2026-27ನೇ ಸಾಲಿನ ಕಬ್ಬು ರೈತರಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯಾಗಿ ಪ್ರತಿ ಕ್ವಿಂ.ಗೆ ರೂ.365 ಅನ್ನು ಸಂಪುಟ ಸಭೆ ಅನುಮೋದಿಸಿದೆ

May 05th, 06:43 pm

ಕಬ್ಬು ಬೆಳೆಯುವ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕುರಿತಾದ ಸಚಿವ ಸಂಪುಟ ಸಮಿತಿಯು 2026-27ರ ಸಕ್ಕರೆ ಬೆಳೆಯ ಋತುವಿನಲ್ಲಿ (ಅಕ್ಟೋಬರ್ - ಸೆಪ್ಟೆಂಬರ್) 10.25% ಮೂಲ ಚೇತರಿಕೆ ದರಕ್ಕಾಗಿ ರೂ.365/ಕ್ವಿ.ಟಿ.ಎಲ್. ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (ಎಫ್.ಆರ್.ಪಿ.) ಅನುಮೋದಿಸಿದೆ, ಇದು 10.25% ಕ್ಕಿಂತ ಹೆಚ್ಚಿನ ಚೇತರಿಕೆಯಲ್ಲಿ ಪ್ರತಿ 0.1% ಹೆಚ್ಚಳಕ್ಕೆ ರೂ.3.56/ಕ್ವಿ.ಟಿ.ಎಲ್‌.ಗೆ ಪ್ರೀಮಿಯಂ ಅನ್ನು ಒದಗಿಸುತ್ತದೆ ಮತ್ತು ಚೇತರಿಕೆಯಲ್ಲಿ ಶೇ. 0.1 ರಷ್ಟು ಇಳಿಕೆ ಕಾಣುವಾಗ ಪ್ರತಿಯೊಂದಕ್ಕೂ ಎಫ್.ಆರ್.ಪಿ. ಯಲ್ಲಿ ರೂ.3.56/ಕ್ವಿ.ಟಿ.ಎಲ್. ಕಡಿತವನ್ನು ಒದಗಿಸುತ್ತದೆ.

2024-25ರ ಸಕ್ಕರೆ ಋತುವಿನಲ್ಲಿ (ಅಕ್ಟೋಬರ್-ಸೆಪ್ಟೆಂಬರ್) ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಾದ ಕಬ್ಬಿನ 'ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ' (ಎಫ್ಆರ್ಪಿ) ಗೆ ಸಂಪುಟದ ಅನುಮೋದನೆ.

February 21st, 11:26 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಭೆ, 2024-25ನೇ ಸಾಲಿನ ಸಕ್ಕರೆ ಋತುವಿನಲ್ಲಿ ಕಬ್ಬಿನ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ (ಎಫ್ ಆರ್ ಪಿ)ಯನ್ನು ಪ್ರತಿ ಕ್ವಿಂಟಾಲ್ ಗೆ 340 ರೂ.ಗಳಂತೆ 10.25% ಸಕ್ಕರೆ ಚೇತರಿಕೆ ದರದಲ್ಲಿ ನೀಡಲು ತನ್ನ ಅನುಮೋದನೆ ನೀಡಿದೆ. ಇದು ಕಬ್ಬಿನ ಐತಿಹಾಸಿಕ ಬೆಲೆಯಾಗಿದ್ದು, ಇದು 2023-24ರ ಪ್ರಸಕ್ತ ಋತುವಿನಲ್ಲಿ ಕಬ್ಬಿನ ಎಫ್ಆರ್ಪಿಗಿಂತ ಸುಮಾರು 8% ಹೆಚ್ಚಾಗಿದೆ. ಪರಿಷ್ಕೃತ ಎಫ್ಆರ್ಪಿ 01 ಅಕ್ಟೋಬರ್ 2024 ರಿಂದ ಅನ್ವಯವಾಗಲಿದೆ.