ಭಕ್ತರಿಗೆ ಉತ್ತಮ ತೀರ್ಥಯಾತ್ರೆ ಅನುಭವಗಳನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ: ಪ್ರಧಾನಮಂತ್ರಿ
January 13th, 06:17 pm
ಸೌದಿ ಅರೇಬಿಯಾ ಸಾಮ್ರಾಜ್ಯದ ಹಜ್ ಖಾತೆ ಸಚಿವರಾದ ಮತ್ತು ಉಮ್ರಾಹ್ ಗೌರವಾನ್ವಿತ ತೌಫಿಕ್ ಬಿನ್ ಫೌಜಾನ್ ಅಲ್-ರಬಿಯಾ ಅವರೊಂದಿಗೆ ಸಹಿ ಹಾಕಲಾದ ಹಜ್ ಒಪ್ಪಂದ 2025 ನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಈ ಒಪ್ಪಂದವು ಭಾರತದ ಹಜ್ ಯಾತ್ರಿಕರಿಗೆ ಸಂತಸದ ಸುದ್ದಿಯಾಗಿದೆ ಎಂದು ಹೇಳಿದರು. ಭಕ್ತರಿಗೆ ಉತ್ತಮ ಸೌಕರ್ಯ ಹೊಂದಿರುವ ತೀರ್ಥಯಾತ್ರೆ ಅನುಭವಗಳನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.