ನಿವೃತ್ತ ಸೇನಾ ಹಿರಿಯ ಹವಾಲ್ದಾರ್ ಬಲದೇವ್ ಸಿಂಗ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

January 08th, 10:45 pm

ನಿವೃತ್ತ ಸೇನಾ ಹಿರಿಯ ಹವಾಲ್ದಾರ್ ಬಲದೇವ್ ಸಿಂಗ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ ಮತ್ತು ಭಾರತಕ್ಕೆ ಸಿಂಗ್ ಅವರ ಅನನ್ಯ ಸೇವೆಯನ್ನು ಮುಂದಿನ ವರ್ಷಗಳಲ್ಲಿ ಸ್ಮರಿಸಲಾಗುವುದು ಎಂದು ಹೇಳಿದ್ದಾರೆ. ಸಿಂಗ್ ಅವರು ಶೌರ್ಯ ಮತ್ತು ಧೈರ್ಯದ ನಿಜವಾದ ಪ್ರತಿರೂಪವಾಗಿದ್ದು, ರಾಷ್ಟ್ರಕ್ಕೆ ಅವರ ಅಚಲವಾದ ಸಮರ್ಪಣೆ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡಲಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.