ಅಕ್ರಾದ ನುಕ್ರುಮಾ ಸ್ಮಾರಕ ಉದ್ಯಾನವನದಲ್ಲಿ ಪ್ರಧಾನಮಂತ್ರಿ ಗೌರವ ನಮನ

July 03rd, 03:50 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘಾನಾ ರಾಷ್ಟ್ರದ ಅಕ್ರಾದಲ್ಲಿರುವ ನುಕ್ರುಮಾ ಸ್ಮಾರಕ ಉದ್ಯಾನವನಕ್ಕೆ ಭೇಟಿ ನೀಡಿ, ಘಾನಾದ ಸಂಸ್ಥಾಪಕ ಅಧ್ಯಕ್ಷರು ಮತ್ತು ಆಫ್ರಿಕಾದ ಸ್ವಾತಂತ್ರ್ಯ ಚಳವಳಿಯ ನೇತಾರರಾದ ಡಾ. ಕ್ವಾಮೆ ನುಕ್ರುಮಾ ಅವರಿಗೆ ಗೌರವ ನಮನ ಸಲ್ಲಿಸಿದರು. ಘಾನಾದ ಉಪಾಧ್ಯಕ್ಷರಾದ ಮಾನ್ಯ ಪ್ರೊ. ನಾನಾ ಜೇನ್ ಒಪೊಕು-ಅಗ್ಯೆಮಾಂಗ್ ಅವರು ಪ್ರಧಾನಮಂತ್ರಿ ಅವರ ಜೊತೆಗಿದ್ದರು. ಸ್ವಾತಂತ್ರ್ಯ, ಏಕತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಡಾ. ಉನ್ ಕ್ರುಮಾ ಅವರ ದೀರ್ಘಕಾಲ ಉಳಿಯುವ ಕೊಡುಗೆಗಳ ಗೌರವಾರ್ಥ ಪ್ರಧಾನಮಂತ್ರಿ ಅವರು ಪುಷ್ಪಗುಚ್ಛವನ್ನಿರಿಸಿ ಒಂದು ಕ್ಷಣ ಮೌನ ಆಚರಿಸಿದರು.

ಘಾನಾ ಗಣರಾಜ್ಯದ ಸಂಸತ್ತನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಪಠ್ಯ

July 03rd, 03:45 pm

ಪ್ರಜಾಪ್ರಭುತ್ವ, ಘನತೆ ಮತ್ತು ದೃಢತೆಯ ಚೈತನ್ಯವನ್ನು ಹೊರಸೂಸುವ ಘಾನಾದಲ್ಲಿ ಇರುವುದು ಒಂದು ಸೌಭಾಗ್ಯ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರತಿನಿಧಿಯಾಗಿ, ನಾನು 140 ಕೋಟಿ ಭಾರತೀಯರ ಸದ್ಭಾವನೆ ಮತ್ತು ಶುಭಾಶಯಗಳನ್ನು ನನ್ನೊಂದಿಗೆ ತಂದಿದ್ದೇನೆ.

ಘಾನಾ ಸಂಸತ್ತನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

July 03rd, 03:40 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಘಾನಾ ಸಂಸತ್ತಿನ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ, ಈ ಸಾಧನೆ ಮಾಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಂಸತ್ತಿನ ಸ್ಪೀಕರ್ ಗೌರವಾನ್ವಿತ ಆಲ್ಬನ್ ಕಿಂಗ್ಸ್‌ಫೋರ್ಡ್ ಸುಮನಾ ಬಾಗ್ಬಿನ್ ಅವರು ಕರೆದಿದ್ದ ಈ ಅಧಿವೇಶನದಲ್ಲಿ ಸಂಸತ್ ಸದಸ್ಯರು, ಸರ್ಕಾರಿ ಅಧಿಕಾರಿಗಳು ಮತ್ತು ಎರಡೂ ರಾಷ್ಟ್ರಗಳ ಗಣ್ಯ ಅತಿಥಿಗಳು ಭಾಗವಹಿಸಿದ್ದರು. ಈ ಭಾಷಣವು ಭಾರತ-ಘಾನಾ ಸಂಬಂಧಗಳಲ್ಲಿ ಮಹತ್ವದ ಕ್ಷಣವನ್ನು ದಾಖಲಿಸಿತು, ಇದು ಎರಡೂ ದೇಶಗಳನ್ನು ಒಂದುಗೂಡಿಸುವ ಪರಸ್ಪರ ಗೌರವ ಮತ್ತು ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ.

ಫಲಿತಾಂಶಗಳ ಪಟ್ಟಿ: ಘಾನಾಕ್ಕೆ ಪ್ರಧಾನಮಂತ್ರಿ ಅವರ ಅಧಿಕೃತ ಭೇಟಿ

July 03rd, 04:01 am

ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ (ಸಿಇಪಿ): ಕಲೆ, ಸಂಗೀತ, ನೃತ್ಯ, ಸಾಹಿತ್ಯ ಮತ್ತು ಪರಂಪರೆಯಲ್ಲಿ ಹೆಚ್ಚಿನ ಸಾಂಸ್ಕೃತಿಕ ತಿಳುವಳಿಕೆ ಮತ್ತು ವಿನಿಮಯವನ್ನು ಉತ್ತೇಜಿಸುವುದು.

“ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ” ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ

July 03rd, 02:15 am

ಘಾನಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ “ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ” ಅನ್ನು ಸ್ವತಃ ಅಧ್ಯಕ್ಷರು ನನಗೆ ಪ್ರದಾನ ಮಾಡಿರುವುದು ನನ್ನ ಸೌಭಾಗ್ಯ ಮತ್ತು ನನಗೆ ಸಂದ ಮಹಾನ್ ಗೌರವವೆಂದು ಭಾವಿಸುತ್ತೇನೆ.

ಪ್ರಧಾನಮಂತ್ರಿಗಳಿಗೆ ಘಾನಾದ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

July 03rd, 02:12 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವಿಶಿಷ್ಟ ರಾಜನೀತಿ ಮತ್ತು ಪ್ರಭಾವಶಾಲಿ ಜಾಗತಿಕ ನಾಯಕತ್ವಕ್ಕಾಗಿ ಘಾನಾ ಅಧ್ಯಕ್ಷರಾದ ಮಾನ್ಯ ಜಾನ್ ಡ್ರಾಮಾನಿ ಮಹಮ ಅವರು ಘಾನಾದ ರಾಷ್ಟ್ರೀಯ ಗೌರವವಾದ ಆಫೀಸರ್ - ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ - ಪ್ರದಾನ ಮಾಡಿದರು. 140 ಕೋಟಿ ಭಾರತೀಯರ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದ ಪ್ರಧಾನಮಂತ್ರಿ ಅವರು, ಈ ಪ್ರಶಸ್ತಿಯನ್ನು ಭಾರತದ ಯುವಜನರ ಆಕಾಂಕ್ಷೆಗಳು, ದೇಶದ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ವೈವಿಧ್ಯತೆ ಹಾಗೂ ಘಾನಾ ಮತ್ತು ಭಾರತದ ನಡುವಿನ ಐತಿಹಾಸಿಕ ಸಂಬಂಧಗಳಿಗೆ ಅರ್ಪಿಸುವುದಾಗಿ ಹೇಳಿದರು.

ಘಾನಾ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ

July 03rd, 01:15 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಘಾನಾದ ಅಧ್ಯಕ್ಷರಾದ, ಗೌರವಾನ್ವಿತ ಡಾ. ಜಾನ್ ಡ್ರಾಮಾನಿ ಮಹಾಮಾ ಅವರನ್ನು ಭೇಟಿ ಮಾಡಿದರು. ಜ್ಯೂಬಿಲಿ ಹೌಸ್ ಗೆ ಆಗಮಿಸಿದ ಪ್ರಧಾನಮಂತ್ರಿಯವರನ್ನು ಅಧ್ಯಕ್ಷ ಮಹಾಮಾ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಕಳೆದ ಮೂರು ದಶಕಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಘಾನಾಕ್ಕೆ ನೀಡುತ್ತಿರುವ ಮೊದಲ ಅಧಿಕೃತ ಭೇಡಿ ಇದಾಗಿದೆ.

ಘಾನಾ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ

July 03rd, 12:32 am

ಮೂರು ದಶಕಗಳ ಸುದೀರ್ಘ ಅಂತರದ ನಂತರ, ಭಾರತದ ಪ್ರಧಾನಮಂತ್ರಿಯೊಬ್ಬರು ಘಾನಾಗೆ ಭೇಟಿ ನೀಡುತ್ತಿದ್ದಾರೆ.

ದೇಶದ ಅಧಿಕೃತ ಭೇಟಿ ನಿಮಿತ್ತ ಘಾನಾಕ್ಕೆ ಆಗಮಿಸಿದ ಪ್ರಧಾನಮಂತ್ರಿ

July 02nd, 09:20 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಘಾನಾ ದೇಶದ ಅಧಿಕೃತ ಪ್ರವಾಸದ ನಿಟ್ಟಿನಲ್ಲಿ ಇಂದು ಅಕ್ರಾಗೆ ಆಗಮಿಸಿದರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಮಂತ್ರಿ ಅವರನ್ನು ಘಾನಾ ಅಧ್ಯಕ್ಷ ಘನತೆವೆತ್ತ ಶ್ರೀ ಜಾನ್ ಡ್ರಾಮಣಿ ಮಹಾಮಾ ಅವರು ದೇಶದ ವಿಶೇಷ ಆಚರಣೆಗಳ ಮೂಲಕ ವಿಧ್ಯುಕ್ತ ಸ್ವಾಗತ ನೀಡಿ ಸ್ವಾಗತಿಸಿದರು. ಅವರ ಈ ಸ್ವಾಗತವು ಎರಡು ರಾಷ್ಟ್ರಗಳ ನಡುವಿನ ಸ್ನೇಹದ ಬಲವಾದ ಮತ್ತು ಐತಿಹಾಸಿಕ ಬಂಧಗಳನ್ನು ಪ್ರತಿಬಿಂಬಿಸುತ್ತದೆ.

ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾ ಭೇಟಿಯ ಮುನ್ನ ಪ್ರಧಾನಮಂತ್ರಿ ಅವರ ನಿರ್ಗಮನ ಹೇಳಿಕೆ

July 02nd, 07:34 am

ಇಂದು, ನಾನು ಜುಲೈ 2 ರಿಂದ 9, 2025 ರವರೆಗೆ ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾಕ್ಕೆ ಐದು ರಾಷ್ಟ್ರಗಳ ಭೇಟಿಯನ್ನು ಕೈಗೊಳ್ಳುತ್ತೇನೆ

ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾಕ್ಕೆ ಪ್ರಧಾನಮಂತ್ರಿ ಅವರ ಭೇಟಿ (ಜುಲೈ 02-09)

June 27th, 10:03 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಜುಲೈ 02ರಿಂದ 3ರವರೆಗೆ ಘಾನಾಕ್ಕೆ ಭೇಟಿ ನೀಡಲಿದ್ದಾರೆ. ಇದು ಘಾನಾಕ್ಕೆ ಪ್ರಧಾನಮಂತ್ರಿ ಅವರ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಭಾರತದಿಂದ ಘಾನಾಕ್ಕೆ ಪ್ರಧಾನಮಂತ್ರಿ ಅವರ ಈ ಭೇಟಿ ಮೂರು ದಶಕಗಳ ನಂತರ ನಡೆಯುತ್ತಿದೆ. ಈ ಭೇಟಿಯ ಸಮಯದಲ್ಲಿ, ಪ್ರಧಾನಮಂತ್ರಿ ಅವರು ಘಾನಾ ಅಧ್ಯಕ್ಷರೊಂದಿಗೆ ಬಲವಾದ ದ್ವಿಪಕ್ಷೀಯ ಪಾಲುದಾರಿಕೆಯನ್ನು ಪರಿಶೀಲಿಸಲು ಮತ್ತು ಆರ್ಥಿಕ, ಇಂಧನ ಮತ್ತು ರಕ್ಷಣಾ ಸಹಯೋಗ ಮತ್ತು ಅಭಿವೃದ್ಧಿ ಸಹಕಾರ ಪಾಲುದಾರಿಕೆಯ ಮೂಲಕ ಅದನ್ನು ಹೆಚ್ಚಿಸಲು ಹೆಚ್ಚಿನ ಮಾರ್ಗಗಳ ಬಗ್ಗೆ ಚರ್ಚಿಸಲು ಮಾತುಕತೆ ನಡೆಸಲಿದ್ದಾರೆ. ಈ ಭೇಟಿಯು ದ್ವಿಪಕ್ಷೀಯ ಸಂಬಂಧಗಳನ್ನು ಆಳಗೊಳಿಸಲು ಮತ್ತು ಇಕೋವಾಸ್ (ಪಶ್ಚಿಮ ಆಫ್ರಿಕಾ ರಾಜ್ಯಗಳ ಆರ್ಥಿಕ ಸಮುದಾಯ) ಮತ್ತು ಆಫ್ರಿಕನ್ ಒಕ್ಕೂಟದೊಂದಿಗೆ ಭಾರತದ ಸಂಬಂಧವನ್ನು ಬಲಪಡಿಸಲು ಉಭಯ ದೇಶಗಳ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

PM Modi holds bilateral talks with leaders of African countries

March 10th, 04:59 pm

PM Narendra Modi held bilateral talks with leaders of African countries and discussed ways to strengthen cooperation with them. The PM met leaders from Ghana, Côte d'Ivoire, Equatorial Guinea, Niger, Chad and Nauru.

India-Africa Summit: PM meets African leaders

October 28th, 11:24 am