ಭಾರತ ಇಂಧನ ಸಪ್ತಾಹ-2026 ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ವಿಡಿಯೋ ಕಾನ್ಫರೆನ್ಸಿಂಗ್ ಭಾಷಣ

January 27th, 10:15 am

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೆ, ಗೋವಾ ಮುಖ್ಯಮಂತ್ರಿಗಳೆ, ಇತರೆ ಸಚಿವರೆ, ರಾಯಭಾರಿಗಳೆ, ಸಿಇಒಗಳೆ, ಗಣ್ಯ ಅತಿಥಿಗಳೆ, ಇತರ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ!

ʻಭಾರತ ಇಂಧನ ಸಪ್ತಾಹ-2026ʼರ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಪ್ರಧಾನಮಂತ್ರಿ

January 27th, 10:08 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಭಾರತ ಇಂಧನ ಸಪ್ತಾಹ-2026ʼರ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದರು. ಈ ಸಂದರ್ಭದಲ್ಲಿ ಮಾತು ಆರಂಭಿಸಿದ ಶ್ರೀ ಮೋದಿಯವರು, ಇಂಧನ ಸಪ್ತಾಹದ ಈ ಹೊಸ ಆವೃತ್ತಿಗಾಗಿ ಸುಮಾರು 125 ದೇಶಗಳ ಪ್ರತಿನಿಧಿಗಳು ಗೋವಾದಲ್ಲಿ ಸೇರಿದ್ದಾರೆ ಎಂದು ಹೇಳಿದರು. ಇಂಧನ-ಸುರಕ್ಷಿತ ಮತ್ತು ಸುಸ್ಥಿರ ಭವಿಷ್ಯದ ಬಗ್ಗೆ ಚರ್ಚಿಸಲು ಅವರು ಭಾರತಕ್ಕೆ ಬಂದಿದ್ದಾರೆ ಎಂದು ಅವರು ಒತ್ತಿ ಹೇಳಿದ ಪ್ರಧಾನಮಂತ್ರಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನು ಸ್ವಾಗತಿಸಿದರು.

ವಿಶಾಖ ಸಂಸ್ಕರಣಾಗಾರದಲ್ಲಿ ಮೇಲ್ದರ್ಜೆ ಸೌಲಭ್ಯದ ಕಾರ್ಯಾರಂಭಕ್ಕೆ ಪ್ರಧಾನಮಂತ್ರಿ ಶ್ಲಾಘಿಸಿದ್ದಾರೆ

January 06th, 08:50 am

ಆಂಧ್ರಪ್ರದೇಶದ ವಿಶಾಖ ಸಂಸ್ಕರಣಾಗಾರದಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ (HPCL) ಮೇಲ್ದರ್ಜೆ ಸೌಲಭ್ಯ (RUF) ಯಶಸ್ವಿಯಾಗಿ ಕಾರ್ಯಾರಂಭ ಮಾಡಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ, ಇದು ಇಂಧನ ಭದ್ರತೆ ಮತ್ತು ಸ್ವಾವಲಂಬನೆಯತ್ತ ಭಾರತದ ಪಯಣದಲ್ಲಿ ನಿರ್ಣಾಯಕ ಹೆಜ್ಜೆ ಎಂದು ಬಣ್ಣಿಸಿದ್ದಾರೆ.

ಕುರುಕ್ಷೇತ್ರದಲ್ಲಿ ಶ್ರೀ ಗುರು ತೇಜ್ ಬಹದ್ದೂರ್ ಅವರ 350ನೇ ಶಹೀದಿ ದಿವಸ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

November 25th, 04:40 pm

ಹರಿಯಾಣ ರಾಜ್ಯಪಾಲರಾದ ಆಶಿಮ್ ಘೋಷ್ ಜಿ, ಜನಪ್ರಿಯ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಮನೋಹರ್ ಲಾಲ್ ಜಿ, ರಾವ್ ಇಂದರ್ಜಿತ್ ಸಿಂಗ್ ಜಿ, ಕೃಷನ್ ಪಾಲ್ ಜಿ, ಹರಿಯಾಣ ಎಸ್‌ಜಿಪಿಸಿ ಅಧ್ಯಕ್ಷ ಜಗದೀಶ್ ಸಿಂಗ್ ಜಿಂದಾ ಜಿ, ಇತರೆ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ!

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹರಿಯಾಣದ ಕುರುಕ್ಷೇತ್ರದಲ್ಲಿ ಶ್ರೀ ಗುರು ತೇಜ್ ಬಹದ್ದೂರ್ ಅವರ 350ನೇ ಹುತಾತ್ಮ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು

November 25th, 04:38 pm

ಹರಿಯಾಣದ ಕುರುಕ್ಷೇತ್ರದಲ್ಲಿ ಇಂದು ನಡೆದ ಶ್ರೀ ಗುರು ತೇಜ್ ಬಹದ್ದೂರ್ ಅವರ 350ನೇ ಹುತಾತ್ಮ ದಿನಾಚರಣೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಇಂದು ಭಾರತದ ಪರಂಪರೆಯ ಮಹತ್ವದ ಸಂಗಮವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ತಾವು ಬೆಳಿಗ್ಗೆ ರಾಮಾಯಣ ನಗರವಾದ ಅಯೋಧ್ಯೆಯಲ್ಲಿ ಮತ್ತು ಈಗ ಗೀತಾ ನಗರವಾದ ಕುರುಕ್ಷೇತ್ರದಲ್ಲಿರುವುದಾಗಿ ಅವರು ಉಲ್ಲೇಖಿಸಿದರು. ಶ್ರೀ ಗುರು ತೇಜ್ ಬಹದ್ದೂರ್ ಅವರ 350 ನೇ ಹುತಾತ್ಮ ದಿನಾಚರಣೆಯ ಸಂದರ್ಭದಲ್ಲಿ ಎಲ್ಲರೂ ಅವರಿಗೆ ಗೌರವ ಸಲ್ಲಿಸುತ್ತಿದ್ದಾರೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಸಂತರು ಮತ್ತು ಗಣ್ಯರ ಉಪಸ್ಥಿತಿಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು ಮತ್ತು ಎಲ್ಲರಿಗೂ ಗೌರವದಿಂದ ನಮಸ್ಕರಿಸಿದರು.

ಗುರು ಚರಣ ಯಾತ್ರೆಯಲ್ಲಿ ಪಾಲ್ಗೊಂಡು ಪವಿತ್ರ ‘ಜೋರೆ ಸಾಹಿಬ್’ ದರ್ಶನ ಪಡೆಯುವಂತೆ ಪ್ರಧಾನಮಂತ್ರಿ ಮನವಿ

October 22nd, 06:41 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುರು ಚರಣ ಯಾತ್ರೆಯ ಅಂಗವಾಗಿ ಶುಭಾಶಯ ಕೋರಿದ್ದಾರೆ. ಶ್ರೀ ಗುರು ಗೋವಿಂದ ಸಿಂಗ್ ಮತ್ತು ಮಾತಾ ಸಾಹಿಬ್ ಕೌರ್ ಅವರ ಕಾಲಾತೀತ ಬೋಧನೆಗಳು ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಯಾತ್ರೆ ಮುನ್ನಡೆಸಲಿದೆ ಎಂದು ಮೋದಿ ಅವರು ಹೇಳಿದ್ದಾರೆ.

ಉಜ್ವಲ ಕುಟುಂಬಕ್ಕೆ ಸೇರ್ಪಡೆಗೊಂಡ ಎಲ್ಲಾ ತಾಯಂದಿರು ಮತ್ತು ಸಹೋದರಿಯರಿಗೆ ಪ್ರಧಾನಮಂತ್ರಿ ಅವರಿಂದ ಅಭಿನಂದನೆ

September 22nd, 03:46 pm

ಉಜ್ವಲ ಕುಟುಂಬಕ್ಕೆ ಸೇರ್ಪಡೆಗೊಳ್ಳುತ್ತಿರುವ ಎಲ್ಲಾ ತಾಯಂದಿರು ಮತ್ತು ಸಹೋದರಿಯರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಭಿನಂದಿಸಿದ್ದಾರೆ. ನಮ್ಮ ಈ ಹೆಜ್ಜೆಯ ಮೂಲಕ, ಈ ಪವಿತ್ರ ಹಬ್ಬದಂದು ಅವರು ಹೊಸ ಸಂತೋಷವನ್ನು ಅನುಭವಿಸುವುದಲ್ಲದೆ, ಮಹಿಳಾ ಸಬಲೀಕರಣಕ್ಕಾಗಿ ನಮ್ಮ ಬದ್ಧತೆಗಳನ್ನು ಮತ್ತಷ್ಟು ಬಲಗೊಳಿಸಿದ್ದಾರೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ.