ಇರಾನ್ ನ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಅವರ ಮಾತುಕತೆ

March 21st, 04:26 pm

ಪ್ರಾದೇಶಿಕ ಬೆಳವಣಿಗೆಗಳು ಮತ್ತು ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಕುರಿತಾಗಿ ಚರ್ಚಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಇಸ್ಲಾಮಿಕ್ ಗಣರಾಜ್ಯವಾದ ಇರಾನ್ ನ ಅಧ್ಯಕ್ಷರಾದ ಘನತೆವೆತ್ತ ಡಾ. ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತನಾಡಿದರು.

ಬಹ್ರೇನ್ ರಾಜನೊಂದಿಗೆ ಮಾತುಕತೆ ನಡೆಸಿದ ಪ್ರಧಾನಮಂತ್ರಿ

March 20th, 07:57 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಹ್ರೇನ್ ದೇಶದ ಘನತೆವೆತ್ತ ದೊರೆಯಾದ ಮಹಾರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರೊಂದಿಗೆ ಫಲಪ್ರದವಾದ ಮಾತುಕತೆ ನಡೆಸಿ, ಈದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಪ್ರಾದೇಶಿಕ ಭದ್ರತಾ ವಿಚಾರಗಳ ಕುರಿತು ಚರ್ಚೆ ನಡೆಸಿದರು.

ಕತಾರ್ ಅಮೀರ್ ಜೊತೆ ಪ್ರಧಾನಮಂತ್ರಿ ಮಾತುಕತೆ

March 19th, 10:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕತಾರ್ ಅಮೀರ್ ಗೌರವಾನ್ವಿತ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಮಾತುಕತೆ ನಡೆಸಿದರು, ಅವರು ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಪ್ರಾದೇಶಿಕ ಭದ್ರತಾ ಕಾಳಜಿಗಳ ಕುರಿತು ಸಮಾಲೋಚಿಸಿದರು.

ಓಮನ್ ಸುಲ್ತಾನರೊಂದಿಗೆ ಪ್ರಧಾನಮಂತ್ರಿ ಮಾತುಕತೆ

March 19th, 04:39 pm

ಪ್ರಧಾನಮಂತ್ರಿ ಅವರು ಓಮನ್ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರೊಂದಿಗೆ ಫಲಪ್ರದ ಸಂಭಾಷಣೆ ನಡೆಸಿ, ಈದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಈ ಪ್ರದೇಶದಲ್ಲಿನ ಪರಿಸ್ಥಿತಿಯ ಬಗ್ಗೆ ಸಮಾಲೋಚನೆ ನಡೆಸಿದರು.

ಕುವೈತ್ ನ ಯುವರಾಜರೊಂದಿಗೆ ಪ್ರಧಾನಮಂತ್ರಿ ಮಾತುಕತೆ

March 18th, 06:20 pm

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕುವೈತ್ ಯುವರಾಜ ಶೇಖ್ ಸಬಾಹ್ ಅಲ್-ಖಲೀದ್ ಅಲ್-ಹಮಾದ್ ಅಲ್-ಮುಬಾರಕ್ ಅಲ್-ಸಬಾಹ್ ಅವರಿಗೆ ಹಬ್ಬದ ಶುಭ ಕೋರುತ್ತಾ ಪ್ರಾದೇಶಿಕ ಭದ್ರತಾ ಬೆಳವಣಿಗೆಗಳ ಪರಾಮರ್ಶೆ ಕುರಿತು ಮಾತನಾಡಿದರು.

ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಮಾತುಕತೆ

March 17th, 10:42 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷರಾದ ಗೌರವಾನ್ವಿತ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಆರಂಭದಲ್ಲಿಯೇ ಈದ್ ಶುಭಾಶಯಗಳನ್ನು ತಿಳಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಯುಎಇ ಅಧ್ಯಕ್ಷರು ಪಶ್ಚಿಮ ಏಷ್ಯಾದ ಪ್ರಸ್ತುತ ಪರಿಸ್ಥಿತಿಯ ಕುರಿತು ಚರ್ಚಿಸಿದರು. ಯುಎಇ ಮೇಲೆ ನಡೆದ ದಾಳಿಗಳಿಂದ ಅಮಾಯಕ ಜನರ ಪ್ರಾಣ ಹಾನಿ ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲೆ ಉಂಟಾದ ಹಾನಿಯನ್ನು ಭಾರತವು ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರಧಾನಮಂತ್ರಿ ಪುನರುಚ್ಚರಿಸಿದರು.

ಮಿಲಾದ್-ಉನ್-ನಬಿ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯ ಕೋರಿದ ಪ್ರಧಾನಮಂತ್ರಿ

September 05th, 08:31 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಿಲಾದ್-ಉನ್-ನಬಿ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಪವಿತ್ರ ದಿನವು ನಮ್ಮ ಸಮಾಜದಲ್ಲಿ ಶಾಂತಿ ಮತ್ತು ಯೋಗಕ್ಷೇಮವನ್ನು ತರಲಿ. ಕರುಣೆ, ಸೇವೆ ಮತ್ತು ನ್ಯಾಯದ ಮೌಲ್ಯಗಳು ಯಾವಾಗಲೂ ನಮಗೆ ಮಾರ್ಗದರ್ಶನ ನೀಡಲಿ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಮಿಲಾದ್-ಉನ್-ನಬಿ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ

September 16th, 10:43 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಸಲ್ಮಾನರ ಪವಿತ್ರ ಹಬ್ಬ ಮಿಲಾದ್-ಉನ್-ನಬಿ ಸಂದರ್ಭದಲ್ಲಿ ನಾಗರಿಕರಿಗೆ ಶುಭಾಶಯ ತಿಳಿಸಿದ್ದಾರೆ.

ಮಿಲಾದ್-ಉನ್-ನಬಿ ಅಂಗವಾಗಿ ಜನತೆಗೆ ಶುಭ ಕೋರಿದ ಪ್ರಧಾನಿ

October 30th, 11:41 am

ಮಿಲಾದ್–ಉನ್–ನಬಿ ಆಚರಣೆಯ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಜನರಿಗೆ ಶುಭ ಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್ 2.0’ – 17 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ

October 25th, 11:00 am

ಸ್ನೇಹಿತರೇ, ನಾವು ಹಬ್ಬಗಳ ಕುರಿತು ಮಾತನಾಡುವಾಗ, ಸಿದ್ಧತೆ ಮಾಡಿಕೊಳ್ಳುವಾಗ ಎಲ್ಲಕ್ಕಿಂತ ಮೊದಲು ಮಾರುಕಟ್ಟೆಗೆ ಯಾವಾಗ ಹೋಗುವುದು, ಏನೇನು ಖರೀದಿಸಬೇಕು ಎಂಬುದೇ ಆಲೋಚನೆಯಾಗಿರುತ್ತದೆ ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ಈ ಬಾರಿ ಹಬ್ಬದಂದು ಹೊಸತೇನು ಸಿಗತ್ತೆ? ಎಂಬ ವಿಶಿಷ್ಟ ಉತ್ಸಾಹವಿರುತ್ತದೆ. ಹಬ್ಬಗಳ ಈ ಉತ್ಸಾಹ ಮತ್ತು ಮಾರುಕಟ್ಟೆಯ ಈ ಆಕರ್ಷಣೆ ಒಂದಕ್ಕೊಂದು ಮಿಳಿತವಾಗಿವೆ. ಆದರೆ ಈ ಬಾರಿ ನೀವು ಖರೀದಿಗೆ ಹೋದಾಗ, ‘ವೋಕಲ್ ಫಾರ್ ಲೋಕಲ್’ ಎಂಬ ಸಂಕಲ್ಪ ಖಂಡಿತ ನೆನಪಿರಲಿ. ಮಾರುಕಟ್ಟೆಯಿಂದ ವಸ್ತುಗಳನ್ನು ಖರೀದಿಸುವಾಗ ನಮ್ಮ ಸ್ಥಳೀಯ ಉತ್ಪನ್ನಗಳಿಗೆ ಪ್ರಾಮುಖ್ಯತೆಯನ್ನು ನೀಡಬೇಕು.

પ્રધાનમંત્રીએ રાષ્ટ્રને કરેલ સંબોધનનો મૂળપાઠ

October 20th, 05:40 pm

PM Modi addressed the nation over Covid-19 situation and said that the lockdown may have been lifted but warned adding the “virus is still out there.” PM Modi cautioned people to not lose guard during the festive season and urged the countrymen to wear masks, maintain social distancing and ensure hand hygiene. PM Modi said, Government is earnestly working towards developing, manufacturing and distribution of Covid-19 vaccine to every citizen, whenever it is available.

ರಾಷ್ಟ್ರವನ್ನುದ್ದೇಶಿಸಿ ಪ್ರಧಾನಮಂತ್ರಿಯವರ ವಿಶೇಷ ಭಾಷಣ

October 20th, 05:34 pm

ದೂರದರ್ಶನದ ಮೂಲಕ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಕೋವಿಡ್ ಮಹಾಮಾರಿಯ ವಿರುದ್ಧ ದೇಶ ನಡೆಸುತ್ತಿರುವ ನಿರಂತರ ಹೋರಾಟದಲ್ಲಿ ಅಜಾಗರೂಕತೆ ತೋರದಂತೆ ಮತ್ತು ಎಚ್ಚರದಿಂದ ಇರುವಂತೆ ನಾಗರಿಕರಿಗೆ ಮನವಿ ಮಾಡಿದ್ದಾರೆ

ಪ್ರಧಾನಿ ಮತ್ತು ಅಫ್ಘಾನಿಸ್ತಾನ ಅಧ್ಯಕ್ಷರ ನಡುವೆ ದೂರವಾಣಿ ಮಾತುಕತೆ

August 03rd, 07:49 pm

ಪ್ರಧಾನಿ ನರೇಂದ್ರ ಮೋದಿ ಮತ್ತು ಅಫ್ಘಾನಿಸ್ತಾನದ ಅಧ್ಯಕ್ಷ ಡಾ. ಅಶ್ರಫ್ ಘನಿ ಅವರು ದೂರವಾಣಿ ಮಾತುಕತೆ ನಡೆಸಿದರು. ಈದ್ – ಉಲ್ – ಅಧಾ ಹಬ್ಬಕ್ಕೆ ಉಭಯ ನಾಯಕರು ಶುಭಾಶಯ ವಿನಿಮಯ ಮಾಡಿಕೊಂಡರು.

ಈದ್ ಅಲ್ ಅಧಾ ಸಂದರ್ಭದಲ್ಲಿ ದೇಶದ ಜನತೆಗೆ ಪ್ರಧಾನಮಂತ್ರಿ ಶುಭಾಶಯ

August 01st, 10:10 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಆದ್ ಅಲ್ ಅಧಾ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭ ಕೋರಿದ್ದಾರೆ.

PM greets the nation on Milad-Un-Nabi

November 10th, 12:18 pm

Prime Minister Narendra Modi has greeted the nation on the occasion of Milad-Un-Nabi today. Prime Minister said, Greetings on Milad-Un-Nabi. Inspired by the thoughts of Prophet Muhammad, may this day further the spirit of harmony and compassion in society. May there be peace all around.

ಈದ್ ಅಲ್ ಅಧಾ ಸಂದರ್ಭದಲ್ಲಿ ದೇಶದ ಜನತೆಗೆ ಪ್ರಧಾನಮಂತ್ರಿ ಶುಭಾಶಯ

August 12th, 09:21 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಈದ್ ಅಲ್ ಅಧಾ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭ ಕೋರಿದ್ದಾರೆ. “ಈದ್ ಅಲ್ ಅಧಾ ಸಂದರ್ಭದಲ್ಲಿ ನನ್ನ ಶುಭಾಶಯಗಳು. ಇದು ನಮ್ಮ ಸಮಾಜದಲ್ಲಿ ಶಾಂತಿ ಮತ್ತು ಸಂತಸದ ಸ್ಫೂರ್ತಿಯನ್ನು ಹೆಚ್ಚಿಸಲಿದೆ ಎಂಬ ವಿಶ್ವಾಸ ನನಗಿದೆ. ಈದ್ ಮುಭಾರಕ್ !” ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

ದೇಶದ ಜನತೆಗೆ ಪ್ರಧಾನಮಂತ್ರಿ ಅವರು ಮಿಲಾದ್ –ಉನ್ –ನಬಿಯ ಶುಭಾಶಯ ಕೋರಿದ್ದಾರೆ.

November 21st, 08:40 am

ಮಿಲಾದ್ –ಉನ್ –ನಬಿಯ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯವನ್ನು ಕೋರಿದ್ದಾರೆ.

ಜನತೆಗೆ ಈದ್ ಸಂದರ್ಭದಲ್ಲಿ ಶುಭ ಕೋರಿದ ಪ್ರಧಾನಿ

June 16th, 10:10 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈದ್ ಹಬ್ಬದ ಸಂದರ್ಭದಲ್ಲಿ ತಮ್ಮ ಶುಭಾಶಯಗಳನ್ನು ಸಲ್ಲಿಸಿದ್ದಾರೆ.

ದಿನಾಂಕ 27.05.2018 ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಮಾಡಿದ ‘ಮನ್ ಕಿ ಬಾತ್’ – 44 ನೇ ಭಾಷಣದ ಕನ್ನಡ ಅವತರಣಿಕೆ

May 27th, 11:30 am

ಮನದ ಮಾತಿನ ಮುಖಾಂತರ ಮತ್ತೊಮ್ಮೆ ನಿಮ್ಮೆಲ್ಲರೊಂದಿಗೆ ಮುಖಾಮುಖಿ ಆಗುವ ಅವಕಾಶ ಸಿಕ್ಕಿದೆ. ನೌಕಾ ಸೇನೆಯ ಆರು ಮಹಿಳಾ ಕಮಾಂಡರ್ ಗಳ ಒಂದು ಪಡೆಯು ಕಳೆದ ಕೆಲವು ತಿಂಗಳುಗಳಿಂದ ಸಮುದ್ರದಲ್ಲಿ ಸಂಚರಿಸುತ್ತಿರುವುದು ನಿಮ್ಮೆಲ್ಲರಿಗೂ ಚೆನ್ನಾಗಿ ನೆನಪಿರಬಹುದು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿನಾಂಕ 26.11.2017ರಂದು ಆಕಾಶವಾಣಿಯ `ಮನ್ ಕಿ ಬಾತ್’ ಕಾರ್ಯಕ್ರಮದ ಮೂಲಕ ಮಾಡಿದ ಭಾಷಣದ ಕನ್ನಡ ಅವತರಣಿಕೆ

November 26th, 11:30 am

ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ಕೆಲ ದಿನಗಳ ಹಿಂದೆ ನನಗೆ ಕರ್ನಾಟಕದ ಪುಟ್ಟ ಮಕ್ಕಳೊಂದಿಗೆ(ಸ್ನೇಹಿತರೊಂದಿಗೆ) ಪರೋಕ್ಷ ಸಂವಾದದ ಅವಕಾಶ ದೊರೆಯಿತು.