ಗೀತಾ ಜಯಂತಿಯ ಪವಿತ್ರ ದಿನದಂದು ದೇಶವಾಸಿಗಳಿಗೆ ಶುಭ ಕೋರಿದ ಪ್ರಧಾನಮಂತ್ರಿ

December 01st, 06:13 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀಮದ್ ಭಗವದ್ಗೀತೆಗೆ ಸಂಬಂಧಿಸಿದ 'ಗೀತಾ ಜಯಂತಿ'ಯ ಪವಿತ್ರ ದಿನದಂದು ದೇಶಾದ್ಯಂತ ಎಲ್ಲಾ ಕುಟುಂಬಗಳ ಸದಸ್ಯರಿಗೆ ಶುಭಾಶಯ ಕೋರಿದ್ದಾರೆ. ಕರ್ತವ್ಯ ನಿರ್ವಹಣೆಯ ಕುರಿತು ಅಮೂಲ್ಯವಾದ ಸಂದೇಶಗಳಿಂದ ಕೂಡಿರುವ ಈ ದೈವಿಕ ಗ್ರಂಥವು ಭಾರತೀಯ ಕುಟುಂಬ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಜೀವನದಲ್ಲಿ ಅತ್ಯಂತ ವಿಶಿಷ್ಟ ಸ್ಥಾನವನ್ನು ಹೊಂದಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. “ಇದರ ದೈವಿಕ ಸಾರ ಪ್ರತಿ ಪೀಳಿಗೆಯನ್ನು ನಿಸ್ವಾರ್ಥ ಕ್ರಿಯೆಯ ಕಡೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ’’ ಎಂದು ಶ್ರೀ ಮೋದಿ ಹೇಳಿದ್ದಾರೆ.

ತಮಿಳು ಕವಿ ಸುಬ್ರಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ ಸಂಕಲನ ಬಿಡುಗಡೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ

December 11th, 02:00 pm

ಕೇಂದ್ರ ಸಚಿವರಾದ, ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಜಿ, ರಾವ್ ಇಂದರ್‌ಜಿತ್ ಸಿಂಗ್ ಮತ್ತು ಎಲ್. ಮುರುಗನ್ ಜಿ, ಈ ಕಾರ್ಯಕ್ರಮದ ಕೇಂದ್ರ ವ್ಯಕ್ತಿ, ಸಾಹಿತ್ಯ ವಿದ್ವಾಂಸ ಶ್ರೀ ಸೀನಿ ವಿಶ್ವನಾಥನ್ ಜಿ, ಪ್ರಕಾಶಕ ವಿ. ಶ್ರೀನಿವಾಸನ್ ಜಿ, ಮತ್ತು ಉಪಸ್ಥಿತರಿರುವ ಎಲ್ಲ ಗೌರವಾನ್ವಿತ ಗಣ್ಯರೇ... ಮಹಿಳೆಯರೇ ಮತ್ತು ಮಹನೀಯರೇ,

ತಮಿಳು ಶ್ರೇಷ್ಠ ಕವಿ ಸುಬ್ರಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ ಸಂಕಲನ ಬಿಡುಗಡೆ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

December 11th, 01:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಲೋಕ ಕಲ್ಯಾಣ್ ಮಾರ್ಗದ ನಂಬರ್ 7 ನಿವಾಸದಲ್ಲಿ ತಮಿಳು ಮಹಾನ್ ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುಬ್ರಮಣ್ಯ ಭಾರತಿ ಅವರ ಸಮಗ್ರ ಕೃತಿಗಳ ಸಂಕಲನ ಬಿಡುಗಡೆ ಮಾಡಿದರು. ತಮಿಳಿನ ಮಹಾನ್ ಕವಿ ಸುಬ್ರಮಣ್ಯ ಭಾರತಿ ಅವರ ಜನ್ಮದಿನದಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ ಅವರು, ಭಾರತದ ಸಂಸ್ಕೃತಿ ಮತ್ತು ಸಾಹಿತ್ಯ, ಭಾರತದ ಸ್ವಾತಂತ್ರ್ಯ ಹೋರಾಟದ ನೆನಪುಗಳು ಮತ್ತು ತಮಿಳುನಾಡಿನ ಹೆಮ್ಮೆಗೆ ಇಂದು ಉತ್ತಮ ಅವಕಾಶವಾಗಿದೆ. ಮಹಾಕವಿ ಸುಬ್ರಹ್ಮಣ್ಯ ಭಾರತಿ ಅವರ ಕೃತಿಗಳ ಪ್ರಕಟಣೆಯ ಮಹಾಪೂರವೇ ಇಂದು ನೆರವೇರಿತು ಎಂದರು.

ಗೀತಾ ಜಯಂತಿಗೆ ಶುಭ ಕೋರಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

December 11th, 10:24 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೀತಾ ಜಯಂತಿ ಅಂಗವಾಗಿ ಇಂದು ದೇಶದ ಜನತೆಗೆ ಶುಭ ಕೋರಿದ್ದಾರೆ.

​​​​​​​ಪ್ರಧಾನಮಂತ್ರಿಯವರು ಜನರಿಗೆ ಗೀತಾ ಜಯಂತಿಯ ಶುಭಾಶಯ

December 23rd, 09:20 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗೀತಾ ಜಯಂತಿಯ ಸಂದರ್ಭದಲ್ಲಿ ದೇಶದ ಜನತೆಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

ಗೀತ ಜಯಂತಿ ಸಂದರ್ಭದಲ್ಲಿ ಜನತೆಗೆ ಪ್ರಧಾನಮಂತ್ರಿ ಶುಭಾಶಯ

December 14th, 02:37 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೀತ ಜಯಂತಿಯ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಮೋದಿ ಅವರು ಗೀತೆಯ ಕುರಿತಂತೆ ತಾವು ಇತ್ತೀಚೆಗೆ ಮಾಡಿದ ಎರಡು ಭಾಷಣಗಳನ್ನೂ ಹಂಚಿಕೊಂಡಿದ್ದಾರೆ.