16ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯ ಚರ್ಚೆ ಕುರಿತು ಜಂಟಿ ಹೇಳಿಕೆ
July 02nd, 10:22 pm
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಜಪಾನ್ ಪ್ರಧಾನಮಂತ್ರಿ ಶ್ರೀಮತಿ ತಕೈಚಿ ಸಾನೆ ಅವರು 2026 ಜುಲೈ 1-3ರ ವರೆಗೆ 16ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದರು. ಪ್ರಧಾನಿ ತಕೈಚಿ ಅವರೊಂದಿಗೆ ಹಿರಿಯ ಅಧಿಕಾರಿಗಳು, ಸಿಇಒಗಳು ಮತ್ತು ಉದ್ಯಮ ವಲಯದ ದಿಗ್ಗಜರು ಸೇರಿದಂತೆ ಉನ್ನತ ಮಟ್ಟದ ನಿಯೋಗ ಆಗಮಿಸಿತ್ತು. ಇದು ಜಪಾನ್ ಪ್ರಧಾನಿ ತಕೈಚಿ ಅವರು ಭಾರತಕ್ಕೆ ನೀಡಿದ ಚೊಚ್ಚಲ ಅಧಿಕೃತ ಭೇಟಿಯಾಗಿತ್ತು.ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರ ಕುರಿತು ಭಾರತ-ಜಪಾನ್ ಜಂಟಿ ಹೇಳಿಕೆ
July 02nd, 10:14 pm
ಭಾರತದ ಪ್ರಧಾನ ಮಂತ್ರಿ ಮತ್ತು ಜಪಾನ್ ಪ್ರಧಾನಮಂತ್ರಿ ಅವರು ಕೃತಕ ಬುದ್ಧಿಮತ್ತೆ(ಎಐ)ಯು ಆರ್ಥಿಕತೆಗಳು, ಸಮಾಜಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಕೈಗಾರಿಕೆ ಮತ್ತು ಉದ್ಯಮ ವ್ಯವಹಾರ, ಆಡಳಿತ ಮತ್ತು ಭದ್ರತೆಯನ್ನು ಪರಿವರ್ತಿಸುತ್ತಿರುವ ಯುಗ-ವ್ಯಾಖ್ಯಾನಿಸುವ ಸಾಮಾನ್ಯ ಉದ್ದೇಶದ ತಂತ್ರಜ್ಞಾನವಾಗಿದೆ ಎಂದು ಒಪ್ಪಿಕೊಂಡರು. ಎಐನ ವಿನ್ಯಾಸ, ಅಭಿವೃದ್ಧಿ, ನಿಯೋಜನೆ ಮತ್ತು ಆಡಳಿತದಲ್ಲಿ ಇಂದು ಮಾಡಿದ ಆಯ್ಕೆಗಳು ನಾವೀನ್ಯತೆ, ಸಾಮಾಜಿಕ ಕಲ್ಯಾಣ, ಆರ್ಥಿಕ ಭದ್ರತೆ ಮತ್ತು ಅಂತಾರಾಷ್ಟ್ರೀಯ ಕ್ರಮಕ್ಕೆ ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತವೆ ಎಂದು ಅವರು ಗುರುತಿಸಿದರು. ಈ ತಿಳಿವಳಿಕೆಯ ಆಧಾರದ ಮೇಲೆ ಎಐ ಕ್ಷೇತ್ರದಲ್ಲಿ ಎರಡೂ ದೇಶಗಳ ಹೊಂದಾಣಿಕೆ ಮತ್ತು ಸ್ಪರ್ಧಾತ್ಮಕತೆಯನ್ನು ಪರಸ್ಪರ ಹೆಚ್ಚಿಸಲು, ಎರಡೂ ದೇಶಗಳಲ್ಲಿ ನಾವೀನ್ಯತೆ ಮತ್ತು ಬೆಳವಣಿಗೆಯನ್ನು ತರಲು, ಸುರಕ್ಷಿತ, ಸುಭದ್ರ, ವಿಶ್ವಾಸಾರ್ಹ, ಎಲ್ಲರನ್ನೂ ಒಳಗೊಂಡ, ಮಾನವ-ಕೇಂದ್ರಿತ, ಸುಸ್ಥಿರ, ಜವಾಬ್ದಾರಿಯುತ ಮತ್ತು ನಾವೀನ್ಯತೆ-ಆಧಾರಿತ ಎಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಅಗತ್ಯವಾದ ಸಹಕಾರ ಮುಂದುವರಿಸಲು ಉಭಯ ನಾಯಕರು ಒಪ್ಪಿಕೊಂಡರು.