India is not only a fast-growing economy, but also a credible one: PM Modi

June 22nd, 10:24 pm

Addressing the Republic Summit 2026, PM Modi highlighted how the spirit of “Nation First” has guided India’s achievements over the past decade. He said India is emerging as a fast-growing, credible and reliable global power and noted that Left Wing Extremism is breathing its last amid rapid development. He expressed confidence that the collective efforts of 140 crore Indians will realise the vision of a Viksit Bharat.

PM Modi addresses the Republic Summit 2026

June 22nd, 08:00 pm

Addressing the Republic Summit 2026, PM Modi highlighted how the spirit of “Nation First” has guided India’s achievements over the past decade. He said India is emerging as a fast-growing, credible and reliable global power and noted that Left Wing Extremism is breathing its last amid rapid development. He expressed confidence that the collective efforts of 140 crore Indians will realise the vision of a Viksit Bharat.

ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಹಳೆಯ ಟ್ರಕ್‌ಗಳು ಮತ್ತು ಬಸ್‌ಗಳನ್ನು ಬದಲಾಯಿಸಲು ಎನ್‌ಸಿಆರ್‌ಪಿಬಿಗೆ ಬೆಂಬಲ ನೀಡುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

June 03rd, 03:17 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ವಾಯು ಮಾಲಿನ್ಯವನ್ನು ತಗ್ಗಿಸುವ ಮತ್ತು ಶುದ್ಧ ಸಾರಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಎರಡು ವರ್ಷಗಳ ಮಹತ್ವದ ಯೋಜನೆಗೆ ಅನುಮೋದನೆ ನೀಡಿದೆ.ಈ ಯೋಜನೆಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (ಎಂ ಒ ಎಚ್ ಯು ಎ) ಅಡಿಯಲ್ಲಿ ಬರುವ ರಾಷ್ಟ್ರೀಯ ರಾಜಧಾನಿ ಪ್ರದೇಶ ಯೋಜನಾ ಮಂಡಳಿ (ಎನ್ ಸಿ ಆರ್ ಪಿ ಬಿ) ಮೂಲಕ ಆರ್ಥಿಕ ನೆರವು ಒದಗಿಸಲಾಗುವುದು ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಇದನ್ನು ಜಾರಿಗೊಳಿಸಲಿದೆ. ಇದನ್ನು ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗದೊಂದಿಗೆ ಜಾರಿಗೆ ತರಲಾಗುವುದು.

ಯುರೋಪ್ ದುಂಡು ಮೇಜಿನ ಕೈಗಾರಿಕಾ ಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

May 18th, 05:00 am

ಮೊದಲನೆಯದಾಗಿ, ಈ ದುಂಡು ಮೇಜಿನ ಸಭೆಗೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಸ್ವೀಡನ್ ಪ್ರಧಾನಮಂತ್ರಿ ಉಲ್ಫ್ ಕ್ರಿಸ್ಟರ್ಸನ್ ಅವರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ. ಈ ಸಭೆ ಗೋಥೆನ್‌ಬರ್ಗ್‌ನಲ್ಲಿ ನಡೆಯುತ್ತಿರುವುದು ನನಗೆ ಸಂತೋಷ ತಂದಿದೆ. ಇದು ನಾವೀನ್ಯತೆಗೆ ಹೆಸರುವಾಸಿಯಾಗಿದೆ ಮಾತ್ರವಲ್ಲದೆ, ಯುರೋಪಿನ ಉತ್ಪಾದನಾ ಮನೋಭಾವದ ಚೈತನ್ಯಶೀಲ ಸಂಕೇತವಾಗಿಯೂ ನಿಂತಿದೆ.

ಯೂರೋಪ್ ದುಂಡು ಮೇಜಿನ ಕೈಗಾರಿಕಾ ಸಭೆ (ಇಆರ್‌ಟಿ) ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

May 17th, 12:12 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026 ಮೇ 17ರಂದು ಗೋಥೆನ್‌ಬರ್ಗ್‌ನಲ್ಲಿ ನಡೆದ ಯೂರೋಪ್ ದುಂಡು ಮೇಜಿನ ಕೈಗಾರಿಕಾ ಸಭೆ(ಇಆರ್‌ಟಿ)ಯನ್ನು ಉದ್ದೇಶಿಸಿ ಮಾತನಾಡಿದರು. ಸ್ವೀಡನ್‌ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಉಲ್ಫ್ ಕ್ರಿಸ್ಟರ್ಸನ್, ಐರೋಪ್ಯ ಒಕ್ಕೂಟ ಆಯೋಗದ ಅಧ್ಯಕ್ಷರಾದ ಶ್ರೀಮತಿ ಉರ್ಸುಲಾ ವಾನ್ ಡೆರ್ ಲೇಯೆನ್, ಯೂರೋಪಿನ ಹಿರಿಯ ಉದ್ಯಮ ಮುಖಂಡರು ಮತ್ತು ಪ್ರಮುಖ ಯೂರೋಪ್ ಮತ್ತು ಭಾರತೀಯ ಕಂಪನಿಗಳ ಪ್ರತಿನಿಧಿಗಳು ವೋಲ್ವೊ ಸಮೂಹ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿದ್ದರು.

ಗುಜರಾತ್‌ನ ವಡೋದರಾದಲ್ಲಿ ಸರ್ದಾರ್‌ಧಾಮ್ ಹಾಸ್ಟೆಲ್ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

May 11th, 06:15 pm

ಗುಜರಾತ್‌ನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್, ಉಪಮುಖ್ಯಮಂತ್ರಿ ಹರ್ಷ ಸಾಂಘ್ವಿ ಜಿ, ಕೇಂದ್ರ ಸಚಿವರು ಮತ್ತು ಸ್ಥಾಪಕ ಟ್ರಸ್ಟಿಗಳಾದ ಮನ್ಸುಖ್ ಭಾಯಿ ಮಾಂಡವೀಯ, ಸರ್ದಾರ್ ಧಾಮ್‌ನ ಅಧ್ಯಕ್ಷ ಗಗ್ಜಿ ಭಾಯಿ ಸುತಾರಿಯಾ ಜಿ, ದುಷ್ಯಂತ್ ಭಾಯಿ ಪಟೇಲ್, ಪಂಕಜ್ ಭಾಯಿ ಪಟೇಲ್, ರಾಜ್ಯ ಬಿಜೆಪಿ ಅಧ್ಯಕ್ಷ ಜಗದೀಶ್ ವಿಶ್ವಕರ್ಮ ಜಿ, ವೇದಿಕೆಯಲ್ಲಿರುವ ಗುಜರಾತ್ ಸರ್ಕಾರದ ಎಲ್ಲಾ ಸಚಿವರೆ, ಎಲ್ಲಾ ದಾನಿಗಳೆ, ಟ್ರಸ್ಟಿಗಳೆ, ಗಣ್ಯ ಅತಿಥಿಗಳೆ ಮತ್ತು ಗುಜರಾತ್‌ನ ಮೂಲೆ ಮೂಲೆಗಳಿಂದ ಇಲ್ಲಿಗೆ ಬಂದಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರೆ.

ಗುಜರಾತ್‌ನ ವಡೋದರಾದಲ್ಲಿ ಸರ್ದಾರ್ ಧಾಮ್ ಹಾಸ್ಟೆಲ್ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

May 11th, 06:00 pm

ಗುಜರಾತ್‌ನ ವಡೋದರಾದಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ದಾರ್ ಧಾಮ್ ಹಾಸ್ಟೆಲ್ ಉದ್ಘಾಟಿಸಿದರು. ಸೋಮನಾಥ ದೇವಾಲಯವು ತನ್ನ 75ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವವನ್ನು ಆಚರಿಸಿದ ದಿನದಂದು ವಡೋದರಾದ ಸರ್ದಾರ್ ಧಾಮ್‌ನಲ್ಲಿ ನಡೆದ ಗಣ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಶಿಕ್ಷಣ ಸಂಸ್ಥೆಗಳ ಉದ್ಘಾಟನೆ ಮತ್ತು ಆಧ್ಯಾತ್ಮಿಕ ಸ್ಮರಣಾರ್ಥ ಶುಭ ಸಂದರ್ಭದ ಕಾಕತಾಳೀಯತೆಯನ್ನು ಉಲ್ಲೇಖಿಸಿದರು. ಡಾ. ದುಷ್ಯಂತ್ ಮತ್ತು ದಕ್ಷಾ ಪಟೇಲ್ ಸಂಕೀರ್ಣವನ್ನು ಉದ್ಘಾಟಿಸುವುದರ ಜೊತೆಗೆ ಬೋಧನಾ ಸಹಾಯ ಯೋಜನೆಯನ್ನು ಉದ್ಘಾಟಿಸುವುದು ಮತ್ತು ಬಹು ಶೈಕ್ಷಣಿಕ ಯೋಜನೆಗಳಿಗೆ ಶಿಲಾನ್ಯಾಸ ಸಮಾರಂಭಗಳನ್ನು ನಡೆಸುವುದರೊಂದಿಗೆ, ಪ್ರಧಾನಮಂತ್ರಿಯವರು ಈ ಉಪಕ್ರಮಗಳನ್ನು ಯುವಜನರ ಭವಿಷ್ಯದ ವೃತ್ತಿಜೀವನಕ್ಕಾಗಿರುವ ಉಡಾವಣಾ ಪ್ಯಾಡ್‌ಗಳೆಂದು ಬಣ್ಣಿಸಿದರು. ಕೆಲವೇ ಗಂಟೆಗಳ ಹಿಂದೆ, ನಾನು ಪ್ರಭಾಸ್ ಪಠಾಣ್‌ನಲ್ಲಿ ಸೋಮನಾಥ ಅಮೃತ್ ಮಹೋತ್ಸವವನ್ನು ಆಚರಿಸುತ್ತಿದ್ದೆ, ಮತ್ತು ಈಗ ನಾವು ಇಲ್ಲಿ ಪರಿವರ್ತನಾತ್ಮಕ ಶಿಕ್ಷಣ ಸಂಸ್ಥೆಗಳನ್ನು ಉದ್ಘಾಟಿಸುತ್ತಿದ್ದೇವೆ, ಈ ಸಂಯೋಜನೆ ಪರಂಪರೆ ಮತ್ತು ಪ್ರಗತಿ ಹೇಗೆ ಒಟ್ಟಿಗೆ ಮುಂದುವರಿಯುತ್ತದೆ ಎಂಬುದನ್ನು ಸಂಕೇತಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು.

PM Modi's strong appeal to every Indian amid global challenges

May 10th, 08:39 pm

PM Modi addressed a public gathering in Hyderabad where he spoke about the global economic challenges triggered by recent conflicts and supply chain disruptions, and called for collective national responsibility to strengthen India’s resilience. He urged citizens to reduce fuel consumption, promote carpooling, use public transport and prioritise electric vehicles to help reduce pressure on imports and save foreign exchange.

ಕಾಂಗ್ರೆಸ್ ಮತ್ತು ಬಿಆರ್‌ಎಸ್‌ನ ಸ್ವಜನಪಕ್ಷಪಾತ ರಾಜಕೀಯದಿಂದ ಜನರು ಬೇಸತ್ತಿದ್ದಾರೆ: ಹೈದರಾಬಾದ್‌ನಲ್ಲಿ ಪ್ರಧಾನಿ ಮೋದಿ

May 10th, 06:05 pm

ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು, ಅಲ್ಲಿ ಅವರು ಭಾರತದ ಹೆಚ್ಚುತ್ತಿರುವ ಜಾಗತಿಕ ಸ್ಥಾನಮಾನ, ಬಿಜೆಪಿಯ ಇತ್ತೀಚಿನ ಚುನಾವಣಾ ವಿಜಯಗಳ ಮಹತ್ವ ಮತ್ತು ನಡೆಯುತ್ತಿರುವ ಜಾಗತಿಕ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಸವಾಲುಗಳ ಸಮಯದಲ್ಲಿ ದೇಶದ ಸಾಮೂಹಿಕ ಜವಾಬ್ದಾರಿಯ ಕುರಿತು ಮಾತನಾಡಿದರು.

ಹೈದರಾಬಾದ್‌ನಲ್ಲಿ ಪ್ರಧಾನಿ ಮೋದಿಯವರ ಬೃಹತ್ ರ್ಯಾಲಿಯು ಸ್ವಾವಲಂಬನೆ ಮತ್ತು ವಿಕಸಿತ ತೆಲಂಗಾಣದ ಮೇಲೆ ಕೇಂದ್ರೀಕರಿಸುತ್ತದೆ.

May 10th, 06:00 pm

ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು, ಅಲ್ಲಿ ಅವರು ಭಾರತದ ಹೆಚ್ಚುತ್ತಿರುವ ಜಾಗತಿಕ ಸ್ಥಾನಮಾನ, ಬಿಜೆಪಿಯ ಇತ್ತೀಚಿನ ಚುನಾವಣಾ ವಿಜಯಗಳ ಮಹತ್ವ ಮತ್ತು ನಡೆಯುತ್ತಿರುವ ಜಾಗತಿಕ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಸವಾಲುಗಳ ಸಮಯದಲ್ಲಿ ದೇಶದ ಸಾಮೂಹಿಕ ಜವಾಬ್ದಾರಿಯ ಕುರಿತು ಮಾತನಾಡಿದರು.

Congress = shop of lies, insult to the people: PM Modi in Hojai, Assam

April 06th, 11:20 am

PM Modi addressed a massive public meeting in Hojai, Assam. In his speech, he cited examples from Congress-ruled states and said that their guarantees fail on the ground. He warned Assam’s voters to remain cautious of misleading promises. He also raised concerns over illegal infiltration and its impact on Assam’s identity, land, and employment.

PM Modi addresses massive public meetings in Barpeta, Hojai and Dibrugarh

April 06th, 11:00 am

PM Modi addressed massive public meetings in Barpeta, Hojai and Dibrugarh, as election campaigning in Assam gathered strong momentum. Addressing enthusiastic crowds, PM Modi highlighted the vision of a self-reliant and Viksit Assam. He launched a strong attack on Congress, accusing it of promoting family-first politics, corruption, and false promises. He also spoke about expanding welfare initiatives along with ensuring reservation for women through the Nari Shakti Vandan Act.

ಇಂಡಿಯಾ ಚಿಪ್ ಲಿಮಿಟೆಡ್‌ನ ಶಿಲಾನ್ಯಾಸ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ವಿಡಿಯೋ ಕಾನ್ಫರೆನ್ಸಿಂಗ್ ಭಾಷಣ

February 21st, 05:30 pm

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಅಶ್ವಿನಿ ವೈಷ್ಣವ್ ಜಿ, ಜಿತಿನ್ ಪ್ರಸಾದ ಜಿ, ಉತ್ತರ ಪ್ರದೇಶ ಸರ್ಕಾರದ ಎಲ್ಲಾ ಸಚಿವರೆ, ಫಾಕ್ಸ್‌ಕಾನ್‌ ಸೆಮಿಕಂಡಕ್ಟರ್ ಬಿಸಿನೆಸ್ ಗ್ರೂಪ್‌ ಅಧ್ಯಕ್ಷರಾದ ಬಾಬ್ ಚೆನ್, ಎಚ್‌ಸಿಎಲ್ ಟೆಕ್ನಾಲಜೀಸ್ ಅಧ್ಯಕ್ಷರಾದ ರೋಶ್ನಿ ನಾಡರ್ ಜಿ, ಕಾರ್ಯಕ್ರಮದಲ್ಲಿ ಹಾಜರಿರುವ ಉದ್ಯಮ ಮುಖಂಡರೆ, ಇತರ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ!

ಉತ್ತರಪ್ರದೇಶದಲ್ಲಿ ಎಚ್‌ಸಿಎಲ್-ಫಾಕ್ಸ್‌ಕಾನ್ ಸೆಮಿಕಂಡಕ್ಟರ್ ಘಟಕದ ಶಿಲಾನ್ಯಾಸ ಸಮಾರಂಭಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

February 21st, 05:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದಲ್ಲಿ ನಡೆದ ಎಚ್‌ಸಿಎಲ್-ಫಾಕ್ಸ್‌ಕಾನ್ ಸೆಮಿಕಂಡಕ್ಟರ್ ಘಟಕದ ಶಿಲಾನ್ಯಾಸ ಸಮಾರಂಭಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ನವದೆಹಲಿಯಲ್ಲಿ ನಡೆದ ಜಾಗತಿಕ ಎಐ ಇಂಪ್ಯಾಕ್ಟ್ ಶೃಂಗಸಭೆಯ ನಂತರ, ಜಾಗತಿಕ ಸೆಮಿಕಂಡಕ್ಟರ್ ಕೇಂದ್ರವಾಗುವತ್ತ ಭಾರತದ ಪ್ರಯಾಣ ಸಾಗಿದೆ, ಈ ಸಮಾರಂಭವು ಒಂದು ಐತಿಹಾಸಿಕ ಮೈಲಿಗಲ್ಲನ್ನು ಗುರುತಿಸುತ್ತದೆ.

Congress wants to push Assam back into instability and infiltration: PM Modi in Guwahati

February 14th, 03:00 pm

PM Modi addressed a massive public rally in Guwahati, where he said the recent Union Budget has further strengthened the vision of the BJP-NDA for the development of Assam and the North East. Calling the North East “Ashtalakshmi,” he said the region was ignored for decades by Congress but is now being served with dedication.

PM Modi addresses a grand public rally in Guwahati, Assam

February 14th, 02:30 pm

PM Modi addressed a massive public rally in Guwahati, where he said the recent Union Budget has further strengthened the vision of the BJP-NDA for the development of Assam and the North East. Calling the North East “Ashtalakshmi,” he said the region was ignored for decades by Congress but is now being served with dedication.

ಫೆಬ್ರವರಿ 14 ರಂದು ಅಸ್ಸಾಂಗೆ ಭೇಟಿ ನೀಡಲಿದ್ದಾರೆ ಪ್ರಧಾನಮಂತ್ರಿ

February 13th, 11:38 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಫೆಬ್ರವರಿ 14 ರಂದು ಅಸ್ಸಾಂಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 10:30ರ ಸುಮಾರಿಗೆ, ಪ್ರಧಾನಮಂತ್ರಿ ಅವರು ದಿಬ್ರುಗಢದ ಮೋರನ್ ಬೈಪಾಸ್‌ನಲ್ಲಿರುವ ತುರ್ತು ಲ್ಯಾಂಡಿಂಗ್ ಸೌಲಭ್ಯ (ELF)ದಲ್ಲಿ ಇಳಿಯಲಿದ್ದಾರೆ, ಅಲ್ಲಿ ಅವರು ಯುದ್ದ ವಿಮಾನಗಳು, ಸಾರಿಗೆ ಮತ್ತು ಹೆಲಿಕಾಪ್ಟರ್‌ಗಳ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ, ಪ್ರಧಾನ ಮಂತ್ರಿ ಅವರು ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಕುಮಾರ್ ಭಾಸ್ಕರ್ ವರ್ಮಾ ಸೇತುಗೆ ಭೇಟಿ ನೀಡಲಿದ್ದಾರೆ. ನಂತರ, ಮಧ್ಯಾಹ್ನ 1:30 ರ ಸುಮಾರಿಗೆ, ಪ್ರಧಾನ ಮಂತ್ರಿ ಅವರು ಗುವಾಹಟಿಯ ಲಚಿತ್ ಘಾಟ್‌ನಲ್ಲಿ 5,450 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಚಾಲನೆ ನೀಡಲಿದ್ದಾರೆ.

ನವದೆಹಲಿಯ ಕಾರಿಯಪ್ಪ ಮೈದಾನದಲ್ಲಿ ನಡೆದ ಎನ್ ಸಿಸಿ ರ‍್ಯಾಲಿ (Rally) ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

January 28th, 04:00 pm

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ, ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಜಿ, ವೇದಿಕೆಯಲ್ಲಿರುವ ಇತರೆ ಎಲ್ಲ ಗಣ್ಯರೆ, ದೇಶಾದ್ಯಂತ ಬಂದಿರುವ ಎನ್ ಸಿ ಸಿ ಮತ್ತು ಎನ್‌ ಎಸ್‌ ಎಸ್ ಕೆಡೆಟ್ ‌ಗಳೆ, ಟ್ಯಾಬ್ಲೊ ಕಲಾವಿದರೆ, ರಾಷ್ಟ್ರೀಯ ರಂಗಶಾಲೆಯ ಸಹೋದ್ಯೋಗಿಗಳೆ ಮತ್ತು ನನ್ನ ಪ್ರೀತಿಯ ಯುವ ಸ್ನೇಹಿತರೆ. ನಿಮ್ಮೆಲ್ಲರ ಕಠಿಣ ಪರಿಶ್ರಮ ಇಲ್ಲಿ ಗೋಚರಿಸುತ್ತಿದೆ. ನೀವು ಉತ್ತಮ ಸಮನ್ವಯದಿಂದ ನಿಮ್ಮ ಪ್ರದರ್ಶನವನ್ನು ತೋರಿದ್ದೀರಿ.

ದೆಹಲಿಯಲ್ಲಿ ನಡೆದ ವಾರ್ಷಿಕ ಎನ್‌ಸಿಸಿ ಪ್ರಧಾನಮಂತ್ರಿ ಪರೇಡ್ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

January 28th, 03:30 pm

ದೆಹಲಿಯಲ್ಲಿ ಕಾರಿಯಪ್ಪ ಪರೇಡ್ ಮೈದಾನದಲ್ಲಿ ಇಂದು ನಡೆದ ವಾರ್ಷಿಕ ಎನ್‌ಸಿಸಿ ಪ್ರಧಾನಮಂತ್ರಿ ಪರೇಡನ್ನು (ರ‍್ಯಾಲಿಯನ್ನು) ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಎನ್‌ಸಿಸಿ ದಿನದ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಎನ್‌ಸಿಸಿ, ಎನ್‌ಎಸ್‌ಎಸ್ ಕೆಡೆಟ್‌ಗಳು, ಟ್ಯಾಬ್ಲೋ ಕಲಾವಿದರು, ರಾಷ್ಟ್ರೀಯ ರಂಗಶಾಲೆಯ ಸಹಚರರು ಮತ್ತು ದೇಶಾದ್ಯಂತದ ಯುವ ಪಾಲ್ಗೊಳ್ಳುವಿಕೆಯ ಪ್ರಯತ್ನಗಳು ಅವರ ಸಂಘಟಿತ ಪ್ರದರ್ಶನಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ಹೇಳಿದರು. ಇಂದು ಬೆಳಿಗ್ಗೆ ಮಹಾರಾಷ್ಟ್ರದಲ್ಲಿ ಸಂಭವಿಸಿದ ವಿಮಾನ ಅಪಘಾತದಿಂದಾಗಿ ಈ ದಿನವು ತೀವ್ರ ದುಃಖವನ್ನುಂಟುಮಾಡಿದೆ ಎಂದು ಶ್ರೀ ಮೋದಿ ದುಃಖದಿಂದ ನುಡಿದರು, ಇದರಲ್ಲಿ ಉಪಮುಖ್ಯಮಂತ್ರಿ ಶ್ರೀ ಅಜಿತ್ ಪವಾರ್ ಅವರು ಮತ್ತು ಕೆಲವು ಸಹೋದ್ಯೋಗಿಗಳು ಸಾವನ್ನಪ್ಪಿದ್ದಾರೆ. ಅಜಿತ್ ದಾದಾ ಅವರು ಮಹಾರಾಷ್ಟ್ರ ಮತ್ತು ರಾಷ್ಟ್ರದ ಅಭಿವೃದ್ಧಿಗೆ, ವಿಶೇಷವಾಗಿ ಗ್ರಾಮೀಣ ಜೀವನವನ್ನು ಸುಧಾರಿಸಲು ಕೆಲಸ ಮಾಡುವ ಮೂಲಕ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಅವರು ಎತ್ತಿ ತೋರಿಸಿದರು ಮತ್ತು ಶ್ರೀ ಅಜಿತ್ ಪವಾರ್ ಜೀ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದರು. ಈ ನೋವಿನ ಕ್ಷಣದಲ್ಲಿ, ಅಪಘಾತದಲ್ಲಿ ಮಡಿದವರ ಕುಟುಂಬಗಳೊಂದಿಗೆ ರಾಷ್ಟ್ರವು ನಿಂತಿದೆ ಎಂದು ಅವರು ಹೇಳಿದರು. ದುಃಖ ಮತ್ತು ಸಂತಾಪದ ಈ ಕ್ಷಣಗಳ ನಡುವೆ ಪ್ರಧಾನಿ, ಸ್ನೇಹಪರ ರಾಷ್ಟ್ರಗಳವರು ಸೇರಿದಂತೆ ಹಾಜರಿದ್ದ ಎಲ್ಲಾ ಕೆಡೆಟ್‌ಗಳಿಗೆ ಶುಭಾಶಯಗಳನ್ನು ತಿಳಿಸಿದರು ಮತ್ತು ಈ ವರ್ಷ ಬಾಲಕಿಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಗುರುತಿಸಿದರು.

ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ಭಾರತ-ಯುರೋಪ್ ಒಕ್ಕೂಟದ ವ್ಯವಹಾರ ವೇದಿಕೆಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಗಳ ಕನ್ನಡ ಅನುವಾದ

January 27th, 04:32 pm

ಭಾರತ-ಯುರೋಪಿಯನ್ ಒಕ್ಕೂಟದ ವ್ಯವಹಾರ ವೇದಿಕೆಯಲ್ಲಿ ಭಾಗವಹಿಸಲು ನನಗೆ ತುಂಬಾ ಸಂತೋಷವಾಗಿದೆ. ಯುರೋಪಿಯನ್ ಒಕ್ಕೂಟದ ಮಂಡಳಿ ಮತ್ತು ಆಯೋಗದ ಅಧ್ಯಕ್ಷರ ಭಾರತ ಭೇಟಿಯು ಸಾಮಾನ್ಯ ರಾಜತಾಂತ್ರಿಕ ಪ್ರವಾಸವಲ್ಲ; ಇದು ಭಾರತ-ಯುರೋಪಿಯನ್ ಒಕ್ಕೂಟದ ಸಂಬಂಧಗಳಲ್ಲಿ ಹೊಸ ಯುಗಕ್ಕೆ ಕಹಳೆ ಮೊಳಗಿಸುತ್ತಿದೆ. ಮೊದಲ ಬಾರಿಗೆ, ಭಾರತದ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಯುರೋಪಿಯನ್ ಒಕ್ಕೂಟದ ನಾಯಕರು ಭಾಗವಹಿಸುವುದು, ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಭಾರತದ ಇತಿಹಾಸದಲ್ಲಿ ಅತಿದೊಡ್ಡ ಎಫ್.ಟಿ.ಎ. ಯ ಅಂಗೀಕಾರ, ಮತ್ತು ಇಂದು, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಭಾರತ-ಯುರೋಪಿಯನ್ ಒಕ್ಕೂಟದ ವ್ಯವಹಾರ ವೇದಿಕೆಯ ಸಂಘಟನೆ, ಅದೂ ಹಲವಾರು ಸಿ.ಇ.ಒ. ಗಳೊಂದಿಗೆ - ಈ ಎಲ್ಲಾ ಸಾಧನೆಗಳು ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ಶಕ್ತಿಗಳ ನಡುವೆ ನಡೆಯುತ್ತಿರುವ ಅಭೂತಪೂರ್ವ ಹೊಂದಾಣಿಕೆಯ ಸಂಕೇತಗಳಾಗಿವೆ.