2030 ರ ಕಡೆಗೆ: ಜಂಟಿ ಭಾರತ-ಇಯು ಸಮಗ್ರ ಕಾರ್ಯತಂತ್ರದ ಕಾರ್ಯಸೂಚಿ
January 27th, 06:48 pm
ಜಂಟಿ ಭಾರತ-ಇಯು ಸಮಗ್ರ ಕಾರ್ಯತಂತ್ರದ ಕಾರ್ಯಸೂಚಿಯು, ಜನವರಿ 27, 2026 ರಂದು ನವದೆಹಲಿಯಲ್ಲಿ ನಡೆದ 16 ನೇ ಭಾರತ-ಇಯು ಶೃಂಗಸಭೆಯಲ್ಲಿ ಅನುಮೋದಿಸಲ್ಪಟ್ಟಿದೆ, ಎರಡೂ ಪಾಲುದಾರರಿಗೆ ಮತ್ತು ವಿಶಾಲ ಪ್ರಪಂಚಕ್ಕೆ ಪರಸ್ಪರ ಪ್ರಯೋಜನಕಾರಿ, ಕಾಂಕ್ರೀಟ್ ಮತ್ತು ಪರಿವರ್ತಕ ಫಲಿತಾಂಶಗಳನ್ನು ನೀಡಲು ಇಯು -ಭಾರತ ಸಹಕಾರವನ್ನು ವಿಸ್ತರಿಸುವ, ಆಳಗೊಳಿಸುವ ಮತ್ತು ಉತ್ತಮವಾಗಿ ಸಂಯೋಜಿಸುವ ಮೂಲಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ.ಭಾರತ - ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರು ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷರು ಭಾರತಕ್ಕೆ ನೀಡಿದ ಅಧಿಕೃತ ಭೇಟಿ ಮತ್ತು 16 ನೇ ಭಾರತ-ಇಯು ಶೃಂಗಸಭೆಯ ಕುರಿತು ಇಯು ಜಂಟಿ ಹೇಳಿಕೆ
January 27th, 06:15 pm
ಪ್ರಧಾನಿ ಮೋದಿ ಅವರ ಆಹ್ವಾನದ ಮೇರೆಗೆ, ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಭಾರತದ 77 ನೇ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಭಾರತಕ್ಕೆ ರಾಜ್ಯ ಭೇಟಿ ನೀಡಿದರು. ಭೇಟಿಯ ಸಮಯದಲ್ಲಿ, ನಾಯಕರು ಹೆಗ್ಗುರುತಾದ ಭಾರತ-ಇಯು ಎಫ್‌ಟಿಎ ಕುರಿತು ಮಾತುಕತೆಗಳ ಯಶಸ್ವಿ ಮುಕ್ತಾಯವನ್ನು ಶ್ಲಾಘಿಸಿದರು ಮತ್ತು 2030 ರ ಕಡೆಗೆ: ಭಾರತ-ಇಯು ಜಂಟಿ ಸಮಗ್ರ ಕಾರ್ಯತಂತ್ರದ ಕಾರ್ಯಸೂಚಿಯನ್ನು ಅಳವಡಿಸಿಕೊಂಡರು.ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
January 18th, 03:30 pm
ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಶ್ರೀ ಸಿ.ವಿ.ಆನಂದ ಬೋಸ್ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ಸರ್ಬಾನಂದ ಸೋನೊವಾಲ್ ಜೀ, ಸುಕಾಂತ ಮಜುಂದಾರ್ ಜೀ, ಶಂತನು ಠಾಕೂರ್ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಸೌಮಿಕ್ ಭಟ್ಟಾಚಾರ್ಯ ಜೀ, ಸೌಮಿತ್ರಾ ಖಾನ್ ಜೀ, ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಜೀ, ಇತರ ಪ್ರತಿನಿಧಿಗಳು, ಮಹಿಳೆಯರು ಮತ್ತು ಮಹನೀಯರೇ!ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ₹830 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ, ಶಂಕುಸ್ಥಾಪನೆ ನೆರವೇರಿಸಿದ ಮತ್ತು ಹಸಿರು ನಿಶಾನೆ ತೋರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
January 18th, 03:00 pm
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಸಿಂಗೂರಿನಲ್ಲಿ ಇಂದು ನಡೆದ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ₹830 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಹಾಗೂ ಹಲವು ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿಯವರು, ನಿನ್ನೆ ತಾನು ಮಾಲ್ಡಾದಲ್ಲಿದ್ದೆ ಮತ್ತು ಇಂದು ಹೂಗ್ಲಿಯ ಜನರ ನಡುವೆ ಇರುವ ಭಾಗ್ಯ ನನಗೆ ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು. ವಿಕಸಿತ ಭಾರತಕ್ಕಾಗಿ ಪೂರ್ವ ಭಾರತದ ಅಭಿವೃದ್ಧಿ ಅತ್ಯಗತ್ಯ ಎಂದು ಪ್ರತಿಪಾದಿಸಿದ ಅವರು, ಇದೇ ಗುರಿಯೊಂದಿಗೆ ಕೇಂದ್ರ ಸರ್ಕಾರವು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಒತ್ತಿ ಹೇಳಿದರು. ನಿನ್ನೆಯ ಮತ್ತು ಇಂದಿನ ಕಾರ್ಯಕ್ರಮಗಳು ಈ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಅವರು ತಿಳಿಸಿದರು. ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಸಂಬಂಧಿಸಿದ ನೂರಾರು ಕೋಟಿ ರೂಪಾಯಿಗಳ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡುವ ಮತ್ತು ಉದ್ಘಾಟಿಸುವ ಅವಕಾಶ ಈ ಅವಧಿಯಲ್ಲಿ ತಮಗೆ ದೊರೆತಿದೆ ಎಂದು ಪ್ರಧಾನಮಂತ್ರಿಯವರು ಇದೇ ವೇಳೆ ಉಲ್ಲೇಖಿಸಿದರು.