Cabinet approves extension of existing North-South corridor from GIFT City to Shahpur of Gujarat Metro Rail Corporation Limited (GMRC)

February 24th, 03:33 pm

The Union Cabinet, chaired by PM Modi, today approved the extension of the existing North-South corridor of GMRC from GIFT City to Shahpur. The approved extension will be 3.33 kilometres long and will include three elevated stations. The corridor will strengthen connectivity between Ahmedabad and the GIFT region and is expected to generate significant employment opportunities.

ಮುಂಬೈನಲ್ಲಿ ನಡೆದ 6ನೇ ಆವೃತ್ತಿಯ ಜಾಗತಿಕ ಫಿನ್ ಟೆಕ್ ಮೇಳವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

October 09th, 02:51 pm

ಗೌರವಾನ್ವಿತ ಪ್ರಧಾನಮಂತ್ರಿ ಕೀರ್ ಸ್ಟಾರ್ಮರ್, ರಿಸರ್ಬ್ ಬ್ಯಾಂಕ್ ಇಂಡಿಯಾದ ಗವರ್ನರ್, ನಾವಿನ್ಯಕಾರರೇ, ನಾಯಕರೇ ಮತ್ತು ಜಗತ್ತಿನ ಎಲ್ಲಾ ಮೂಲೆಗಳಿಂದ ಆಗಮಿಸಿರುವ ಹೂಡಿಕೆದಾರರೆ, ಮಹಿಳೆಯರೆ ಮತ್ತು ಮಹನೀಯರೆ, ನಿಮ್ಮೆಲ್ಲರಿಗೂ ಮುಂಬೈಗೆ ಆತ್ಮೀಯ ಸ್ವಾಗತವನ್ನು ಕೋರುತ್ತೇನೆ.

ಮುಂಬೈನ ಗ್ಲೋಬಲ್ ಫಿನ್ ಟೆಕ್ ಫೆಸ್ಟ್ 2025 ಅನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

October 09th, 02:50 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ಮುಂಬೈನಲ್ಲಿ ನಡೆದ 'ಗ್ಲೋಬಲ್ ಫಿನ್ ಟೆಕ್ ಫೆಸ್ಟ್ 2025' ಅನ್ನುದ್ದೇಶಿಸಿ ಮಾತನಾಡಿದರು. ಮುಂಬೈಗೆ ಆಗಮಿಸಿದ ಎಲ್ಲ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದ ಶ್ರೀ ಮೋದಿ ಅವರು, ಮುಂಬೈಯನ್ನು 'ಶಕ್ತಿಯ ನಗರ, ಉದ್ಯಮಶೀಲತೆಯ ನಗರ, ಮತ್ತು ಅನಂತ ಸಾಧ್ಯತೆಗಳ ನಗರ' ಎಂದು ಬಣ್ಣಿಸಿದರು. ಅವರು ತಮ್ಮ ಸ್ನೇಹಿತ, ಪ್ರಧಾನಮಂತ್ರಿ, ಘನತೆವೆತ್ತ ಶ್ರೀ ಕೀರ್ ಸ್ಟಾರ್ಮರ್ ಅವರನ್ನು ವಿಶೇಷವಾಗಿ ಸ್ವಾಗತಿಸಿದರು ಮತ್ತು ಈ ಕಾರ್ಯಕ್ರಮಕ್ಕಾಗಿ ಸಮಯ ಮೀಸಲಿಟ್ಟು ಆಗಮಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನಮಂತ್ರಿ ಅವರ ಭಾರತ ಭೇಟಿಯ ಫಲಶ್ರುತಿ

October 09th, 01:55 pm

ಭಾರತ-ಯುಕೆ ಸಂಪರ್ಕ ಮತ್ತು ನಾವಿನ್ಯತಾ ಕೇಂದ್ರದ ಸ್ಥಾಪನೆ.

ಯುನೈಟೆಡ್ ಕಿಂಗ್ ಡಮ್ ಪ್ರಧಾನಮಂತ್ರಿ ಅವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ

October 09th, 11:25 am

ಭಾರತಕ್ಕೆ ಮೊದಲ ಭೇಟಿ ನೀಡಿರುವ ಪ್ರಧಾನಮಂತ್ರಿ ಕೀರ್ ಸ್ಟಾರ್ಮರ್ ಅವರನ್ನು ಇಂದು ಮುಂಬೈನಲ್ಲಿ ಸ್ವಾಗತಿಸಲು ನನಗೆ ಸಂತೋಷವಾಗಿದೆ..

ಭಾರತ ಸಿಂಗಾಪುರ ಜಂಟಿ ಹೇಳಿಕೆ

September 04th, 08:04 pm

ಸಿಂಗಾಪುರ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಲಾರೆನ್ಸ್ ವಾಂಗ್ ಅವರ ಭಾರತ ಗಣರಾಜ್ಯಕ್ಕೆ ಅಧಿಕೃತ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಸಿಂಗಾಪುರ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಮಾರ್ಗಸೂಚಿಯ ಕುರಿತು ಜಂಟಿ ಹೇಳಿಕೆ

ಸಿಂಗಾಪುರದ ಪ್ರಧಾನಮಂತ್ರಿ ಅವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ

September 04th, 12:45 pm

ಪ್ರಧಾನಮಂತ್ರಿ ವಾಂಗ್ ಅಧಿಕಾರ ವಹಿಸಿಕೊಂಡ ನಂತರ ಭಾರತಕ್ಕೆ ತಮ್ಮ ಮೊದಲ ಅಧಿಕೃತ ಭೇಟಿಯಲ್ಲಿ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗುತ್ತದೆ. ಈ ವರ್ಷ ನಮ್ಮ ರಾಜತಾಂತ್ರಿಕ ಸಂಬಂಧಗಳ 60 ನೇ ವಾರ್ಷಿಕೋತ್ಸವವನ್ನು ನಾವು ಆಚರಿಸುತ್ತಿರುವುದರಿಂದ ಈ ಭೇಟಿ ವಿಶೇಷವಾಗಿ ಸ್ಮರಣೀಯವಾಗಿದೆ.

ಗುಜರಾತ್‌ನ ಅಹಮದಾಬಾದ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

August 25th, 06:42 pm

ಇಂದು, ನೀವೆಲ್ಲರೂ ನಿಜವಾಗಿಯೂ ಉತ್ತಮ ವಾತಾವರಣ ಸೃಷ್ಟಿಸಿದ್ದೀರಿ. ಈ ಲಕ್ಷಾಂತರ ಜನರ ಪ್ರೀತಿ ಮತ್ತು ಆಶೀರ್ವಾದ ಪಡೆಯಲು ನಾನು ಎಷ್ಟು ಅದೃಷ್ಟಶಾಲಿ ಎಂದು ನಾನು ಅನೇಕ ಬಾರಿ ಭಾವಿಸಿದ್ದೇನೆ. ನಾನು ನಿಮಗೆ ಎಷ್ಟೇ ಧನ್ಯವಾದ ಹೇಳಿದರೂ ಅದು ಎಂದಿಗೂ ಮುಗಿಯುವುದಿಲ್ಲ. ನೋಡಿ, ಅಲ್ಲಿ ಸ್ವಲ್ಪ ನರೇಂದ್ರ ನಿಂತಿದ್ದಾನೆ!

ಗುಜರಾತಿನ ಅಹಮದಾಬಾದ್‌ ನಲ್ಲಿ 5,400 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟನೆ, ಶಿಲಾನ್ಯಾಸ ಮತ್ತು ಲೋಕಾರ್ಪಣೆ ನೆರವೇರಿಸಿದರು

August 25th, 06:15 pm

ಗುಜರಾತಿನ ಅಹಮದಾಬಾದ್‌ ನಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 5,400 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ, ಲೋಕಾರ್ಪಣೆ ನೆರವೇರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಇಡೀ ರಾಷ್ಟ್ರವು ಪ್ರಸ್ತುತ ಗಣೇಶೋತ್ಸವದ ಉತ್ಸಾಹದಲ್ಲಿ ಮುಳುಗಿದೆ ಎಂದು ಹೇಳಿದರು. ಗಣಪತಿ ಬಪ್ಪಾ ಆಶೀರ್ವಾದದೊಂದಿಗೆ, ಇಂದು ಗುಜರಾತಿನ ಪ್ರಗತಿಗೆ ಸಂಬಂಧಿಸಿದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಶುಭಾರಂಭ ಮಾಡಲಾಗಿದೆ. ಜನರ ಪಾದಾರವಿಂದಗಳಿಗೆ ಹಲವಾರು ಯೋಜನೆಗಳನ್ನು ಅರ್ಪಿಸುವ ಸೌಭಾಗ್ಯ ತಮಗೆ ದೊರೆತಿದೆ ಎಂದು ಅವರು ಹೇಳಿದರು ಮತ್ತು ಈ ಅಭಿವೃದ್ಧಿ ಉಪಕ್ರಮಗಳಿಗಾಗಿ ಎಲ್ಲಾ ನಾಗರಿಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.

ಗಾಂಧಿನಗರದಲ್ಲಿ ನಡೆದ ಗುಜರಾತ್ ನಗರಾಭಿವೃದ್ಧಿ ಇತಿಹಾಸದ 20ನೇ ವಾರ್ಷಿಕೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

May 27th, 11:30 am

ವೇದಿಕೆಯಲ್ಲಿ ಉಪಸ್ಥಿತರಿರುವ ಗುಜರಾತ್ ರಾಜ್ಯಪಾಲರಾದ ಗೌರವಾನ್ವಿತ ಆಚಾರ್ಯ ದೇವವ್ರತ ಜೀ, ಈ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್, ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳೆ, ಮನೋಹರ್ ಲಾಲ್ ಜೀ, ಸಿ.ಆರ್. ಪಾಟೀಲ್ ಜೀ, ಗುಜರಾತ್ ಸರ್ಕಾರದ ಸಚಿವರೆ, ಸಂಸದರೆ, ಶಾಸಕರೆ ಮತ್ತು ಗುಜರಾತ್‌ನ ವಿವಿಧೆಡೆಯಿಂದ ಆಗಮಿಸಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರೆ,

ಗುಜರಾತ್ ನಗರ ಬೆಳವಣಿಗೆಯ 20 ವರ್ಷಗಳ ಸಂಭ್ರಮಾಚರಣೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ

May 27th, 11:09 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗುಜರಾತಿನ ಗಾಂಧಿನಗರದಲ್ಲಿ ಗುಜರಾತ್ ನಗರ ವಿಕಾಸದ 20 ವರ್ಷಗಳ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, 'ನಗರ ಅಭಿವೃದ್ಧಿ ವರ್ಷ 2005'ರ 20 ವರ್ಷಗಳ ನೆನಪಿಗಾಗಿ ನಗರ ಅಭಿವೃದ್ಧಿ ವರ್ಷ 2025 ಅನ್ನು ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ದಿನಗಳಲ್ಲಿ ವಡೋದರ, ದಹೋದ್, ಭುಜ್, ಅಹಮದಾಬಾದ್ ಮತ್ತು ಗಾಂಧಿನಗರಕ್ಕೆ ಭೇಟಿ ನೀಡಿದಾಗ, ಆಪರೇಷನ್ ಸಿಂಧೂರ್ನ ಯಶಸ್ಸಿನ ಘೋಷಣೆಗಳು ಮತ್ತು ಹಾರಾಡುತ್ತಿದ್ದ ತ್ರಿವರ್ಣ ಧ್ವಜಗಳೊಂದಿಗೆ ದೇಶಭಕ್ತಿಯ ಉತ್ಸಾಹವನ್ನು ಅನುಭವಿಸಿದೆ. ಈ ದೃಶ್ಯ ಅದ್ಭುತವಾಗಿತ್ತು ಮತ್ತು ಈ ಭಾವನೆ ಕೇವಲ ಗುಜರಾತ್ ನಲ್ಲಿ ಮಾತ್ರವಲ್ಲ, ಭಾರತದ ಮೂಲೆಮೂಲೆಯಲ್ಲೂ ಮತ್ತು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲೂ ಇತ್ತು. ಭಾರತವು ಭಯೋತ್ಪಾದನೆಯ ಮುಳ್ಳನ್ನು ಕಿತ್ತೊಗೆಯಲು ನಿರ್ಧರಿಸಿತ್ತು ಮತ್ತು ಅದನ್ನು ದೃಢ ಸಂಕಲ್ಪದಿಂದ ಸಾಧಿಸಿತು ಎಂದು ಪ್ರಧಾನಮಂತ್ರಿಗಳು ನುಡಿದರು.

ನವದೆಹಲಿಯಲ್ಲಿ ನಡೆದ ಸೋಲ್ ಲೀಡರ್‌ಶಿಪ್ ಕಾನ್ ಕ್ಲೆವ್ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಭಾಷಣ

February 21st, 11:30 am

ಭೂತಾನ್ ಪ್ರಧಾನಮಂತ್ರಿ, ನನ್ನ ಸಹೋದರ ದಾಶೋ ತ್ಸೆರಿಂಗ್ ಟೋಬ್ಗೆ ಜಿ, ಸೋಲ್ ಬೋರ್ಡ್ ಅಧ್ಯಕ್ಷ ಸುಧೀರ್ ಮೆಹ್ತಾ, ಉಪಾಧ್ಯಕ್ಷ ಹನ್ಸುಮುಖ್ ಅಧಿಯಾ, ತಮ್ಮ ಜೀವನದಲ್ಲಿ, ತಮ್ಮ ಕ್ಷೇತ್ರಗಳಲ್ಲಿ ನಾಯಕತ್ವವನ್ನು ಒದಗಿಸುವಲ್ಲಿ ಯಶಸ್ವಿಯಾದ ಕೈಗಾರಿಕಾ ಜಗತ್ತಿನ ದಿಗ್ಗಜರು ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳನ್ನು ನಾನು ಇಲ್ಲಿ ನೋಡುತ್ತಿದ್ದೇನೆ. ಭವಿಷ್ಯಕ್ಕಾಗಿ ಕಾಯುತ್ತಿರುವ ನನ್ನ ಯುವ ಸ್ನೇಹಿತರನ್ನೂ ನಾನು ಇಲ್ಲಿ ನೋಡುತ್ತಿದ್ದೇನೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೋಲ್ ಲೀಡರ್ ಷಿಪ್ ಸಮ್ಮೇಳನದ ಮೊದಲ ಆವೃತ್ತಿಯನ್ನು ಉದ್ಘಾಟಿಸಿದರು

February 21st, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್ ಷಿಪ್ (ಸೋಲ್) ಲೀಡರ್ ಷಿಪ್ ಸಮ್ಮೇಳನ 2025 ಅನ್ನು ಉದ್ಘಾಟಿಸಿದರು. ಎಲ್ಲಾ ಗೌರವಾನ್ವಿತ ನಾಯಕರು ಮತ್ತು ಭವಿಷ್ಯದ ಮುಂಬರುವ ಯುವ ನಾಯಕರನ್ನು ಸ್ವಾಗತಿಸಿದ ಶ್ರೀ ನರೇಂದ್ರ ಮೋದಿ ಅವರು, ಕೆಲವು ಘಟನೆಗಳು ಬಹಳ ಪ್ರಿಯವಾಗಿವೆ ಮತ್ತು ಇಂದು ಅಂತಹ ಒಂದು ಕಾರ್ಯಕ್ರಮವಾಗಿದೆ ಎಂದರು. ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ನಾಗರಿಕರ ಅಭಿವೃದ್ಧಿ ಅಗತ್ಯ, ಪ್ರತಿಯೊಂದು ಕ್ಷೇತ್ರದಲ್ಲೂ ಅತ್ಯುತ್ತಮ ನಾಯಕರ ಅಭಿವೃದ್ಧಿ ಅಗತ್ಯ ಎಂದು ಪ್ರಧಾನಿ ಹೇಳಿದರು. ಪ್ರತಿಯೊಂದು ಕ್ಷೇತ್ರದಲ್ಲೂ ಅತ್ಯುತ್ತಮ ನಾಯಕರನ್ನು ರೂಪಿಸುವುದು ಅಗತ್ಯವಾಗಿದೆ, ಇದು ಸಮಯದ ಅಗತ್ಯವಾಗಿದೆ ಎಂದು ಅವರು ಹೇಳಿದರು. ಆದ್ದರಿಂದ, ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್ ಷಿಪ್ ವಿಕಸಿತ ಭಾರತದ ಅಭಿವೃದ್ಧಿಯ ಪಯಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ ಎಂದು ಅವರು ಒತ್ತಿ ಹೇಳಿದರು. ಆತ್ಮವು ಕೇವಲ ಸಂಘಟನೆಯ ಹೆಸರಿನಲ್ಲಿಲ್ಲ ಎಂದು ಹೇಳಿದ ಪ್ರಧಾನಮಂತ್ರಿ ಅವರು, ಆತ್ಮವು ಭಾರತದ ಸಾಮಾಜಿಕ ಜೀವನದ ಆತ್ಮವಾಗಲಿದೆ ಎಂದರು. ಇನ್ನೊಂದು ಅರ್ಥದಲ್ಲಿ, ಆತ್ಮವು ಆಧ್ಯಾತ್ಮಿಕ ಅನುಭವದ ಸಾರವನ್ನು ಸುಂದರವಾಗಿ ಸೆರೆಹಿಡಿಯುತ್ತದೆ ಎಂದು ಅವರು ಹೇಳಿದರು. ಸೋಲ್ ನ ಎಲ್ಲ ಪಾಲುದಾರರಿಗೆ ಶುಭಾಶಯಗಳನ್ನು ತಿಳಿಸಿದ ಶ್ರೀ ನರೇಂದ್ರ ಮೋದಿ ಅವರು, ಮುಂದಿನ ದಿನಗಳಲ್ಲಿ ಗುಜರಾತ್ ನ ಗಿಫ್ಟ್ ಸಿಟಿ ಬಳಿ ಸೋಲ್ ನ ಹೊಸ, ವಿಶಾಲವಾದ ಕ್ಯಾಂಪಸ್ ಸಿದ್ಧವಾಗಲಿದೆ ಎಂದು ಘೋಷಿಸಿದರು.

16ನೇ ಬ್ರಿಕ್ಸ್ ಶೃಂಗಸಭೆಯ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಇಂಗ್ಲಿಷ್ ಭಾಷಣದ ಅನುವಾದ

October 23rd, 05:22 pm

ಮತ್ತೊಮ್ಮೆ, ಬ್ರಿಕ್ಸ್ ಗೆ ಸೇರ್ಪಡೆಗೊಂಡ ಎಲ್ಲಾ ಹೊಸ ಸ್ನೇಹಿತರಿಗೆ ಆತ್ಮೀಯ ಸ್ವಾಗತ. ಅದರ ಹೊಸ ಅವತಾರದಲ್ಲಿ, BRICS ವಿಶ್ವದ ಮಾನವೀಯತೆಯ 40 ಪ್ರತಿಶತ ಮತ್ತು ಜಾಗತಿಕ ಆರ್ಥಿಕತೆಯ ಸುಮಾರು 30 ಪ್ರತಿಶತವನ್ನು ಹೊಂದಿದೆ.

16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರು ಭಾಗವಹಿಸಿದರು

October 23rd, 03:10 pm

ಬ್ರಿಕ್ಸ್ ನಾಯಕರು ಬಹುರಾಷ್ಟ್ರೀಯತೆಯನ್ನು ಬಲಪಡಿಸುವುದು, ಭಯೋತ್ಪಾದನೆಯನ್ನು ಎದುರಿಸುವುದು, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು, ಸುಸ್ಥಿರ ಅಭಿವೃದ್ಧಿಯನ್ನು ಮುಂದುವರಿಸುವುದು ಮತ್ತು ಗ್ಲೋಬಲ್ ಸೌತ್ (ಜಾಗತಿಕ ದಕ್ಷಿಣದ)ನ ಕಾಳಜಿಗಳ ಬಗ್ಗೆ ಗಮನ ಸೆಳೆಯುವುದು ಸೇರಿದಂತೆ ಫಲಪ್ರದ ಚರ್ಚೆಗಳನ್ನು ನಡೆಸಿದರು. 13 ಹೊಸ ಬ್ರಿಕ್ಸ್ ಪಾಲುದಾರ ರಾಷ್ಟ್ರಗಳನ್ನು ನಾಯಕರು ಸ್ವಾಗತಿಸಿದರು.

ಗುಜರಾತ್ ನ ಅಹಮದಾಬಾದ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ/ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣ

September 16th, 04:30 pm

ಗುಜರಾತ್ ರಾಜ್ಯಪಾಲರು, ಆಚಾರ್ಯ ದೇವವ್ರತ್ ಜಿ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಸಿ.ಆರ್.ಪಾಟೀಲ್, ಎಲ್ಲಾ ರಾಜ್ಯಪಾಲರು, ಉಪಮುಖ್ಯಮಂತ್ರಿಗಳು, ಸಂಸದರು, ವಿಧಾನಸಭೆಯ ಸದಸ್ಯರು, ಇತರ ಸಾರ್ವಜನಿಕ ಪ್ರತಿನಿಧಿಗಳು ಸೇರಿದ್ದಾರೆ. ದೇಶದ ವಿವಿಧ ಭಾಗಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಇತರ ಜನಪ್ರತಿನಿಧಿಗಳು ಮತ್ತು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿರುವ ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ.

ಗುಜರಾತ್ ನ ಅಹ್ಮದಾಬಾದ್ ನಲ್ಲಿ 8,000 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನ ಮಂತ್ರಿ

September 16th, 04:02 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಅಹ್ಮದಾಬಾದ್ ನಲ್ಲಿ ರೈಲ್ವೆ, ರಸ್ತೆ, ವಿದ್ಯುತ್, ವಸತಿ ಮತ್ತು ಹಣಕಾಸು ಕ್ಷೇತ್ರಗಳ 8,000 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇದಕ್ಕೂ ಮುನ್ನ ಶ್ರೀ ಮೋದಿ ಅವರು ಅಹಮದಾಬಾದ್ ಮತ್ತು ಭುಜ್ ನಡುವಿನ ಭಾರತದ ಮೊದಲ ನಮೋ ಭಾರತ್ ಕ್ಷಿಪ್ರ ರೈಲನ್ನು ಉದ್ಘಾಟಿಸಿದರು. ನಾಗ್ಪುರದಿಂದ ಸಿಕಂದರಾಬಾದ್, ಕೊಲ್ಹಾಪುರದಿಂದ ಪುಣೆ, ಆಗ್ರಾ ಕಂಟೋನ್ಮೆಂಟ್ನಿಂದ ಬನಾರಸ್, ದುರ್ಗ ದಿಂದ ವಿಶಾಖಪಟ್ಟಣಂ, ಪುಣೆಯಿಂದ ಹುಬ್ಬಳ್ಳಿ ಮತ್ತು ವಾರಣಾಸಿಯಿಂದ ದಿಲ್ಲಿಗೆ ಮೊದಲ 20 ಬೋಗಿಗಳ ವಂದೇ ಭಾರತ್ ರೈಲಿಗೆ ಅವರು ಹಸಿರು ನಿಶಾನೆ ತೋರಿದರು. ಇದಲ್ಲದೆ, ಅವರು ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರದ ಏಕ ಗವಾಕ್ಷಿ ಐಟಿ ಸಿಸ್ಟಮ್ (ಸ್ವಿಟ್ಸ್) ಗೆ ಚಾಲನೆ ನೀಡಿದರು.

ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರದ ಉದ್ಘಾಟನೆ ಮತ್ತು ಬೋಯಿಂಗ್ ಸುಕನ್ಯಾ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

January 19th, 03:15 pm

ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಜೀ, ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಜೀ, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಜೀ, ಭಾರತದಲ್ಲಿ ಬೋಯಿಂಗ್ ಕಂಪನಿಯ ಸಿಒಒ ಸ್ಟೆಫನಿ ಪೋಪ್, ಇತರ ಉದ್ಯಮ ಪಾಲುದಾರರು, ಮಹಿಳೆಯರೇ ಮತ್ತು ಮಹನೀಯರೇ!

ಪ್ರಧಾನಿ ಅವರಿಂದ ಕರ್ನಾಟಕದ ಬೆಂಗಳೂರಿನಲ್ಲಿ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರದ ಕ್ಯಾಂಪಸ್ ಉದ್ಘಾಟನೆ

January 19th, 02:52 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರ್ನಾಟಕದ ಬೆಂಗಳೂರಿನಲ್ಲಿಂದು ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಬಿಐಇಟಿಸಿ)ಯ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಿದರು. ಇದನ್ನು 1,600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 43 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಇದು ಅಮೆರಿಕಾದ ಹೊರಗೆ ಸ್ಥಾಪನೆಯಾಗಿರುವ ಬೃಹತ್ ಬೋಯಿಂಗ್ ಆಗಿದೆ. ಪ್ರಧಾನಮಂತ್ರಿ ಅವರು ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವೈಮಾನಿಕ ವಲಯದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳ ಪ್ರವೇಶವನ್ನು ಬೆಂಬಲಿಸುವ ಗುರಿ ಇರುವ ಬೋಯಿಂಗ್ ಸುಕನ್ಯಾ ಕಾರ್ಯಕ್ರಮಕ್ಕೂ ಚಾಲನೆ ನೀಡಿದರು.

ಜಿಐಎಫ್‌ಟಿ ನಗರದಲ್ಲಿ ಗ್ಲೋಬಲ್ ಫಿನ್‌ಟೆಕ್ ಫೋರಮ್‌ನಲ್ಲಿ ಪ್ರಧಾನಮಂತ್ರಿಗಳು ಭಾಗಿ

January 10th, 10:06 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಜಿಐಎಫ್‌ಟಿʼ ಸಿಟಿಯಲ್ಲಿ ನಡೆದ ಗ್ಲೋಬಲ್ ಫಿನ್‌ಟೆಕ್ ಫೋರಂನಲ್ಲಿ ಭಾಗವಹಿಸಿದ್ದರು.