ಜಪಾನ್ ಪ್ರಧಾನಮಂತ್ರಿ ಅವರೊಂದಿಗೆ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ
July 02nd, 01:30 pm
ಕಳೆದ ಹಲವು ದಶಕಗಳಿಂದೀಚೆಗೆ ಜಪಾನ್ ಭಾರತದ ಪ್ರಗತಿಗಾಥೆಯಲ್ಲಿ ಪ್ರಮುಖ ಪಾಲುದಾರನಾಗಿ ಮಾರ್ಪಟ್ಟಿದೆ. ಆಟೋಮೊಬೈಲ್ಸ್‌ನಿಂದ ಹಿಡಿದು ಎಲೆಕ್ಟ್ರಾನಿಕ್ಸ್ ವರೆಗೆ, ಸ್ನೇಹ ಮತ್ತು ವಿಶ್ವಾಸದ ಅಮೂಲ್ಯವಾಗಿದೆ.ಅಂತಾರಾಷ್ಟ್ರೀಯ ಯೋಗ ದಿನ 2026 ಅನ್ನು ಜಾಗತಿಕ ಆಚರಣೆಯನ್ನಾಗಿ ಮಾಡಿದ್ದಕ್ಕಾಗಿ ಪ್ರಧಾನಮಂತ್ರಿ ಕೃತಜ್ಞತೆ ಸಲ್ಲಿಕೆ
June 21st, 10:00 pm
ಅಂತಾರಾಷ್ಟ್ರೀಯ ಯೋಗ ದಿನ 2026 ಅನ್ನು ನಿಜವಾದ ಜಾಗತಿಕ ಆಚರಣೆಯನ್ನಾಗಿ ಮಾಡಿದ್ದಕ್ಕಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವದಾದ್ಯಂತದ ಜನರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದ 'ಪಶ್ಚಿಮ ಬಂಗಾ ದಿವಸ' ಆಚರಣೆಯಲ್ಲಿ ಭಾಗವಹಿಸಿದರು
June 19th, 11:54 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳ ದಿವಸ (ಪಶ್ಚಿಮ ಬಂಗಾಳ ದಿನ) ಸಂಭ್ರಮಾಚರಣೆಯಲ್ಲಿ ಭಾಗವಹಿಸಿದರು. ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ನಂಟು ಹೊಂದಿರುವ ಐತಿಹಾಸಿಕ ಮಹತ್ವದ ಸ್ಥಳವಾದ ಹೂಗ್ಲಿಯ ತಾರಕೇಶ್ವರದಲ್ಲಿ ರಾಜ್ಯ ಮಟ್ಟದ ಆಚರಣೆಗಳನ್ನು ಆಯೋಜಿಸಲಾಗಿದೆ. ಈ ವರ್ಷದ ಪಶ್ಚಿಮ ಬಂಗಾಳ ದಿನಾಚರಣೆಯ ವಿಷಯವಾದ ಪಶ್ಚಿಮ ಬಂಗಾಳ: ಪರಂಪರೆ, ಸಾಮರಸ್ಯ ಮತ್ತು ಅಭಿವೃದ್ಧಿ ಎಂಬುದು ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆ, ಸಾಮಾಜಿಕ ಸಾಮರಸ್ಯ ಮತ್ತು ಅಭಿವೃದ್ಧಿಯ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ.ಫಲಿತಾಂಶಗಳ ಪಟ್ಟಿ: ವಿಯೆಟ್ನಾಂ ಸಮಾಜವಾದಿ ಗಣರಾಜ್ಯದ ಅಧ್ಯಕ್ಷರ ಭಾರತ ಭೇಟಿ
May 06th, 03:44 pm
ಐ.ಆರ್.ಇ.ಎಲ್. (ಇಂಡಿಯಾ) ಲಿಮಿಟೆಡ್ ಮತ್ತು ವಿಯಟ್ನಾಂನ ಇನ್ ಸ್ಟಿಟ್ಯೂಟ್ ಫಾರ್ ಟೆಕ್ನಾಲಜಿ ಆಫ್ ರೇಡಿಯೋಆಕ್ಟಿವ್ ಅಂಡ್ ರೇರ್ ಎಲಿಮೆಂಟ್ಸ್ (ಐ.ಟಿ.ಆರ್.ಆರ್.ಇ.) ನಡುವೆ ಪರಸ್ಪರ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಬಜೆಟ್ ನಂತರದ ವೆಬಿನಾರ್‌ನಲ್ಲಿ "ಸಬ್ ಕಾ ಸಾಥ್ ಸಬ್ ಕಾ ವಿಕಾಸ್-ಜನರ ಆಕಾಂಕ್ಷೆಗಳನ್ನು ಈಡೇರಿಸುವುದು" ವಿಷಯ ಕುರಿತು ಪ್ರಧಾನಮಂತ್ರಿ ಅವರ ವಿಶೇಷ ಭಾಷಣ
March 09th, 10:30 am
ಬಜೆಟ್ ನಂತರದ ವೆಬಿನಾರ್‌ಗಳ ಸರಣಿಯಲ್ಲಿ ಇಂದು 4ನೇ ಮತ್ತು ಅತ್ಯಂತ ಮಹತ್ವದ ವೆಬಿನಾರ್ ನಡೆಸಲಾಗುತ್ತಿದೆ. ಜನರ ಆಕಾಂಕ್ಷೆಗಳನ್ನು ಈಡೇರಿಸುವುದು ಕೇವಲ ಚರ್ಚೆಯ ವಿಷಯವಲ್ಲ - ಇದು ಈ ಬಜೆಟ್‌ನ ಪ್ರಮುಖ ಉದ್ದೇಶ ಮತ್ತು ಈ ಸರ್ಕಾರದ ದೃಢ ಸಂಕಲ್ಪವಾಗಿದೆ. ಶಿಕ್ಷಣ, ಕೌಶಲ್ಯ, ಆರೋಗ್ಯ, ಪ್ರವಾಸೋದ್ಯಮ, ಕ್ರೀಡೆ ಮತ್ತು ಸಂಸ್ಕೃತಿ ಈ ಆಕಾಂಕ್ಷೆಗಳನ್ನು ಈಡೇರಿಸುವ ಪ್ರಮುಖ ಸಾಧನಗಳಾಗಿ ಕಾರ್ಯ ನಿರ್ವಹಿಸುವ ಮೂಲಭೂತ ಕ್ಷೇತ್ರಗಳಾಗಿವೆ. ಆದ್ದರಿಂದ, ಈ ವೆಬಿನಾರ್‌ನಲ್ಲಿ ನಾವು ಈ ನಿರ್ಣಾಯಕ ಆಯಾಮ(ವಿಷಯ)ಗಳ ಬಗ್ಗೆ ಚರ್ಚಿಸುತ್ತಿದ್ದೇವೆ. ಬಜೆಟ್ ಘೋಷಣೆಗಳ ಅನುಷ್ಠಾನಕ್ಕಾಗಿ ಇಲ್ಲಿ ಉಪಸ್ಥಿತರಿರುವ ಎಲ್ಲಾ ತಜ್ಞರು, ನೀತಿ ನಿರೂಪಕರು, ವಿದ್ವಾಂಸರು, ಉದ್ಯಮಿಗಳು ಮತ್ತು ನನ್ನ ಯುವ ಒಡನಾಡಿಗಳ ಆಲೋಚನೆಗಳು ಮತ್ತು ಸಲಹೆಗಳು ಅತ್ಯಂತ ಮುಖ್ಯ. ಬಜೆಟ್ ವೆಬಿನಾರ್‌ನ ಈ 4ನೇ ಕಲಾಪದಲ್ಲಿ ನಾನು ನಿಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ."ಸಬ್ ಕಾ ಸಾಥ್ ಸಬ್ ಕಾ ವಿಕಾಸ್-ಜನರ ಆಕಾಂಕ್ಷೆಗಳನ್ನು ಈಡೇರಿಸುವುದು" ವಿಷಯ ಕುರಿತು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
March 09th, 10:15 am
ಸಬ್ ಕಾ ಸಾಥ್ ಸಬ್ ಕಾ ವಿಕಾಸ್-ಜನರ ಆಕಾಂಕ್ಷೆಗಳನ್ನು ಪೂರೈಸುವುದು ಎಂಬ ವಿಷಯ ಕುರಿತ ಬಜೆಟ್ ನಂತರದ 4ನೇ ಸರಣಿಯ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಶಿಕ್ಷಣ, ಕೌಶಲ್ಯ, ಆರೋಗ್ಯ, ಪ್ರವಾಸೋದ್ಯಮ, ಕ್ರೀಡೆ ಮತ್ತು ಸಂಸ್ಕೃತಿ ಕ್ಷೇತ್ರಗಳು ಈ ಗುರಿಗಳನ್ನು ಸಾಧಿಸುವ ಪ್ರಾಥಮಿಕ ಸಾಧನಗಳಾಗಿವೆ ಎಂದು ಒತ್ತಿ ಹೇಳಿದ ಮೋದಿ, ಬಜೆಟ್ ಘೋಷಣೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಚರ್ಚಿಸಬೇಕು ಎಂದು ತಜ್ಞರು ಮತ್ತು ನೀತಿ ನಿರೂಪಕರನ್ನು ಸ್ವಾಗತಿಸಿದರು. ಸಾರ್ವಜನಿಕ ಆಕಾಂಕ್ಷೆಗಳನ್ನು ಪೂರೈಸುವುದು ಕೇವಲ ಒಂದು ವಿಷಯವಲ್ಲ; ಇದು ಈ ಬಜೆಟ್ ಮತ್ತು ಈ ಸರ್ಕಾರದ ನಿರ್ಣಯದ ಪ್ರಮುಖ ಉದ್ದೇಶವಾಗಿದೆ ಎಂದು ಮೋದಿ ಹೇಳಿದರು.ಮಲೇಷ್ಯಾಕ್ಕೆ ಪ್ರಧಾನಮಂತ್ರಿ ಅವರ ಅಧಿಕೃತ ಭೇಟಿ: ಫಲಪ್ರದತೆಯ ವಿವರ
February 08th, 11:05 am
ಭಾರತ ಸರ್ಕಾರ ಮತ್ತು ಮಲೇಷ್ಯಾ ಸರ್ಕಾರದ ನಡುವೆ ದೃಶ್ಯ-ಶ್ರಾವ್ಯ ಸಹ ನಿರ್ಮಾಣ ಒಪ್ಪಂದಮಲೇಷ್ಯಾ ಪ್ರಧಾನಮಂತ್ರಿ ಅವರ ಜೊತೆ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ
February 08th, 08:35 am
ಮೊದಲನೆಯದಾಗಿ, ಆತ್ಮೀಯ ಸ್ವಾಗತಕ್ಕಾಗಿ ನನ್ನ ಆಪ್ತ ಮಿತ್ರರಾದ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಕಳೆದ ವರ್ಷ, ಆಸಿಯಾನ್ (ASEAN) ಶೃಂಗಸಭೆಯ ಸಂದರ್ಭದಲ್ಲಿ ನನಗೆ ಮಲೇಷ್ಯಾಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಆದರೆ ಶೀಘ್ರದಲ್ಲೇ ಮಲೇಷ್ಯಾಕ್ಕೆ ಬರುತ್ತೇನೆ ಎಂದು ನಾನು ನನ್ನ ಪ್ರಿಯ ಮಿತ್ರರಿಗೆ ಮಾತು ಕೊಟ್ಟಿದ್ದೆ. ಅದರಂತೆ ಇಂದು, 2026ರ ಸಾಲಿನ ನನ್ನ ಮೊದಲ ವಿದೇಶಿ ಪ್ರವಾಸದ ಅಂಗವಾಗಿ ನಾನು ಮಲೇಷ್ಯಾದಲ್ಲಿದ್ದೇನೆ.ಭಾರತದ ಪ್ರಧಾನಮಂತ್ರಿ ಅವರು ಮಲೇಷ್ಯಾಕ್ಕೆ ನೀಡಿದ ಅಧಿಕೃತ ಭೇಟಿಯ ಸಂದರ್ಭದಲ್ಲಿ ಭಾರತ - ಮಲೇಷ್ಯಾ ಜಂಟಿ ಹೇಳಿಕೆ
February 08th, 08:30 am
ಮಲೇಷ್ಯಾ ಪ್ರಧಾನಮಂತ್ರಿ ಗೌರವಾನ್ವಿತ ಡಾಟೋ ಸೆರಿ ಅನ್ವರ್ ಇಬ್ರಾಹಿಂ ಅವರ ಆಹ್ವಾನದ ಮೇರೆಗೆ, ಭಾರತ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಅವರು 2026ರ ಫೆಬ್ರವರಿ 7 ರಿಂದ 8 ರವರೆಗೆ ಮಲೇಷ್ಯಾಕ್ಕೆ ಅಧಿಕೃತ ಭೇಟಿ ನೀಡಿದರು. ಈ ಭೇಟಿಯು ಉಭಯ ದೇಶಗಳ ನಡುವಿನ ನಾಗರಿಕ ಸಂಬಂಧಗಳ ಆಧಾರದ ಮೇಲೆ ಆಳವಾಗಿ ಬೇರೂರಿರುವ ಸ್ನೇಹ ಮತ್ತು ಜನರ ನಡುವಿನ ಸುದೀರ್ಘ ಬಾಂಧವ್ಯವನ್ನು ಪ್ರತಿಫಲಿಸುತ್ತದೆ. ಭಾರತ-ಮಲೇಷ್ಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ವಿಸ್ತರಿಸಲು ಉಭಯ ನಾಯಕರ ಹಂಚಿಕೆಯ ಬದ್ಧತೆಯನ್ನು ಇದು ಪುನರುಚ್ಚರಿಸಿದೆ.ಇಥಿಯೋಪಿಯಾದ ಪ್ರಧಾಮಂತ್ರಿಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾಮಂತ್ರಿ
December 17th, 12:02 am
ಪ್ರಧಾಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಡಿಸ್ ಅಬಾಬಾದ ರಾಷ್ಟ್ರೀಯ ಅರಮನೆಯಲ್ಲಿ ಇಥಿಯೋಪಿಯಾ ಪ್ರಜಾಸತ್ತಾತ್ಮಕ ಗಣರಾಜ್ಯದ ಪ್ರಧಾನಮಂತ್ರಿ ಘನತೆವೆತ್ತ ಡಾ. ಅಬಿ ಅಹ್ಮದ್ ಅವರನ್ನು ಭೇಟಿಯಾದರು. ಅರಮನೆಗೆ ಆಗಮಿಸಿದ ಪ್ರಧಾನಮಂತ್ರಿ ಮೋದಿ ಅವರನ್ನು ಡಾ. ಅಬಿ ಅಹ್ಮದ್ ಅವರು ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ವಿಧ್ಯುಕ್ತ ಸ್ವಾಗತ ನೀಡಿದರು.17ನೇ ಬ್ರಿಕ್ಸ್ ಶೃಂಗಸಭೆ - ಪರಿಸರ, ಸಿಒಪಿ-30 ಮತ್ತು ಜಾಗತಿಕ ಆರೋಗ್ಯ ಕುರಿತ ಅಧಿವೇಶನವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ
July 07th, 11:38 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪರಿಸರ, ಸಿಒಪಿ-30 ಮತ್ತು ಜಾಗತಿಕ ಆರೋಗ್ಯ ಕುರಿತಾದ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಈ ಅಧಿವೇಶನದಲ್ಲಿ ಬ್ರಿಕ್ಸ್ ಸದಸ್ಯರು, ಪಾಲುದಾರ ರಾಷ್ಟ್ರಗಳು ಮತ್ತು ಆಹ್ವಾನಿತ ರಾಷ್ಟ್ರಗಳು ಭಾಗವಹಿಸಿದ್ದವು. ವಿಶ್ವದ ಭವಿಷ್ಯಕ್ಕಾಗಿ ಇಂತಹ ಮಹತ್ವದ ವಿಷಯ ಕುರಿತು ಅಧಿವೇಶನವನ್ನು ಆಯೋಜಿಸಿದ್ದಕ್ಕಾಗಿ ಅವರು ಬ್ರೆಜಿಲ್ ಗೆ ಧನ್ಯವಾದ ಸಲ್ಲಿಸಿದರು. ಭಾರತಕ್ಕೆ ಹವಾಮಾನ ಬದಲಾವಣೆಯು ಕೇವಲ ಇಂಧನ ಸಮಸ್ಯೆಗಳನ್ನು ನಿಭಾಯಿಸುವುದಲ್ಲ, ಬದಲಾಗಿ ಅದು ಜೀವನ ಮತ್ತು ನಿಸರ್ಗದ ನಡುವಿನ ಸಮತೋಲನದ ಮೇಲೆ ಪರಿಣಾಮ ಬೀರುವುದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವು ಹವಾಮಾನ ನ್ಯಾಯವನ್ನು ಈಡೇರಿಸಬೇಕಾದ ನೈತಿಕ ಜವಾಬ್ದಾರಿಯಾಗಿ ನೋಡುತ್ತದೆ ಎಂದು ಅವರು ಒತ್ತಿ ಹೇಳಿದರು. ಪರಿಸರ ಕ್ರಮಕ್ಕೆ ಭಾರತದ ಆಳವಾದ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ಜನರು ಮತ್ತು ಗ್ರಹದ ಅಭಿವೃದ್ಧಿಯನ್ನು ಉತ್ತೇಜಿಸಲು ಅದು ಕೈಗೊಂಡ ಉಪಕ್ರಮಗಳಾದ ಅಂತಾರಾಷ್ಟ್ರೀಯ ಸೌರ ಒಕ್ಕೂಟ, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ, ಜಾಗತಿಕ ಜೈವಿಕ ಇಂಧನ ಒಕ್ಕೂಟ, ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಒಕ್ಕೂಟ, ಮಿಷನ್ ಲೈಫ್, ತಾಯಿಯ ಹೆಸರಿನಲ್ಲಿ ಒಂದು ಗಿಡ ಇತ್ಯಾದಿಗಳ ಬಗ್ಗೆ ವಿವರಿಸಿದರು.ಪರಿಸರ, ಸಿಒಪಿ-30 ಮತ್ತು ಜಾಗತಿಕ ಆರೋಗ್ಯದ ಕುರಿತಾದ ಬ್ರಿಕ್ಸ್ ಅಧಿವೇಶನದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಯ ಕನ್ನಡ ಅನುವಾದ
July 07th, 11:13 pm
ಬ್ರೆಜಿಲ್ ಅಧ್ಯಕ್ಷತೆಯಲ್ಲಿ ಬ್ರಿಕ್ಸ್, ಪರಿಸರ ಮತ್ತು ಆರೋಗ್ಯ ಸುರಕ್ಷತೆಯಂತಹ ಪ್ರಮುಖ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ನನಗೆ ಸಂತೋಷ ತಂದಿದೆ. ಈ ವಿಷಯಗಳು ಪರಸ್ಪರ ಸಂಬಂಧ ಹೊಂದಿರುವುದು ಮಾತ್ರವಲ್ಲ ಮಾನವೀಯತೆಯ ಉಜ್ವಲ ಭವಿಷ್ಯಕ್ಕೂ ಸಹ ಬಹಳ ಮುಖ್ಯವಾಗಿವೆ.