ಭಾರತ ಮತ್ತು ಫಿಲಿಪ್ಪೀನ್ಸ್ ಸರ್ಕಾರಗಳ ನಡುವೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಸ್ಥಾಪಿಸುವ ಘೋಷಣೆ
August 05th, 05:23 pm
ಭಾರತದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ಫಿಲಿಪ್ಪೀನ್ಸ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಫರ್ಡಿನಾಂಡ್ ಆರ್ ಮಾರ್ಕೋಸ್ ಜೂನಿಯರ್ ಅವರು 2025ರ ಆಗಸ್ಟ್ 4 ರಿಂದ 8 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದಾರೆ. ಅಧ್ಯಕ್ಷರಾದ ಮಾರ್ಕೋಸ್ ಅವರೊಂದಿಗೆ ಪ್ರಥಮ ಮಹಿಳೆ ಮೇಡಂ ಲೂಯಿಸ್ ಅರಾನೆಟಾ ಮಾರ್ಕೋಸ್ ಮತ್ತು ಫಿಲಿಪ್ಪೀನ್ಸ್ ನ ಹಲವಾರು ಸಂಪುಟ ಸಚಿವರು ಮತ್ತು ವ್ಯಾಪಾರ ನಿಯೋಗ ಸೇರಿದಂತೆ ಉನ್ನತ ಮಟ್ಟದ ಅಧಿಕೃತ ನಿಯೋಗ ಆಗಮಿಸಿದೆ.ಫಿಲಿಪೈನ್ಸ್ ಗಣರಾಜ್ಯದ ಅಧ್ಯಕ್ಷರ ಭಾರತ ಭೇಟಿ: ಫಲಪ್ರದತೆಯ ವಿವರ
August 05th, 04:31 pm
ಭಾರತ ಗಣರಾಜ್ಯ ಮತ್ತು ಫಿಲಿಪೈನ್ಸ್ ಗಣರಾಜ್ಯದ ನಡುವೆ ಕಾರ್ಯತಂತ್ರದ ಸಹಭಾಗಿತ್ವದ ಸ್ಥಾಪಿಸುವ ಘೋಷಣೆಪಿಲಿಪೀನ್ಸ್ ಅಧ್ಯಕ್ಷರೊಂದಿಗಿನ ಭೇಟಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಗಳ ಕನ್ನಡ ಅನುವಾದ
August 05th, 03:45 pm
ನಾನು ಭಾರತಕ್ಕೆ ನಿಮ್ಮನ್ನು ಮತ್ತು ನಿಮ್ಮ ನಿಯೋಗವನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಇಂದು ನಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಐತಿಹಾಸಿಕ ದಿನವಾಗಿದೆ. ನಾವು ಭಾರತ- ಪಿಲಿಪೀನ್ಸ್ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಎತ್ತರಿಸುತ್ತಿದ್ದೇವೆ. ಇದು ನಮ್ಮ ಸಂಬಂಧಗಳಿಗೆ ಹೊಸ ವೇಗ ಮತ್ತು ತೀವ್ರತೆಯನ್ನು ತಂದುಕೊಡುತ್ತದೆ ಮತ್ತು ರಕ್ಷಣೆ ಮತ್ತು ಭದ್ರತೆಯ ಕ್ಷೇತ್ರಗಳಲ್ಲಿ ನಮ್ಮ ಸಹಕಾರ ಮತ್ತಷ್ಟು ಬಲವರ್ಧನೆಗೊಳ್ಳಲಿದೆ. ಕಳೆದ ಕೆಲವು ವರ್ಷಗಳಿಂದ, ವ್ಯಾಪಾರ, ರಕ್ಷಣೆ, ಸಾಗರ ಸಹಕಾರ, ಆರೋಗ್ಯ ರಕ್ಷಣೆ, ಭದ್ರತೆ, ಆಹಾರ ಭದ್ರತೆ, ಅಭಿವೃದ್ಧಿ ಪಾಲುದಾರಿಕೆ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ನಮ್ಮ ಸಂಬಂಧಗಳು ಪ್ರಗತಿಯನ್ನು ಸಾಧಿಸಿವೆ. ಮುಂದಿನ ಐದು ವರ್ಷಗಳಿಗಾಗಿ ನಾವು ಇಂದು ಕ್ರಿಯಾ ಯೋಜನೆಯನ್ನು ರೂಪಿಸುತ್ತಿರುವುದೂ ಸಹ ನಿಜಕ್ಕೂ ತೃಪ್ತಿಯ ವಿಷಯವಾಗಿದೆ.ಫಿಲಿಪ್ಪೀನ್ಸ್ ಅಧ್ಯಕ್ಷರೊಂದಿಗೆ ಜಂಟಿ ಮಾಧ್ಯಮ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಮಾಧ್ಯಮ ಹೇಳಿಕೆಯ ಕನ್ನಡ ಅನುವಾದ
August 05th, 11:06 am
ಮೊದಲನೆಯದಾಗಿ, ನಾನು ಅಧ್ಯಕ್ಷರನ್ನು ಮತ್ತು ಅವರ ನಿಯೋಗವನ್ನು ಭಾರತಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತೇನೆ. ಈ ವರ್ಷ, ಭಾರತ ಮತ್ತು ಫಿಲಿಪ್ಪೀನ್ಸ್ ರಾಜತಾಂತ್ರಿಕ ಸಂಬಂಧಗಳ 75ನೇ ವರ್ಷವನ್ನು ಆಚರಿಸುತ್ತಿವೆ. ಮತ್ತು ಈ ಸಂದರ್ಭದಲ್ಲಿ, ಈ ಭೇಟಿಯು ವಿಶೇಷ ಮಹತ್ವವನ್ನು ಪಡೆದಿದೆ. ನಮ್ಮ ರಾಜತಾಂತ್ರಿಕ ಸಂಬಂಧಗಳು ಇತ್ತೀಚಿನವಾದರೂ, ನಮ್ಮ ನಾಗರಿಕ ಸಂಪರ್ಕವು ಪ್ರಾಚೀನ ಕಾಲದಿಂದಲೂ ಇದೆ. ರಾಮಾಯಣದ ಫಿಲಿಪ್ಪೀನ್ಸ್ ಆವೃತ್ತಿ - ಮಹಾರಾಡಿಯಾ ಲಾವಾನಾ ನಮ್ಮ ಆಳವಾಗಿ ಬೇರೂರಿರುವ ಸಾಂಸ್ಕೃತಿಕ ಬಂಧಕ್ಕೆ ಜೀವಂತ ಪುರಾವೆಯಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಅಂಚೆ ಚೀಟಿಗಳು, ಎರಡೂ ದೇಶಗಳ ರಾಷ್ಟ್ರೀಯ ಹೂವುಗಳನ್ನು ಒಳಗೊಂಡಿದ್ದು, ನಮ್ಮ ಸ್ನೇಹದ ಪರಿಮಳವನ್ನು ಸುಂದರವಾಗಿ ಸಂಕೇತಿಸುತ್ತವೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಫಿಲಿಪೈನ್ಸ್ ನ ಅಧ್ಯಕ್ಷ ಗೌರವಾನ್ವಿತ ಶ್ರೀ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ನಡುವೆ ದೂರವಾಣಿ ಮಾತುಕತೆ
August 05th, 02:44 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಫಿಲಿಪೈನ್ಸ್ನ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.