ಪ್ರಧಾನಮಂತ್ರಿ ಅವರು ದಿವ್ಯಾ ದೇಶಮುಖ್ ಅವರನ್ನು ಗ್ರ್ಯಾಂಡ್ ಮಾಸ್ಟರ್ ಆಗಿದ್ದಕ್ಕೆ ಅಭಿನಂದಿಸಿದ್ದಾರೆ
July 29th, 06:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿವ್ಯಾ ದೇಶಮುಖ್ ಅವರನ್ನು ಕೇವಲ 2025 ಫಿಡೆ (FIDE) ಮಹಿಳಾ ವಿಶ್ವಕಪ್ ಗೆದ್ದಿರುವುದಕ್ಕೆ ಮಾತ್ರವಲ್ಲದೇ ಗ್ರ್ಯಾಂಡ್ ಮಾಸ್ಟರ್ ಆಗಿದ್ದಕ್ಕೆ ಅಭಿನಂದಿಸಿದ್ದಾರೆ. “ಅವರ ಸಾಧನೆ ಜನರನ್ನು ಪ್ರೇರೇಪಿಸುತ್ತದೆ ಮತ್ತು ಯುವಜನರಲ್ಲಿ ಚೆಸ್ ಅನ್ನು ಮತ್ತಷ್ಟು ಪ್ರಖ್ಯಾತಗೊಳಿಸಲು ಕೊಡುಗೆ ನೀಡುತ್ತದೆ” ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.ಎಫ್ ಐ ಡಿ ಇ ಮಹಿಳಾ ವಿಶ್ವ ಚೆಸ್ ಚಾಂಪಿಯನ್ 2025 ದಿವ್ಯಾ ದೇಶಮುಖ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ
July 28th, 06:29 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫಿಡೆ ಮಹಿಳಾ ವಿಶ್ವ ಚೆಸ್ ಚಾಂಪಿಯನ್ 2025 ಆಗಿ ಹೊರಹೊಮ್ಮಿರುವ ದಿವ್ಯಾ ದೇಶಮುಖ್ ಅವರನ್ನು ಅಭಿನಂದಿಸಿದ್ದಾರೆ. ಕೊನೇರು ಹಂಪಿ ಅವರೂ ಕೂಡ ಪಂದ್ಯಾವಳಿಯಾದ್ಯಂತ ಅಗಾಧ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಇಬ್ಬರೂ ಆಟಗಾರ್ತಿಯರಿಗೆ ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.