ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 25.05.2025 ರಂದು ಮಾಡಿದ ‘ಮನ್ ಕಿ ಬಾತ್’ – 122ನೇ ಸಂಚಿಕೆಯ ಕನ್ನಡ ಅವತರಣಿಕೆ
May 25th, 11:30 am
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಇಂದು ಸಂಪೂರ್ಣ ದೇಶ ಭಯೋತ್ಪಾದನೆಯ ವಿರುದ್ಧ ಒಗ್ಗೂಡಿ ನಿಂತಿದೆ. ಆಕ್ರೋಶದಿಂದ ಕೂಡಿದೆ ಮತ್ತು ದೃಢನಿಶ್ಚಯ ಹೊಂದಿದೆ. ಭಯೋತ್ಪಾದನೆಯನ್ನು ಕೊನೆಗೊಳಿಸಲೇಬೇಕು ಎಂಬುದು ಇಂದು ಪ್ರತಿಯೊಬ್ಬ ಭಾರತೀಯನ ಸಂಕಲ್ಪವಾಗಿದೆ. ಸ್ನೇಹಿತರೇ, 'ಆಪರೇಷನ್ ಸಿಂಧೂರ್' ಸಮಯದಲ್ಲಿ ನಮ್ಮ ಸೇನಾ ಪಡೆಗಳು ಪ್ರದರ್ಶಿಸಿದ ಶೌರ್ಯ ಪ್ರತಿಯೊಬ್ಬ ಹಿಂದೂಸ್ತಾನಿಯನ್ನೂ ಹೆಮ್ಮೆಪಡುವಂತೆ ಮಾಡಿದೆ. ಗಡಿಯಾಚೆಗಿನ ಭಯೋತ್ಪಾದಕ ಅಡಗುತಾಣಗಳನ್ನು ನಮ್ಮ ಪಡೆಗಳು ನಿಖರತೆಯಿಂದ ಕರಾರುವಾಕ್ಕಾಗಿ ನಾಶಪಡಿಸಿರುವುದು ಅದ್ಭುತವಾಗಿದೆ. 'ಆಪರೇಷನ್ ಸಿಂಧೂರ್' ಪ್ರಪಂಚದಾದ್ಯಂತ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಹೊಸ ಭರವಸೆ ನೀಡಿದೆ ಮತ್ತು ಉತ್ಸಾಹ ತುಂಬಿದೆ.ಗುಜರಾತ್ ನ ಗಿರ್ ನಲ್ಲಿ ಸಫಾರಿ ಕೈಗೊಂಡ ಪ್ರಧಾನಮಂತ್ರಿ
March 03rd, 12:03 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಏಷ್ಯಾದ ಸಿಂಹಗಳ ನೆಲೆವೀಡಾಗಿರುವ ಗುಜರಾತ್‌ನ ಗಿರ್‌ನಲ್ಲಿ ಸಫಾರಿ ಕೈಗೊಂಡರು. ಕಳೆದ ಹಲವು ವರ್ಷಗಳಿಂದ ಏಷ್ಯಾಟಿಕ್ ಸಿಂಹಗಳ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆಯನ್ನು ಖಾತ್ರಿಪಡಿಸಿಕೊಂಡಿರುವ ಸಾಮೂಹಿಕ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.ಗಿರ್ ಮತ್ತು ಏಷ್ಯಾಟಿಕ್ ಸಿಂಹಗಳ ಕುರಿತಾದ ಪರಿಮಲ್ ನಾಥ್ವಾನಿ ಅವರ ಪುಸ್ತಕವನ್ನು ಪ್ರಧಾನಮಂತ್ರಿ ಸ್ವೀಕರಿಸಿದರು
July 31st, 08:10 pm
ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ಏಷ್ಯಾಟಿಕ್ ಸಿಂಹಗಳ ಕುರಿತು ರಾಜ್ಯಸಭಾ ಸದಸ್ಯರಾದ ಪರಿಮಲ್ ನಾಥ್ವಾನಿ ಅವರು ಬರೆದಿರುವ ಕಾಫಿ ಟೇಬಲ್ ಪುಸ್ತಕ ಕಾಲ್ ಆಫ್ ದಿ ಗಿರ್ ನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ನೀಡಿದರು.ವಿಶ್ವ ಸಿಂಹ ದಿನದ ಅಂಗವಾಗಿ, ಸಿಂಹಗಳ ಸಂರಕ್ಷಣೆಯ ಬಗ್ಗೆ ಉತ್ಸುಕರಾಗಿರುವ ಎಲ್ಲರಿಗೂ ಶುಭಾಶಯ ಕೋರಿದ ಪ್ರಧಾನಿ
August 10th, 11:19 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವ ಸಿಂಹ ದಿನದ ಅಂಗವಾಗಿ, ಸಿಂಹಗಳ ಸಂರಕ್ಷಣೆಯ ಬಗ್ಗೆ ಉತ್ಸುಕರಾಗಿರುವ ಎಲ್ಲರಿಗೂ ಶುಭ ಕೋರಿದ್ದಾರೆ.