ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸರ್ವರಿಗೂ ಪ್ರಧಾನಮಂತ್ರಿ ಶುಭಾಶಯ

August 15th, 06:35 am

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹಾರ್ದಿಕ ಶುಭಾಶಯ ಕೋರಿದ್ದಾರೆ. ವಸಾಹತುಶಾಹಿ ಆಳ್ವಿಕೆಯನ್ನು ಕೊನೆಗೊಳಿಸಲು ನಮ್ಮ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರರ ಅಚಲ ಸ್ಥೈರ್ಯ, ದಣಿವರಿಯದ ಹೋರಾಟ ಮತ್ತು ತಾಯ್ನಾಡಿಗೆ ಅವರ ಅನನ್ಯ ಸಮರ್ಪಣೆಯನ್ನು ಈ ರಾಷ್ಟ್ರೀಯ ಉತ್ಸವವು ನೆನಪಿಸುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ

August 08th, 08:53 pm

ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಗೆ ನಿಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳಿ

August 05th, 10:11 am

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 30 ರ ಭಾನುವಾರದಂದು 'ಮನ್ ಕಿ ಬಾತ್' ಅನ್ನು ಹಂಚಿಕೊಳ್ಳಲಿದ್ದಾರೆ. ನಿಮ್ಮಲ್ಲಿ ನವೀನ ವಿಚಾರಗಳು ಮತ್ತು ಸಲಹೆಗಳಿದ್ದರೆ, ಅದನ್ನು ನೇರವಾಗಿ ಪ್ರಧಾನಿಯವರೊಂದಿಗೆ ಹಂಚಿಕೊಳ್ಳಲು ಇಲ್ಲಿ ಒಂದು ಅವಕಾಶವಿದೆ. ಕೆಲವು ಸಲಹೆಗಳನ್ನು ಪ್ರಧಾನಿಯವರು ತಮ್ಮ ಭಾಷಣದ ಸಮಯದಲ್ಲಿ ಉಲ್ಲೇಖಿಸುತ್ತಾರೆ.

Prime Minister expresses grief over loss of lives due to building collapse in Thane

July 31st, 01:08 pm

The Prime Minister, Shri Narendra Modi has expressed deep grief over the loss of lives due to the collapse of a building in Thane, Maharashtra.

Chief Minister of Chhattisgarh meets Prime Minister

July 31st, 01:06 pm

Chief Minister of Chhattisgarh, Shri Vishnu Deo Sai met Prime Minister, Shri Narendra Modi in New Delhi today.

PM chairs CCS Meeting to review the situation in context of ongoing West Asia Conflict

July 30th, 07:38 pm

Prime Minister Shri Narendra Modi today chaired a meeting of the Cabinet Committee on Security (CSS) to review the situation in the context of ongoing West Asia conflict and measures taken by various Ministries and Departments. This was the 4th special CCS meeting on the issue.

Prime Minister reviews flood situation in Arunachal Pradesh and Nagaland with MPs from the two states

July 30th, 03:21 pm

The Prime Minister, Shri Narendra Modi, met Members of Parliament from Arunachal Pradesh and Nagaland and discussed the situation in the two states in the wake of the floods.

Prime Minister shares Sanskrit Subhashitam highlighting respect for nature and environmental stewardship

July 30th, 10:26 am

PM Modi shares a Sanskrit Subhashitam highlighting that respect for nature, the environment and all creation lies at the core of our existence. He encourages everyone to serve nature with gratitude and work together towards building a healthy, prosperous and strong nation.

Prime Minister reviews flood situation in Assam with MPs from the state

July 28th, 02:12 pm

The Prime Minister, Shri Narendra Modi, met Members of Parliament from Assam and discussed the prevailing flood situation in various parts of the state.

ವಿಕಸಿತ ರೋಮಾಂಚಕ ಗ್ರಾಮ ಕಾರ್ಯಕ್ರಮ 2026 ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

July 26th, 05:00 pm

ಕೆಲವು ವರ್ಷಗಳ ಹಿಂದೆ, ನಾವು ಮೈ ಭಾರತ್ ವೇದಿಕೆಯನ್ನು ರೂಪಿಸಿದ್ದೇವೆ. ಇಂದು ದೇಶಾದ್ಯಂತ ಲಕ್ಷಾಂತರ ಯುವಕರು ಇದರ ಭಾಗವಾಗಿದ್ದು, ಅವರು ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆ. ವಿಕಸಿತ ಭಾರತ ಸಂವಾದದಿಂದ ಹಿಡಿದು ರೋಮಾಂಚಕ ಗ್ರಾಮ ಕಾರ್ಯಕ್ರಮದವರೆಗೆ, ನೀವು ನಿಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ತೋರಿಸಿದ್ದೀರಿ.

PM Modi Interacts with Participants of Viksit Vibrant Village Programme 2026

July 26th, 04:30 pm

PM Modi today interacted with participants of the Viksit Vibrant Village Programme 2026, lauding the young friends of MY Bharat for their commendable work across the country. He highlighted the official redesignation of border settlements from the 'last' to the 'first villages' of India, noted the newly established infrastructure and praised the local inhabitants for living and breathing patriotism.

ಜುಲೈ 26 ರಂದು 'ವಿಕಸಿತ ರೋಮಾಂಚಕ ಗ್ರಾಮ ಕಾರ್ಯಕ್ರಮ-2026’ದಲ್ಲಿ ಭಾಗವಹಿಸಿದವರೊಂದಿಗೆ ಸಂವಾದ ನಡೆಸಲಿರುವ ಪ್ರಧಾನಮಂತ್ರಿ

July 25th, 11:10 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 26 ಜುಲೈ 2026 ರಂದು ಸಂಜೆ 4:30ಕ್ಕೆ 'ವಿಕಸಿತ ರೋಮಾಂಚಕ ಗ್ರಾಮ ಕಾರ್ಯಕ್ರಮ-2026’ದಲ್ಲಿ ಭಾಗವಹಿಸಿದವರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಲಿದ್ದಾರೆ.

ಜುಲೈ 26 ರಂದು ನಡೆಯುವ ಮನ್ ಕಿ ಬಾತ್ ಕೇಳಲು ಟ್ಯೂನ್ ಮಾಡಿ

July 25th, 09:00 am

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿವಿಧ ವಿಷಯಗಳ ಬಗ್ಗೆ ತಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ಬಾನುವಾರ ೧೧ ಗಂಟೆಗೆ ಮನ್ ಕೀ ಬಾತ್ ನಲ್ಲಿ ಹಂಚಿಕೊಳ್ಳಲಿದ್ದಾರೆ. ನರೇಂದ್ರ ಮೋದಿ ಆಪ್ ನಲ್ಲಿ ಕಾರ್ಯಕ್ರಮವನ್ನು ಕೇಳಬಹುದು.

ಇಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಘೋಷಿಸಿದ ಪ್ರಧಾನಮಂತ್ರಿ

July 24th, 06:08 am

ಸಚಿವ ಸಂಪುಟ ಸಭೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ ರಾತ್ರಿ ವಿಡಿಯೋ ಸಂದೇಶದ ಮೂಲಕ ಘೋಷಿಸಿದರು.

ವಿಕಸಿತ ಭಾರತದ ಗುರಿಗಳತ್ತ ಗ್ರಾಮೀಣಾಭಿವೃದ್ಧಿ, ಕೃಷಿ, ಸಮಾಜ ಕಲ್ಯಾಣ ಮತ್ತು ಸಂಬಂಧಿತ ವಲಯಗಳ ಪ್ರಗತಿಯನ್ನು ಪರಿಶೀಲಿಸಲು ಕಾರ್ಯದರ್ಶಿಗಳ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ಅವರು ವಹಿಸಿದರು

July 22nd, 07:37 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಅಧಿಕೃತ ನಿವಾಸವಾದ 7, ಲೋಕ ಕಲ್ಯಾಣ ಮಾರ್ಗದಲ್ಲಿ, ವಿಕಸಿತ ಭಾರತದ ಗುರಿಗಳತ್ತ ಗ್ರಾಮೀಣಾಭಿವೃದ್ಧಿ, ಕೃಷಿ, ಸಮಾಜ ಕಲ್ಯಾಣ ಮತ್ತು ಸಂಬಂಧಿತ ವಲಯಗಳ ಪ್ರಗತಿಯನ್ನು ಪರಿಶೀಲಿಸಲು ಕಾರ್ಯದರ್ಶಿಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ವಿಕ್ರಮ್ -1 ರ ಯಶಸ್ವಿ ಉಡಾವಣೆಗೆ ಸ್ಕೈರೂಟ್ ಏರೋಸ್ಪೇಸ್ ತಂಡಕ್ಕೆ ಪ್ರಧಾನಮಂತ್ರಿ ಅಭಿನಂದನೆ

July 18th, 01:51 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸ್ಕೈರೂಟ್ ಏರೋಸ್ಪೇಸ್ ತಂಡದೊಂದಿಗೆ ಮಾತನಾಡಿ, ವಿಕ್ರಮ್ -1 ರ ಯಶಸ್ವಿ ಉಡಾವಣೆಗೆ ಅಭಿನಂದಿಸಿದ್ದಾರೆ. ಭಾರತದ ಬಾಹ್ಯಾಕಾಶ ಪಯಣದಲ್ಲಿ ಇದು ನಿರ್ಣಾಯಕ ಕ್ಷಣ ಎಂದು ಶ್ರೀ ಮೋದಿ ಅವರು ಬಣ್ಣಿಸಿದ್ದಾರೆ. ಖಾಸಗಿ ವಲಯದ ಹೆಚ್ಚುತ್ತಿರುವ ಪಾಲ್ಗೊಳ್ಳುವಿಕೆಯು ಹೊಸ ಅವಕಾಶಗಳನ್ನು ತೆರೆಯುತ್ತಾ ನಾವೀನ್ಯತೆಗೆ ವೇಗ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸ್ಕೈರೂಟ್ ಏರೋಸ್ಪೇಸ್‌ ಗೆ ಪ್ರಧಾನಮಂತ್ರಿ ಶುಭ ಹಾರೈಕೆ

July 18th, 09:54 am

ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿರುವ ಉಡಾವಣಾ ವಾಹಕವಾದ ವಿಕ್ರಮ್ -1ರ ಚೊಚ್ಚಲ ಕಕ್ಷಾ ಉಡಾವಣೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸ್ಕೈರೂಟ್ ಏರೋಸ್ಪೇಸ್‌ ಗೆ ಶುಭ ಹಾರೈಸಿದ್ದಾರೆ. ಇದು ದೇಶದ ಬಾಹ್ಯಾಕಾಶ ಪಯಣದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು ಎಂದು ಅವರು ಬಣ್ಣಿಸಿದ್ದಾರೆ.

ವರುಣಾ ನದಿ ದಂಡೆ ಮತ್ತು ಅದರ ಇಳಿಜಾರು/ಲೂಪ್‌ಗಳು ಸೇರಿ ಉತ್ತರ ಪ್ರದೇಶದಲ್ಲಿ 6/4 ಪಥದ ಎತ್ತರದ ಕಾರಿಡಾರ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ; ಒಟ್ಟು ಬಂಡವಾಳ ವೆಚ್ಚ 10,998.32 ಕೋಟಿ ರೂ.

July 15th, 04:47 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಚಿವ ಸಂಪುಟ ಸಮಿತಿಯು ಉತ್ತರ ಪ್ರದೇಶದ ವಾರಣಾಸಿ ನಗರದ ವಾಹನ ದಟ್ಟಣೆ ನಿವಾರಿಸಲು ವರುಣಾ ನದಿಯ ಉದ್ದಕ್ಕೂ ರಾಷ್ಟ್ರೀಯ ಹೆದ್ದಾರಿ-31 ಮತ್ತು ವಾರಣಾಸಿ ರಿಂಗ್ ರಸ್ತೆಯನ್ನು ಸಂಪರ್ಕಿಸುವ 43.218 ಕಿ.ಮೀ. ಲಿಂಕ್/ಕನೆಕ್ಟರ್ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲು ಅನುಮೋದನೆ ನೀಡಿದೆ. ಈ ಯೋಜನೆಯು ಮುಖ್ಯ ಸರಕು ಸಾಗಾಣೆ ಮಾರ್ಗ (ಕ್ಯಾರೇಜ್‌ವೇ), ಮೇಲು ಸೇತುವೆಗಳು, ಲೂಪ್‌ಗಳು, ರ‍್ಯಾಂಪ್‌ಗಳು ಮತ್ತು ಸೇವಾ ರಸ್ತೆಗಳನ್ನು ಒಳಗೊಂಡಂತೆ 6/4 ಪಥದ ಪ್ರಧಾನವಾಗಿ ಎತ್ತರದ ಕಾರಿಡಾರ್ ಅನ್ನು ಒಳಗೊಂಡಿದೆ ಮತ್ತು ಇದನ್ನು ಹೈಬ್ರಿಡ್ ಅನ್ಯುಟಿ ಮಾದರಿ (ಎಚ್ ಎಎಂ) ಅಡಿಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಎಐ) ಒಟ್ಟು ಬಂಡವಾಳ ವೆಚ್ಚ 10,998.32 ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸುತ್ತಿದೆ. ಇದರಲ್ಲಿ ಸಿವಿಲ್ ಕಾಮಗಾರಿಗಳ ವೆಚ್ಚ 4,565.33 ಕೋಟಿ ರೂ. ಮತ್ತು ಭೂ ಸ್ವಾಧೀನ ವೆಚ್ಚ ರೂ.934.91 ಕೋಟಿ ರೂ. ಸೇರಿದೆ.

ಆತ್ಮನಿರ್ಭರ ಭಾರತಕ್ಕಾಗಿ ಯೂರಿಯಾ-2026ರ ರಾಷ್ಟ್ರೀಯ ಹೂಡಿಕೆ ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ (ಎನ್ಐಪಿಯು-2026)

July 15th, 04:40 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಆತ್ಮನಿರ್ಭರ್ ಭಾರತಕ್ಕಾಗಿ(ಎನ್ಐಪಿಯು-2026) ಯೂರಿಯಾ-2026ರ ರಾಷ್ಟ್ರೀಯ ಹೂಡಿಕೆ ನೀತಿ ಕುರಿತ ರಸಗೊಬ್ಬರ ಇಲಾಖೆಯ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.

ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳ ನಾಲ್ಕು ಜಿಲ್ಲೆಗಳನ್ನು ಒಳಗೊಂಡಿರುವ, ಭಾರತೀಯ ರೈಲ್ವೆಯ ಪ್ರಸ್ತುತ ಜಾಲವನ್ನು ಸುಮಾರು 145 ಕಿಲೋಮೀಟರ್ ಗಳಷ್ಟು ಹೆಚ್ಚಿಸುವ ಎರಡು ಮಲ್ಟಿ-ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

July 15th, 04:35 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ಇಂದು ರೈಲ್ವೆ ಸಚಿವಾಲಯದ ಒಟ್ಟು ಅಂದಾಜು 3,907 ಕೋಟಿ ರೂಪಾಯಿ ವೆಚ್ಚದ 2 (ಎರಡು) ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳು ಈ ಕೆಳಗಿನಂತಿವೆ: