ದೇಶಭಕ್ತಿ ಗೀತೆಯಾಗಿ ವಂದೇ ಮಾತರಂ ಅಳವಡಿಸಿಕೊಂಡು 150 ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಲೋಕಸಭೆಯಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣ

December 08th, 12:30 pm

ಈ ಮಹತ್ವದ ಸಂದರ್ಭದಲ್ಲಿ ಸಾಮೂಹಿಕ ಚರ್ಚೆಯ ಮಾರ್ಗವನ್ನು ಆಯ್ಕೆ ಮಾಡಿದ್ದಕ್ಕಾಗಿ ನಿಮಗೆ ಮತ್ತು ಈ ಸದನದ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ. ರಾಷ್ಟ್ರದ ಸ್ವಾತಂತ್ರ್ಯ ಚಳುವಳಿಗೆ ಶಕ್ತಿ, ಸ್ಫೂರ್ತಿ, ತ್ಯಾಗ ಮತ್ತು ಕಾಠಿನ್ಯದ ಮನೋಭಾವ ತುಂಬಿದ ಆ ಮಂತ್ರ, ಆ ಸ್ಪಷ್ಟ ಕರೆಯನ್ನು ಗೌರವದಿಂದ ನೆನಪಿಸಿಕೊಳ್ಳುವುದು, ಈ ಸದನದೊಳಗೆ ವಂದೇ ಮಾತರಂ(ಇದನ್ನು ದೇಶಭಕ್ತಿ ಗೀತೆಯಾಗಿ ಅಳವಡಿಸಿಕೊಂಡು 150 ವರ್ಷಗಳು ಸಂದಿವೆ, ಕವಿ ರವೀಂದ್ರನಾಥ್ ಠ್ಯಾಗೋರ್ ಅವರ ಜನ ಗಣ ಮನ ಅಧಿನಾಯಕ ಜಯ ಹೇ – ಹಾಗೂ ಬಂಕಿಮ್ ಚಂದ್ರ ಚಟರ್ಜಿ ಅವರ ವಂದೇ ಮಾತರಂಗೆ 1950 ಜನವರಿ 24ರಂದು ರಾಷ್ಟ್ರಗೀತೆಯ ಸ್ಥಾನಮಾನ ನೀಡಲಾಗಿದೆ) ಅನ್ನು ಸ್ಮರಿಸುವುದು ನಮಗೆಲ್ಲರಿಗೂ ಸೌಭಾಗ್ಯದ ವಿಷಯವಾಗಿದೆ. ವಂದೇ ಮಾತರಂ ಅನ್ನು ದೇಶಭಕ್ತಿ ಗೀತೆಯಾಗಿ ಅಳವಡಿಸಿಕೊಂಡು 150 ವರ್ಷಗಳನ್ನು ಗುರುತಿಸುವ ಐತಿಹಾಸಿಕ ಸಂದರ್ಭಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ ಎಂಬುದು ಬಹಳ ಹೆಮ್ಮೆಯ ವಿಷಯ. ಈ ಅವಧಿಯು ಇತಿಹಾಸ ಪುಟದ ಅಸಂಖ್ಯಾತ ಘಟನೆಗಳನ್ನು ನಮ್ಮ ಮುಂದೆ ತರುತ್ತದೆ. ಈ ಚರ್ಚೆಯು ಖಂಡಿತವಾಗಿಯೂ ಈ ಸದನದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಆದರೆ ನಾವು ಈ ಕ್ಷಣವನ್ನು ಸಾಮೂಹಿಕವಾಗಿ ಬಳಸಿಕೊಂಡರೆ, ಅದು ಮುಂದಿನ ಪೀಳಿಗೆಗೆ, ಪ್ರತಿ ಪೀಳಿಗೆಗೂ ಸತತ ಕಲಿಕೆಯ ಮೂಲವಾಗಿಯೂ ಕಾರ್ಯ ನಿರ್ವಹಿಸಬಹುದು.

ಲೋಕಸಭೆಯಲ್ಲಿ ನಡೆದ ರಾಷ್ಟ್ರೀಯ ಗೀತೆ ವಂದೇ ಮಾತರಂನ 150 ವರ್ಷಗಳ ವಿಶೇಷ ಚರ್ಚೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು

December 08th, 12:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲೋಕಸಭೆಯಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ವಿಶೇಷ ಚರ್ಚೆಯಲ್ಲಿ ಮಾತನಾಡಿದರು. ಈ ಮಹತ್ವದ ಸಂದರ್ಭದಲ್ಲಿ ಸಾಮೂಹಿಕ ಚರ್ಚೆಯ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಸದನದ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಪ್ರಧಾನಮಂತ್ರಿಯವರು ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ರಾಷ್ಟ್ರದ ಸ್ವಾತಂತ್ರ್ಯ ಚಳವಳಿಗೆ ಶಕ್ತಿ ತುಂಬಿದ ಮತ್ತು ಸ್ಫೂರ್ತಿ ನೀಡಿದ, ತ್ಯಾಗ ಮತ್ತು ತಪಸ್ಸಿನ ಮಾರ್ಗವನ್ನು ತೋರಿಸಿದ ವಂದೇ ಮಾತರಂ ಎಂಬ ಮಂತ್ರ ಮತ್ತು ಘೋಷವಾಕ್ಯವನ್ನು ನೆನಪಿಸಿಕೊಳ್ಳಲಾಗುತ್ತಿದೆ ಮತ್ತು ಇದು ಸದನದಲ್ಲಿರುವ ಎಲ್ಲರಿಗೂ ಒಂದು ದೊಡ್ಡ ಸೌಭಾಗ್ಯ ಎಂದು ಅವರು ಹೇಳಿದರು. ವಂದೇ ಮಾತರಂನ 150 ವರ್ಷಗಳ ಐತಿಹಾಸಿಕ ಸಂದರ್ಭಕ್ಕೆ ದೇಶ ಸಾಕ್ಷಿಯಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಶ್ರೀ ಮೋದಿ ಹೇಳಿದರು. ಈ ಅವಧಿಯು ಇತಿಹಾಸದ ಅಸಂಖ್ಯಾತ ಘಟನೆಗಳನ್ನು ನಮ್ಮ ಮುಂದೆ ತರುತ್ತದೆ ಎಂದು ಅವರು ಹೇಳಿದರು. ಈ ಚರ್ಚೆಯು ಸದನದ ಬದ್ಧತೆಯನ್ನು ಪ್ರತಿಬಿಂಬಿಸುವುದಲ್ಲದೆ, ಎಲ್ಲರೂ ಸಾಮೂಹಿಕವಾಗಿ ಇದನ್ನು ಸದುಪಯೋಗಪಡಿಸಿಕೊಂಡರೆ ಭವಿಷ್ಯದ ಪೀಳಿಗೆಗೆ ಶಿಕ್ಷಣದ ಮೂಲವೂ ಆಗುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಕುರುಕ್ಷೇತ್ರದಲ್ಲಿ ಶ್ರೀ ಗುರು ತೇಜ್ ಬಹದ್ದೂರ್ ಅವರ 350ನೇ ಶಹೀದಿ ದಿವಸ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

November 25th, 04:40 pm

ಹರಿಯಾಣ ರಾಜ್ಯಪಾಲರಾದ ಆಶಿಮ್ ಘೋಷ್ ಜಿ, ಜನಪ್ರಿಯ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಮನೋಹರ್ ಲಾಲ್ ಜಿ, ರಾವ್ ಇಂದರ್ಜಿತ್ ಸಿಂಗ್ ಜಿ, ಕೃಷನ್ ಪಾಲ್ ಜಿ, ಹರಿಯಾಣ ಎಸ್‌ಜಿಪಿಸಿ ಅಧ್ಯಕ್ಷ ಜಗದೀಶ್ ಸಿಂಗ್ ಜಿಂದಾ ಜಿ, ಇತರೆ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ!

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹರಿಯಾಣದ ಕುರುಕ್ಷೇತ್ರದಲ್ಲಿ ಶ್ರೀ ಗುರು ತೇಜ್ ಬಹದ್ದೂರ್ ಅವರ 350ನೇ ಹುತಾತ್ಮ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು

November 25th, 04:38 pm

ಹರಿಯಾಣದ ಕುರುಕ್ಷೇತ್ರದಲ್ಲಿ ಇಂದು ನಡೆದ ಶ್ರೀ ಗುರು ತೇಜ್ ಬಹದ್ದೂರ್ ಅವರ 350ನೇ ಹುತಾತ್ಮ ದಿನಾಚರಣೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಇಂದು ಭಾರತದ ಪರಂಪರೆಯ ಮಹತ್ವದ ಸಂಗಮವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ತಾವು ಬೆಳಿಗ್ಗೆ ರಾಮಾಯಣ ನಗರವಾದ ಅಯೋಧ್ಯೆಯಲ್ಲಿ ಮತ್ತು ಈಗ ಗೀತಾ ನಗರವಾದ ಕುರುಕ್ಷೇತ್ರದಲ್ಲಿರುವುದಾಗಿ ಅವರು ಉಲ್ಲೇಖಿಸಿದರು. ಶ್ರೀ ಗುರು ತೇಜ್ ಬಹದ್ದೂರ್ ಅವರ 350 ನೇ ಹುತಾತ್ಮ ದಿನಾಚರಣೆಯ ಸಂದರ್ಭದಲ್ಲಿ ಎಲ್ಲರೂ ಅವರಿಗೆ ಗೌರವ ಸಲ್ಲಿಸುತ್ತಿದ್ದಾರೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಸಂತರು ಮತ್ತು ಗಣ್ಯರ ಉಪಸ್ಥಿತಿಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು ಮತ್ತು ಎಲ್ಲರಿಗೂ ಗೌರವದಿಂದ ನಮಸ್ಕರಿಸಿದರು.

ಶ್ರೀ ಗುರು ತೇಜ್ ಬಹದ್ದೂರ್ ಅವರ 350ನೇ ಶಹೀದಿ ದಿನದಂದು ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

November 25th, 09:56 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಗುರು ತೇಜ್ ಬಹದ್ದೂರ್ ಅವರ 350ನೇ ಶಹೀದಿ ದಿನದಂದು ಅವರ ಸಾಟಿಯಿಲ್ಲದ ಧೈರ್ಯ ಮತ್ತು ಅತ್ಯುನ್ನತ ತ್ಯಾಗಕ್ಕೆ ಗೌರವ ನಮನ ಸಲ್ಲಿಸಿದರು.

ಮಂಗಳಕರವಾದ ಪರ್ಕಾಶ್ ಪುರಬ್‌ ನ ಸುಸಂದರ್ಭದಲ್ಲಿ ಶ್ರೀ ಗುರು ತೇಗ್ ಬಹದ್ದೂರ್ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

April 18th, 12:26 pm

ಪ್ರಧಾನಮಂತ್ರಿಯವರು ಇಂದು ಮಂಗಳಕರವಾದ ಪ್ರಕಾಶ್ ಪುರಬ್ ಸಂದರ್ಭದಲ್ಲಿ ಶ್ರೀ ಗುರು ತೇಗ್ ಬಹದ್ದೂರ್ ಅವರಿಗೆ ಗೌರವ ನಮನ ಸಲ್ಲಿಸಿದರು. ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಅಚಲವಾಗಿ ನಿರತರಾಗಿದ್ದ ಶ್ರೀ ಗುರು ತೇಗ್ ಬಹದ್ದೂರ್ ಅವರ ಜೀವನವು ಧೈರ್ಯ ಮತ್ತು ಸಹಾನುಭೂತಿಯ ಸೇವೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಶ್ರೀ ಗುರು ತೇಜ್ ಬಹದ್ದೂರ್ ಅವರ ಹುತಾತ್ಮ ದಿನದಂದು ಅವರಿಗೆ ನಮನ ಸಲ್ಲಿಸಿದ ಪ್ರಧಾನಮಂತ್ರಿ

December 06th, 08:07 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶ್ರೀ ಗುರು ತೇಜ್ ಬಹದ್ದೂರ್ ಅವರ ಹುತಾತ್ಮ ದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ನ್ಯಾಯ, ಸಮಾನತೆ ಮತ್ತು ಮಾನವೀಯತೆಯ ರಕ್ಷಣೆಯ ಮೌಲ್ಯಗಳಿಗಾಗಿ ಶ್ರೀ ಗುರು ತೇಜ್ ಬಹದ್ದೂರ್ ಜೀ ಅವರ ಸಾಟಿಯಿಲ್ಲದ ಧೈರ್ಯ ಮತ್ತು ತ್ಯಾಗವನ್ನು ಸ್ಮರಿಸಿದರು.

ದಲಿತರು ಮತ್ತು ಒಬಿಸಿಯ ನಿಜವಾದ ಸಾಮಾಜಿಕ ಸಬಲೀಕರಣಕ್ಕೆ ಬಿಜೆಪಿ ಒತ್ತು ನೀಡುತ್ತಿದೆ: ಪಂಜಾಬ್‌ನ ಪಟಿಯಾಲದಲ್ಲಿ ಪ್ರಧಾನಿ ಮೋದಿ

May 23rd, 05:00 pm

2024 ರಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಪಂಜಾಬ್‌ನ ಪಟಿಯಾಲ ಜನತೆಯ ಭಾವೋದ್ರಿಕ್ತ ಸ್ವಾಗತದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಬಲ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. 'ಗುರು ತೇಜ್ ಬಹದ್ದೂರ್' ಅವರ ಭೂಮಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು, ಐದು ಹಂತದ ಮತದಾನದ ನಂತರ, ಭಾರತದ ಜನರ ಸಂದೇಶವು 'ಫಿರ್ ಏಕ್ ಬಾರ್, ಮೋದಿ ಸರ್ಕಾರ್' ಎಂದು ಪ್ರತಿಧ್ವನಿಸುತ್ತದೆ ಎಂದು ಹೇಳಿದರು. ‘ವಿಕಸಿತ್ ಭಾರತ’ವನ್ನು ಖಚಿತಪಡಿಸಿಕೊಳ್ಳಲು ಬಿಜೆಪಿಗೆ ಮತ ನೀಡುವಂತೆ ಅವರು ಪಂಜಾಬ್‌ಗೆ ಒತ್ತಾಯಿಸಿದರು.

ಪಂಜಾಬ್‌ನಲ್ಲಿ ಪ್ರಬಲ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ಮೋದಿಯವರಿಗೆ ಪಟಿಯಾಲದಲ್ಲಿ ಭಾವಪೂರ್ಣ ಸ್ವಾಗತ

May 23rd, 04:30 pm

2024 ರಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಪಂಜಾಬ್‌ನ ಪಟಿಯಾಲ ಜನತೆಯ ಭಾವೋದ್ರಿಕ್ತ ಸ್ವಾಗತದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಬಲ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. 'ಗುರು ತೇಜ್ ಬಹದ್ದೂರ್' ಅವರ ಭೂಮಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು, ಐದು ಹಂತದ ಮತದಾನದ ನಂತರ, ಭಾರತದ ಜನರ ಸಂದೇಶವು 'ಫಿರ್ ಏಕ್ ಬಾರ್, ಮೋದಿ ಸರ್ಕಾರ್' ಎಂದು ಪ್ರತಿಧ್ವನಿಸುತ್ತದೆ ಎಂದು ಹೇಳಿದರು. ‘ವಿಕಸಿತ್ ಭಾರತ’ವನ್ನು ಖಚಿತಪಡಿಸಿಕೊಳ್ಳಲು ಬಿಜೆಪಿಗೆ ಮತ ನೀಡುವಂತೆ ಅವರು ಪಂಜಾಬ್‌ಗೆ ಒತ್ತಾಯಿಸಿದರು.

ಶ್ರೀ ಗುರು ತೇಗ್ ಬಹದ್ದೂರ್ ಜಿ ಅವರ ಹುತಾತ್ಮ ದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

December 17th, 01:24 pm

ಶ್ರೀ ಗುರು ತೇಗ್ ಬಹದ್ದೂರ್ ಜಿ ಅವರ ಹುತಾತ್ಮ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅವರಿಗೆ ಗೌರವ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ಮತ್ತು ಮಾನವ ಘನತೆಗಾಗಿ ಶ್ರೀ ಗುರು ತೇಗ್ ಬಹದ್ದೂರ್ ಜಿಯವರ ಅಪ್ರತಿಮ ತ್ಯಾಗವು ಕಾಲಾಂತರದಲ್ಲೂ ಪ್ರತಿಧ್ವನಿಸುತ್ತದೆ, ಅವರ ಮಾನವೀಯತೆಯು ಸಮಗ್ರತೆ ಮತ್ತು ಸಹಾನುಭೂತಿಯಿಂದ ಬದುಕಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಶ್ರೀ ಗುರು ತೇಗ್ ಬಹಾದೂರ್ ಜೀ ಅವರ ಹುತಾತ್ಮ ದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

November 28th, 12:27 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀ ಗುರು ತೇಗ್ ಬಹಾದೂರ್ ಜೀ ಅವರ ಹುತಾತ್ಮ ದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ನವದೆಹಲಿಯ ತಮ್ಮ ನಿವಾಸದಲ್ಲಿ ಸಿಖ್ ನಿಯೋಗದ ಆತಿಥ್ಯ ಕುರಿತು ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

April 29th, 05:31 pm

ಎನ್ಐಡಿ ಫೌಂಡೇಶನ್ ನ ಮುಖ್ಯ ಪೋಷಕ ಮತ್ತು ಚಂಡೀಗಢ ವಿಶ್ವವಿದ್ಯಾಲಯದ ಚಾನ್ಸಲರ್ (ಕುಲಪತಿ) ಮತ್ತು ನನ್ನ ಸ್ನೇಹಿತ ಶ್ರೀ ಸತ್ನಾಮ್ ಸಿಂಗ್ ಸಂಧುಜಿ, ಎನ್ಐಡಿ ಫೌಂಡೇಶನ್ ನ ಎಲ್ಲಾ ಸದಸ್ಯರು ಮತ್ತು ಎಲ್ಲಾ ಗೌರವಾನ್ವಿತ ಸಹೋದ್ಯೋಗಿಗಳೇ! ನಿಮ್ಮಲ್ಲಿ ಕೆಲವರನ್ನು ತಿಳಿದುಕೊಳ್ಳಲು ಮತ್ತು ನಿಮ್ಮನ್ನು ಆಗಾಗ್ಗೆ ಭೇಟಿಯಾಗುತ್ತಿರುವುದು ನನಗೆ ಸಿಕ್ಕ ಸುಯೋಗವಾಗಿದೆ. ಗುರುದ್ವಾರಗಳಿಗೆ ಹೋಗುವುದು, ಸೇವೆಗೆ ಕೊಡುಗೆ ನೀಡುವುದು, 'ಲಂಗರ್ (ಪ್ರಸಾದ)' ಅನ್ನು ಆನಂದಿಸುವುದು ಮತ್ತು ಸಿಖ್ ಕುಟುಂಬಗಳ ಮನೆಗಳಲ್ಲಿ ಉಳಿಯುವುದು ನನ್ನ ಜೀವನದ ಅತ್ಯಂತ ಸ್ವಾಭಾವಿಕ ಭಾಗವಾಗಿದೆ. ಸಿಖ್ ಸಂತರು ಸಹ ಕಾಲಕಾಲಕ್ಕೆ ಪ್ರಧಾನಿ ನಿವಾಸಕ್ಕೆ ಬರುತ್ತಾರೆ. ನಾನು ಆಗಾಗ್ಗೆ ಅವರ ಒಡನಾಟದ ಅದೃಷ್ಟವನ್ನು ಪಡೆಯುತ್ತಲೇ ಇದ್ದೇನೆ.

Prime Minister Narendra Modi interacts with Sikh delegation at his residence

April 29th, 05:30 pm

PM Modi hosted a Sikh delegation at 7 Lok Kalyan Marg. Bowing to the great contribution and sacrifices of the Gurus, the PM recalled how Guru Nanak Dev ji awakened the consciousness of the entire nation and brought the nation out of darkness and took it on the path of light.

ನವ ಪಂಜಾಬ್'ನಲ್ಲಿ ಭ್ರಷ್ಟಾಚಾರಕ್ಕೆ ಜಾಗವಿಲ್ಲ, ಕಾನೂನು ಮತ್ತು ಸುವ್ಯವಸ್ಥೆ ಮೇಲುಗೈ ಸಾಧಿಸುತ್ತದೆ: ಪ್ರಧಾನಿ ಮೋದಿ

February 15th, 11:46 am

ಪಂಜಾಬ್‌ನ ಜಲಂಧರ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಅವರು ಹೇಳಿದರು, “ಪಂಜಾಬ್ ನನಗೆ ಬೆಂಬಲ ನೀಡಿದೆ, ನನಗೆ ಸಾಕಷ್ಟು ನೀಡಿದೆ. ನಾನು ಈ ಸ್ಥಳಕ್ಕೆ ಯಾವಾಗಲೂ ಋಣಿಯಾಗಿರುತ್ತೇನೆ; ಹಾಗಾಗಿ ರಾಜ್ಯದ ಉನ್ನತಿಗೆ ಸದಾ ಶ್ರಮಿಸುತ್ತೇನೆ. ಪಂಜಾಬ್‌ನಲ್ಲಿ ಎನ್‌ಡಿಎ ಸರ್ಕಾರ ರಚಿಸುವುದು ಖಚಿತ. ನವಾ ಪಂಜಾಬ್, ಭಾಜಪ ದೇ ನಾಲ್.”

ಪಂಜಾಬ್‌ನ ಜಲಂಧರ್‌ನಲ್ಲಿ ಪ್ರಧಾನಿ ಮೋದಿ ಪ್ರಚಾರ

February 14th, 04:37 pm

ಪಂಜಾಬ್‌ನ ಜಲಂಧರ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಅವರು ಹೇಳಿದರು, “ಪಂಜಾಬ್ ನನಗೆ ಬೆಂಬಲ ನೀಡಿದೆ, ನನಗೆ ಸಾಕಷ್ಟು ನೀಡಿದೆ. ನಾನು ಈ ಸ್ಥಳಕ್ಕೆ ಯಾವಾಗಲೂ ಋಣಿಯಾಗಿರುತ್ತೇನೆ; ಹಾಗಾಗಿ ರಾಜ್ಯದ ಉನ್ನತಿಗೆ ಸದಾ ಶ್ರಮಿಸುತ್ತೇನೆ. ಪಂಜಾಬ್‌ನಲ್ಲಿ ಎನ್‌ಡಿಎ ಸರ್ಕಾರ ರಚಿಸುವುದು ಖಚಿತ. ನವಾ ಪಂಜಾಬ್, ಭಾಜಪ ದೇ ನಾಲ್.”

Today, the mantra of the country is – Ek Bharat, Shreshtha Bharat: PM Modi

December 25th, 03:05 pm

Addressing Gurpurab celebrations of Guru Nanak Dev Ji at Gurudwara Lakhpat Sahib in Gujarat via video conferencing, PM Modi said that efforts were being made at every level for the message of Guru Nanak Dev Ji to reach the whole world. The countrymen had been wishing for easy access to Kartarpur Sahib. In 2019, our government completed the work of the Kartarpur Corridor, he added.

PM addresses Gurpurab celebrations of Guru Nanak Dev Ji at Gurudwara Lakhpat Sahib, Gujarat

December 25th, 12:09 pm

Addressing Gurpurab celebrations of Guru Nanak Dev Ji at Gurudwara Lakhpat Sahib in Gujarat via video conferencing, PM Modi said that efforts were being made at every level for the message of Guru Nanak Dev Ji to reach the whole world. The countrymen had been wishing for easy access to Kartarpur Sahib. In 2019, our government completed the work of the Kartarpur Corridor, he added.

ಗುರು ತೇಜ್ ಬಹದ್ದೂರ್ ಜಿ ಅವರ ಹುತಾತ್ಮರಾದ ದಿನದಂದು ಅವರಿಗೆ ನಮನ ಸಲ್ಲಿಸಿದ ಪ್ರಧಾನಿ

December 08th, 01:52 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುರು ತೇಜ್ ಬಹದ್ದೂರ್ ಜಿ ಅವರ ಹುತಾತ್ಮರಾದ ದಿನವಾದ ಇಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ತೇಜ್ ಬಹದ್ದೂರ್ ಜಿ ಅವರ 400ನೇ ಪ್ರಕಾಶ್ ಪುರಬ್ ಅಂಗವಾಗಿ ನಮನ ಸಲ್ಲಿಸಿದ ಪ್ರಧಾನಿ

May 01st, 09:14 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತೇಜ್ ಬಹದ್ದೂರ್ ಜಿ ಅವರ 400ನೇ ಪ್ರಕಾಶ್ ಪುರಬ್ ಅಂಗವಾಗಿ ಅವರಿಗೆ ನಮನ ಸಲ್ಲಿಸಿದರು.

ಶ್ರೀ ಗುರು ತೇಘ್ ಬಹದೂರ್ ಜೀ ಅವರ 400ನೇ ಜಯಂತಿ ಆಚರಣೆ(ಪ್ರಕಾಶ್ ಪೂರಬ್) – ನಾಳೆ ಪ್ರಧಾನ ಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತ ಸಮಿತಿ ಸಭೆ

April 07th, 11:07 am

ಶ್ರೀ ಗುರು ತೇಘ್ ಬಹದೂರ್ ಜೀ ಅವರ 400ನೇ ಜಯಂತಿ(ಪ್ರಕಾಶ್ ಪೂರಬ್) ಆಚರಣೆ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಉನ್ನತ ಮಟ್ಟದ ಸಮಿತಿಯ ವೀಡಿಯೊ ಕಾನ್ಫರೆನ್ಸಿಂಗ್ ಸಭೆ ಆಯೋಜಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶ್ಹಾ ಅವರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಗುರು ತೇಘ್ ಬಹದೂರ್ ಜೀ ಅವರ 400ನೇ ಜಯಂತಿಯನ್ನು ವರ್ಷಪೂರ್ತಿ ಆಚರಿಸಲು ಯೋಜಿಸಲಾಗಿದ್ದು, ಈ ವಿಶೇಷ ಸಂದರ್ಭಕ್ಕೆ ರೂಪಿಸಬೇಕಾದ ಸರಣಿ ವೈವಿಧ್ಯಮಯ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.