PM Modi highlights India’s defence strength, innovation and collective efforts in Mann Ki Baat
July 26th, 11:30 am
Prime Minister Narendra Modi addressed the nation through Mann Ki Baat. In his speech, he highlighted important topics such as Kargil Vijay Diwas, Catch the Rain campaign, India's space sector prowess, Science Olympiads, Environmental conservation, Khadi and more. He called upon the citizens to share their ideas and suggestions for Independence Day through MyGov.ನ್ಯೂಜಿಲೆಂಡ್‌ನಲ್ಲಿರುವ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
July 11th, 01:15 pm
ನ್ಯೂಜಿಲೆಂಡ್ ಭೇಟಿ ಅಂತಿಮಗೊಳಿಸಿದಾಗ, ಹವಾಮಾನವು ತುಂಬಾ ಚಳಿ ಇರುತ್ತದೆ ಎಂದು ನನಗೆ ಹೇಳಿದ್ದರಿಂದ, ನಾನು ಅದನ್ನು ನನ್ನೊಂದಿಗೆ ತರುವ ನಿರ್ಧಾರ ತೆಗೆದುಕೊಂಡೆ.ನ್ಯೂಜಿಲೆಂಡ್ ನಲ್ಲಿರುವ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರಿಂದ ಭಾಷಣ
July 11th, 12:35 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಕ್ ಲ್ಯಾಂಡ್ ನಲ್ಲಿ ನಡೆದ 'ಕಿಯಾ ಔರಾ ಮೋದಿ' ಕಾರ್ಯಕ್ರಮದಲ್ಲಿ ನ್ಯೂಜಿಲೆಂಡ್ ನಲ್ಲಿರುವ ಭಾರತೀಯ ವಲಸಿಗರ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ವಿಶೇಷ ಸನ್ನಿವೇಶದಲ್ಲಿ, ನ್ಯೂಜಿಲೆಂಡ್ ನ ಪ್ರಧಾನಮಂತ್ರಿ ಯವರಾದ ಗೌರವಾನ್ವಿತ ಆರ್. ಕ್ರಿಸ್ಟೋಫರ್ ಲಕ್ಸನ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರತೀಯ ವಲಸಿಗರ 10,000ಕ್ಕೂ ಹೆಚ್ಚು ಸದಸ್ಯರ ಶಕ್ತಿ, ಉತ್ಸಾಹ ಮತ್ತು ಉಲ್ಲಾಸದಿಂದ ಈ ಸಭೆ ತುಂಬಿತ್ತು.ರಾಜಸ್ಥಾನದ ಬಲೋತ್ರಾದಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
July 04th, 12:50 pm
ಈ ಭೂಮಿ ಅಸಂಖ್ಯಾತ ವೀರರ ಶೌರ್ಯಕ್ಕೆ ಸಾಕ್ಷಿಯಾಗಿದೆ. ಈ ಯುದ್ಧಭೂಮಿಯ ಪ್ರತಿಯೊಂದು ಕಣವು ಎಲ್ಲಕ್ಕಿಂತ ಹೆಚ್ಚಾಗಿ ಸ್ವಾಭಿಮಾನ ಕಾಪಾಡಲು ನಮಗೆ ಕಲಿಸಿದೆ. ಸ್ವಾಭಿಮಾನ - ಅದು ವ್ಯಕ್ತಿಯಾಗಿರಲಿ ಅಥವಾ ರಾಷ್ಟ್ರವಾಗಿರಲಿ - ಅದು ಸ್ವಾವಲಂಬಿಯಾಗಿದ್ದಾಗ ಮಾತ್ರ, ಸಾಧ್ಯವಾದಷ್ಟು ಇತರರ ಮೇಲೆ ಕಡಿಮೆ ಅವಲಂಬಿತವಾದಾಗ ಮಾತ್ರ ಉನ್ನತ ಸ್ಥಾನದಲ್ಲಿ ಉಳಿಯುತ್ತದೆ. ಇಂದು ರಾಜಸ್ಥಾನದ ಮಣ್ಣಿನಿಂದ ಭಾರತವು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿಯಾಗುವತ್ತ ಪ್ರಮುಖ ಹೆಜ್ಜೆ ಇಟ್ಟಿದೆ. ಇಂದು ಈ ಸಂಸ್ಕರಣಾಗಾರವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ಈ ಸಂಸ್ಕರಣಾಗಾರವು ಇಲ್ಲಿನ ಸಾವಿರಾರು ಜನರಿಗೆ ಉದ್ಯೋಗ ಒದಗಿಸುತ್ತದೆ. ಈ ಸಂಸ್ಕರಣಾಗಾರಕ್ಕಾಗಿ ನಾನು ರಾಜಸ್ಥಾನದ ಯುವಕರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ.ರಾಜಸ್ಥಾನದ ಬಲೋತ್ರಾದಲ್ಲಿ ಸುಮಾರು 1.06 ಲಕ್ಷ ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ, ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
July 04th, 12:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜಸ್ಥಾನದ ಬಲೋತ್ರಾದಲ್ಲಿ ಸುಮಾರು 1.06 ಲಕ್ಷ ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ, ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಉಪಕ್ರಮಗಳಿಗೆ ಹೆಚ್ಚು ಸಹಯೋಗದ ಶಕ್ತಿಯನ್ನು ನೀಡುವ ಇಂಗಿತವನ್ನು ತಮ್ಮ ಉತ್ಸಾಹದ ಮಾತುಗಳಲ್ಲಿ ವ್ಯಕ್ತಪಡಿಸಿದರು. ಬೇಸಿಗೆಯ ತೀವ್ರ ಬಿಸಿಲಿನ ಬಿಸಿಲಿನ ತಾಪವನ್ನು ಧೈರ್ಯದಿಂದ ನಿಭಾಯಿಸಿದ್ದಕ್ಕಾಗಿ ಜನರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿಯವರು, ಬೃಹತ್ ಪ್ರಮಾಣದ ಜನಸಮೂಹದ ಪಾಲ್ಗೊಳ್ಳುವಿಕೆಯು ಪ್ರಸ್ತುತ ಆಡಳಿತಕ್ಕೆ ನೀಡಿರುವ ಬೆಂಬಲದ ದೃಢೀಕರಣವಾಗಿದೆ ಎಂದು ವ್ಯಾಖ್ಯಾನಿಸಿದರು. ಈ ಅಪಾರ ಬೆಂಬಲಕ್ಕಾಗಿ ನಾನು ರಾಜಸ್ಥಾನದ ಮಣ್ಣಿಗೆ ಸಂಪೂರ್ಣವಾಗಿ ಋಣಿಯಾಗಿದ್ದೇನೆ, ಇದು ನಮ್ಮ ಸರ್ಕಾರದ ಪ್ರಯತ್ನಗಳಲ್ಲಿ ನಿಮ್ಮ ಅತ್ಯುನ್ನತ ನಂಬಿಕೆಯನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತದೆ ಎಂದು ಶ್ರೀ ಮೋದಿ ದೃಢಪಡಿಸಿದರು.ಬೆಂಗಳೂರಿನಲ್ಲಿ ನಡೆದ ಆರ್ಟ್ ಆಫ್ ಲಿವಿಂಗ್‌ನ 45 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ
May 10th, 11:05 am
ಈಗ ಗುರುದೇವ್ ಅನೇಕ ವಿಷಯಗಳನ್ನು ಹೇಳಿದರು. ಅವರು ನನ್ನನ್ನು ಹೊಗಳುತ್ತಿದ್ದಾರೆಂದು ನೀವು ಭಾವಿಸಬಹುದು, ಆದರೆ ಅವರು ನನಗೆ ಕೆಲಸ ನಿಯೋಜಿಸುತ್ತಿದ್ದಾರೆಂದು ನಾನು ಭಾವಿಸಿದೆ. ನನಗೆ ಧನ್ಯವಾದ ಹೇಳಲು ಸಾಧ್ಯವಿಲ್ಲ ಎಂದು ನೀವು ಸರಿಯಾಗಿ ಹೇಳಿದ್ದೀರಿ, ನಾನು ನಿಮಗೆ ಸೇರಿದವನು, ನಾನು ನಿಮ್ಮ ನಡುವೆ ಮತ್ತು ನಿಮಗಾಗಿ ಬಂದಿದ್ದೇನೆ ಮತ್ತು ನಾನು ಎಲ್ಲಿದ್ದರೂ ಅದು ನಿಮ್ಮಿಂದಲೇ. ಇಂದು ಗುರುದೇವ್ ಅವರ 70 ವರ್ಷಗಳ ಕಾರ್ಯಕ್ರಮ, ಆದರೆ ನಾನು ಕುಟುಂಬದ ಭಾಗವಾಗಿರುವುದರಿಂದ, ನಿಮ್ಮ ಶತಮಾನೋತ್ಸವ ಆಚರಣೆ ಬಂದಾಗ, ನಾನು ಮತ್ತೆ ಬರುತ್ತೇನೆ ಎಂದು ನಾನು ಬಹಿರಂಗವಾಗಿ ಹೇಳುತ್ತೇನೆ.ಕರ್ನಾಟಕದ ಬೆಂಗಳೂರಿನಲ್ಲಿ ನಡೆದ 'ದಿ ಆರ್ಟ್ ಆಫ್ ಲಿವಿಂಗ್'ನ 45ನೇ ವರ್ಷಾಚರಣೆಯ ಸಂಭ್ರಮದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
May 10th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಬೆಂಗಳೂರಿನಲ್ಲಿ ನಡೆದ 'ದಿ ಆರ್ಟ್ ಆಫ್ ಲಿವಿಂಗ್'ನ 45ನೇ ವರ್ಷಾಚರಣೆಯ ಸಂಭ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದ ಮಂಗಳಕರತೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಮಕ್ಕಳ ವೈದಿಕ ಮಂತ್ರಘೋಷಗಳ ಸ್ವಾಗತ, ಭಗವಾನ್ ಗಣೇಶನ ದರ್ಶನ, ಶ್ರೀ ಶ್ರೀ ರವಿಶಂಕರ್ ಜೀ ಅವರ 70ನೇ ವರ್ಷ ಮತ್ತು ಆರ್ಟ್ ಆಫ್ ಲಿವಿಂಗ್‌ನ 45ನೇ ವರ್ಷಾಚರಣೆಯ ಸಂಭ್ರಮದಿಂದ ಸಮೃದ್ಧವಾಗಿರುವ ಈ ಬೆಳಗಿನ ವಿಶಿಷ್ಟತೆಯನ್ನು ಬಣ್ಣಿಸಿದರು. ಇವು ನನ್ನ ನೆನಪಿನಲ್ಲಿ ಸದಾ ಉಳಿಯುವ ಕ್ಷಣಗಳು, ಎಂದು ಶ್ರೀ ಮೋದಿ ಅವರು ಅಭಿಪ್ರಾಯಪಟ್ಟರು.ನವದೆಹಲಿಯ ಕಾರಿಯಪ್ಪ ಮೈದಾನದಲ್ಲಿ ನಡೆದ ಎನ್ ಸಿಸಿ ರ‍್ಯಾಲಿ (Rally) ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
January 28th, 04:00 pm
ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ, ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಜಿ, ವೇದಿಕೆಯಲ್ಲಿರುವ ಇತರೆ ಎಲ್ಲ ಗಣ್ಯರೆ, ದೇಶಾದ್ಯಂತ ಬಂದಿರುವ ಎನ್ ಸಿ ಸಿ ಮತ್ತು ಎನ್ ಎಸ್ ಎಸ್ ಕೆಡೆಟ್ ಗಳೆ, ಟ್ಯಾಬ್ಲೊ ಕಲಾವಿದರೆ, ರಾಷ್ಟ್ರೀಯ ರಂಗಶಾಲೆಯ ಸಹೋದ್ಯೋಗಿಗಳೆ ಮತ್ತು ನನ್ನ ಪ್ರೀತಿಯ ಯುವ ಸ್ನೇಹಿತರೆ. ನಿಮ್ಮೆಲ್ಲರ ಕಠಿಣ ಪರಿಶ್ರಮ ಇಲ್ಲಿ ಗೋಚರಿಸುತ್ತಿದೆ. ನೀವು ಉತ್ತಮ ಸಮನ್ವಯದಿಂದ ನಿಮ್ಮ ಪ್ರದರ್ಶನವನ್ನು ತೋರಿದ್ದೀರಿ.ದೆಹಲಿಯಲ್ಲಿ ನಡೆದ ವಾರ್ಷಿಕ ಎನ್‌ಸಿಸಿ ಪ್ರಧಾನಮಂತ್ರಿ ಪರೇಡ್ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
January 28th, 03:30 pm
ದೆಹಲಿಯಲ್ಲಿ ಕಾರಿಯಪ್ಪ ಪರೇಡ್ ಮೈದಾನದಲ್ಲಿ ಇಂದು ನಡೆದ ವಾರ್ಷಿಕ ಎನ್‌ಸಿಸಿ ಪ್ರಧಾನಮಂತ್ರಿ ಪರೇಡನ್ನು (ರ‍್ಯಾಲಿಯನ್ನು) ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಎನ್‌ಸಿಸಿ ದಿನದ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಎನ್‌ಸಿಸಿ, ಎನ್‌ಎಸ್‌ಎಸ್ ಕೆಡೆಟ್‌ಗಳು, ಟ್ಯಾಬ್ಲೋ ಕಲಾವಿದರು, ರಾಷ್ಟ್ರೀಯ ರಂಗಶಾಲೆಯ ಸಹಚರರು ಮತ್ತು ದೇಶಾದ್ಯಂತದ ಯುವ ಪಾಲ್ಗೊಳ್ಳುವಿಕೆಯ ಪ್ರಯತ್ನಗಳು ಅವರ ಸಂಘಟಿತ ಪ್ರದರ್ಶನಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ಹೇಳಿದರು. ಇಂದು ಬೆಳಿಗ್ಗೆ ಮಹಾರಾಷ್ಟ್ರದಲ್ಲಿ ಸಂಭವಿಸಿದ ವಿಮಾನ ಅಪಘಾತದಿಂದಾಗಿ ಈ ದಿನವು ತೀವ್ರ ದುಃಖವನ್ನುಂಟುಮಾಡಿದೆ ಎಂದು ಶ್ರೀ ಮೋದಿ ದುಃಖದಿಂದ ನುಡಿದರು, ಇದರಲ್ಲಿ ಉಪಮುಖ್ಯಮಂತ್ರಿ ಶ್ರೀ ಅಜಿತ್ ಪವಾರ್ ಅವರು ಮತ್ತು ಕೆಲವು ಸಹೋದ್ಯೋಗಿಗಳು ಸಾವನ್ನಪ್ಪಿದ್ದಾರೆ. ಅಜಿತ್ ದಾದಾ ಅವರು ಮಹಾರಾಷ್ಟ್ರ ಮತ್ತು ರಾಷ್ಟ್ರದ ಅಭಿವೃದ್ಧಿಗೆ, ವಿಶೇಷವಾಗಿ ಗ್ರಾಮೀಣ ಜೀವನವನ್ನು ಸುಧಾರಿಸಲು ಕೆಲಸ ಮಾಡುವ ಮೂಲಕ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಅವರು ಎತ್ತಿ ತೋರಿಸಿದರು ಮತ್ತು ಶ್ರೀ ಅಜಿತ್ ಪವಾರ್ ಜೀ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದರು. ಈ ನೋವಿನ ಕ್ಷಣದಲ್ಲಿ, ಅಪಘಾತದಲ್ಲಿ ಮಡಿದವರ ಕುಟುಂಬಗಳೊಂದಿಗೆ ರಾಷ್ಟ್ರವು ನಿಂತಿದೆ ಎಂದು ಅವರು ಹೇಳಿದರು. ದುಃಖ ಮತ್ತು ಸಂತಾಪದ ಈ ಕ್ಷಣಗಳ ನಡುವೆ ಪ್ರಧಾನಿ, ಸ್ನೇಹಪರ ರಾಷ್ಟ್ರಗಳವರು ಸೇರಿದಂತೆ ಹಾಜರಿದ್ದ ಎಲ್ಲಾ ಕೆಡೆಟ್‌ಗಳಿಗೆ ಶುಭಾಶಯಗಳನ್ನು ತಿಳಿಸಿದರು ಮತ್ತು ಈ ವರ್ಷ ಬಾಲಕಿಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಗುರುತಿಸಿದರು.ಮೊದಲ ಮತದಾನದಿಂದ ಸ್ಟಾರ್ಟ್ಅಪ್ ಇಂಡಿಯಾದವರೆಗೆ, ಪ್ರಧಾನಿ ಮೋದಿ ಮನ್ ಕಿ ಬಾತ್‌ನಲ್ಲಿ ಭಾರತದ ಯುವಕರನ್ನು ಆಚರಿಸುತ್ತಾರೆ.
January 25th, 11:30 am
ಈ ವರ್ಷದ ರಾಷ್ಟ್ರೀಯ ಮತದಾರರ ದಿನದಂದು ನಡೆದ ಮೊದಲ ಮನ್ ಕಿ ಬಾತ್‌ನಲ್ಲಿ, ಪ್ರಧಾನಿ ಮೋದಿ ಮತದಾನದ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಶ್ಲಾಘಿಸಿದರು. ಅವರು ಸ್ಟಾರ್ಟ್‌ಅಪ್‌ಗಳು, ನೀರಿನ ಸಂರಕ್ಷಣೆ, ಗುಣಮಟ್ಟ, ಸಂಸ್ಕೃತಿ ಮತ್ತು ಹಬ್ಬಗಳು ಮತ್ತು ಸ್ವಚ್ಛತೆಯಂತಹ ಪ್ರಮುಖ ವಿಷಯಗಳನ್ನು ಸಹ ಸ್ಪರ್ಶಿಸಿದರು. ಮುಂದಿನ ತಿಂಗಳು ನಡೆಯಲಿರುವ ಭಾರತ AI ಇಂಪ್ಯಾಕ್ಟ್ ಶೃಂಗಸಭೆಯನ್ನು ಪ್ರಧಾನಿ ಎತ್ತಿ ತೋರಿಸಿದರು, ಅಲ್ಲಿ ಪ್ರಪಂಚದಾದ್ಯಂತದ ತಜ್ಞರು ಭಾಗವಹಿಸುತ್ತಾರೆ.ಅಸ್ಸಾಂನಲ್ಲಿ ಕಾಜಿರಂಗಾ ಎಲಿವೇಟೆಡ್ ಕಾರಿಡಾರ್ ಯೋಜನೆಯ ಭೂಮಿ ಪೂಜೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
January 18th, 11:30 am
ಇಂದು, ನನಗೆ ಮತ್ತೆ ಕಾಜಿರಂಗಕ್ಕೆ ಬರುವ ಸೌಭಾಗ್ಯ ಸಿಕ್ಕಿದೆ. ನನ್ನ ಹಿಂದಿನ ಭೇಟಿಯನ್ನು ನೆನಪಿಸಿಕೊಳ್ಳುವುದು ಸ್ವಾಭಾವಿಕವಾಗಿದೆ. ಎರಡು ವರ್ಷಗಳ ಹಿಂದೆ ಕಾಜಿರಂಗದಲ್ಲಿ ಕಳೆದ ಕ್ಷಣಗಳು ನನ್ನ ಜೀವನದ ವಿಶೇಷ ಅನುಭವಗಳಲ್ಲಿ ಒಂದಾಗಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ತಂಗುವ ಅವಕಾಶ ನನಗೆ ಸಿಕ್ಕಿತು ಮತ್ತು ಮರುದಿನ ಬೆಳಿಗ್ಗೆ ಆನೆ ಸಫಾರಿ ಸಮಯದಲ್ಲಿ, ನಾನು ಈ ಪ್ರದೇಶದ ಸೌಂದರ್ಯವನ್ನು ಬಹಳ ಹತ್ತಿರದಿಂದ ಅನುಭವಿಸಿದೆ.ಅಸ್ಸಾಂನ ಕಲಿಯಾಬೋರ್‌ನಲ್ಲಿ ₹6,950 ಕೋಟಿಗೂ ಅಧಿಕ ವೆಚ್ಚದ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಭೂಮಿ ಪೂಜೆ
January 18th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಕಲಿಯಾಬೋರ್ ನಲ್ಲಿ ₹6,950 ಕೋಟಿಗೂ ಅಧಿಕ ವೆಚ್ಚದ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಯೋಜನೆಗೆ (NH-715 ರ ಕಲಿಯಾಬೋರ್-ನುಮಾಲಿಗಢ ವಿಭಾಗದ 4-ಲೇನ್ ರಸ್ತೆ) ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಬಂದು ತಮ್ಮನ್ನು ಆಶೀರ್ವದಿಸಿದ ಜನತೆಗೆ ಕೃತಜ್ಞತೆ ಸಲ್ಲಿಸಿದರು. ಕಾಜಿರಂಗಕ್ಕೆ ಮತ್ತೊಮ್ಮೆ ಭೇಟಿ ನೀಡಿದ್ದರಿಂದ ತಮ್ಮ ಹಳೆಯ ನೆನಪುಗಳು ಮರುಕಳಿಸಿವೆ ಎಂದು ಸ್ಮರಿಸಿದ ಅವರು, ಎರಡು ವರ್ಷಗಳ ಹಿಂದೆ ಕಾಜಿರಂಗದಲ್ಲಿ ಕಳೆದ ಕ್ಷಣಗಳು ತಮ್ಮ ಜೀವನದ ಅತ್ಯಂತ ವಿಶೇಷ ಅನುಭವಗಳಲ್ಲಿ ಒಂದಾಗಿವೆ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ಮೋದಿಯವರು ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ಕಳೆಯುವ ಅವಕಾಶ ಸಿಕ್ಕಿದ್ದನ್ನು ಮತ್ತು ಮರುದಿನ ಬೆಳಿಗ್ಗೆ ಆನೆ ಸವಾರಿಯ ಮೂಲಕ ಈ ಪ್ರದೇಶದ ಸೌಂದರ್ಯವನ್ನು ಹತ್ತಿರದಿಂದ ಅನುಭವಿಸಿದ್ದನ್ನು ವಿಶೇಷವಾಗಿ ಉಲ್ಲೇಖಿಸಿದರುನವದೆಹಲಿಯಲ್ಲಿ ನಡೆದ ಪೊಂಗಲ್ ಆಚರಣೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
January 14th, 11:00 am
ಇಂದು ಪೊಂಗಲ್ ನಿಜವಾಗಿಯೂ ಜಾಗತಿಕ ಹಬ್ಬವಾಗಿ ಮಾರ್ಪಟ್ಟಿದೆ. ಪ್ರಪಂಚದಾದ್ಯಂತ, ತಮಿಳು ಸಮುದಾಯ ಮತ್ತು ತಮಿಳು ಸಂಸ್ಕೃತಿಯನ್ನು ಪ್ರೀತಿಸುವವರು ಇದನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ ಮತ್ತು ನಾನು ಅವರಲ್ಲಿ ಒಬ್ಬನಾಗಿದ್ದೇನೆ. ಈ ವಿಶೇಷ ಹಬ್ಬವನ್ನು ಆಚರಿಸಲು ನಿಮ್ಮೊಂದಿಗೆ ಕೈಜೋಡಿಸುವುದು ನನ್ನ ಸೌಭಾಗ್ಯವಾಗಿದೆ. ತಮಿಳು ಜೀವನದಲ್ಲಿ, ಪೊಂಗಲ್ ಒಂದು ಆಹ್ಲಾದಕರ ಅನುಭವವಾಗಿದೆ. ಇದು ನಮ್ಮ ರೈತರು, ಭೂಮಿ ಮತ್ತು ಸೂರ್ಯನ ಬಗ್ಗೆ ಕೃತಜ್ಞತೆಯನ್ನು ಸಾಕಾರಗೊಳಿಸುತ್ತದೆ. ಇದು ಪ್ರಕೃತಿ, ಕುಟುಂಬ ಮತ್ತು ಸಮಾಜದೊಂದಿಗೆ ಸಾಮರಸ್ಯದ ಮಹತ್ವವನ್ನು ನಮಗೆ ಕಲಿಸುತ್ತದೆ. ಈ ಸಮಯದಲ್ಲಿ, ಭಾರತದ ಇತರ ಪ್ರದೇಶಗಳು ಸಹ ಲೋಹ್ರಿ, ಮಕರ ಸಂಕ್ರಾಂತಿ, ಮಾಘ ಬಿಹು ಮತ್ತು ಹೆಚ್ಚಿನವುಗಳಲ್ಲಿ ಮುಳುಗಿರುತ್ತವೆ. ಪೊಂಗಲ್ ಮತ್ತು ಈ ಎಲ್ಲಾ ಹಬ್ಬಗಳಲ್ಲಿ ನಾನು ಭಾರತ ಮತ್ತು ಪ್ರಪಂಚದಾದ್ಯಂತದ ಎಲ್ಲಾ ತಮಿಳು ಸಹೋದರ ಸಹೋದರಿಯರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.ನವದೆಹಲಿಯಲ್ಲಿ ಪೊಂಗಲ್ ಆಚರಣೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
January 14th, 10:45 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನವದೆಹಲಿಯಲ್ಲಿಂದು ನಡೆದ ಪೊಂಗಲ್ ಆಚರಣೆಯನ್ನುದ್ದೇಶಿಸಿ ಮಾತನಾಡಿದರು. ತಮಿಳಿನಲ್ಲಿ ಎಲ್ಲರಿಗೂ ಶುಭಾಶಯಗಳನ್ನು ಕೋರಿದ ಶ್ರೀ ನರೇಂದ್ರ ಮೋದಿ, ”ಪೊಂಗಲ್ ಇಂದು ಜಾಗತಿಕ ಹಬ್ಬವಾಗಿದೆ’’ ಎಂದು ಒತ್ತಿ ಹೇಳಿದರು. ಈ ಹಬ್ಬವನ್ನು ತಮಿಳು ಸಮುದಾಯಗಳು ಮತ್ತು ಪ್ರಪಂಚದಾದ್ಯಂತ ತಮಿಳು ಸಂಸ್ಕೃತಿಯನ್ನು ಪಾಲಿಸುವವರು ಉತ್ಸಾಹದಿಂದ ಆಚರಿಸುತ್ತಾರೆ ಮತ್ತು ತಾವೂ ಅವರಲ್ಲಿ ಒಬ್ಬರು ಎಂದು ಹೇಳಿದರು. ಈ ವಿಶೇಷ ಹಬ್ಬವನ್ನು ಎಲ್ಲರ ಜೊತೆ ಸೇರಿ ಆಚರಿಸುವುದು ತಮ್ಮ ಅದೃಷ್ಟ ಎಂದು ಅವರು ಹೇಳಿದರು. ತಮಿಳು ಜನರ ಜೀವನದಲ್ಲಿ, ಪೊಂಗಲ್ ಒಂದು ಆಹ್ಲಾದಕರ ಅನುಭವದಂತೆ, ರೈತರು, ಭೂಮಿ ಮತ್ತು ಸೂರ್ಯನ ಶ್ರಮಕ್ಕೆ ಕೃತಜ್ಞತೆ ಸಲ್ಲಿಸುವುದನ್ನು ಸಾಕಾರಗೊಳಿಸುತ್ತದೆ ಮತ್ತು ಪ್ರಕೃತಿ, ಕುಟುಂಬ ಮತ್ತು ಸಮಾಜದಲ್ಲಿ ಸಮತೋಲನದತ್ತ ನಮಗೆ ಮಾರ್ಗದರ್ಶನ ನೀಡುತ್ತದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಇದೇ ವೇಳೆ ದೇಶದ ವಿವಿಧ ಭಾಗಗಳು ಲೋಹ್ರಿ, ಮಕರ ಸಂಕ್ರಾಂತಿ, ಮಾಘ ಬಿಹು ಮತ್ತು ಇತರ ಹಬ್ಬಗಳ ಆಚರಣೆಯಲ್ಲಿ ಮುಳುಗಿವೆ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. ಪೊಂಗಲ್ ಹಬ್ಬದಂದು ಭಾರತ ಮತ್ತು ವಿಶ್ವದಾದ್ಯಂತದ ಎಲ್ಲಾ ತಮಿಳು ಸಹೋದರ ಸಹೋದರಿಯರಿಗೆ ಅವರು ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು ಮತ್ತು ಇತರೆ ಎಲ್ಲಾ ಹಬ್ಬಗಳಿಗೆ ಶುಭ ಕೋರಿದರು.ಶ್ರೀಮದ್ ವಿಜಯರತ್ನ ಸುಂದರ್ ಸುರೀಶ್ವರ್ಜಿ ಮಹಾರಾಜ್ ಅವರ 500ನೇ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಸಂದೇಶ
January 11th, 01:00 pm
ಈ ಪವಿತ್ರ ಸಮಾರಂಭದಲ್ಲಿ ನಮ್ಮ ಸ್ಫೂರ್ತಿಯ ಸೆಲೆಯಾದ ಪೂಜ್ಯ ಭುವನಭಾನು ಸುರೀಶ್ವರ್ ಜಿ ಮಹಾರಾಜ್ ಅವರ ಪಾದಗಳಿಗೆ ನಾನು ಮೊದಲು ನಮಸ್ಕರಿಸುತ್ತೇನೆ. ಈ ಸಮಾರಂಭದಲ್ಲಿ ಉಪಸ್ಥಿತರಿರುವ ಪ್ರಶಾಂತಮೂರ್ತಿ ಸುವಿಶಾಲ ಗಚ್ಛಾಧಿಪತಿ ಪೂಜ್ಯ ಶ್ರೀಮದ್ ವಿಜಯ್ ರಾಜೇಂದ್ರ ಸುರೀಶ್ವರ ಜೀ ಮಹಾರಾಜ್, ಪೂಜ್ಯ ಗಚ್ಛಾಧಿಪತಿ ಶ್ರೀ ಕಲ್ಪತರು ಸುರೀಶ್ವರ್ ಜಿ ಮಹಾರಾಜ್, ಸರಸ್ವತಿ ಕೃಪಾಪಾತ್ರ ಪರಮ ಪೂಜ್ಯ ಆಚಾರ್ಯ ಭಗವಂತ ಶ್ರೀಮದ್ ವಿಜಯರತ್ನ ಸುಂದರ ಸುರೀಶ್ವರ ಜೀ ಮಹಾರಾಜರು ಮತ್ತು ಇಲ್ಲಿ ನೆರೆದಿರುವ ಎಲ್ಲಾ ಸಾಧು ಸಂತರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ.ಶ್ರೀಮದ್ ವಿಜಯರತ್ನ ಸುಂದರ್ ಸುಂದರ್ ಸುರೀಶ್ವರ್ಜಿ ಮಹಾರಾಜ್ ಅವರ 500ನೇ ಪುಸ್ತಕ ಬಿಡುಗಡೆ ವೇಳೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆ
January 11th, 12:44 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಸಂದೇಶದ ಮೂಲಕ ಶ್ರೀಮದ್ ವಿಜಯರತ್ನ ಸುಂದರ್ ಸುಂದರ್ ಸುರೀಶ್ವರ್ಜಿ ಮಹಾರಾಜ್ ಅವರ 500ನೇ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ತಮ್ಮ ಭಾಷಣ ಮಾಡಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ನರೇಂದ್ರ ಮೋದಿ ಅವರು, ಈ ಪವಿತ್ರ ಸಂದರ್ಭದಲ್ಲಿ ತಾವು ಮೊದಲು ಪೂಜ್ಯ ಭುವನ್ ಭಾನುಸುರೀಶ್ವರ್ ಜೀ ಮಹಾರಾಜ್ ಅವರ ಪಾದಗಳಿಗೆ ನಮಸ್ಕರಿಸುತ್ತೇನೆ ಮತ್ತು ಪ್ರಶಾಂತಮೂರ್ತಿ ಸುವಿಶಾಲ್ ಗಚ್ಚಾಧಿಪತಿ ಪೂಜ್ಯ ಶ್ರೀಮದ್ ವಿಜಯ ರಾಜೇಂದ್ರಸುರೀಶ್ವರ್ ಜಿ ಮಹಾರಾಜ್, ಪೂಜ್ಯ ಗಚ್ಚಾಧಿಪತಿ ಶ್ರೀ ಕಲ್ಪತರುಸುರೀಶ್ವರ್ ಜೀ ಮಹಾರಾಜ್, ಸರಸ್ವತಿ ಕೃಪಾಪಾತ್ರ ಪರಂ ಪೂಜ್ಯ ಆಚಾರ್ಯ ಭಗವಂತ ಶ್ರೀಮದ್ ವಿಜಯರತ್ನಸುಂದರಸುರೀಶ್ವರ್ ಜೀ ಮಹಾರಾಜ್ ಮತ್ತು ಸಮಾರಂಭದಲ್ಲಿ ಉಪಸ್ಥಿತರಿದ್ದ ಎಲ್ಲಾ ಸಂತರು ಮತ್ತು ಸಾಧ್ವಿಗಳಿಗೆ ಗೌರವ ಸಲ್ಲಿಸುತ್ತೇನೆ ಎಂದು ಹೇಳಿದರು. ಊರ್ಜಾ ಮಹೋತ್ಸವ ಸಮಿತಿಯ ಎಲ್ಲಾ ಸದಸ್ಯರನ್ನು ಅವರು ಶ್ಲಾಘಿಸಿದರು ಮತ್ತು ಅಭಿನಂದಿಸಿದರು.ನವ ರಾಯ್‌ಪುರದ “ಸತ್ಯಸಾಯಿ ಸಂಜೀವಿನಿ ಮಕ್ಕಳ ಹೃದ್ರೋಗ ಆಸ್ಪತ್ರೆ”ಯಲ್ಲಿ ಯಶಸ್ವೀ ಹೃದ್ರೋಗ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಕ್ಕಳೊಂದಿಗೆ ಪ್ರಧಾನಮಂತ್ರಿ ಸಂವಾದ
November 01st, 05:30 pm
ನಾನು ಹಾಕಿ ಚಾಂಪಿಯನ್. ನಾನು ಹಾಕಿಯಲ್ಲಿ 5 ಪದಕಗಳನ್ನು ಗೆದ್ದಿದ್ದೇನೆ. ನನ್ನ ಶಾಲೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿದಾಗ, ನನ್ನ ಹೃದಯದಲ್ಲಿ ರಂಧ್ರವಿದೆ ಎಂದು ವೈದ್ಯರು ಪತ್ತೆ ಹಚ್ಚಿದರು. ನಾನು ಚಿಕಿತ್ಸೆಗಾಗಿ ಇಲ್ಲಿಗೆ ಬಂದೆ, ಶಸ್ತ್ರಚಿಕಿತ್ಸೆಗೆ ಒಳಗಾದೆ, ನಾನೀಗ ಗುಣಮುಖವಾಗಿದ್ದು, ನಾನು ಮತ್ತೆ ಹಾಕಿ ಆಡಬಹುದು.ಜನ್ಮಜಾತ ಹೃದಯ ಕಾಯಿಲೆಗಳನ್ನು ಉತ್ತಮ ಚಿಕಿತ್ಸೆ ಮೂಲಕ ನಿವಾರಿಸಿಕೊಂಡ ಮಕ್ಕಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
November 01st, 05:15 pm
'ಹೃದಯದ ಮಾತು (ದಿಲ್ ಕಿ ಬಾತ್)' ಕಾರ್ಯಕ್ರಮದ ಭಾಗವಾಗಿ, ಛತ್ತೀಸ್ ಗಢದ ನವ ರಾಯ್ ಪುರದ ಶ್ರೀ ಸತ್ಯ ಸಾಯಿ ಸಂಜೀವನಿ ಆಸ್ಪತ್ರೆಯಲ್ಲಿ ನಡೆದ 'ಜೀವನದ ಉಡುಗೊರೆ' ಸಮಾರಂಭದಲ್ಲಿ ಜನ್ಮಜಾತ ಹೃದಯ ಕಾಯಿಲೆಗಳಿಂದ ಯಶಸ್ವಿಯಾಗಿ ಚಿಕಿತ್ಸೆ ಪಡೆದ 2500 ಮಕ್ಕಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂವಾದ ನಡೆಸಿದರು.ನವದೆಹಲಿಯಲ್ಲಿ ನಡೆದ 2025ರ ಅಂತರರಾಷ್ಟ್ರೀಯ ಆರ್ಯ ಮಹಾಸಮ್ಮೇಳನ 2025ವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
October 31st, 06:08 pm
ನವದೆಹಲಿಯ ರೋಹಿಣಿಯಲ್ಲಿ ಇಂದು ಅಂತರರಾಷ್ಟ್ರೀಯ ಆರ್ಯ ಮಹಾಸಮ್ಮೇಳನ 2025ನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀ ಮೋದಿ, ಈಗಷ್ಟೇ ಕೇಳಿದ ಮಂತ್ರಗಳ ಶಕ್ತಿಯನ್ನು ಎಲ್ಲರೂ ಅನುಭವಿಸಬಹುದು ಎಂದು ಹೇಳಿದರು. ತಾವು ಸಭೆಗೆ ಬಂದಾಗಲೆಲ್ಲಾ ತಮಗೆ ಆಗಿರುವ ಅನುಭವವು ದೈವಿಕ ಮತ್ತು ಅಸಾಮಾನ್ಯವಾದುದು ಎಂದು ಅವರು ಒತ್ತಿ ಹೇಳಿದರು. ಈ ಭಾವನೆಗೆ ಸ್ವಾಮಿ ದಯಾನಂದ ಜೀ ಅವರ ಆಶೀರ್ವಾದ ಕಾರಣವೆಂದೂ ಅವರು ಹೇಳಿದರು. ಸ್ವಾಮಿ ದಯಾನಂದ ಜೀ ಅವರ ಆದರ್ಶಗಳ ಬಗ್ಗೆ ಪ್ರಧಾನಮಂತ್ರಿ ತಮ್ಮ ಆಳವಾದ ಗೌರವವನ್ನು ವ್ಯಕ್ತಪಡಿಸಿದರು. ಹಾಜರಿದ್ದ ಎಲ್ಲಾ ಚಿಂತಕರೊಂದಿಗಿನ ತಮ್ಮ ದಶಕಗಳಷ್ಟು ಹಳೆಯದಾದ ಬಾಂಧವ್ಯವನ್ನು ಅವರು ನೆನೆಪಿಸಿಕೊಂಡರು. ಅದು ತಮಗೆ ಪದೇ ಪದೇ ಅವರ ನಡುವೆ ಇರಲು ಅವಕಾಶವನ್ನು ನೀಡಿದೆ. ಅವರನ್ನು ಭೇಟಿಯಾದಾಗಲೆಲ್ಲಾ ಮತ್ತು ಅವರ ಜೊತೆ ಸಂವಹನ ನಡೆಸಿದಾಗಲೆಲ್ಲಾ ತಾವು ವಿಶಿಷ್ಟ ಶಕ್ತಿ ಮತ್ತು ಅನನ್ಯ ಸ್ಫೂರ್ತಿಯನ್ನು ಪಡೆಯುತ್ತಿರುವುದಾಗಿಯೂ ಅವರು ಹೇಳಿದರು.'ವಂದೇ ಮಾತರಂ' ನ ಚೈತನ್ಯವು ಭಾರತದ ಅಮರ ಪ್ರಜ್ಞೆಗೆ ಸಂಬಂಧಿಸಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
October 26th, 11:30 am
ಈ ತಿಂಗಳ ಮನ್ ಕಿ ಬಾತ್ ಭಾಷಣದಲ್ಲಿ, ಅಕ್ಟೋಬರ್ 31 ರಂದು ನಡೆದ ಸರ್ದಾರ್ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯಂದು ಪ್ರಧಾನಿ ಮೋದಿ ಅವರಿಗೆ ಗೌರವ ಸಲ್ಲಿಸಿದರು. ಛಠ್ ಪೂಜಾ ಉತ್ಸವ, ಪರಿಸರ ಸಂರಕ್ಷಣೆ, ಭಾರತೀಯ ನಾಯಿ ತಳಿಗಳು, ಭಾರತೀಯ ಕಾಫಿ, ಬುಡಕಟ್ಟು ಸಮುದಾಯದ ನಾಯಕರು ಮತ್ತು ಸಂಸ್ಕೃತ ಭಾಷೆಯ ಪ್ರಾಮುಖ್ಯತೆಯಂತಹ ಆಸಕ್ತಿದಾಯಕ ವಿಷಯಗಳನ್ನು ಅವರು ಸ್ಪರ್ಶಿಸಿದರು. 'ವಂದೇ ಮಾತರಂ' ಹಾಡಿನ 150 ನೇ ವರ್ಷದ ಬಗ್ಗೆ ಪ್ರಧಾನಿಯವರು ವಿಶೇಷವಾಗಿ ಉಲ್ಲೇಖಿಸಿದರು.