರ್ಥ ಪ್ರಬಲ ಬ್ರಹ್ಮಪುತ್ರ ನದಿಯ ದಡಗಳು ಬೆಳಗುತ್ತವೆ, ಕತ್ತಲೆಯ ಪ್ರತಿಯೊಂದು ಗೋಡೆ ಮುರಿಯುತ್ತದೆ ಮತ್ತು ಖಂಡಿತವಾಗಿಯೂ ಇದು ಸಂಭವಿಸುತ್ತದೆ ಯಾಕೆಂದರೆ ಇದು ರಾಷ್ಟ್ರದ ದೃಢ ನಿರ್ಧಾರವಾಗಿದೆ ಮತ್ತು ಕೈಗೊಂಡ ಪ್ರತಿಜ್ಞೆಯಾಗಿದೆ.ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಅಸ್ಸಾಂ ಮುಖ್ಯಮಂತ್ರಿ
November 05th, 10:04 am
ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಅವರು ನಿನ್ನೆ ಸಂಜೆ ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.ಅಸ್ಸಾಂನ ಗುವಾಹಟಿಯಲ್ಲಿ ಭಾರತ ರತ್ನ ಡಾ. ಭೂಪೇನ್ ಹಜಾರಿಕಾ ಅವರ 100ನೇ ಜನ್ಮ ವಾರ್ಷಿಕೋತ್ಸವ ಆಚರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
September 13th, 08:57 pm
ಅಸ್ಸಾಂ ರಾಜ್ಯಪಾಲರಾದ ಗೌರವಾನ್ವಿತ ಶ್ರೀ ಲಕ್ಷ್ಮಣ ಪ್ರಸಾದ್ ಆಚಾರ್ಯ ಜಿ, ಈ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಜಿ, ಅರುಣಾಚಲ ಪ್ರದೇಶದ ಯುವ ಮುಖ್ಯಮಂತ್ರಿ ಶ್ರೀ ಪೇಮಾ ಖಂಡು ಜಿ, ನನ್ನ ಸಂಪುಟ ಸಹೋದ್ಯೋಗಿ ಶ್ರೀ ಸರ್ಬಾನಂದ ಸೋನೋವಾಲ್ ಜಿ, ವೇದಿಕೆಯಲ್ಲಿ ಉಪಸ್ಥಿತರಿರುವ ಭೂಪೇನ್ ಹಜಾರಿಕಾ ಜಿ ಅವರ ಸಹೋದರ, ಶ್ರೀಮತಿ ಹಜಾರಿಕಾ ಜಿ, ಭೂಪೇನ್ ಹಜಾರಿಕಾ ಜಿ ಅವರ ಸಹೋದರಿ ಶ್ರೀಮತಿ ಕವಿತಾ ಬರುವಾ ಜಿ, ಭೂಪೇನ್ ದಾ ಅವರ ಪುತ್ರ ಶ್ರೀ ತೇಜ್ ಹಜಾರಿಕಾ ಜಿ - ತೇಜ್, ನಾನು ನಿಮ್ಮನ್ನು 'ಕೆಮ್ ಚೋ!' ಎಂದು ಸ್ವಾಗತಿಸುತ್ತೇನೆ. ಇಲ್ಲಿ ಉಪಸ್ಥಿತರಿರುವ ಇತರೆ ಗಣ್ಯರೆ ಮತ್ತು ಅಸ್ಸಾಂನ ನನ್ನ ಸಹೋದರ ಸಹೋದರಿಯರೆ!ಅಸ್ಸಾಂನ ಗುವಾಹಟಿಯಲ್ಲಿ ಭಾರತ ರತ್ನ ಡಾ. ಭೂಪೇನ್ ಹಜಾರಿಕಾ ಅವರ 100 ನೇ ಜನ್ಮ ದಿನಾಚರಣೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
September 13th, 05:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಗುವಾಹಟಿಯಲ್ಲಿ ಭಾರತ ರತ್ನ ಡಾ. ಭೂಪೇನ್ ಹಜಾರಿಕಾ ಅವರ 100 ನೇ ಜನ್ಮ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಇಂದು ಅದ್ಭುತ ದಿನ ಮತ್ತು ಈ ಕ್ಷಣ ನಿಜಕ್ಕೂ ಅಮೂಲ್ಯವಾದುದು ಎಂದು ಹೇಳಿದರು. ತಾವು ಕಂಡ ಪ್ರದರ್ಶನಗಳು, ಉತ್ಸಾಹ ಮತ್ತು ಗಮನಿಸಿದ ಸಮನ್ವಯವು ಅತ್ಯಂತ ಹೃದಯಸ್ಪರ್ಶಿಯಾಗಿತ್ತು ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಉದ್ದಕ್ಕೂ ಪ್ರತಿಧ್ವನಿಸಿದ ಭೂಪೇನ್ ದಾ ಅವರ ಸಂಗೀತದ ಲಯವನ್ನು ಅವರು ಎತ್ತಿ ತೋರಿಸಿದರು. ಭೂಪೇನ್ ಹಜಾರಿಕಾ ಅವರನ್ನು ಉಲ್ಲೇಖಿಸುತ್ತಾ, ಪ್ರಧಾನಿಯವರು ತಮ್ಮ ಹಾಡಿನ ಕೆಲವು ಪದಗಳು ತಮ್ಮ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಲೇ ಇದ್ದವು. ಭೂಪೇನ್ ಅವರ ಸಂಗೀತದ ಅಲೆಗಳು ಎಲ್ಲೆಡೆ, ಅನಂತವಾಗಿ ಹರಿಯುತ್ತಿರಬೇಕೆಂದು ತಮ್ಮ ಹೃದಯವು ಬಯಸುತ್ತದೆ ಎಂದು ಅವರು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಪ್ರಧಾನಿಯವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಅಸ್ಸಾಂನ ಉತ್ಸಾಹವು ಇಲ್ಲಿನ ಪ್ರತಿಯೊಂದು ಕಾರ್ಯಕ್ರಮವು ಹೊಸ ದಾಖಲೆಯನ್ನು ಸ್ಥಾಪಿಸುತ್ತದೆ ಎಂದು ಅವರು ಹೇಳಿದರು, ಇಂದಿನ ಪ್ರದರ್ಶನಗಳು ಅಸಾಧಾರಣ ಸಿದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಗಮನಿಸಿದರು. ಅವರು ಎಲ್ಲಾ ಪ್ರದರ್ಶಕರನ್ನು ಅಭಿನಂದಿಸಿದರು ಮತ್ತು ಶ್ಲಾಘಿಸಿದರು.ಪ್ರಧಾನಮಂತ್ರಿ ಅವರನ್ನು ಅಸ್ಸಾಂ ಮುಖ್ಯಮಂತ್ರಿ ಭೇಟಿಯಾದರು
July 28th, 12:58 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ್ ಬಿಸ್ವಾ ಶರ್ಮಾ ಅವರು ಇಂದು ನವದೆಹಲಿಯಲ್ಲಿ ಭೇಟಿಯಾದರು.ಪ್ರಧಾನಮಂತ್ರಿ ಭೇಟಿ ಮಾಡಿದ ಅಸ್ಸಾಂ ಮುಖ್ಯಮಂತ್ರಿ
April 19th, 12:55 pm
ಅಸ್ಸಾಂ ಮುಖ್ಯಮಂತ್ರಿಗಳಾದ ಹಿಮಂತ ಬಿಸ್ವ ಶರ್ಮ ಅವರು ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.ಕೇಂದ್ರ ಮತ್ತು ಅಸ್ಸಾಂನ ಎನ್.ಡಿ.ಎ. ಸರ್ಕಾರಗಳು ಬೋಡೋ ಸಮುದಾಯವನ್ನು ಸಬಲೀಕರಣಗೊಳಿಸಲು ಮತ್ತು ಬೋಡೋ ಸಮುದಾಯದ ಆಕಾಂಕ್ಷೆಗಳನ್ನು ಈಡೇರಿಸಲು ಅವಿರತವಾಗಿ ಶ್ರಮಿಸುತ್ತಿವೆ, ಈ ಕಾರ್ಯಗಳು ಇನ್ನೂ ಹೆಚ್ಚಿನ ಹುರುಪಿನೊಂದಿಗೆ ಮುಂದುವರಿಯುತ್ತವೆ: ಪ್ರಧಾನಮಂತ್ರಿ
February 15th, 04:08 pm
ಫೆಬ್ರವರಿ 17, 2025 ರಂದು ಕೊಕ್ರಜಾರ್ ನಲ್ಲಿ ನಡೆಯಲಿರುವ ಐತಿಹಾಸಿಕ ಒಂದು ದಿನದ ವಿಶೇಷ ಅಸೆಂಬ್ಲಿ ಅಧಿವೇಶನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಅಸ್ಸಾಂ ರಾಜ್ಯದ ಮುಖ್ಯಮಂತ್ರಿ
February 03rd, 05:23 pm
ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಹಿಮಂತ ಬಿಸ್ವಾ ಶರ್ಮಾ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿದ ಅಸ್ಸಾಂ ಮುಖ್ಯಮಂತ್ರಿ
December 02nd, 02:07 pm
ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮ ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.ಅಸ್ಸಾಂ ಮುಖ್ಯಮಂತ್ರಿ ಪ್ರಧಾನಿ ಭೇಟಿ
July 22nd, 03:34 pm
ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಅಸ್ಸಾಂ ಮುಖ್ಯಮಂತ್ರಿ
December 11th, 05:22 pm
ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.