ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಹೆರಾತ್ ಪೋಶ್ತೆ ಕುರಿತು ಶುಭ ಕೋರಿದ ಪ್ರಧಾನಮಂತ್ರಿ

February 15th, 08:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಶ್ಮೀರಿ ಪಂಡಿತ ಸಮುದಾಯದ ಶ್ರೀಮಂತ ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಪವಿತ್ರ ಹಬ್ಬವಾದ ಹೆರಾತ್ ಪೋಶ್ತೆಗೆ ಶುಭಾಶಯ ಕೋರಿದರು. ಈ ಪವಿತ್ರ ಸಂದರ್ಭದಲ್ಲಿ, ಪ್ರತಿಯೊಬ್ಬರ ಜೀವನದಲ್ಲಿ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ನಾನು ಪ್ರಾರ್ಥಿಸುತ್ತೇನೆ. ಇದು ಯಶಸ್ಸಿನ ಹೊಸ ಹಾದಿಗಳನ್ನು ತೆರೆಯಲಿ ಮತ್ತು ಪ್ರತಿ ಮನೆಯಲ್ಲಿ ಸಂತೋಷ ಮತ್ತು ಸಂತೃಪ್ತಿಯನ್ನು ತುಂಬಲಿ, ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಹೆರಾತ್ ಪೊಶ್ತೆ ಅಂಗವಾಗಿ ಕಾಶ್ಮೀರಿ ಪಂಡಿತರಿಗೆ ಪ್ರಧಾನಮಂತ್ರಿ ಶುಭಾಶಯ

February 25th, 06:16 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೆರಾತ್‌ ಪೊಶ್ತೆ ಅಂಗವಾಗಿ ಕಾಶ್ಮೀರಿ ಪಂಡಿತರಿಗೆ ಇಂದು ಶುಭಾಶಯ ಕೋರಿದ್ದಾರೆ.