ಎಐ ಪ್ರಗತಿಯಿಂದ ಟಿ20 ವಿಶ್ವಕಪ್ ವರೆಗೆ, ಪ್ರಧಾನಿ ಮೋದಿ ಮನ್ ಕಿ ಬಾತ್ ನಲ್ಲಿ ಭಾರತದ ಏರಿಕೆಯನ್ನು ಪ್ರದರ್ಶಿಸುತ್ತಾರೆ
February 22nd, 11:30 am
ಈ ತಿಂಗಳ ಮನ್ ಕಿ ಬಾತ್ ನಲ್ಲಿ, ಪ್ರಧಾನಿ ಮೋದಿ ದೆಹಲಿಯಲ್ಲಿ ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ತಮ್ಮ ಅನುಭವಗಳ ಬಗ್ಗೆ ಮಾತನಾಡಿದರು. ಭಾರತೀಯ ಮೂಲದ ಕ್ರಿಕೆಟಿಗರು, ಅಂಗಾಂಗ ದಾನ, ನದಿ ಉತ್ಸವಗಳು, ಡಿಜಿಟಲ್ ಸುರಕ್ಷತೆ, ಪರೀಕ್ಷಾ ಪೆ ಚರ್ಚಾ ಮತ್ತು ಇನ್ನೂ ಅನೇಕ ಪ್ರಮುಖ ವಿಷಯಗಳನ್ನು ಅವರು ಸ್ಪರ್ಶಿಸಿದರು. ಫೆಬ್ರವರಿ 23 ರಂದು ರಾಷ್ಟ್ರಪತಿ ಭವನದಲ್ಲಿ 'ರಾಜಾಜಿ ಉತ್ಸವ' ಆಚರಿಸಲಾಗುವುದು ಎಂದು ಅವರು ಹೈಲೈಟ್ ಮಾಡಿದರು. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಜಿ ಅವರಿಗೆ ಪ್ರಧಾನಿ ಗೌರವ ಸಲ್ಲಿಸಿದರು, ನಾರಿ ಶಕ್ತಿಯೊಂದಿಗಿನ ಅವರ ಆಳವಾದ ಸಂಪರ್ಕವನ್ನು ಗಮನಿಸಿದರು.“ಪರೀಕ್ಷಾ ಪೇ ಚರ್ಚಾ 2026” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಪ್ರಧಾನಮಂತ್ರಿ ಅವರ ಸಂವಾದ
February 06th, 10:21 am
ನಾನು ಸಾನ್ವಿ ಆಚಾರ್ಯ, ನಿಮ್ಮ ಸ್ವಂತ ರಾಜ್ಯ ಗುಜರಾತ್ ನವನು. ನನ್ನ ಮೊದಲ ಪ್ರಶ್ನೆ ಇದು: ಪೋಷಕರು ನಮ್ಮ ಬಗ್ಗೆ ಚಿಂತಿಸುತ್ತಾರೆ, ಶಿಕ್ಷಕರು ನಮ್ಮನ್ನು ಬೆಂಬಲಿಸುತ್ತಾರೆ. ಆದರೆ ಶಿಕ್ಷಕರು ಒಂದು ಅಧ್ಯಯನ ಮಾದರಿ ಸೂಚಿಸಿದಾಗ, ಪೋಷಕರು ಇನ್ನೊಂದನ್ನು ಒತ್ತಾಯಿಸುತ್ತಾರೆ, ಆದರೆ ವಿದ್ಯಾರ್ಥಿಗಳ ಮಾದರಿಯೇ ಇನ್ನೊಂದು ಇದ್ದಾಗ ಮುಖ್ಯ ಸಮಸ್ಯೆ ಉದ್ಭವಿಸುತ್ತದೆ. ಆ ಸಮಯದಲ್ಲಿ, ಯಾವ ಮಾದರಿ ಸರಿಯಾಗಿದೆ ಎಂಬುದರ ಬಗ್ಗೆ ನಮಗೆ ಗೊಂದಲವಾಗುತ್ತದೆಪರೀಕ್ಷಾ ಪೇ ಚರ್ಚಾ 2026 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಂವಾದ
February 06th, 10:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು 9ನೇ ಆವೃತ್ತಿಯ ಪರೀಕ್ಷಾ ಪೆ ಚರ್ಚಾ(ಪಿಪಿಸಿ) ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರಧಾನಿ ಅವರು ದೆಹಲಿಯ ತಮ್ಮ ನಿವಾಸದಲ್ಲಿ ಪರೀಕ್ಷಾ ಯೋಧರೊಂದಿಗೆ ಅನೌಪಚಾರಿಕ ಸಂವಾದ ನಡೆಸಿದರು.ಪ್ರಧಾನಮಂತ್ರಿ ಅವರು ಎಲ್ಲರನ್ನೂ #ParikshaPeCharcha26 ಗೆ ಸೇರಲು ಆಹ್ವಾನಿಸಿದ್ದಾರೆ
February 05th, 09:56 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ, ಫೆಬ್ರವರಿ 6 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ #ParikshaPeCharcha26 ನಲ್ಲಿ ಭಾಗವಹಿಸಲು ಎಲ್ಲರನ್ನೂ ಆಹ್ವಾನಿಸಿದರು. ಈ ವರ್ಷದ ಆವೃತ್ತಿಯು ಪರೀಕ್ಷೆಗಳಿಗೆ ಸಂಬಂಧಿಸಿದ ಅತ್ಯಂತ ಆಸಕ್ತಿದಾಯಕ ವಿಷಯಗಳನ್ನು ಒಳಗೊಂಡಿರುತ್ತದೆ, ಅದರಲ್ಲೂ ಮುಖ್ಯವಾಗಿ ಒತ್ತಡ ಮುಕ್ತವಾಗಿರುವುದು ಮತ್ತು ಕಲಿಕೆಯ ಮೇಲೆ ಗಮನ ಕೇಂದ್ರೀಕರಿಸುವ ಮಹತ್ವವನ್ನು ಅವರು ಎತ್ತಿ ತೋರಿಸಿದರು. ಈ ವೇದಿಕೆಯು ತಮಗೆ ಯಾವಾಗಲೂ ಸಂತೋಷ ನೀಡುವಂತಹುದಾಗಿದೆ, ಏಕೆಂದರೆ ಇದು ದೇಶಾದ್ಯಂತದ ಪ್ರಖರ ಮನಸ್ಸುಗಳೊಂದಿಗೆ ಸಂವಹನ ನಡೆಸಲು ತಮಗೆ ಅವಕಾಶ ನೀಡುತ್ತದೆ ಎಂದು ಪ್ರಧಾನಮಂತ್ರಿಯವರು ಒತ್ತಿಹೇಳಿದರು.ದೇವಮೋಗ್ರ, ಕೊಯಮತ್ತೂರು, ರಾಯ್‌ಪುರ, ಗುವಾಹಟಿ ಮತ್ತು ದೆಹಲಿಯ 7, ಲೋಕ ಕಲ್ಯಾಣ ಮಾರ್ಗದಲ್ಲಿ ಪರೀಕ್ಷಾ ಯೋಧರೊಂದಿಗೆ ನಡೆದ ವಿಶೇಷ “ಪರೀಕ್ಷಾ ಪೇ ಚರ್ಚಾ” ಸಂಚಿಕೆಯನ್ನು ವೀಕ್ಷಿಸಲು ಪ್ರಧಾನಮಂತ್ರಿ ಅವರು ಎಲ್ಲರಿಗೂ ಕರೆ ನೀಡಿದ್ದಾರೆ
February 03rd, 04:45 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 6, 2026 ರಂದು ಭಾರತದ ಯುವಕರ ಈ ಆಕರ್ಷಕ ಸಂಭಾಷಣೆಗಳು ಮತ್ತು ಸಾಮೂಹಿಕ ಮನೋಭಾವವನ್ನು ವೀಕ್ಷಿಸಲು ವಿಶೇಷ “ಪರೀಕ್ಷಾ ಪೇ ಚರ್ಚಾ” ಸಂಚಿಕೆಗೆ ನಾಗರಿಕರನ್ನು ಇಂದು ಆಹ್ವಾನಿಸಿದ್ದಾರೆ.ಈ ವರ್ಷದ #ParikshaPeCharcha ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ಅವರು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ
January 07th, 07:05 pm
ಹತ್ತನೇ ತರಗತಿ ಮತ್ತು ಹನ್ನೆರಡನೇ ತರಗತಿಯ ಬೋರ್ಡ್ ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮತ್ತೊಮ್ಮೆ ಬಹುನಿರೀಕ್ಷಿತ ವಾರ್ಷಿಕ ಕಾರ್ಯಕ್ರಮವಾದ #ParikshaPeCharcha ಕಾರ್ಯಕ್ರಮವನ್ನು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಸಂವಾದ ಮೂಲಕ ನಡೆಸಲಿದ್ದಾರೆ.ಸಿ ಬಿ ಎಸ್ ಇ 12ನೇ ಮತ್ತು 10ನೇ ತರಗತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಎಲ್ಲರಿಗೂ ಪ್ರಧಾನಮಂತ್ರಿ ಅಭಿನಂದನೆ
May 13th, 02:36 pm
ಸಿ ಬಿ ಎಸ್ ಇ 12ನೇ ಮತ್ತು 10ನೇ ತರಗತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಎಲ್ಲರಿಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದನೆ ಸಲ್ಲಿಸಿದ್ದಾರೆ. ಇದು ನಿಮ್ಮ ದೃಢನಿಶ್ಚಯ, ಶಿಸ್ತು ಮತ್ತು ಕಠಿಣ ಪರಿಶ್ರಮದ ಫಲಿತಾಂಶವಾಗಿದೆ. ಇಂದು ಈ ಸಾಧನೆಗೆ ಕಾರಣರಾದ ಪೋಷಕರು, ಶಿಕ್ಷಕರು ಮತ್ತು ಇತರರ ಪಾತ್ರವನ್ನು ಶ್ಲಾಘಿಸುವ ದಿನವಾಗಿದೆ ಎಂದು ಶ್ರೀ ಮೋದಿ ಹೇಳಿದ್ದಾರೆ.ಪಾಡ್‌ಕ್ಯಾಸ್ಟ್ ನಲ್ಲಿ ಲೆಕ್ಸ್ ಫ್ರಿಡ್ಮನ್ ಅವರೊಂದಿಗಿನ ಪ್ರಧಾನಮಂತ್ರಿಯವರ ಮಾತುಕತೆಯ ಕನ್ನಡ ಅನುವಾದ
March 16th, 11:47 pm
ಪ್ರಧಾನಮಂತ್ರಿ ನರೇಂದ್ರ ಮೋದಿ: ನನ್ನ ಶಕ್ತಿ ಇರುವುದು ಮೋದಿಯಾಗಿರುವುದರಲ್ಲಿ ಅಲ್ಲ; ಅದು 140 ಕೋಟಿ ಭಾರತೀಯರಿಂದ ಬಂದಿದೆ, ಸಾವಿರಾರು ವರ್ಷಗಳ ನಮ್ಮ ದೇಶದ ಶ್ರೀಮಂತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯಿಂದ ಬಂದಿದೆ. ಅದೇ ನನ್ನ ನಿಜವಾದ ಶಕ್ತಿ. ನಾನು ಎಲ್ಲಿಗೆ ಹೋದರೂ, ಮೋದಿಯಾಗಿ ಹೋಗುವುದಿಲ್ಲ - ವೇದಗಳಿಂದ ವಿವೇಕಾನಂದರವರೆಗೆ ನಮ್ಮ ನಾಗರಿಕತೆಯ ಸಾವಿರಾರು ವರ್ಷಗಳ ಹಳೆಯ ಶ್ರೇಷ್ಠ ಸಂಪ್ರದಾಯಗಳನ್ನು ನನ್ನೊಂದಿಗೆ ಕೊಂಡೊಯ್ಯತೇನೆ. ನಾನು 140 ಕೋಟಿ ಜನರನ್ನು, ಅವರ ಕನಸುಗಳನ್ನು ಮತ್ತು ಅವರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತೇನೆ. ಅದಕ್ಕಾಗಿಯೇ, ನಾನು ಯಾವುದೇ ವಿಶ್ವ ನಾಯಕರೊಂದಿಗೆ ಕೈಕುಲುಕಿದಾಗ, ಅದು ಕೇವಲ ಮೋದಿಯವರ ಕೈ ಆಗಿರುವುದಿಲ್ಲ - ಅದು 140 ಕೋಟಿ ಭಾರತೀಯರ ಸಾಮೂಹಿಕ ಕೈ ಆಗಿರುತ್ತದೆ. ನನ್ನ ಶಕ್ತಿ ಮೋದಿಯದ್ದಲ್ಲ; ಅದು ಭಾರತದ ಶಕ್ತಿ. ನಾವು ಶಾಂತಿಯ ಬಗ್ಗೆ ಮಾತನಾಡುವಾಗಲೆಲ್ಲಾ, ಜಗತ್ತು ಕೇಳುತ್ತದೆ, ಏಕೆಂದರೆ ಇದು ಬುದ್ಧನ ನಾಡು, ಮಹಾತ್ಮ ಗಾಂಧಿಯವರ ನಾಡು. ನಾವು ಸಂಘರ್ಷದ ಪ್ರತಿಪಾದಕರಲ್ಲ; ನಾವು ಸಾಮರಸ್ಯವನ್ನು ಪ್ರತಿಪಾದಿಸುತ್ತೇವೆ. ನಾವು ಪ್ರಕೃತಿಯೊಂದಿಗೆ ಸಂಘರ್ಷ ಅಥವಾ ರಾಷ್ಟ್ರಗಳ ನಡುವಿನ ಕಲಹವನ್ನು ಬಯಸುವುದಿಲ್ಲ - ನಾವು ಸಹಕಾರದಲ್ಲಿ ನಂಬಿಕೆ ಇಡುವ ಜನರು ಮತ್ತು ನಾವು ಶಾಂತಿಯನ್ನು ಉತ್ತೇಜಿಸಲು ಯಾವುದೇ ರೀತಿಯಲ್ಲಿ ಕೊಡುಗೆ ನೀಡಲು ಸಾಧ್ಯವಾದರೆ, ನಾವು ಯಾವಾಗಲೂ ಅದನ್ನು ಮಾಡಲು ಪ್ರಯತ್ನಿಸುತ್ತೇವೆ. ನನ್ನ ಜೀವನವು ಅತ್ಯಂತ ಬಡತನದಿಂದ ಬಂದಿದೆ, ಆದರೂ ನಾವು ಅದರ ಹೊರೆಯನ್ನು ಎಂದಿಗೂ ಅನುಭವಿಸಲಿಲ್ಲ. ಜೀವನದುದ್ದಕ್ಕೂ ಬೂಟುಗಳನ್ನು ಧರಿಸಿದ ವ್ಯಕ್ತಿಗೆ ಇದ್ದಕ್ಕಿದ್ದಂತೆ ಅವುಗಳಿಲ್ಲದೆ ಹೋದರೆ ಅವನು ಕಷ್ಟಪಡಬೇಕಾಗಬಹುದು. ಆದರೆ ಎಂದಿಗೂ ಬೂಟುಗಳನ್ನು ಧರಿಸದವರಿಗೆ, ಅಭಾವದ ಭಾವನೆಯೇ ಇರುವುದಿಲ್ಲ - ನಾವು ನಮ್ಮ ಜೀವನವನ್ನು ಅದು ಇದ್ದಂತೆಯೇ ಸರಳವಾಗಿ ಬದುಕಿದ್ದೇವೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ ʻಪಾಡ್‌ಕಾಸ್ಟ್ʼನಲ್ಲಿ ಸಂವಾದ ನಡೆಸಿದರು
March 16th, 05:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ ಇಂದು ವಿವಿಧ ವಿಷಯಗಳ ಬಗ್ಗೆ ʻಪಾಡ್‌ಕಾಸ್ಟ್ʼನಲ್ಲಿ ಸಂವಾದ ನಡೆಸಿದರು. ಪ್ರಾಮಾಣಿಕವಾದ, ಮನದಾಳದ ಮಾತುಕತೆಯ ವೇಳೆ ಪ್ರಧಾನಿ ಅವರನ್ನು ನೀವು ಏಕೆ ಉಪವಾಸ ಮಾಡುತ್ತೀರಿ ಮತ್ತು ಹೇಗೆ ನಿರ್ವಹಿಸುತ್ತೀರಿ ಎಂದು ಕೇಳಿದಾಗ, ಪ್ರಧಾನಿಯವರು ತಮ್ಮ ಮೇಲಿನ ಗೌರವದ ಸಂಕೇತವಾಗಿ ಉಪವಾಸ ಮಾಡಿದ ಪಾಡ್‌ಕಾಸ್ಟರ್ ಲೆಕ್ಸ್ ಫ್ರಿಡ್ಮನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಭಾರತದಲ್ಲಿ, ಧಾರ್ಮಿಕ ಸಂಪ್ರದಾಯಗಳು ದೈನಂದಿನ ಜೀವನದೊಂದಿಗೆ ಆಳವಾಗಿ ಹೆಣೆದುಕೊಂಡಿವೆ ಎಂದು ಶ್ರೀ ಮೋದಿ ಹೇಳಿದರು. ಹಿಂದೂ ಧರ್ಮವು ಕೇವಲ ಆಚರಣೆಗಳ ಕುರಿತಾದದ್ದಲ್ಲ. ಅದು ಜೀವನಕ್ಕೆ ಮಾರ್ಗದರ್ಶನ ನೀಡುವ ತತ್ವಶಾಸ್ತ್ರವಾಗಿದೆ ಎಂದು ಹೇಳಿದ ಶ್ರೀ ಮೋದಿ ಅವರು ಈ ಕುರಿತು ಭಾರತದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ವ್ಯಾಖ್ಯಾನವನ್ನು ಉಲ್ಲೇಖಿಸಿದರು. ಉಪವಾಸವು ಶಿಸ್ತನ್ನು ಬೆಳೆಸಲು ಹಾಗೂ ಮನಸ್ಸು ಹಾಗೂ ದೇಹವನ್ನು ಸಮತೋಲನಗೊಳಿಸಲು ಒಂದು ಸಾಧನವಾಗಿದೆ ಎಂದು ಅವರು ಒತ್ತಿ ಹೇಳಿದರು. ಉಪವಾಸವು ಇಂದ್ರಿಯಗಳ ಪ್ರಜ್ಞೆಯನ್ನು ಹೆಚ್ಚಿಸುತ್ತದೆ, ಅವುಗಳನ್ನು ಹೆಚ್ಚು ಸೂಕ್ಷ್ಮ ಮತ್ತು ಜಾಗೃತಗೊಳಿಸುತ್ತದೆ ಎಂದು ಪ್ರಧಾನಿ ಹೇಳಿದರು. ಉಪವಾಸದ ಸಮಯದಲ್ಲಿ, ಅತ್ಯಂತ ಸೂಕ್ಷ್ಮವಾದ ಸುವಾಸನೆ ಮತ್ತು ವಿವರಗಳನ್ನು ಸಹ ಹೆಚ್ಚು ಸ್ಪಷ್ಟವಾಗಿ ಗ್ರಹಿಸಬಹುದು ಎಂದು ಅವರು ಹೇಳಿದರು. ಉಪವಾಸವು ಆಲೋಚನಾ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ, ಹೊಸ ದೃಷ್ಟಿಕೋನಗಳನ್ನು ಒದಗಿಸುತ್ತದೆ ಮತ್ತು ರೂಢಿಗತವಲ್ಲದ ರೀತಿಯಲ್ಲಿ (ಔಟ್ ಆಫ್ ದಿ ಬಾಕ್ಸ್) ಆಲೋಚನೆಯನ್ನು ಉತ್ತೇಜಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಉಪವಾಸವೆಂದರೆ ಕೇವಲ ಆಹಾರವನ್ನು ತ್ಯಜಿಸುವುದಷ್ಟೇ ಅಲ್ಲ ಎಂದು ಶ್ರೀ ಮೋದಿ ಸ್ಪಷ್ಟಪಡಿಸಿದರು. ಇದು ಪೂರ್ವ ಸಿದ್ಧತೆ ಮತ್ತು ನಿರ್ವಿಷೀಕರಣದ (ಡಿಟಾಕ್ಸಿಕೇಷನ್) ವೈಜ್ಞಾನಿಕ ಪ್ರಕ್ರಿಯೆಯನ್ನು ಒಳಗೊಂಡಿದೆ. ಹಲವಾರು ದಿನಗಳ ಮುಂಚಿತವಾಗಿ ಆಯುರ್ವೇದ ಮತ್ತು ಯೋಗ ಅಭ್ಯಾಸಗಳನ್ನು ಅನುಸರಿಸುವ ಮೂಲಕ ತಮ್ಮ ದೇಹವನ್ನು ಉಪವಾಸಕ್ಕಾಗಿ ಸಜ್ಜುಗೊಳಿಸುವುದಾಗಿ ಅವರು ಒತ್ತಿ ಹೇಳಿದರು ಮತ್ತು ಈ ಅವಧಿಯಲ್ಲಿ ದೇಹದಲ್ಲಿ ನೀರಿನ ಅಂಶವನ್ನು ಕಾಯ್ದುಕೊಳ್ಳುವುದರ ಮಹತ್ವವನ್ನು ಒತ್ತಿ ಹೇಳಿದರು. ಉಪವಾಸ ಪ್ರಾರಂಭವಾದ ನಂತರ, ಅವರು ಅದನ್ನು ಭಕ್ತಿ ಮತ್ತು ಸ್ವಯಂ ಶಿಸ್ತಿನ ಕ್ರಿಯೆಯಾಗಿ ನೋಡುವುದಾಗಿ, ಮತ್ತು ಇದು ಆಳವಾದ ಆತ್ಮಾವಲೋಕನ ಮತ್ತು ಏಕಾಗ್ರತೆಗೆ ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ತಮ್ಮ ಶಾಲಾ ದಿನಗಳಲ್ಲಿ ಉಪವಾಸದ ಅಭ್ಯಾಸವು ವೈಯಕ್ತಿಕ ಅನುಭವದಿಂದ ಪ್ರಾರಂಭವಾಯಿತು. ಮಹಾತ್ಮಾ ಗಾಂಧಿಯವರಿಂದ ಸ್ಫೂರ್ತಿಪಡೆದ ಆಂದೋಲನದಿಂದ ಅದು ಶುರುವಾಯಿತು ಎಂದು ಪ್ರಧಾನಿ ಹಂಚಿಕೊಂಡರು. ಅವರು ತಮ್ಮ ಮೊದಲ ಉಪವಾಸದ ಸಮಯದಲ್ಲಿ ಶಕ್ತಿ ಮತ್ತು ಜಾಗೃತಿಯಲ್ಲಿ ಉಂಟಾದ ತೀವ್ರತೆಯ ಅನುಭವನ್ನು ವಿವರಿಸಿದರು. ಅದು ಉಪವಾಸದ ಪರಿವರ್ತಕ ಶಕ್ತಿಯನ್ನು ತಮಗೆ ಮನವರಿಕೆ ಮಾಡಿಕೊಟ್ಟಿತು ಎಂದರು. ಉಪವಾಸವು ತಮ್ಮನ್ನು ತಾಮಸ ಅಥವಾ ನಿಧಾನಗೊಳಿಸುವುದಿಲ್ಲ. ಬದಲಾಗಿ, ಇದು ಆಗಾಗ್ಗೆ ತಮ್ಮ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಉಪವಾಸದ ಸಮಯದಲ್ಲಿ, ಅವರ ಆಲೋಚನೆಗಳು ಹೆಚ್ಚು ಮುಕ್ತವಾಗಿ ಮತ್ತು ಸೃಜನಶೀಲವಾಗಿ ಹರಿಯುತ್ತವೆ, ಇದು ತಮ್ಮನ್ನು ವ್ಯಕ್ತಪಡಿಸಲು ಅದ್ಭುತ ಅನುಭವವನ್ನು ನೀಡುತ್ತದೆ ಎಂದು ಅವರು ವಿವರಿಸಿದರು.'ಮನ್ ಕಿ ಬಾತ್' (119ನೇ ಸಂಚಿಕೆ) ಪ್ರಸಾರ ದಿನಾಂಕ: 23.02.2025
February 23rd, 11:30 am
എന്റെ പ്രിയപ്പെട്ട നാട്ടുകാരേ, നമസ്കാരം. നിങ്ങളെയെല്ലാം 'മൻ കി ബാത്തിലേക്ക്' സ്വാഗതം ചെയ്യുന്നു. ചാമ്പ്യൻസ് ട്രോഫി ഇപ്പോൾ നടന്നുകൊണ്ടിരിക്കുകയാണ്. എല്ലാം ക്രിക്കറ്റ് മയമാണ്. ക്രിക്കറ്റിൽ ഒരു സെഞ്ചുറിയുടെ ആവേശം എന്താണെന്ന് നമുക്കെല്ലാവർക്കും നന്നായി അറിയാം, പക്ഷേ ഇന്ന് ഞാൻ നിങ്ങളോട് ക്രിക്കറ്റിനെക്കുറിച്ചല്ല, മറിച്ച് ഭാരതം ബഹിരാകാശത്ത് നേടിയ അത്ഭുതകരമായ സെഞ്ചുറിയെക്കുറിച്ചാണ് സംസാരിക്കുന്നത്. കഴിഞ്ഞ മാസം, ഐഎസ്ആർഒയുടെ നൂറാമത്തെ റോക്കറ്റിന്റെ വിക്ഷേപണത്തിന് രാജ്യം സാക്ഷ്യം വഹിച്ചു. ഇത് വെറുമൊരു അക്കമല്ല, ബഹിരാകാശ ശാസ്ത്രത്തിൽ പുതിയ ഉയരങ്ങൾ കീഴടക്കാനുള്ള നമ്മുടെ ദൃഢനിശ്ചയത്തിന്റെ പ്രതിഫലനമാണ്. നമ്മുടെ ബഹിരാകാശ യാത്ര വളരെ സാധാരണമായ രീതിയിലാണ് ആരംഭിച്ചത്. ഓരോ ഘട്ടത്തിലും വെല്ലുവിളികൾ ഉണ്ടായിരുന്നു, പക്ഷേ നമ്മുടെ ശാസ്ത്രജ്ഞർ വിജയികളായി മുന്നേറിക്കൊണ്ടിരുന്നു. കാലക്രമേണ, ബഹിരാകാശ മേഖലയിലെ നമ്മുടെ വിജയങ്ങളുടെ പട്ടിക വളരെ നീണ്ടതായി. വിക്ഷേപണ വാഹന നിർമ്മാണമായാലും, ചന്ദ്രയാൻ, മംഗൾയാൻ, ആദിത്യ എൽ-1 എന്നിവയുടെ വിജയമായാലും, ഒറ്റ റോക്കറ്റ് ഉപയോഗിച്ച് 104 ഉപഗ്രഹങ്ങളെ ഒറ്റയടിക്ക് ബഹിരാകാശത്തേക്ക് അയയ്ക്കുക എന്ന അഭൂതപൂർവമായ ദൗത്യമായാലും - ഇസ്രോയുടെ വിജയങ്ങളുടെ വ്യാപ്തി വളരെ വലുതാണ്. കഴിഞ്ഞ 10 വർഷത്തിനുള്ളിൽ മാത്രം ഏകദേശം 460 ഉപഗ്രഹങ്ങൾ വിക്ഷേപിച്ചു, ഇതിൽ മറ്റ് രാജ്യങ്ങളുടെ നിരവധി ഉപഗ്രഹങ്ങളും ഉൾപ്പെടുന്നു. സമീപ വർഷങ്ങളിലെ ഒരു പ്രധാന കാര്യം നമ്മുടെ ബഹിരാകാശ ശാസ്ത്രജ്ഞരുടെ സംഘത്തിൽ സ്ത്രീശക്തിയുടെ പങ്കാളിത്തം തുടർച്ചയായി വർദ്ധിച്ചുകൊണ്ടിരിക്കുകയാണ് എന്നതാണ്. ഇന്ന് നമ്മുടെ യുവാക്കൾക്ക് ബഹിരാകാശ മേഖല പ്രിയപ്പെട്ടതായി മാറിയതിൽ എനിക്ക് വളരെ സന്തോഷമുണ്ട്. ഈ മേഖലയിലെ സ്റ്റാർട്ടപ്പുകളുടെയും സ്വകാര്യ മേഖലയിലെ ബഹിരാകാശ കമ്പനികളുടെയും എണ്ണം നൂറുകണക്കിന് എത്തുമെന്ന് കുറച്ച് വർഷങ്ങൾക്ക് മുമ്പുവരെ ആരാണ് കരുതിയിരുന്നത്! ജീവിതത്തിൽ ഉൾപുളകം ഉണ്ടാക്കുന്നതും ആവേശകരവുമായ എന്തെങ്കിലും ചെയ്യാൻ ആഗ്രഹിക്കുന്ന നമ്മുടെ യുവാക്കൾക്ക്, ബഹിരാകാശ മേഖല ഒരു മികച്ച ഓപ്ഷനായി മാറുകയാണ്.ಪರೀಕ್ಷೆಯ ಒತ್ತಡ ಮತ್ತು ಆತಂಕವನ್ನು ಯಶಸ್ವಿಯಾಗಿ ಎದುರಿಸಿದ ಅತ್ಯುತ್ತಮ ತಜ್ಞರಿಂದ, ಅಂದರೆ ಎಕ್ಸಾಮ್ ವಾರಿಯರ್ಸ್ ಅವರಿಂದ ಇದನ್ನು ಕೇಳಿ ಎಂದ ಪ್ರಧಾನಮಂತ್ರಿ
February 17th, 07:41 pm
'ಪರೀಕ್ಷಾ ಪೇ ಚರ್ಚಾ-2025ರ' ವಿಶೇಷ ಸಂಚಿಕೆಯು ಫೆಬ್ರವರಿ 18 ರಂದು ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಈ ಸಂಚಿಕೆಯಲ್ಲಿ ಪರೀಕ್ಷೆಯ ಒತ್ತಡ ಮತ್ತು ಆತಂಕವನ್ನು ಯಶಸ್ವಿಯಾಗಿ ಎದುರಿಸಿದ ಯುವ ಎಕ್ಸಾಮ್ ವಾರಿಯರ್ಸ್ ಭಾಗವಹಿಸಲಿದ್ದಾರೆ. ಈ ಸಂಚಿಕೆಯು ಪರೀಕ್ಷೆಯ ಒತ್ತಡ, ಆತಂಕದಲ್ಲಿಯೂ ಸ್ಥಿರವಾಗಿ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಅವರ ಅನುಭವಗಳು, ತಂತ್ರಗಳು ಮತ್ತು ಒಳನೋಟಗಳನ್ನು ನೀಡಲಿದೆ.ಪರೀಕ್ಷಾ ಸಮಯದಲ್ಲಿ ಸಕಾರಾತ್ಮಕತೆಯೇ ಪರೀಕ್ಷಾ ಯೋಧರಿಗೆ ಪರಮ ಮಿತ್ರ : ಪ್ರಧಾನಮಂತ್ರಿ
February 15th, 05:58 pm
ಪರೀಕ್ಷಾ ತಯಾರಿಯ ಸಮಯದಲ್ಲಿ ಧನಾತ್ಮಕತೆಯು ವಿದ್ಯಾರ್ಥಿಗಳಿಗೆ ನಿರ್ಣಾಯಕ ಸ್ನೇಹಿತ ಎಂದು ಅದರ ಪ್ರಾಮುಖ್ಯತೆಯ ಬಗ್ಗೆ ಒತ್ತಿಹೇಳುತ್ತಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆಯ 'ಪರೀಕ್ಷಾ ಪೇ ಚರ್ಚಾ' ಸಂಚಿಕೆಯನ್ನು ಎಲ್ಲರೂ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ.ಯೋಗಕ್ಷೇಮ, ಸ್ವಾಸ್ಥ್ಯ ಮತ್ತು ಮಾನಸಿಕ ಶಾಂತಿಯ ವಿಷಯಗಳು ಬಂದಾಗ, ಸದ್ಗುರು ಜಗ್ಗಿ ವಾಸುದೇವ್ ಅವರು ಯಾವಾಗಲೂ ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬರಾಗಿರುತ್ತಾರೆ: ಪ್ರಧಾನಮಂತ್ರಿ
February 14th, 08:15 pm
ಸದ್ಗುರು ಜಗ್ಗಿ ವಾಸುದೇವ್ ಅವರು ಕ್ಷೇಮ ಮತ್ತು ಮಾನಸಿಕ ಶಾಂತಿಯ ವಿಚಾರದಲ್ಲಿ ಸದಾ ಸ್ಪೂರ್ತಿದಾಯಕ ವ್ಯಕ್ತಿಗಳಲ್ಲೊಬ್ಬರು ಎಂದು ಹೇಳಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಾಳೆಯ ಪರೀಕ್ಷಾ ಪೇ ಚರ್ಚಾದ 4ನೇ ಸಂಚಿಕೆಯನ್ನು ಎಲ್ಲರೂ ವೀಕ್ಷಿಸುವಂತೆ ಕರೆ ನೀಡಿದರು.ಫಿಟ್‌ನೆಸ್ ಉತ್ತೇಜನ ಮತ್ತು ಸ್ಥೂಲಕಾಯದ ವಿರುದ್ಧದ ಹೋರಾಟದಲ್ಲಿ ನೀರಜ್ ಚೋಪ್ರಾ ಅವರ ಪ್ರಯತ್ನಗಳಿಗೆ ಪ್ರಧಾನಮಂತ್ರಿ ಶ್ಲಾಘನೆ
February 12th, 02:00 pm
ಫಿಟ್‌ನೆಸ್ ಉತ್ತೇಜನ ಮತ್ತು ಸ್ಥೂಲಕಾಯದ ವಿರುದ್ಧದ ಹೋರಾಟದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಸ್ಥೂಲಕಾಯವನ್ನು ತೊಡೆದುಹಾಕಿ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಶ್ರೀ ಮೋದಿ ಅವರು ಒತ್ತಿ ಹೇಳಿದ್ದಾರೆ.'ಪರೀಕ್ಷಾ ಪೇ ಚರ್ಚಾ'ದ ಎಲ್ಲಾ ಕಂತುಗಳನ್ನು ವೀಕ್ಷಿಸುವಂತೆ ಪ್ರತಿಯೊಬ್ಬರಿಗೂ ಪ್ರಧಾನಮಂತ್ರಿಯವರಿಂದ ಮನವಿ
February 11th, 02:57 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು 'ಪರೀಕ್ಷಾ ಪೇ ಚರ್ಚಾ 2025ರ' ಎಲ್ಲಾ ಕಂತುಗಳನ್ನು ವೀಕ್ಷಿಸಿ, ನಮ್ಮ ಪರೀಕ್ಷಾ ಯೋಧರನ್ನು ಪ್ರೋತ್ಸಾಹಿಸುವಂತೆ ಪ್ರತಿಯೊಬ್ಬರನ್ನು ಮನವಿಮಾಡಿದ್ದಾರೆ.ಫೆಬ್ರವರಿ 12 ರಂದು 'ಪರೀಕ್ಷಾ ಪೇ ಚರ್ಚಾದಲ್ಲಿ' ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಕುರಿತಾದ ವಿಶೇಷ ಸಂಚಿಕೆ ಪ್ರಸಾರವಾಗಲಿದೆ: ಪ್ರಧಾನಮಂತ್ರಿ
February 11th, 01:53 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, 'ಪರೀಕ್ಷಾ ಯೋಧರು' ಚರ್ಚಿಸಲು ಬಯಸುವ ಸಾಮಾನ್ಯ ವಿಷಯವನ್ನು ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಎಂದು ಹೇಳಿದ್ದಾರೆ. ಆದ್ದರಿಂದ, ಈ ವರ್ಷದ 'ಪರೀಕ್ಷಾ ಪೇ ಚರ್ಚಾದಲ್ಲಿ' ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಎಪಿಸೋಡ್ ಅನ್ನು ವಿಶೇಷವಾಗಿ ಮೀಸಲಾಗಿರಿಸಲಾಗಿದ್ದು, ಅದು ನಾಳೆ, ಅಂದರೆ ಫೆಬ್ರವರಿ 12ರಂದು ಪ್ರಸಾರವಾಗಲಿದೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ.'ಪರೀಕ್ಷಾ ಪೇ ಚರ್ಚಾ' ಮತ್ತೊಮ್ಮೆ ಹೊಸ ಜೀವಂತ ಸ್ವರೂಪದಲ್ಲಿ ಬಂದಿದೆ: ಪ್ರಧಾನಮಂತ್ರಿ
February 06th, 01:18 pm
ಪರೀಕ್ಷಾ ಪೇ ಚರ್ಚಾ-2025ನ್ನು ವೀಕ್ಷಿಸುವಂತೆ ಎಲ್ಲಾ ಪರೀಕ್ಷಾ ಯೋಧರು, ಅವರ ಪೋಷಕರು ಮತ್ತು ಶಿಕ್ಷಕರನ್ನು ಒತ್ತಾಯಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಎಕ್ಸ್ ನ ಪೋಸ್ಟ್ ನಲ್ಲಿ:ಪರೀಕ್ಷಾ ಯೋಧರ ಕಲಾ ಉತ್ಸವಕ್ಕೆ ಪ್ರಧಾನಮಂತ್ರಿ ಮೆಚ್ಚುಗೆ
January 07th, 07:33 pm
ಕಲೆಯ ಮೂಲಕ ಪರೀಕ್ಷಾ ಒತ್ತಡದಿಂದ ಹೊರಬರಬಹುದು ಎಂಬುದನ್ನು ಪ್ರದರ್ಶಿಸಿದ ಪರೀಕ್ಷಾ ಯೋಧರ ಕಲಾ ಉತ್ಸವವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.The bond between students and teachers must be beyond syllabus and curriculum: PM Modi
January 29th, 11:26 am
PM Modi interacted with students, teachers and parents at Bharat Mandapam in New Delhi today during the 7th edition of Pariksha Pe Charcha (PPC). PM Modi urged the students to prepare themselves in advance to deal with stress and pressure situations. He said that students should possess the ability of standing firm against adverse situations and challenges.PM interacts with students, teachers and parents during Pariksha Pe Charcha 2024
January 29th, 11:25 am
PM Modi interacted with students, teachers and parents at Bharat Mandapam in New Delhi today during the 7th edition of Pariksha Pe Charcha (PPC). PM Modi urged the students to prepare themselves in advance to deal with stress and pressure situations. He said that students should possess the ability of standing firm against adverse situations and challenges.