PM to visit Andhra Pradesh and Karnataka on 1 August
July 31st, 09:56 am
PM Modi will visit Andhra Pradesh and Karnataka on 1 August. In Andhra Pradesh, he will inaugurate the Alluri Sitarama Raju International Airport and launch development projects worth over ₹17,900 crore. He will also lay the foundation stone for Andhra Pradesh's first semiconductor manufacturing facility. During his visit to Karnataka, he will inaugurate the Swami Vivekananda Cultural Youth Centre - Viveka Smaraka in Mysuru.ಚಂಡೀಗಢದಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ
July 17th, 02:08 pm
ಚಂಡೀಗಢ ಕೇವಲ ಒಂದು ನಗರವಲ್ಲ - ಇದು ಭಾರತಕ್ಕೆ ಅಭಿವೃದ್ಧಿಯ ಮಾದರಿಯಾಗಿದೆ. ಚಂಡೀಗಢವು ಯೋಜಿತ ಬೆಳವಣಿಗೆಗೆ, ಉತ್ತಮ ಜೀವನಶೈಲಿ ಮತ್ತು ಸುಲಭ ಜೀವನ ಶೈಲಿಯ ನಗರವಾಗಿ ತನ್ನ ಗುರುತಿಸುವಿಕೆಗಾಗಿ ಹೆಸರುವಾಸಿಯಾಗಿದೆ. ಇದು ಸುಧಾರಿತ ವೈದ್ಯಕೀಯ ಸೌಲಭ್ಯಗಳಿಗೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮಾ ಚಂಡಿಯ ಆಶೀರ್ವಾದಕ್ಕಾಗಿ ಗುರುತಿಸಲ್ಪಟ್ಟಿದೆ. ಅದಕ್ಕಾಗಿಯೇ ಚಂಡೀಗಢದ ಅಭಿವೃದ್ಧಿಯು ಎನ್.ಡಿಎ. ಸರ್ಕಾರಕ್ಕೆ ಸದಾ ಆದ್ಯತೆಯಾಗಿದೆ. ನಿಮಗೆ ನೆನಪಿರಬಹುದು, ಸುಮಾರು ಒಂದೂವರೆ ವರ್ಷಗಳ ಹಿಂದೆ, ದೇಶವು ತನ್ನ ನ್ಯಾಯ ವ್ಯವಸ್ಥೆಯಲ್ಲಿ ಪ್ರಮುಖ ಸುಧಾರಣೆಯನ್ನು ಮಾಡಿದೆ. ನಾವು ದಂಡ ಸಂಹಿತೆಯನ್ನು ಶಿಕ್ಷೆ ಆಧಾರಿತ ಕಾನೂನುಗಳ ಬದಲಿಗೆ ನ್ಯಾಯ ಆಧಾರಿತ ಕಾನೂನು ಚೌಕಟ್ಟಾದ ಭಾರತೀಯ ನ್ಯಾಯ ಸಂಹಿತದೊಂದಿಗೆ ಬದಲಾಯಿಸಿದ್ದೇವೆ. ಮತ್ತು ಭಾರತೀಯ ನ್ಯಾಯ ಸಂಹಿತದ ಅನುಷ್ಠಾನವು ಇಲ್ಲಿಯೇ ಚಂಡೀಗಢದಲ್ಲಿ ಪ್ರಾರಂಭವಾಯಿತು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಂಡೀಗಢದಲ್ಲಿ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ರಸ್ತೆ ಮೂಲಸೌಕರ್ಯ ಸೇರಿದಂತೆ ₹4,700 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು, ಕೆಲವು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು
July 17th, 01:45 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಚಂಡೀಗಢದಲ್ಲಿ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ರಸ್ತೆ ಮೂಲಸೌಕರ್ಯವನ್ನು ಒಳಗೊಂಡ ₹4,700 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ವ್ಯವಸ್ಥಿತ ರಾಷ್ಟ್ರೀಯ ಪ್ರಗತಿಗೆ ಅನುಕರಣೀಯ ಮಾದರಿಯಾಗಿ ನಗರದ ವಿಶಿಷ್ಟ ಸ್ಥಾನಮಾನವನ್ನು ವಿವರಿಸಿದ ಅವರು, ಉತ್ತಮ ಜೀವನಶೈಲಿ ಮತ್ತು ಸುಲಭ ಜೀವನವನ್ನು ಖಾತ್ರಿಪಡಿಸಿಕೊಳ್ಳುವ ಅದರ ಖ್ಯಾತಿಯನ್ನು ವಿವರಿಸಿದರು. ಈ ಪ್ರದೇಶದ ಮೇಲೆ ಮಾ ಚಂಡಿಯವರ ದೈವಿಕ ಅನುಗ್ರಹ ಇರುವುದು ಸ್ಪಷ್ಟವಾಗಿದೆ. ಆಡಳಿತವು ಅದರ ನಿರಂತರ, ರಚನಾತ್ಮಕ ಬೆಳವಣಿಗೆಗೆ ಹೊಂದಿರುವ ಅಚಲ ಬದ್ಧತೆಯನ್ನು ಹೊಂದಿದೆ ಎಂದರು. ಚಂಡೀಗಢದ ಅಭಿವೃದ್ಧಿ ಯಾವಾಗಲೂ ಪ್ರಸ್ತುತ ಸರ್ಕಾರದ ಸಂಪೂರ್ಣ ಆದ್ಯತೆಯಾಗಿದೆ ಎಂದು ಶ್ರೀ ಮೋದಿ ಪ್ರತಿಪಾದಿಸಿದರು.ನೆದರ್‌ಲ್ಯಾಂಡ್ಸ್ ನಲ್ಲಿ ನಡೆದ ಭಾರತೀಯ ಸಮುದಾಯದ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
May 16th, 01:30 pm
ಇಲ್ಲಿ ತುಂಬಾ ಪ್ರೀತಿ, ತುಂಬಾ ಉತ್ಸಾಹ ಕಾಣುತ್ತಿದೆ. ನಿಜ ಹೇಳಬೇಕೆಂದರೆ, ನಾನು ನೆದರ್‌ಲ್ಯಾಂಡ್ಸ್‌ನಲ್ಲಿದ್ದೇನೆ ಎಂಬುದನ್ನು ಒಂದು ಕ್ಷಣ ಮರೆತೇ ಬಿಟ್ಟಿದ್ದೆ. ಭಾರತದಲ್ಲಿಯೇ ಎಲ್ಲೋ ಒಂದು ಹಬ್ಬ ನಡೆಯುತ್ತಿರುವಂತೆ ನನಗೆ ಭಾಸವಾಗುತ್ತಿದೆ!ನೆದರ್ಲ್ಯಾಂಡ್ಸ್ ನಲ್ಲಿರುವ ಅನಿವಾಸಿ ಭಾರತೀಯ ಸಮುದಾಯದವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
May 16th, 01:20 pm
ಇಂದು ನಡೆದ ಭಾರತೀಯ ವಲಸಿಗ ಸಮುದಾಯದ ಸ್ವಾಗತ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಗ್ ನಲ್ಲಿ ಭಾಗವಹಿಸಿದ್ದರು. ಆಗಮಿಸಿದಾಗ, ನೆದರ್ಲ್ಯಾಂಡ್ಸ್ ನಲ್ಲಿರುವ ಭಾರತೀಯ ವಲಸಿಗರು ಮತ್ತು ಭಾರತದ ಸ್ನೇಹಿತರ ದೊಡ್ಡ ಸಭೆಯಿಂದ ಅವರಿಗೆ ಆತ್ಮೀಯ ಮತ್ತು ಉತ್ಸಾಹಭರಿತ ಸ್ವಾಗತ ದೊರೆಯಿತು.ಹೈದರಾಬಾದ್‌ನಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ
May 10th, 03:45 pm
ಸೈಬರಾಬಾದ್‌ನ ಶಕ್ತಿ ರಾಷ್ಟ್ರೀಯ ಮತ್ತು ಜಾಗತಿಕವಾಗಿದೆ. ಇದು ತೆಲಂಗಾಣದ ಮತ್ತು ದೇಶದ ತ್ವರಿತ ಅಭಿವೃದ್ಧಿಯ ಪ್ರಮುಖ ಕೇಂದ್ರವಾಗಿದೆ. ಆದ್ದರಿಂದ, ಇಂದು ಸೈಬರಾಬಾದ್‌ನಿಂದ, ತೆಲಂಗಾಣವನ್ನು ರಾಷ್ಟ್ರದ ದೊಡ್ಡ ಉತ್ಪಾದನಾ ಶಕ್ತಿ ಕೇಂದ್ರವನ್ನಾಗಿ ಮಾಡಲು ಅನೇಕ ಪ್ರಮುಖ ಯೋಜನೆಗಳನ್ನು ಪ್ರಾರಂಭಿಸಲಾಗುತ್ತಿದೆ. ಇಂದು ಅಡಿಪಾಯ ಮತ್ತು ಉದ್ಘಾಟನೆಗಳು ನಡೆದ ಯೋಜನೆಗಳು ಇಲ್ಲಿ ಸಾವಿರಾರು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಮತ್ತು ತೆಲಂಗಾಣದ ಸಂಪರ್ಕವು ಸಹ ಬಲಗೊಳ್ಳುತ್ತದೆ. ಈ ಯೋಜನೆಗಳಿಗಾಗಿ ತೆಲಂಗಾಣದ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ತೆಲಂಗಾಣದ ಹೈದರಾಬಾದ್‌ನಲ್ಲಿ ಸುಮಾರು ₹9,400 ಕೋಟಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
May 10th, 03:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತೆಲಂಗಾಣದ ಹೈದರಾಬಾದ್‌ನಲ್ಲಿ ಸುಮಾರು ₹9,400 ಕೋಟಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದರು ಮತ್ತು ದೇಶಕ್ಕೆ ಸಮರ್ಪಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ರಾಷ್ಟ್ರೀಯ ಮತ್ತು ಜಾಗತಿಕ ಪ್ರಾಮುಖ್ಯತೆಯ ಕೇಂದ್ರವಾಗಿ ಹೈದರಾಬಾದ್‌ನ ಪರಿವರ್ತನಾ ಮಹತ್ವವನ್ನು ಉಲ್ಲೇಖಿಸಿದರು. ತೆಲಂಗಾಣ ಮತ್ತು ಇಡೀ ರಾಷ್ಟ್ರಕ್ಕೆ ತ್ವರಿತ ಅಭಿವೃದ್ಧಿಯನ್ನು ನೀಡುವಲ್ಲಿ ಈ ಪ್ರದೇಶದ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದ ಅವರು, ಇಂದು ಪ್ರಾರಂಭಿಸಲಾದ ಬಹು ದೊಡ್ಡ ಪ್ರಮಾಣದ ಯೋಜನೆಗಳು ತೆಲಂಗಾಣವನ್ನು ಪ್ರಮುಖ ಉತ್ಪಾದನಾ ಕೇಂದ್ರವಾಗಿ ಹೇಗೆ ರೂಪಿಸುತ್ತವೆ/ಸ್ಥಾಪಿಸುತ್ತವೆ ಎಂಬುದನ್ನು ವಿವರಿಸಿದರು. ಈ ಯೋಜನೆಗಳ ಉದ್ಘಾಟನೆಗಳು ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುವುದರ ಜೊತೆಗೆ ಸಾವಿರಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಹೇಳಿದ ಪ್ರಧಾನಮಂತ್ರಿ, ಈ ಯೋಜನೆಗಳಿಗಾಗಿ ತೆಲಂಗಾಣದ ಜನರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.ಭಾರತ ಗಣರಾಜ್ಯ ಮತ್ತು ವಿಯೆಟ್ನಾಂ ಸಮಾಜವಾದಿ ಗಣರಾಜ್ಯದ ನಡುವಿನ ವರ್ಧಿತ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯ ಕುರಿತಾದ ಜಂಟಿ ಹೇಳಿಕೆ
May 06th, 05:24 pm
ಭಾರತದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ವಿಯೆಟ್ನಾಂ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಯೆಟ್ನಾಂ ಸಮಾಜವಾದಿ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಟೋ ಲಾಮ್ ಅವರು 2026ರ ಮೇ 05 ರಿಂದ ಮೇ 07 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದರು. ಪ್ರಧಾನ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಟೋ ಲಾಮ್ ಅವರೊಂದಿಗೆ ಉನ್ನತ ಮಟ್ಟದ ನಿಯೋಗ ಮತ್ತು ಪ್ರಬಲ ಉದ್ಯಮಿಗಳ ನಿಯೋಗವು ಆಗಮಿಸಿತ್ತು.ಫಲಿತಾಂಶಗಳ ಪಟ್ಟಿ: ವಿಯೆಟ್ನಾಂ ಸಮಾಜವಾದಿ ಗಣರಾಜ್ಯದ ಅಧ್ಯಕ್ಷರ ಭಾರತ ಭೇಟಿ
May 06th, 03:44 pm
ಐ.ಆರ್.ಇ.ಎಲ್. (ಇಂಡಿಯಾ) ಲಿಮಿಟೆಡ್ ಮತ್ತು ವಿಯಟ್ನಾಂನ ಇನ್ ಸ್ಟಿಟ್ಯೂಟ್ ಫಾರ್ ಟೆಕ್ನಾಲಜಿ ಆಫ್ ರೇಡಿಯೋಆಕ್ಟಿವ್ ಅಂಡ್ ರೇರ್ ಎಲಿಮೆಂಟ್ಸ್ (ಐ.ಟಿ.ಆರ್.ಆರ್.ಇ.) ನಡುವೆ ಪರಸ್ಪರ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದವಿಯೆಟ್ನಾಂ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ವಿಯೆಟ್ನಾಂ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ
May 06th, 01:00 pm
ಭಾರತಕ್ಕೆ ಭೇಟಿ ನೀಡಿದ ಅಧ್ಯಕ್ಷ ತೋ ಲ್ಯಾಮ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ. ವಿಯೆಟ್ನಾಂ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಒಂದು ತಿಂಗಳೊಳಗೆ ಉನ್ನತ ಮಟ್ಟದ ನಿಯೋಗ ಮತ್ತು ಹಲವು ವಾಣಿಜ್ಯ ನಾಯಕರೊಂದಿಗೆ ಅವರು ಭಾರತಕ್ಕೆ ನೀಡಿದ ಭೇಟಿಯು ಭಾರತ-ವಿಯೆಟ್ನಾಂ ಸಂಬಂಧಗಳಿಗೆ ಅವರು ನೀಡುವ ಆದ್ಯತೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.ಮನ್ ಕಿ ಬಾತ್ ನಲ್ಲಿ 2027 ರ ಡಿಜಿಟಲ್ ಜನಗಣತಿಯನ್ನು ಯಶಸ್ವಿಗೊಳಿಸುವಂತೆ ಪ್ರಧಾನಿ ಮೋದಿ ದೇಶವಾಸಿಗಳನ್ನು ಕೋರಿದ್ದಾರೆ
April 26th, 11:30 am
ಈ ತಿಂಗಳ ಮನ್ ಕಿ ಬಾತ್ ಸಂಚಿಕೆಯಲ್ಲಿ, ಪ್ರಧಾನಿ ಮೋದಿ ಪರಮಾಣು ಮತ್ತು ಪವನ ಇಂಧನ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯನ್ನು ಎತ್ತಿ ತೋರಿಸಿದರು. ಭಗವಾನ್ ಬುದ್ಧನ ಬೋಧನೆಗಳು, ಬೀಟಿಂಗ್ ರಿಟ್ರೀಟ್ ಸಮಾರಂಭ, ಪ್ರಕೃತಿ ಸಂರಕ್ಷಣೆ, ಬಿದಿರು ವಲಯ, ಪ್ರಾಚೀನ ಗ್ರಂಥಗಳು ಮತ್ತು ಗಣಿತ ಒಲಿಂಪಿಯಾಡ್ ಕಾರ್ಯಕ್ರಮ ಸೇರಿದಂತೆ ಹಲವಾರು ಪ್ರಮುಖ ವಿಷಯಗಳನ್ನು ಅವರು ಸ್ಪರ್ಶಿಸಿದರು. ನಡೆಯುತ್ತಿರುವ ಡಿಜಿಟಲ್ ಜನಗಣತಿ ಅಭಿಯಾನದ ಬಗ್ಗೆಯೂ ಪ್ರಧಾನಿ ಮಾತನಾಡಿದರು ಮತ್ತು ಪ್ರತಿಯೊಬ್ಬರೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಒತ್ತಾಯಿಸಿದರು.ರಾಷ್ಟ್ರ ಸೇವೆಯೇ ವಿಕಸಿತ ಭಾರತದ ಅಡಿಪಾಯ ಎಂದು ಸಾರುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
April 21st, 11:54 am
‘ವಿಕಸಿತ ಭಾರತ’ದ ಅಡಿಪಾಯ ರಾಷ್ಟ್ರ ಸೇವೆ ಎಂಬುದನ್ನು ಸಾರುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. ಇಂದು ನಾಗರಿಕ ಸೇವಾ ದಿನದ ಸಂದರ್ಭದಲ್ಲಿ, ಅಭಿವೃದ್ಧಿಯ ಕಟ್ಟಕಡೆಯ ಹಂತದಲ್ಲಿರುವ ವ್ಯಕ್ತಿಯನ್ನು ಮುಖ್ಯಧಾರೆಗೆ ಕರೆತಂದು, ಶಕ್ತಿಶಾಲಿ, ಸಮೃದ್ಧ ಮತ್ತು ಸಹಾನುಭೂತಿ ಹೊಂದಿದ ಭಾರತ ನಿರ್ಮಾಣದ ಸಂಕಲ್ಪವನ್ನು ಪುನರುಚ್ಚರಿಸೋಣ ಎಂದು ಪ್ರಧಾನಮಂತ್ರಿಗಳು ಹೇಳಿದ್ದಾರೆ.ಕೊರಿಯಾ ಗಣರಾಜ್ಯದ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಇಂಗ್ಲಿಷ್ ಅನುವಾದ.
April 20th, 01:05 pm
ಅಧ್ಯಕ್ಷ ಲೀ ಅವರನ್ನು ಭಾರತಕ್ಕೆ ಅವರ ಮೊದಲ ಭೇಟಿಯಲ್ಲಿ ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ. ಅವರ ಜೀವನವು ಅಭ್ಯುದಯ, ಸೇವೆ ಮತ್ತು ಸಮರ್ಪಣೆಯ ಸ್ಪೂರ್ತಿದಾಯಕ ಉದಾಹರಣೆಯಾಗಿ ನಿಂತಿದೆ. ಅವರು ಎದುರಿಸಿದ ಪ್ರತಿಯೊಂದು ಸವಾಲು ಜನರಿಗೆ ಸೇವೆ ಸಲ್ಲಿಸುವ ಅವರ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಿದೆ. ಇದು ಭಾರತಕ್ಕೆ ಅವರ ಮೊದಲ ಭೇಟಿಯಾಗಿದ್ದರೂ, ನಮ್ಮ ಮೊದಲ ಭೇಟಿಯಿಂದಲೇ ಅವರ ದೇಶದ ಮೇಲಿನ ಪ್ರೀತಿ ಮತ್ತು ಬಾಂಧವ್ಯ ಸ್ಪಷ್ಟವಾಗಿದೆ.“ಕೃಷಿ ಮತ್ತು ಗ್ರಾಮೀಣ ಪರಿವರ್ತನೆ” ಕುರಿತ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
March 06th, 01:14 pm
ಬಜೆಟ್ ವೆಬಿನಾರ್ ಸರಣಿಯ 3ನೇ ವೆಬಿನಾರ್‌ನಲ್ಲಿ, ನಿಮ್ಮೆಲ್ಲರಿಗೂ ನನ್ನ ಆತ್ಮೀಯ ಸ್ವಾಗತ ಕೋರುತ್ತೇನೆ. ಇದಕ್ಕೂ ಮೊದಲು ತಂತ್ರಜ್ಞಾನ, ಸುಧಾರಣೆಗಳು ಮತ್ತು ಆರ್ಥಿಕ ಬೆಳವಣಿಗೆಯಂತಹ ಪ್ರಮುಖ ವಿಷಯಗಳ ಕುರಿತು 2 ವೆಬಿನಾರ್‌ಗಳನ್ನು ನಡೆಸಲಾಯಿತು. ಇಂದು ಚರ್ಚೆಯು ಗ್ರಾಮೀಣ ಆರ್ಥಿಕತೆ ಮತ್ತು ಕೃಷಿಯಂತಹ ನಿರ್ಣಾಯಕ ಕ್ಷೇತ್ರಗಳ ಮೇಲೆ ಕೇಂದ್ರೀಕೃತವಾಗಿದೆ. ನೀವೆಲ್ಲರೂ ನಿಮ್ಮ ಅಮೂಲ್ಯ ಸಲಹೆಗಳೊಂದಿಗೆ ಬಜೆಟ್ ತಯಾರಿಕೆಯ ಪ್ರಕ್ರಿಯೆಗೆ ಅಪಾರ ಕೊಡುಗೆ ನೀಡಿದ್ದೀರಿ. ನಿಮ್ಮ ಸಲಹೆ ಸೂಚನೆಗಳು ಬಜೆಟ್‌ನಲ್ಲಿ ಪ್ರತಿಫಲಿಸುತ್ತಿವೆ, ಅವು ತುಂಬಾ ಉಪಯುಕ್ತವಾಗಿವೆ ಎಂಬುದನ್ನು ನೀವು ಗಮನಿಸಿರಬೇಕು. ಆದರೆ ಈಗ ಬಜೆಟ್ ಮಂಡಿಸಲಾಗಿದೆ, ದೇಶವು ತನ್ನ ಸಂಪೂರ್ಣ ಸಾಮರ್ಥ್ಯ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ನಿಮ್ಮ ಅನುಭವ, ನಿಮ್ಮ ಸಲಹೆಗಳು ಮತ್ತು ಹೆಚ್ಚಿನ ಸಂಖ್ಯೆಯ ಜನರಿಗೆ ಬಜೆಟ್‌ನ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ಸರಳ ಮಾರ್ಗಗಳು ಅತ್ಯಗತ್ಯ. ಬಜೆಟ್‌ನಲ್ಲಿ ನಿಗದಿಪಡಿಸಿದ ಪ್ರತಿ ಪೈಸೆಯನ್ನು ಸಂಪೂರ್ಣವಾಗಿ ಮತ್ತು ತ್ವರಿತವಾಗಿ ಹೇಗೆ ಬಳಸಿಕೊಳ್ಳಬಹುದು? ಈ ವೆಬಿನಾರ್‌ನಲ್ಲಿ ನಿಮ್ಮ ಸಲಹೆಗಳು ಸಹ ಅಷ್ಟೇ ಮುಖ್ಯವಾಗಿವೆ.ಕೃಷಿ ಮತ್ತು ಗ್ರಾಮೀಣ ಪರಿವರ್ತನೆಯ ಕುರಿತು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು
March 06th, 01:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೃಷಿ ಮತ್ತು ಗ್ರಾಮೀಣ ಪರಿವರ್ತನೆ ಕುರಿತಾದ ಬಜೆಟ್ ನಂತರದ ಮೂರನೇ ವೆಬಿನಾರ್ ಅನ್ನು ಉದ್ದೇಶಿಸಿ ಮಾತನಾಡಿದರು. ತಂತ್ರಜ್ಞಾನ ಮತ್ತು ಆರ್ಥಿಕ ಬೆಳವಣಿಗೆಯ ಕುರಿತಾದ ಹಿಂದಿನ ಅಧಿವೇಶನಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಬಜೆಟ್ ರೂಪಿಸುವ ಸಮಯದಲ್ಲಿ ಪಾಲುದಾರರು ಮೌಲ್ಯಯುತವಾದ ಸಹಕಾರವನ್ನು ನೀಡಿದ್ದಾರೆ ಎಂದು ಹೇಳಿದರು. ಈಗ, ಬಜೆಟ್ ನಂತರ, ದೇಶವು ತನ್ನ ಪೂರ್ಣ ಸಾಮರ್ಥ್ಯದ ಪ್ರಯೋಜನಗಳನ್ನು ಪಡೆಯುವುದು ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ಸಲಹೆಗಳು ಮತ್ತು ಈ ವೆಬಿನಾರ್ ಅತ್ಯಂತ ಮಹತ್ವದ್ದಾಗಿದೆ ಎಂದು ಶ್ರೀ ಮೋದಿ ಒತ್ತಿಹೇಳಿದರು.ಕೆನಡಾ ಪ್ರಧಾನಮಂತ್ರಿ ಅವರ ಭೇಟಿಯೊಂದಿಗೆ ಉಭಯ ರಾಷ್ಟ್ರಗಳ ನಡುವಿನ ನಿಜವಾದ ನವೀಕರಿಸಿದ ಪಾಲುದಾರಿಕೆಗೆ ಬಲವಾದ ಅಡಿಪಾಯವನ್ನು ನಿರ್ಮಿಸಲಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು
March 03rd, 10:16 pm
ಕೆನಡಾದ ಪ್ರಧಾನಮಂತ್ರಿ ಮಾರ್ಕ್ ಕಾರ್ನೆ ಅವರ ಭಾರತ ಭೇಟಿ ಎರಡೂ ರಾಷ್ಟ್ರಗಳ ನಡುವಿನ ನೈಜ ನವೀಕೃತ ಪಾಲುದಾರಿಕೆಗೆ ಭದ್ರ ಬುನಾದಿ ಹಾಕಿದೆ ಎಂದು ಪ್ರಧಾನಮಂತ್ರಿ ಹೇಳಿದರು.ತಮಿಳುನಾಡಿನ ಮಧುರೈನಲ್ಲಿ ವಿವಿಧ ಮೂಲಸೌಕರ್ಯ ಕಾಮಗಾರಿಗಳ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಅನುವಾದ
March 01st, 03:30 pm
ಶ್ರೀ ಆರ್.ಎನ್. ರವಿ, ಎಲ್. ಮುರುಗನ್, ಎಡಪ್ಪಾಡಿ ಕೆ. ಪಳನಿಸ್ವಾಮಿ, ನೈನಾರ್ ನಾಗೇಂದ್ರನ್, ಇ.ವಿ. ವೇಲು, ಮತ್ತು ತಮಿಳುನಾಡಿನ ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ವನಕ್ಕಂ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧುರೈನಲ್ಲಿ 4,400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಿ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಮಧುರೈನ ಮೂಲಸೌಕರ್ಯ ಕಾಮಗಾರಿಗಳು ಸಂಪರ್ಕವನ್ನು ಸುಧಾರಿಸಲಿವೆ ಮತ್ತು ತಮಿಳುನಾಡಿನಾದ್ಯಂತ ಜನರಿಗೆ ಗಮನಾರ್ಹ ಪ್ರಯೋಜನವನ್ನು ನೀಡಲಿವೆ: ಪ್ರಧಾನಮಂತ್ರಿ
March 01st, 03:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿನ ಮಧುರೈನಲ್ಲಿ 4,400 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿದರು. ಪವಿತ್ರ ನಗರವಾದ ಮಧುರೈನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಇಂದು ತಮಿಳುನಾಡಿನ ಅಭಿವೃದ್ಧಿ ಪ್ರಯಾಣದಲ್ಲಿ ಹೆಮ್ಮೆಯ ಅಧ್ಯಾಯವಾಗಿದೆ ಎಂದು ಹೇಳಿದರು. ಈ ಯೋಜನೆಗಳು ಸಂಪರ್ಕವನ್ನು ಪರಿವರ್ತಿಸುವುದು, ಆರ್ಥಿಕತೆಯನ್ನು ಹೆಚ್ಚಿಸುವುದು ಮತ್ತು ಯುವಕರಿಗೆ ಗಮನಾರ್ಹ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ರಾಜ್ಯದ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸುವ ಗುರಿಯನ್ನು ಹೊಂದಿವೆ. ಉತ್ತಮ ಗುಣಮಟ್ಟದ ಮೂಲಸೌಕರ್ಯವನ್ನು ನಿರ್ಮಿಸುವುದು ಮೂಲಭೂತವಾಗಿ ಜನರನ್ನು ಸಬಲೀಕರಣಗೊಳಿಸುವುದಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಬೆಳವಣಿಗೆಗಳು ರೈತರು ಮಾರುಕಟ್ಟೆಗಳನ್ನು ತಲುಪಲು ಉತ್ತಮ ರಸ್ತೆಗಳು, ಯಾತ್ರಿಕರು ಮತ್ತು ಪ್ರವಾಸಿಗರಿಗೆ ಸುಲಭ ಪ್ರಯಾಣ ಮತ್ತು ವ್ಯವಹಾರಗಳಿಗೆ ವೇಗವಾದ ಸಾರಿಗೆಯನ್ನು ಅರ್ಥೈಸುತ್ತವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.ಅಜ್ಮೀರ್ ನಲ್ಲಿ ಅಭಿವೃದ್ಧಿ ಕಾರ್ಯಗಳು, ಎಚ್ ಪಿ ವಿ ಲಸಿಕೆಗಾಗಿ ದೇಶವ್ಯಾಪಿ ಅಭಿಯಾನದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
February 28th, 12:00 pm
ಇಂದು, ತೀರ್ಥರಾಜ ಪುಷ್ಕರ್ ಮತ್ತು ಮಾತಾ ಸಾವಿತ್ರಿಯ ಈ ಪವಿತ್ರ ಭೂಮಿಯಲ್ಲಿ, ನಿಮ್ಮೆಲ್ಲರ ನಡುವೆ ಇದ್ದು ನಿಮ್ಮ ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿದೆ. ಈ ವೇದಿಕೆಯಿಂದ, ನಾನು ಸುರಾಸುರನ ತೇಜಜಿ ಧಾಮ ಮತ್ತು ಪೃಥ್ವಿರಾಜ್ ಅವರ ನೆಲ ಅಜ್ಮೀರ್ ಗೆ ನಮಸ್ಕರಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಸ್ಥಾನದ ಅಜ್ಮೀರ್‌ನಲ್ಲಿ ₹17,000 ಕೋಟಿ ಮೌಲ್ಯದ ರಾಷ್ಟ್ರವ್ಯಾಪಿ ಎಚ್‌ಪಿವಿ ಲಸಿಕೆ ಅಭಿಯಾನಕ್ಕೆ ಚಾಲನೆ ಮತ್ತು ಅಭಿವೃದ್ಧಿ ಯೋಜನೆ ಲೋಕಾರ್ಪಣೆ
February 28th, 11:30 am
ರಾಜಸ್ಥಾನದಲ್ಲಿನ ಡಬಲ್-ಎಂಜಿನ್ ಸರ್ಕಾರ ಎರಡು ವರ್ಷಗಳ ತ್ವರಿತ ಪ್ರಗತಿಯನ್ನು ಪೂರ್ಣಗೊಳಿಸಿದೆ ಎಂದು ಪ್ರಧಾನಮಂತ್ರಿ ತೃಪ್ತಿ ವ್ಯಕ್ತಪಡಿಸಿದರು. ಜನರಿಗೆ ಸೇವೆ ಸಲ್ಲಿಸಲು ಬಂದ ಅಭಿವೃದ್ಧಿಯ ಭರವಸೆಗಳನ್ನು ಸರ್ಕಾರ ಪೂರೈಸುತ್ತಿದೆ. ಮತ್ತು ಇಂದು ಈ ಅಭಿವೃದ್ಧಿಯ ಅಭಿಯಾನವನ್ನು ಮತ್ತಷ್ಟು ವೇಗಗೊಳಿಸುವ ದಿನವಾಗಿದೆ. ಎಂದು ಮೋದಿ ಅವರು ಹೇಳಿದರು. ಇಂದಿನ ಕಾರ್ಯಕ್ರಮದಲ್ಲಿ ರಸ್ತೆಗಳು, ವಿದ್ಯುತ್, ನೀರು, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುಮಾರು ₹17,000 ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಡೆದಿದ್ದು, ರಾಜಸ್ಥಾನದ ಜನರ ಅನುಕೂಲತೆಯನ್ನು ಹೆಚ್ಚಿಸಲು ಮತ್ತು ಯುವಕರಿಗೆ ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉದ್ದೇಶಿಸಲಾಗಿದೆ ಎಂದು ಪ್ರಧಾನಿ ಹೇಳಿದರು.