Prime Minister Narendra Modi pays tribute to Sri Aurobindo on his birth anniversary

August 15th, 10:09 am

Prime Minister Shri Narendra Modi today paid his tributes to Sri Aurobindo on the occasion of his birth anniversary. He stated that a towering philosopher, nationalist, poet, and thinker, Sri Aurobindo dedicated his life to India’s freedom as well as to the larger quest for human progress.

India celebrates 80th Independence Day

August 15th, 06:45 am

PM Modi, in his address to the nation on the 80th Independence Day from the Red Fort, spoke about the dream of building a Viksit Bharat by 2047, powered by the strength and resolve of 140 crore Indians. He highlighted key initiatives such as the SHANTI Act, Railway electrification, India’s trade deals, the end of Naxalism and more. He called upon the nation to embrace 'Shakti Ki Saptadhara'.

ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಭಾಗವಹಿಸಿದ ಶೂರರಿಗೆ ಪ್ರಧಾನಮಂತ್ರಿ ಗೌರವ ನಮನ

August 09th, 10:32 am

ಭಾರತ ಬಿಟ್ಟು ತೊಲಗಿ ಐತಿಹಾಸಿಕ ಚಳವಳಿಯಲ್ಲಿ ಭಾಗವಹಿಸಿದ ಎಲ್ಲರನ್ನೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಮರಿಸಿದ್ದಾರೆ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಶೌರ್ಯ ಮತ್ತು ದೃಢಸಂಕಲ್ಪಕ್ಕೆ ಗೌರವ ಸಮರ್ಪಿಸಿದ್ದಾರೆ. ಮಹಾತ್ಮಾ ಗಾಂಧಿಯವರ ನಾಯಕತ್ವದಿಂದ ಪ್ರೇರಿತವಾದ ಭಾರತ ಬಿಟ್ಟು ತೊಲಗಿ ಚಳವಳಿಯ ಕರೆಯು ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಚೈತನ್ಯ ತುಂಬಿತು ಮತ್ತು ವಸಾಹತುಶಾಹಿ ಆಳ್ವಿಕೆಯನ್ನು ತೊಡೆದು ಹಾಕಲು ಭಾರತದ ಜನರ ಅಚಲ ಸಂಕಲ್ಪವನ್ನು ಪ್ರತಿಬಿಂಬಿಸಿತ್ತು ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಐಐಟಿ ದೆಹಲಿಯ 57ನೇ ಘಟಿಕೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

August 08th, 11:15 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಐಐಟಿ ದೆಹಲಿಯ 57ನೇ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಿದರು. ಸಮಾರಂಭದ ಆಳವಾದ ಭಾವನಾತ್ಮಕ ಪ್ರತಿಸ್ಪಂದನವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಕ್ಯಾಂಪಸ್ ನ ರೋಮಾಂಚಕ, ಕನಸು ತುಂಬಿದ ವಾತಾವರಣವನ್ನು ಪ್ರಮುಖವಾಗಿ ಉಲ್ಲೇಖಿಸಿದರು. ಕೋವಿಡ್ ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಹಿಂದಿನ ವರ್ಚುವಲ್ ಹಾಜರಾತಿಯನ್ನು ನೆನಪಿಸಿಕೊಂಡ ಅವರು, ಪದವಿ ಪಡೆಯುತ್ತಿರುವ ವರ್ಗದ ನಡುವೆ ಭೌತಿಕವಾಗಿ ಹಾಜರಿರುವುದಕ್ಕೆ ತಮ್ಮ ವೈಯಕ್ತಿಕ ತೃಪ್ತಿಯನ್ನು ವ್ಯಕ್ತಪಡಿಸಿದರು. ಈ ಅದ್ಭುತ ಅನುಭವವನ್ನು ಇಂದು ಈ ಕ್ಯಾಂಪಸ್ ನಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುವುದು ನನಗೂ ತುಂಬಾ ವಿಶೇಷ ಸಂಗತಿಯಾಗಿದೆ ಎಂದು ಶ್ರೀ ಮೋದಿ ಹೇಳಿದರು.

ಐಐಟಿ ದೆಹಲಿಯ 57ನೇ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

August 08th, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಐಐಟಿ ದೆಹಲಿಯ 57ನೇ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಿದರು. ಸಮಾರಂಭದ ಆಳವಾದ ಭಾವನಾತ್ಮಕ ಪ್ರತಿಸ್ಪಂದನವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಕ್ಯಾಂಪಸ್ ನ ರೋಮಾಂಚಕ, ಕನಸು ತುಂಬಿದ ವಾತಾವರಣವನ್ನು ಪ್ರಮುಖವಾಗಿ ಉಲ್ಲೇಖಿಸಿದರು. ಕೋವಿಡ್ ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಹಿಂದಿನ ವರ್ಚುವಲ್ ಹಾಜರಾತಿಯನ್ನು ನೆನಪಿಸಿಕೊಂಡ ಅವರು, ಪದವಿ ಪಡೆಯುತ್ತಿರುವ ವರ್ಗದ ನಡುವೆ ಭೌತಿಕವಾಗಿ ಹಾಜರಿರುವುದಕ್ಕೆ ತಮ್ಮ ವೈಯಕ್ತಿಕ ತೃಪ್ತಿಯನ್ನು ವ್ಯಕ್ತಪಡಿಸಿದರು. ಈ ಅದ್ಭುತ ಅನುಭವವನ್ನು ಇಂದು ಈ ಕ್ಯಾಂಪಸ್ ನಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುವುದು ನನಗೂ ತುಂಬಾ ವಿಶೇಷ ಸಂಗತಿಯಾಗಿದೆ ಎಂದು ಶ್ರೀ ಮೋದಿ ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಪಿಂಗಳಿ ವೆಂಕಯ್ಯನವರ 150ನೇ ಜನ್ಮ ದಿನಾಚರಣೆಯಂದು ಪ್ರಧಾನಮಂತ್ರಿ ಅವರಿಂದ ಗೌರವ ನಮನ

August 02nd, 08:38 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಪಿಂಗಳಿ ವೆಂಕಯ್ಯನವರ 150ನೇ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಚಂದ್ರಶೇಖರ್ ಆಜಾದ್ ಅವರ ಜನ್ಮ ಜಯಂತಿಯಂದು ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

July 23rd, 08:22 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಚಂದ್ರಶೇಖರ್ ಆಜಾದ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಚಂದ್ರಶೇಖರ್ ಆಜಾದ್ ಅವರ ನಿರ್ಭೀತ ಧೈರ್ಯ ಮತ್ತು ಅಚಲ ದೇಶಭಕ್ತಿಯು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಹೆಮ್ಮೆಯ ಸ್ಥಾನವನ್ನು ಪಡೆದುಕೊಂಡಿದೆ ಎಂದು ಅವರು ತಿಳಿಸಿದರು.

ಲೋಕಮಾನ್ಯ ತಿಲಕ್ ಅವರ ಜನ್ಮ ಜಯಂತಿಯಂದು ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

July 23rd, 08:12 am

ಲೋಕಮಾನ್ಯ ತಿಲಕ್ ಅವರ ಜನ್ಮ ಜಯಂತಿಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಅವರಿಗೆ ಗೌರವ ಸಲ್ಲಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಅತ್ಯುನ್ನತ ವ್ಯಕ್ತಿಯಾಗಿ, ಲೋಕಮಾನ್ಯ ತಿಲಕರು ರಾಷ್ಟ್ರೀಯತೆಯ ಚೈತನ್ಯವನ್ನು ಜಾಗೃತಗೊಳಿಸಿ, ಅವರ ಮುಂದಿನ ಪೀಳಿಗೆಯವರು ಜನರ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವಂತೆ ಪ್ರೇರೇಪಿಸಿದರು ಎಂದು ಹೇಳಿದರು.

ಮಹಾನ್ ಕ್ರಾಂತಿಕಾರಿ ಮಂಗಲ್ ಪಾಂಡೆ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

July 19th, 10:55 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾನ್ ಕ್ರಾಂತಿಕಾರಿ ಮಂಗಲ್ ಪಾಂಡೆ ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಅವರ ಕೆಚ್ಚೆದೆಯ ಜೀವನವು ಇಂದಿಗೂ ಪ್ರತಿಯೊಬ್ಬ ಭಾರತೀಯನಲ್ಲೂ ಹೆಮ್ಮೆಯನ್ನು ತುಂಬುತ್ತಿದೆ ಮತ್ತು ಅವರ ಶೌರ್ಯದ ಕಥೆಯು ರಾಷ್ಟ್ರದ ಪ್ರತಿಯೊಂದು ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಶ್ರೀ ಮೋದಿ ಹೇಳಿದರು.

ಬಂಕಿಮ್‌ ಚಂದ್ರ ಚಟ್ಟೋಪಾಧ್ಯಾಯ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

June 26th, 12:50 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾನ್‌ ವ್ಯಕ್ತಿ ಬಂಕಿಮ್‌ ಚಂದ್ರ ಚಟ್ಟೋಪಾಧ್ಯಾಯ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿ, ಅವರನ್ನು ಸ್ಮರಿಸಿದರು. ಅವರ ಬರಹಗಳು ಭಾರತೀಯರ ತಲೆಮಾರುಗಳಲ್ಲಿ ದೇಶಭಕ್ತಿ ಮತ್ತು ಸಾಂಸ್ಕೃತಿಕ ಹೆಮ್ಮೆಯ ಸೂಧಿರ್ತಿಯನ್ನು ಹುಟ್ಟುಹಾಕಿದ ಅತ್ಯುನ್ನತ ಸಾಹಿತ್ಯಕ ದಿಗ್ಗಜರಾಗಿದ್ದರು.

ವೀರ ಸಾವರ್ಕರ್ ಜಯಂತಿಯಂದು ಅವರನ್ನು ಸ್ಮರಿಸಿದ ಪ್ರಧಾನಮಂತ್ರಿ

May 28th, 09:52 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀರ ಸಾವರ್ಕರ್ ಅವರನ್ನು ಅವರ ಜಯಂತಿಯಂದು ಸ್ಮರಿಸಿದ್ದಾರೆ ಮತ್ತು ಅವರ ಧೈರ್ಯ, ದೇಶಭಕ್ತಿ ಮತ್ತು ಸಾಮಾಜಿಕ ಸುಧಾರಣೆಗೆ ನೀಡಿದ ಕೊಡುಗೆಗೆ ಗೌರವ ನಮನ ಸಲ್ಲಿಸಿದ್ದಾರೆ.

ಮಹಾರಾಣ ಪ್ರತಾಪ್ ಅವರ ಜಯಂತಿಯ ಅಂಗವಾಗಿ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

May 09th, 09:06 am

ಮಹಾರಾಣ ಪ್ರತಾಪ್ ಅವರು ಶೌರ್ಯ ಮತ್ತು ಪರಾಕ್ರಮದ ಅಮರ ಪ್ರತೀಕವಾಗಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಶ್ಯಾಮ್‌ಜಿ ಕೃಷ್ಣ ವರ್ಮ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

March 30th, 09:50 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಭಾರತ ಮಾತೆಯ ಧೈರ್ಯಶಾಲಿ ಪುತ್ರ ಶ್ಯಾಮ್‌ಜಿ ಕೃಷ್ಣ ವರ್ಮ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು. ತಮ್ಮ ಕ್ರಾಂತಿಕಾರಿ ವಿಚಾರಗಳಿಂದ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಹೊಸ ಪ್ರಜ್ಞೆಯನ್ನು ಜಾಗೃತಗೊಳಿಸಿದರು ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. “ಅವರ ಜೀವನ ಮತ್ತು ಆದರ್ಶಗಳು ದೇಶದ ಪ್ರತಿಯೊಂದು ಪೀಳಿಗೆಯನ್ನೂ ರಾಷ್ಟ್ರ ಸೇವೆಯತ್ತ ಪ್ರೇರೇಪಿಸುತ್ತಲೇ ಇರುತ್ತವೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

Prime Minister pays tribute to Bhagat Singh, Rajguru, and Sukhdev on Shaheed Diwas

March 23rd, 08:29 am

On the occasion of Shaheed Diwas, PM Modi paid rich tributes to the great freedom fighters Bhagat Singh, Rajguru and Sukhdev. Lauding their bravery, he observed that the martyrdom of these iconic heroes for the nation remains deeply etched in India's collective memory. He highlighted that they chose the path of sacrifice with conviction, placing the nation above their own lives..

ಪುದುಚೇರಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ

March 01st, 12:00 pm

ಪುದುಚೇರಿಯ ಮುಖ್ಯಮಂತ್ರಿ ಶ್ರೀ ಎನ್. ರಂಗಸ್ವಾಮಿ ಅವರೇ, ನನ್ನ ಕೇಂದ್ರ ಸಚಿವ ಸಂಪುಟದ ಸಹೋದ್ಯೋಗಿ ಶ್ರೀ ಮನ್ಸುಖ್ ಮಾಂಡವೀಯ ಅವರೇ, ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ಕೆ. ಕೈಲಾಸನಾಥನ್ ಅವರೇ, ಸಭಾಪತಿ ಶ್ರೀ ಆರ್. ಸೆಲ್ವಂ ಅವರೇ, ಗೃಹ ಸಚಿವ ಶ್ರೀ ಎ. ನಮಶಿವಾಯಂ ಅವರೇ, ಇತರ ನಾಯಕರೇ, ಪುದುಚೇರಿಯ ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ವಣಕ್ಕಂ!

ಪುದುಚೇರಿಯಲ್ಲಿ 2,700 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಚಾಲನೆ, ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು

March 01st, 11:45 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪುದುಚೇರಿಯಲ್ಲಿ 2,700 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಜನರ ಜೀವನವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ಸಂಚಾರ ಸೇರಿದಂತೆ ಪ್ರಮುಖ ವಲಯಗಳನ್ನು ಈ ಯೋಜನೆಗಳು ಒಳಗೊಂಡಿವೆ.

ವೀರ ಸಾವರ್ಕರ್ ಅವರ ಪುಣ್ಯತಿಥಿಯಂದು ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

February 26th, 11:25 am

ಮಹಾನ್ ಕ್ರಾಂತಿಕಾರಿ, ದೇಶಪ್ರೇಮಿ ವೀರ ಸಾವರ್ಕರ್ ಅವರ ಪುಣ್ಯತಿಥಿಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.

ವೀರ್ ಸಾವರ್ಕರ್ ಅವರ ಜೀವನದ ಪಾಠಗಳನ್ನು ಉಲ್ಲೇಖಿಸಿ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರದಾನಮಂತ್ರಿ

February 26th, 10:47 am

ವೀರ್ ಸಾವರ್ಕರ್ ಅವರ ಜೀವನದಿಂದ ನಾವು ಕಲಿಯಬೇಕಾದ ಪಾಠಗಳನ್ನು ಸಾರುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ.

ಭಾರತದ ರಾಷ್ಟ್ರಪತಿಯವರು ಆಯೋಜಿಸಿದ್ದ ರಾಜಾಜಿ ಉತ್ಸವದಲ್ಲಿ ಶ್ರೀ ಚಕ್ರವರ್ತಿ ರಾಜಗೋಪಾಲಾಚಾರಿ ಅವರನ್ನು ಗೌರವಿಸಿ ಸನ್ಮಾನಿಸಿದ್ದು ಮಹತ್ಕಾರ್ಯವಾಗಿದೆ, ಇದು ನಮ್ಮ ದೇಶದ ಹಣೆಬರಹವನ್ನು ರೂಪಿಸಿದವರನ್ನು ಗೌರವಿಸುವ ಮತ್ತು ವಸಾಹತುಶಾಹಿ ಮನಸ್ಥಿತಿಯ ಅವಶೇಷಗಳನ್ನು ಅಳಿಸುವ ಭಾರತದ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ" ಎಂದು ಪ್ರಧಾನಮಂತ್ರಿಯವರು ಶ್ಲಾಘಿಸಿದ್ದಾರೆ

February 23rd, 05:12 pm

ರಾಷ್ಟ್ರಪತಿ ಭವನದ ಅಶೋಕ ಮಂಟಪದ ಬಳಿಯಿರುವ ವೈಭವೋಪೇತ ತೆರೆದ ಮೆಟ್ಟಿಲು(ಗ್ರ್ಯಾಂಡ್ ಓಪನ್ ಸ್ಟೇರ್ಕೇಸ್)ಗಳಲ್ಲಿ ಸ್ಥಾಪಿಸಲಾದ ಚಕ್ರವರ್ತಿ ರಾಜಗೋಪಾಲಾಚಾರಿ ಅವರ ಪ್ರತಿಮೆಯನ್ನು ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಅನಾವರಣಗೊಳಿಸಿದರು.

ಗಾಂಧಿ ಸ್ಮೃತಿಯಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಪ್ರಧಾನಮಂತ್ರಿ ಭಾಗವಹಿಸಿದರು

January 30th, 07:32 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ಗಾಂಧಿ ಸ್ಮೃತಿಯಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದರು. ಬಾಪೂ ಅವರ ಪ್ರಯತ್ನಗಳು ನಮ್ಮ ಸ್ವಾತಂತ್ರ್ಯ ಹೋರಾಟದ ದಿಕ್ಕನ್ನು ಮರುರೂಪಗೊಳಿಸಿವೆ ಮತ್ತು ಭಾರತದ ಪ್ರಯಾಣದ ಮೇಲೆ ಗಾಢವಾದ ಗುರುತು ಬಿಟ್ಟಿವೆ, ಅದು ತಲೆಮಾರಿನಿಂದ ತಲೆಮಾರಿಗೆ ಇನ್ನೂ ಅನುಭವಿಸಲಾಗುತ್ತಿದೆ ಎಂದು ಶ್ರೀ ಮೋದಿ ಹೇಳಿದರು.