A free, prosperous and rules-based Indo-Pacific is our shared priority: PM Modi at the India-Japan Joint Press Meet

July 02nd, 01:30 pm

At the India-Japan Joint Press Meet, PM Modi and Japanese PM Sanae Takaichi reaffirmed their commitment to deepen the India-Japan Special Strategic and Global Partnership. The leaders announced major initiatives across AI, defence, healthcare, economic security, clean energy, mobility, investment and people-to-people ties. PM Modi reaffirmed the shared vision of a strong and prosperous Japan and India's aspiration for a Viksit Bharat.

ಪ್ರಧಾನಮಂತ್ರಿ ಅವರನ್ನು ಭೇಟಿಯಾದ ನೆದರ್‌ಲ್ಯಾಂಡ್‌ ಮಹಾರಾಣಿ ಮ್ಯಾಕ್ಸಿಮಾ

June 25th, 10:40 pm

ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಗಳ ಆರ್ಥಿಕ ಆರೋಗ್ಯದ ವಿಶೇಷ ವಕೀಲರೂ ಆಗಿರುವ ನೆದರ್‌ಲ್ಯಾಂಡ್‌ ಮಹಾರಾಣಿ ಮ್ಯಾಕ್ಸಿಮಾ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿಯಾದರು. ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ನೇತೃತ್ವದ ಕ್ರಾಂತಿಯು ಹಣಕಾಸು ಸೇವೆಗಳನ್ನು ಹೆಚ್ಚು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವ ಕುರಿತು ನಾವು ಚರ್ಚಿಸಿದ್ದೇವೆ ಎಂದು ಶ್ರೀ ಮೋದಿ ಹೇಳಿದರು. ಪ್ರಪಂಚದಾದ್ಯಂತದ ಪಾಲುದಾರ ರಾಷ್ಟ್ರಗಳೊಂದಿಗೆ ತನ್ನ ಅನುಭವವನ್ನು ಹಂಚಿಕೊಳ್ಳುವ ಭಾರತದ ಬದ್ಧತೆಯನ್ನು ಶ್ರೀ ಮೋದಿ ಪುನರುಚ್ಚರಿಸಿದರು.

ಭಾರತೀಯ ಸಮುದಾಯ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ

June 18th, 11:41 pm

ಪ್ಯಾರಿಸ್ ನಗರವು ಬೆಳಕು ಮತ್ತು ಬಣ್ಣಗಳ ನಗರ. ಇದು ಕಲೆ, ಕಲ್ಪನೆಗಳು ಮತ್ತು ನಾವೀನ್ಯತೆಗೆ ಸ್ಫೂರ್ತಿಯ ಸ್ಥಳವಾಗಿದೆ. ಭಾರತದ ವಿವಿಧ ರಾಜ್ಯಗಳಿಂದ ಇಲ್ಲಿಗೆ ಬಂದು ನೀವೆಲ್ಲರೂ ಈ ನಗರವನ್ನು ಇನ್ನಷ್ಟು ಸುಂದರಗೊಳಿಸುತ್ತೀರಿ. ನೀವು ಅದನ್ನು ಹೊಸ ಮತ್ತು ರೋಮಾಂಚಕ ಬಣ್ಣಗಳಿಂದ ತುಂಬುತ್ತೀರಿ.

ಪ್ಯಾರಿಸ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

June 18th, 09:30 pm

ಜೂನ್ 18, 2026 ರಂದು ಪ್ಯಾರಿಸ್‌ನಲ್ಲಿ ಭಾರತೀಯ ಸಮುದಾಯದ ಬೃಹತ್ ಸಭೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ ಮಾಡಿದರು. ಸ್ಥಳಕ್ಕೆ ಆಗಮಿಸಿದಾಗ, ಪ್ರಧಾನಮಂತ್ರಿಗೆ ಆತ್ಮೀಯ ಮತ್ತು ವರ್ಣರಂಜಿತ ಸ್ವಾಗತ ನೀಡಲಾಯಿತು, ಇದು ಮಾತೃಭೂಮಿಯ ಬಗ್ಗೆ ವಲಸಿಗರ ಆಳವಾದ ವಾತ್ಸಲ್ಯವನ್ನು ಪ್ರತಿಬಿಂಬಿಸುತ್ತದೆ.

ಪ್ಯಾರಿಸ್‌ನಲ್ಲಿ ನಡೆದ ವಿವಾಟೆಕ್ 2026ರ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಅನುವಾದ

June 18th, 06:15 pm

ಈ ವರ್ಷ ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷವನ್ನು ಪ್ರಾರಂಭಿಸುವುದರೊಂದಿಗೆ, ಫ್ರಾನ್ಸ್, ಭಾರತ ಮತ್ತು ಯುರೋಪಿನ ತಾಂತ್ರಿಕ ಪರಿಸರ ವ್ಯವಸ್ಥೆಗಳನ್ನು ಹತ್ತಿರ ತರುವ ಪ್ರಮುಖ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಕೆಲವು ದಿನಗಳ ಹಿಂದೆ ನೈಸ್‌ನಲ್ಲಿ ನಡೆದ ಭಾರತ್ ಇನ್ನೋವೇಟ್ಸ್‌ನಿಂದ ಇಂದು ಪ್ಯಾರಿಸ್‌ನ ವಿವಾ ಟೆಕ್‌ವರೆಗೆ, ನಿಮ್ಮ ನವೋದ್ಯಮಗಳು ಅನೇಕ ಹೊಸ ಪಾಲುದಾರಿಕೆಗಳನ್ನು ರೂಪಿಸುತ್ತಿವೆ.

ವಿವಾಟೆಕ್ 2026ರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ

June 18th, 06:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಗೌರವಾನ್ವಿತ ಶ್ರೀ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಇಂದು ಪ್ಯಾರಿಸ್‌ ನಲ್ಲಿ ನಡೆದ ಯುರೋಪಿನ ಅತಿದೊಡ್ಡ ತಂತ್ರಜ್ಞಾನ ಮತ್ತು ಸ್ಟಾರ್ಟ್-ಅಪ್ ಕಾರ್ಯಕ್ರಮವಾದ ವಿವಾಟೆಕ್ 2026 ರಲ್ಲಿ ಭಾಗವಹಿಸಿದರು.

ಜನ ಸುರಕ್ಷಾ ಯೋಜನೆಗಳು 11 ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಅವುಗಳ ಜನಪರ ಪರಿಣಾಮವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ

May 09th, 06:10 pm

ಎನ್‌.ಡಿ.ಎ. ಸರ್ಕಾರ 11 ವರ್ಷಗಳ ಹಿಂದೆ ಪ್ರಾರಂಭಿಸಿದ ಪ್ರಮುಖ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳ ಪರಿಣಾಮವನ್ನು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎತ್ತಿ ತೋರಿಸಿದರು, ಈ ಉಪಕ್ರಮಗಳು ಭಾರತದ ಜನರಿಗೆ ಘನತೆ, ಭರವಸೆ ಮತ್ತು ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು.

TMC is Anti-North Bengal, Anti-tribal, Anti-tea garden, Anti-women & Anti-youth: PM Modi in Siliguri

April 12th, 01:15 pm

Ahead of the West Bengal Assembly elections, Prime Minister Narendra Modi today turbocharged the BJP’s campaign with a high-energy address in Siliguri, drawing massive public support. Addressing a packed rally in North Bengal, the PM launched a scathing attack on the ruling All India Trinamool Congress (TMC), accusing it of corruption, neglect and fostering a climate of fear.

PM Modi’s high-energy speech electrifies the Siliguri crowd

April 12th, 01:00 pm

Ahead of the West Bengal Assembly elections, Prime Minister Narendra Modi today turbocharged the BJP’s campaign with a high-energy address in Siliguri, drawing massive public support. Addressing a packed rally in North Bengal, the PM launched a scathing attack on the ruling All India Trinamool Congress (TMC), accusing it of corruption, neglect and fostering a climate of fear.

"ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರಗೊಳಿಸುವುದು ಮತ್ತು ಬಲಪಡಿಸುವುದು" ವಿಷಯ ಕುರಿತ ಬಜೆಟ್ ನಂತರದ ವೆಬಿನಾರ್‌ನಲ್ಲಿ ಪ್ರಧಾನಮಂತ್ರಿ ಅವರ ಭಾಷಣ

March 03rd, 11:30 am

ಉತ್ಪಾದನೆ, ಸರಕು ಸಾಗಣೆ, ನಮ್ಮ ಎಂಎಸ್ಎಂಇಗಳು, ಸಣ್ಣ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು, ನಮ್ಮ ಸಣ್ಣ ಮತ್ತು ದೊಡ್ಡ ನಗರಗಳು - ಅವು ವಿಭಿನ್ನವಾಗಿ ಕಂಡುಬಂದರೂ - ಇವೆಲ್ಲವೂ ಆರ್ಥಿಕತೆಗೆ ಪರಸ್ಪರ ಸಂಬಂಧ ಹೊಂದಿರುವ ಆಧಾರಸ್ತಂಭಗಳಾಗಿವೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಉದಾಹರಣೆಗೆ, ಬಲಿಷ್ಠವಾದ ಉತ್ಪಾದನೆಯು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ, ಇದು ರಫ್ತುಗಳನ್ನು ಹೆಚ್ಚಿಸುತ್ತದೆ. ಸ್ಪರ್ಧಾತ್ಮಕ ಎಂಎಸ್ಎಂಇಗಳು ಚೇತರಿಕೆ(ನಮ್ಯತೆ) ಮತ್ತು ನಾವೀನ್ಯತೆಯನ್ನು ಉತ್ತೇಜಿಸುತ್ತವೆ. ಉತ್ತಮ ಸರಕು ಸಾಗಣೆ ವ್ಯವಸ್ಥೆಯು ವೆಚ್ಚವನ್ನು ಕಡಿಮೆ ಮಾಡುತ್ತದೆ. ಉತ್ತಮವಾಗಿ ಯೋಜಿಸಲಾದ ನಗರಗಳು ಹೂಡಿಕೆ ಮತ್ತು ಪ್ರತಿಭೆ ಎರಡನ್ನೂ ಆಕರ್ಷಿಸುತ್ತವೆ. ಈ ವರ್ಷದ ಬಜೆಟ್ ಈ ಎಲ್ಲಾ ಆಧಾರಸ್ತಂಭಗಳಿಗೆ ಹೆಚ್ಚಿನ ಶಕ್ತಿ ನೀಡಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು "ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರಗೊಳಿಸುವುದು ಮತ್ತು ಬಲಪಡಿಸುವುದು" ಎಂಬ ವಿಷಯದ ಕುರಿತಾದ ಬಜೆಟ್ ನಂತರದ ವೆಬಿನಾರ್ ಅನ್ನು ಉದ್ದೇಶಿಸಿ ಮಾತನಾಡಿದರು

March 03rd, 11:15 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಜೆಟ್ ವೆಬಿನಾರ್ ಸರಣಿಯ ಎರಡನೇ ಕಂತನ್ನು ಉದ್ದೇಶಿಸಿ ಮಾತನಾಡಿದರು, ಇದು ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರಗೊಳಿಸುವುದು ಮತ್ತು ಬಲಪಡಿಸುವುದು ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿತ್ತು. ಕಳೆದ ವಾರದ ವೇಗವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಮೊದಲ ವೆಬಿನಾರ್ ಅತ್ಯಂತ ಯಶಸ್ವಿಯಾಗಿದೆ ಮತ್ತು ಬಜೆಟ್ ನಿಬಂಧನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ಸಲಹೆಗಳನ್ನು ನೀಡಿದೆ ಎಂದು ಹೇಳಿದರು.

"ವಿಕಸಿತ ಭಾರತಕ್ಕಾಗಿ ತಂತ್ರಜ್ಞಾನ, ಸುಧಾರಣೆಗಳು ಮತ್ತು ಹಣಕಾಸು" ಕುರಿತು ಫೆಬ್ರವರಿ 27 ರಂದು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

February 26th, 08:07 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 27 ರಂದು ಬೆಳಗ್ಗೆ 11:30ರ ಸುಮಾರಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಕಸಿತ ಭಾರತಕ್ಕಾಗಿ ತಂತ್ರಜ್ಞಾನ, ಸುಧಾರಣೆಗಳು ಮತ್ತು ಹಣಕಾಸು ಕುರಿತು ಬಜೆಟ್ ನಂತರದ ವೆಬಿನಾರ್ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಾರ್ವಜನಿಕ ಬಂಡವಾಳ ವೆಚ್ಚ ಹೂಡಿಕೆ, ಮೂಲಸೌಕರ್ಯ, ಬ್ಯಾಂಕಿಂಗ್ ವಲಯದ ಸುಧಾರಣೆಗಳು, ಹಣಕಾಸು ವಲಯದ ಸಂರಚನೆ, ಬಂಡವಾಳ ಮಾರುಕಟ್ಟೆಗಳ ಆಳಗೊಳಿಸುವಿಕೆ ಮತ್ತು ತೆರಿಗೆ ಸುಧಾರಣೆಗಳ ಮೂಲಕ ಜೀವನ ಸುಗಮಗೊಳಿಸುವಿಕೆಯ ಕುರಿತ ಚರ್ಚೆಗಳನ್ನು ಈ ವೆಬಿನಾರ್ ಒಳಗೊಂಡಿರಲಿದೆ.

ಜೂನ್ 23 ರಂದು ಕೇರಳಕ್ಕೆ ಪ್ರಧಾನಮಂತ್ರಿ ಭೇಟಿ

January 22nd, 02:23 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜನವರಿ 23ರಂದು ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಅಂದು ಬೆಳಗ್ಗೆ ಸುಮಾರು 10:45 ಗಂಟೆಗೆ, ಪ್ರಧಾನಮಂತ್ರಿ ಅವರು ತಿರುವನಂತಪುರಂನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಗೆ ಈಕ್ವಿಟಿ ಬೆಂಬಲವನ್ನು ಅನುಮೋದಿಸಿದ ಸಂಪುಟ ಸಭೆ

January 21st, 12:17 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್.ಐ.ಡಿ.ಬಿ.ಐ.) ಗೆ ರೂ. 5,000 ಕೋಟಿಗಳ ಈಕ್ವಿಟಿ ಬೆಂಬಲವನ್ನು ಅನುಮೋದಿಸಿದೆ.

ಕಚ್ ಮತ್ತು ಸೌರಾಷ್ಟ್ರ ಪ್ರಾಂತ್ಯದ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣ

January 11th, 02:45 pm

2026ರ ಆರಂಭದ ನಂತರ ಗುಜರಾತ್ ಗೆ ಇದು ನನ್ನ ಮೊದಲ ಭೇಟಿಯಾಗಿದೆ. ಈ ವರ್ಷದ ನನ್ನ ಪ್ರಯಾಣವು ಸೋಮನಾಥ ದಾದಾ ಅವರ ಪಾದಗಳಿಗೆ ತಲೆಬಾಗುವ ಮೂಲಕ ಪ್ರಾರಂಭವಾಗಿರುವುದು ಅತ್ಯಂತ ಮಂಗಳಕರ ಸಂಗತಿಯಾಗಿದೆ. ಈಗ ನಾನು ಈ ಭವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜಕೋಟ್ ನಲ್ಲಿದ್ದೇನೆ. 'ಅಭಿವೃದ್ಧಿ ಮತ್ತು ಪರಂಪರೆ' ಎಂಬ ಮಂತ್ರವು ಇಂದು ಎಲ್ಲೆಡೆ ಪ್ರತಿಧ್ವನಿಸುತ್ತಿದೆ. ದೇಶದ ಮೂಲೆ ಮೂಲೆಗಳಿಂದ ಮತ್ತು ವಿಶ್ವದಾದ್ಯಂತ ಈ 'ವೈಬ್ರಂಟ್ ಗುಜರಾತ್ ಪ್ರಾದೇಶಿಕ ಶೃಂಗಸಭೆ'ಗೆ ಆಗಮಿಸಿರುವ ನಿಮ್ಮೆಲ್ಲರಿಗೂ ನಾನು ಹೃತ್ಪೂರ್ವಕ ಸ್ವಾಗತ ಮತ್ತು ಶುಭಾಶಯಗಳನ್ನು ಕೋರುತ್ತೇನೆ.

ರಾಜ್‌ಕೋಟ್‌ನಲ್ಲಿ ಕಚ್ ಮತ್ತು ಸೌರಾಷ್ಟ್ರ ಪ್ರದೇಶಕ್ಕಾಗಿ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು

January 11th, 02:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಕಚ್ ಮತ್ತು ಸೌರಾಷ್ಟ್ರ ಪ್ರದೇಶಕ್ಕಾಗಿ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ, 2026ರಲ್ಲಿ ಇದು ಗುಜರಾತ್‌ಗೆ ಅವರ ಮೊದಲ ಭೇಟಿ ಎಂದು ಹೇಳಿದರು. ಬೆಳಿಗ್ಗೆ ತಾವು ಭಗವಾನ್ ಸೋಮನಾಥನ ದಿವ್ಯ ದರ್ಶನ ಪಡೆದು, ಈಗ ರಾಜ್‌ಕೋಟ್‌ನಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆ ಎನಿಸಿದೆ ಎಂದು ಹೇಳಿದರು. ವಿಕಾಸ್ ಭಿ, ವಿರಾಸತ್ ಭಿ ಎಂಬ ಮಂತ್ರ ಎಲ್ಲೆಡೆ ಪ್ರತಿಧ್ವನಿಸುತ್ತಿದೆ ಎಂದರು. ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತದಿಂದ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಶೃಂಗಸಭೆಯಲ್ಲಿ ಭಾಗವಹಿಸಲು ಬಂದಿದ್ದ ಎಲ್ಲಾ ಸಹೋದ್ಯೋಗಿಗಳನ್ನು ಪ್ರಧಾನಮಂತ್ರಿ ಸ್ವಾಗತಿಸಿದರು ಮತ್ತು ಶುಭಾಶಯಗಳನ್ನು ತಿಳಿಸಿದರು.

“ಕಾನೂನು ನೆರವು ವಿತರಣಾ ಕಾರ್ಯವಿಧಾನ ಬಲಪಡಿಸುವಿಕೆ” ರಾಷ್ಟ್ರೀಯ ಸಮ್ಮೇಳನ ನವೆಂಬರ್ 8 ರಂದು ಉದ್ಘಾಟಿಸಲಿರುವ ಪ್ರಧಾನಮಂತ್ರಿ

November 06th, 02:50 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 8, 2025 ರಂದು ಸಂಜೆ 5 ಗಂಟೆ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ “ಕಾನೂನು ನೆರವು ಕಾರ್ಯವಿಧಾನಗಳನ್ನು ಬಲಪಡಿಸುವಿಕೆ” ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಸಂದರ್ಭದಲ್ಲಿ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್.ಎ.ಎಲ್.ಎಸ್.ಎ - NALSA) ಸಿದ್ಧಪಡಿಸಿದ ಸಮುದಾಯ ಮಧ್ಯಸ್ಥಿಕೆ ತರಬೇತಿ ಮಾಡ್ಯೂಲ್ ಅನ್ನು ಪ್ರಧಾನಮಂತ್ರಿ ಅವರು ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ

ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ-2025 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

November 03rd, 11:00 am

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಜಿತೇಂದ್ರ ಸಿಂಗ್ ಜಿ, ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಕುಮಾರ್ ಸೂದ್, ನೊಬೆಲ್ ಪ್ರಶಸ್ತಿ ವಿಜೇತ ಸರ್ ಆಂಡ್ರೆ ಗೀಮ್ ಅವರು ನಮ್ಮೊಂದಿಗೆ ಉಪಸ್ಥಿತರಿದ್ದಾರೆ, ಇಲ್ಲಿರುವ ಎಲ್ಲಾ ವಿಜ್ಞಾನಿಗಳೆ, ಅನುಶೋಧಕರೆ, ಶೈಕ್ಷಣಿಕ ಕ್ಷೇತ್ರದ ಗಣ್ಯರೆ, ಭಾರತ ಮತ್ತು ವಿದೇಶಗಳಿಂದ ಆಗಮಿಸಿರುವ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ!

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ 2025' ಅನ್ನು ಉದ್ದೇಶಿಸಿ ಮಾತನಾಡಿದರು

November 03rd, 10:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ 'ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ (ESTIC) 2025' ಅನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ಭಾರತ ಮತ್ತು ವಿದೇಶಗಳ ವಿಜ್ಞಾನಿಗಳು, ನಾವೀನ್ಯಕಾರರು (innovators), ಶಿಕ್ಷಣ ತಜ್ಞರು ಮತ್ತು ಇತರ ಗಣ್ಯ ಅತಿಥಿಗಳನ್ನು ಸ್ವಾಗತಿಸಿದರು. ಐಸಿಸಿ ಮಹಿಳಾ ವಿಶ್ವಕಪ್ 2025 ರಲ್ಲಿ ಭಾರತ ಗಳಿಸಿದ ಗಮನಾರ್ಹ ವಿಜಯದ ಬಗ್ಗೆ ಮಾತನಾಡಿದ ಶ್ರೀ ಮೋದಿಯವರು, ಭಾರತೀಯ ಕ್ರಿಕೆಟ್ ತಂಡದ ಯಶಸ್ಸಿನಿಂದ ಇಡೀ ರಾಷ್ಟ್ರವೇ ಹರ್ಷಗೊಂಡಿದೆ ಎಂದು ಪ್ರಸ್ತಾಪಿಸಿದರು. ಇದು ಭಾರತದ ಮೊದಲ ಮಹಿಳಾ ವಿಶ್ವಕಪ್ ಗೆಲುವು ಎಂಬುದನ್ನು ಒತ್ತಿ ಹೇಳಿದ ಅವರು, ಮಹಿಳಾ ಕ್ರಿಕೆಟ್ ತಂಡಕ್ಕೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ರಾಷ್ಟ್ರವು ಅವರ ಬಗ್ಗೆ ಹೆಮ್ಮೆಪಡುತ್ತದೆ ಎಂದು ಹೇಳಿದ ಪ್ರಧಾನಿಯವರು, ಅವರ ಈ ಸಾಧನೆಯು ದೇಶಾದ್ಯಂತ ಲಕ್ಷಾಂತರ ಯುವಜನರಿಗೆ ಸ್ಫೂರ್ತಿ ನೀಡುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಮುಂಬೈನಲ್ಲಿ ನಡೆದ 'ಕಡಲಯಾನ ನಾಯಕರ ಸಮಾವೇಶ'ದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

October 29th, 04:09 pm

ಮಹಾರಾಷ್ಟ್ರದ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಅವರೇ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೇ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಸರ್ಬಾನಂದ ಸೋನೊವಾಲ್ ಅವರೇ, ಶಂತನು ಠಾಕೂರ್ ಅವರೇ ಮತ್ತು ಕೀರ್ತಿವರ್ಧನ್ ಸಿಂಗ್ ಅವರೇ, ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಅವರೇ ಮತ್ತು ಅಜಿತ್ ಪವಾರ್ ಅವರೇ, ಸಮುದ್ರಯಾನ ಮತ್ತು ಇತರ ಉದ್ಯಮಗಳ ಪ್ರಮುಖರೇ, ಇತರ ಗೌರವಾನ್ವಿತ ಅತಿಥಿಗಳೇ, ಮಹಿಳೆಯರೇ ಮತ್ತು ಮಹನೀಯರೇ.