ಜಿ-7 ಶೃಂಗಸಭೆಯ ನೇಪಥ್ಯದಲ್ಲಿ ಜರ್ಮನಿಯ ಚಾನ್ಸೆಲರ್ ಅವರನ್ನು ಭೇಟಿಯಾದ ಪ್ರಧಾನಮಂತ್ರಿ ಶ್ರೀ ಮೋದಿ

June 17th, 11:58 pm

ಕೆನಡಾದ ಕನನಾಸ್ಕಿಸ್‌ನಲ್ಲಿ ನಡೆದ ಜಿ-7 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಜರ್ಮನಿಯ ಚಾನ್ಸೆಲರ್ ಗೌರವಾನ್ವಿತ ಶ್ರೀ ಫ್ರೆಡ್ರಿಕ್ ಮೆರ್ಜ್ ಅವರನ್ನು ಭೇಟಿಯಾದರು. 2025 ಮೇ ತಿಂಗಳಲ್ಲಿ ಚಾನ್ಸೆಲರ್ ಮೆರ್ಜ್ ಅಧಿಕಾರ ವಹಿಸಿಕೊಂಡ ನಂತರ ಉಭಯ ನಾಯಕರ ನಡುವಿನ ಮೊದಲ ಭೇಟಿ ಇದಾಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರ ವಹಿಸಿಕೊಂಡಿದ್ದಕ್ಕಾಗಿ ಪ್ರಧಾನಮಂತ್ರಿ ಮೆರ್ಜ್ ಅವರನ್ನು ಅಭಿನಂದಿಸಿದರು. ಕಳೆದ ವಾರ ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತ ದುರಂತದ ಬಗ್ಗೆ ಜರ್ಮನ್ ಸರ್ಕಾರ ವ್ಯಕ್ತಪಡಿಸಿದ ಸಂತಾಪಕ್ಕೆ ಅವರು ಆಳವಾದ ಕೃತಜ್ಞತೆ ವ್ಯಕ್ತಪಡಿಸಿದರು.

Prime Minister Narendra Modi congratulates Chancellor Friedrich Merz on assuming office

May 20th, 06:25 pm

Prime Minister Shri Narendra Modi held a telephone conversation with Mr. Friedrich Merz today and congratulated him on assuming office as the Chancellor of the Federal Republic of Germany.

ಜರ್ಮನಿಯ ಚಾನ್ಸೆಲರ್ ಆಗಿ ಅಧಿಕಾರ ವಹಿಸಿಕೊಂಡ ಫ್ರೆಡ್ರಿಕ್ ಮೆರ್ಜ್ ಅವರಿಗೆ ಪ್ರಧಾನಿ ಅಭಿನಂದನೆ

May 06th, 09:53 pm

ಜರ್ಮನಿಯ ಫೆಡರಲ್ ಚಾನ್ಸೆಲರ್ ಆಗಿ ಅಧಿಕಾರ ವಹಿಸಿಕೊಂಡ ಶ್ರೀ ಫ್ರೆಡ್ರಿಕ್ ಮೆರ್ಜ್ ಅವರಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.