ಅಮೆರಿಕ ಉಪಾಧ್ಯಕ್ಷರಿಂದ ದೂರವಾಣಿ ಕರೆ ಸ್ವೀಕರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ
August 08th, 10:58 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಮೆರಿಕ ಉಪಾಧ್ಯಕ್ಷರಾದ ಶ್ರೀ ಜೆ.ಡಿ. ವ್ಯಾನ್ಸ್ ಅವರಿಂದ ದೂರವಾಣಿ ಕರೆ ಸ್ವೀಕರಿಸಿದರು.ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೇಕೊ ಫುಜಿಮೋರಿ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ
July 04th, 01:54 pm
ಪೆರುವಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೇಕೊ ಫುಜಿಮೋರಿ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಭಿನಂದನೆ ಸಲ್ಲಿಸಿದ್ದಾರೆ. ಭಾರತ ಮತ್ತು ಪೆರು ದೇಶಗಳ ನಡುವಿನ ದೀರ್ಘಕಾಲೀನ ಹಾಗೂ ಸ್ನೇಹಪರ ಸಂಬಂಧಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಲು ಭಾರತ ಬದ್ಧವಾಗಿದೆಯೆಂದು ಪುನರುಚ್ಚರಿಸಿದರು.ಎವಿಯನ್‌ನಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ
June 18th, 05:04 am
ಜೂನ್ 17, 2026 ರಂದು ಫ್ರಾನ್ಸ್‌ನ ಎವಿಯನ್‌ನಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷರಾದ ಶ್ರೀ ಡೊನಾಲ್ಡ್ ಜೆ. ಟ್ರಂಪ್ ಅವರನ್ನು ಭೇಟಿಯಾದರು.ಭಾರತ-ಫ್ರಾನ್ಸ್ ನಾವೀನ್ಯತೆ ನೀಲನಕ್ಷೆ 2030
June 15th, 05:42 am
2026ರ ಫೆಬ್ರವರಿ 17 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರನ್ ದ್ವಿಪಕ್ಷೀಯ ಸಂಬಂಧವನ್ನು ”ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ’ ಯ ಎತ್ತರಕ್ಕೆ ಏರಿಸಿದರು ಮತ್ತು ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷ 2026 ಅನ್ನು ಜಂಟಿಯಾಗಿ ಉದ್ಘಾಟಿಸಿದರು. ಉಭಯ ನಾಯಕರು ಕೃತಕ ಬುದ್ಧಿಮತ್ತೆ, ನಾವೀನ್ಯತೆ ಸಂಶೋಧನೆ, ತಂತ್ರಜ್ಞಾನ, ಡಿಜಿಟಲ್ ತಂತ್ರಜ್ಞಾನ ಮತ್ತು ಸೈಬರ್ ಸ್ಪೇಸ್, ಆರೋಗ್ಯ, ಸಂಸ್ಕೃತಿ, ಆರ್ಥಿಕತೆ, ಶೈಕ್ಷಣಿಕ ಸಂಪರ್ಕಗಳು ಮತ್ತು ಜನರಿಂದ ಜನರ ನಡುವಿನ ಸಂಬಂಧಗಳಂತಹ ವಲಯಗಳಲ್ಲಿ ವಿಸ್ತೃತ ಮತ್ತು ವೈವಿಧ್ಯಮಯ ಸಹಕಾರಕ್ಕೆ ಕರೆ ನೀಡಿದರು.ಫ್ರಾನ್ಸ್ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಅವರ ಅಧಿಕೃತ ಮಾತುಕತೆ
June 14th, 08:37 pm
ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳ ವಿವಿಧ ಅಂಶಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಎಲ್ಲಾ ರಂಗಗಳಲ್ಲಿ ದ್ವಿಪಕ್ಷೀಯ ರಕ್ಷಣಾ ಸಹಯೋಗದ ಅತ್ಯುತ್ತಮ ಬೆಳವಣಿಗೆ ಮತ್ತು ಆಳದ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. ರಕ್ಷಣಾ ವೇದಿಕೆಗಳು ಮತ್ತು ಸುಧಾರಿತ ತಂತ್ರಜ್ಞಾನಗಳ ಸಹ ವಿನ್ಯಾಸ ಸಹ ಅಭಿವೃದ್ಧಿಮತ್ತು ಸಹ ಉತ್ಪಾದನೆಗೆ ಒತ್ತು ನೀಡುವ ಮೂಲಕ ಇದನ್ನು ಮತ್ತಷ್ಟು ತೀವ್ರಗೊಳಿಸಲು ಉಭಯ ನಾಯಕರು ಒಪ್ಪಿಕೊಂಡರು. ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಹಕಾರದ ಸುದೀರ್ಘ ಪರಂಪರೆಯನ್ನು ಉಭಯ ನಾಯಕರು ನೆನೆದರು ಮತ್ತು ಮಾನವಸಹಿತ ಬಾಹ್ಯಾಕಾಶ ಯಾನ ಹಾಗೂ ಬಾಹ್ಯಾಕಾಶ ಪರಿಸ್ಥಿತಿಯ ಜಾಗೃತಿ ಕುರಿತು ಸಹಯೋಗವನ್ನು ಮುಂದುವರಿಸುವ ಬಗ್ಗೆ ಚರ್ಚಿಸಿದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಸಹಯೋಗವನ್ನು ವಿಸ್ತರಿಸುವ ಮಾರ್ಗಗಳ ಬಗ್ಗೆಯೂ ಅವರು ಚರ್ಚಿಸಿದರು. ನಾಗರಿಕ ಪರಮಾಣು ಇಂಧನ ಕ್ಷೇತ್ರದಲ್ಲಿ, ಭಾರತದ ಶಾಂತಿ ಕಾಯ್ದೆಯು ಸಣ್ಣ ಮತ್ತು ಸುಧಾರಿತ ಮಾಡ್ಯುಲರ್ ರಿಯಾಕ್ಟರ್ ಗಳು ಸೇರಿದಂತೆ ಹೊಸ ಸಹಯೋಗದ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಗಮನಿಸಿದರು.ಫ್ರಾನ್ಸ್ ಮತ್ತು ಸ್ಲೋವಾಕಿಯಾಕ್ಕೆ ಭೇಟಿ ನೀಡುವ ಮುನ್ನ ಪ್ರಧಾನಮಂತ್ರಿ ಅವರ ಹೇಳಿಕೆ
June 13th, 10:03 am
ಫ್ರೆಂಚ್ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಸ್ಲೋವಾಕ್ ಗಣರಾಜ್ಯದ ಪ್ರಧಾನಮಂತ್ರಿ ಶ್ರೀ ರಾಬರ್ಟ್ ಫಿಕೊ ಅವರ ಆಹ್ವಾನದ ಮೇರೆಗೆ, ನಾನು 2026ರ ಜೂನ್ 13 ರಿಂದ 18 ರವರೆಗೆ ಫ್ರಾನ್ಸ್ ಮತ್ತು ಸ್ಲೋವಾಕ್ ಗಣರಾಜ್ಯಕ್ಕೆ ಅಧಿಕೃತ ಭೇಟಿ ಕೈಗೊಳ್ಳುತ್ತಿದ್ದೇನೆ.ಫ್ರಾನ್ಸ್ ಮತ್ತು ಸ್ಲೋವಾಕಿಯಾಗೆ ಪ್ರಧಾನಮಂತ್ರಿ ಅವರ ಭೇಟಿ
June 09th, 07:20 pm
ಫ್ರಾನ್ಸ್ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಎಮ್ಯಾನುಯೆಲ್ ಮ್ಯಾಕ್ರಾನ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 13 - 14 ಜೂನ್ 2026 (ನೈಸ್), ಮತ್ತು 16 - 19 ಜೂನ್ 2026 (ಎವಿಯನ್ ಮತ್ತು ಪ್ಯಾರಿಸ್) ರವರೆಗೆ ಫ್ರಾನ್ಸ್ ದೇಶಕ್ಕೆ, ಹಾಗೆಯೇ 14 - 16 ಜೂನ್ 2026 ರವರೆಗೆ ಸ್ಲೋವಾಕಿಯಾ ದೇಶಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಭೇಟಿಯ ಮೊದಲ ಹಂತದಲ್ಲಿ, ಪ್ರಧಾನಮಂತ್ರಿಯವರು ಜೂನ್ 14 ರಂದು ಅಧ್ಯಕ್ಷರಾದ ಮ್ಯಾಕ್ರಾನ್ ಅವರೊಂದಿಗೆ ದ್ವಿಪಕ್ಷೀಯ ಸಭೆಗಾಗಿ ನೈಸ್ ಗೆ ಭೇಟಿ ನೀಡಲಿದ್ದಾರೆ.ಯುರೋಪ್ ದುಂಡು ಮೇಜಿನ ಕೈಗಾರಿಕಾ ಸಭೆಯಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ
May 17th, 11:43 pm
ಸ್ವಲ್ಪ ಸಮಯದ ಹಿಂದೆ, ನನಗೆ ಸ್ವೀಡನ್‌ನ ಅತ್ಯುನ್ನತ ಗೌರವವಾದ ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್ ನೀಡಲಾಯಿತು. ಈ ಗೌರವ ನನಗೆ ಮಾತ್ರವಲ್ಲ, ಇದು 1.4 ಶತಕೋಟಿ ಭಾರತೀಯರಿಗೆ ಸಂದ ಗೌರವವಾಗಿದೆ. ಭಾರತ - ಸ್ವೀಡನ್ ಸಂಬಂಧಗಳನ್ನು ಶ್ರೀಮಂತಗೊಳಿಸಿದ ಮತ್ತು ಅವರಿಗೆ ಬಲವಾದ ಅಡಿಪಾಯ ಹಾಕಿದ ಸ್ವೀಡನ್‌ನಲ್ಲಿರುವ ನಮ್ಮ ಎಲ್ಲಾ ಸ್ನೇಹಿತರಿಗೆ ಸಂದ ಗೌರವ ಇದಾಗಿದೆ.ಪ್ರಧಾನ ಮಂತ್ರಿ ಅವರಿಗೆ ಕರೆ ಮಾಡಿದ ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್; ದ್ವಿಪಕ್ಷೀಯ ಸಹಕಾರದ ಪರಿಶೀಲನೆ ಮತ್ತು ಪಶ್ಚಿಮ ಏಷ್ಯಾ ಮತ್ತು ಹೊರ್ಮುಜ್ ಜಲಸಂಧಿಯ ಕುರಿತು ಚರ್ಚೆ
April 14th, 10:12 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರಿಂದ ಕರೆ ಸ್ವೀಕರಿಸಿದರು.ಫಲಿತಾಂಶಗಳ ಪಟ್ಟಿ: ಇಥಿಯೋಪಿಯಾಕ್ಕೆ ಪ್ರಧಾನಮಂತ್ರಿ ಭೇಟಿ
December 16th, 10:41 pm
'ಕಾರ್ಯತಂತ್ರದ ಪಾಲುದಾರಿಕೆ'ಗೆ ದ್ವಿಪಕ್ಷೀಯ ಸಂಬಂಧಗಳ ಉನ್ನತೀಕರಣಮಂಗೋಲಿಯಾ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಪ್ರಕಟಣೆಯ ಕನ್ನಡ ಅನುವಾದ
October 14th, 01:15 pm
ಮಂಗೋಲಿಯಾ ಅಧ್ಯಕ್ಷರು ಆರು ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ, ಇದು ಬಹಳ ವಿಶೇಷ ಸಂದರ್ಭವಾಗಿದೆ. ಭಾರತ ಮತ್ತು ಮಂಗೋಲಿಯಾ 70 ವರ್ಷಗಳ ರಾಜತಾಂತ್ರಿಕ ಸಂಬಂಧಗಳು ಮತ್ತು 10 ವರ್ಷಗಳ ಕಾರ್ಯತಂತ್ರದ ಪಾಲುದಾರಿಕೆಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಭೇಟಿ ಬಂದಿದೆ. ಇದನ್ನು ಗುರುತಿಸಲು, ನಾವು ನಮ್ಮ ಹಂಚಿಕೆಯ ಪರಂಪರೆ, ವೈವಿಧ್ಯತೆ ಮತ್ತು ಬಲವಾದ ನಾಗರಿಕತೆಯ ಬಾಂಧವ್ಯಗಳನ್ನು ಎತ್ತಿ ತೋರಿಸುವ ಜಂಟಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದೇವೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್
September 16th, 10:13 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷರಾದ ಘನತೆವೆತ್ತ ಶ್ರೀ ಡೊನಾಲ್ಡ್ ಜೆ. ಟ್ರಂಪ್ ಅವರಿಂದ ದೂರವಾಣಿ ಕರೆ ಸ್ವೀಕರಿಸಿದರು.ಅಧ್ಯಕ್ಷ ಟ್ರಂಪ್ ಅವರ ಭಾವನೆಗಳನ್ನು ಆಳವಾಗಿ ಪ್ರಶಂಸಿಸುತ್ತೇನೆ ಮತ್ತು ಸಂಪೂರ್ಣವಾಗಿ ಒಪ್ಪುತ್ತೇನೆ: ಪ್ರಧಾನಮಂತ್ರಿ
September 06th, 10:27 am
ಭಾರತ ಮತ್ತು ಅಮೆರಿಕ ದೇಶಗಳ ಸಂಬಂಧಗಳ ಬಗ್ಗೆ ಅಧ್ಯಕ್ಷ ಟ್ರಂಪ್ ಅವರ ಭಾವನೆಗಳು ಮತ್ತು ಸಕಾರಾತ್ಮಕ ಮೌಲ್ಯಮಾಪನವನ್ನು ತಾವು ಆಳವಾಗಿ ಮೆಚ್ಚುವುದಾಗಿ ಮತ್ತು ಸಂಪೂರ್ಣವಾಗಿ ಒಪ್ಪುವುದಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. “ಭಾರತ ಮತ್ತು ಅಮೆರಿಕಗಳು ದೇಶಗಳು ಬಹಳ ಸಕಾರಾತ್ಮಕ ಮತ್ತು ಭವಿಷ್ಯತ್ತಿನ ಸಮಗ್ರ ಮತ್ತು ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿವೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.ರಷ್ಯಾದ ಅಧ್ಯಕ್ಷರೊಂದಿಗಿನ ಸಭೆಯಲ್ಲಿ ಪ್ರಧಾನಮಂತ್ರಿ ಅವರ ಆರಂಭಿಕ ಹೇಳಿಕೆ
September 01st, 01:24 pm
ನಿಮ್ಮನ್ನು ಭೇಟಿಯಾಗಲು ನನಗೆ ತುಂಬಾ ಸಂತೋಷವಾಗಿದೆ ಮತ್ತು ನಿಮ್ಮನ್ನು ಭೇಟಿಯಾಗುವುದು ಯಾವಾಗಲೂ ನೆನಪಿನಲ್ಲಿಡುವ ಸಂದರ್ಭ ಎಂದು ನಾನು ಭಾವಿಸುತ್ತೇನೆ. ಇದು ವಿವಿಧ ವಿಷಯಗಳ ಬಗ್ಗೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ನಮಗೆ ಅವಕಾಶವನ್ನು ಒದಗಿಸುತ್ತದೆ.ರಷ್ಯಾ ಒಕ್ಕೂಟದ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
September 01st, 01:08 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಚೀನಾದ ಟಿಯಾಂಜಿನ್ ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ನೇಪಥ್ಯದಲ್ಲಿ ರಷ್ಯಾ ಒಕ್ಕೂಟದ ಅಧ್ಯಕ್ಷ ಘನತೆವೆತ್ತ ಶ್ರೀ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದರು.ಪ್ರಧಾನಮಂತ್ರಿ ಅವರ ಜಪಾನ್ ಭೇಟಿ: ಫಲಪ್ರದ ಒಪ್ಪಂದಗಳ ಫಲಿತಾಂಶಗಳ ಪಟ್ಟಿ
August 29th, 06:23 pm
ಆರ್ಥಿಕ ಪಾಲುದಾರಿಕೆ, ಆರ್ಥಿಕ ಭದ್ರತೆ, ಚಲನಶೀಲತೆ, ಪರಿಸರ ಸುಸ್ಥಿರತೆ, ತಂತ್ರಜ್ಞಾನ ಮತ್ತು ನಾವೀನ್ಯತೆ, ಆರೋಗ್ಯ, ಜನರಿಂದ ಜನರಿಗೆ ಮತ್ತು ರಾಜ್ಯ-ಪ್ರಾಂತ್ಯದ ನಿಶ್ಚಿತಾರ್ಥಗಳಲ್ಲಿ ಎಂಟು ಮಾರ್ಗಗಳಲ್ಲಿ ಆರ್ಥಿಕ ಮತ್ತು ಕ್ರಿಯಾತ್ಮಕ ಸಹಕಾರಕ್ಕಾಗಿ 10 ವರ್ಷಗಳ ಕಾರ್ಯತಂತ್ರದ ಆದ್ಯತೆಜಪಾನ್ ಪ್ರಧಾನಮಂತ್ರಿ ಅವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ
August 29th, 03:59 pm
ಇಂದಿನ ನಮ್ಮ ಚರ್ಚೆಯು ಫಲಪ್ರದ ಮತ್ತು ನಿರ್ದಿಷ್ಟ ಉದ್ದೇಶಗಳನ್ನು ಒಳಗೊಂಡಿತ್ತು. ಎರಡು ಪ್ರಮುಖ ಆರ್ಥಿಕತೆಗಳು ಮತ್ತು ಚೈತನ್ಯಶೀಲ ಪ್ರಜಾಪ್ರಭುತ್ವಗಳಾಗಿ, ನಮ್ಮ ಪಾಲುದಾರಿಕೆಯು ನಮ್ಮ ಎರಡೂ ದೇಶಗಳಿಗೆ ಮಾತ್ರವಲ್ಲದೆ ಜಾಗತಿಕ ಶಾಂತಿ ಮತ್ತು ಸ್ಥಿರತೆಗೂ ಬಹಳ ಮುಖ್ಯವಾಗಿದೆ ಎಂಬುದನ್ನು ನಾವಿಬ್ಬರೂ ಒಪ್ಪುತ್ತೇವೆ.ಕ್ರೊಯೇಷಿಯಾದ ಪ್ರಧಾನಮಂತ್ರಿಯವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆಯ ಇಂಗ್ಲಿಷ್ ಅನುವಾದ
June 18th, 09:56 pm
ಐತಿಹಾಸಿಕ ಮತ್ತು ಸುಂದರ ನಗರವಾದ ಜಾಗ್ರೆಬ್‌ನಲ್ಲಿ ನನ್ನನ್ನು ಆತ್ಮೀಯತೆಯ, ಉತ್ಸಾಹ ಭರಿತ ಮತ್ತು ವಾತ್ಸಲ್ಯಭರಿತ ರೀತಿಯಲ್ಲಿ ಸ್ವಾಗತಿಸಿದುದಕ್ಕೆ ನಾನು ಪ್ರಧಾನ ಮಂತ್ರಿ ಮತ್ತು ಕ್ರೊಯೇಷಿಯಾ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.ಸೈಪ್ರಸ್ ಮತ್ತು ಭಾರತ ನಡುವಿನ ಸಮಗ್ರ ಪಾಲುದಾರಿಕೆ ಅನುಷ್ಠಾನದ ಕುರಿತು ಜಂಟಿ ಘೋಷಣೆ
June 16th, 03:20 pm
ಸೈಪ್ರಸ್ ಗಣರಾಜ್ಯದ ಅಧ್ಯಕ್ಷರಾದ ಶ್ರೀ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರು, 2025ರ ಜೂನ್ 15 ರಿಂದ 16 ರವರೆಗೆ ಸೈಪ್ರಸ್‌ಗೆ ಅಧಿಕೃತ ಭೇಟಿ ನೀಡಿದ ಭಾರತ ಗಣರಾಜ್ಯದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಎರಡು ದಶಕಗಳ ಬಳಿಕ, ಭಾರತದ ಪ್ರಧಾನಿಯೊಬ್ಬರು ಸೈಪ್ರಸ್ ಗೆ ನೀಡಿದ ಈ ಭೇಟಿಯು, ಉಭಯ ರಾಷ್ಟ್ರಗಳ ನಡುವಿನ ಗಾಢ ಮತ್ತು ಶಾಶ್ವತ ಸ್ನೇಹವನ್ನು ಪುನರುಚ್ಚರಿಸುವ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಈ ಭೇಟಿಯು, ಕೇವಲ ಸಮಾನ ಇತಿಹಾಸದ ಆಚರಣೆಯಾಗಿರದೆ, ಜಂಟಿ ವ್ಯೂಹಾತ್ಮಕ ದೃಷ್ಟಿ, ಪರಸ್ಪರ ನಂಬಿಕೆ ಮತ್ತು ಗೌರವದ ತಳಹದಿಯ ಮೇಲೆ ನಿಂತಿರುವ ಭವಿಷ್ಯದ ಪಾಲುದಾರಿಕೆಯ ಸಂಕೇತವಾಗಿದೆ.ಸೈಪ್ರಸ್ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪತ್ರಿಕಾ ಹೇಳಿಕೆ
June 16th, 01:45 pm
ಮೊದಲನೆಯದಾಗಿ, ಗೌರವಾನ್ವಿತ ಅಧ್ಯಕ್ಷರ ಆತ್ಮೀಯ ಸ್ವಾಗತ ಮತ್ತು ಔದಾರ್ಯಯುತ ಆತಿಥ್ಯಕ್ಕಾಗಿ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ನಿನ್ನೆ ನಾನು ಸೈಪ್ರಸ್ ನೆಲಕ್ಕೆ ಕಾಲಿಟ್ಟ ಕ್ಷಣದಿಂದ, ಅಧ್ಯಕ್ಷರು ಮತ್ತು ಈ ದೇಶದ ಜನರು ತೋರಿಸಿದ ಆತ್ಮೀಯತೆ ಮತ್ತು ವಾತ್ಸಲ್ಯವು ನಿಜವಾಗಿಯೂ ನನ್ನ ಹೃದಯವನ್ನು ಮುಟ್ಟಿದೆ.