ದೆಹಲಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

January 03rd, 01:03 pm

ಕೇಂದ್ರ ಸಚಿವ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳು-ಮನೋಹರ್ ಲಾಲ್ ಜೀ, ಧರ್ಮೇಂದ್ರ ಪ್ರಧಾನ ಜೀ, ತೋಖಾನ್ ಸಾಹು ಜೀ, ಡಾ. ಸುಕಾಂತ ಮಜುಂದಾರ್ ಜೀ, ಹರ್ಷ್ ಮಲ್ಹೋತ್ರಾ ಜೀ-ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಜೀ, ನನ್ನ ಎಲ್ಲಾ ಸಂಸದರೇ, ಶಾಸಕರೇ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ,

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿಲ್ಲಿಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು

January 03rd, 12:45 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಿಲ್ಲಿಯಲ್ಲಿ ಹಲವು ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಇನ್ನು ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಆಯೋಜನೆಯಾಗಿದ್ದ ಸಭೆಯಲ್ಲಿ ಬೃಹತ್ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ ಅವರು ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದರು ಮತ್ತು 2025 ಭಾರತದ ಅಭಿವೃದ್ಧಿಗೆ ಅಪಾರ ಅವಕಾಶಗಳ ವರ್ಷವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು, ಇದು ರಾಷ್ಟ್ರವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಗುರಿಯತ್ತ ಕೊಂಡೊಯ್ಯುತ್ತದೆ ಎಂದರು. ಇಂದು, ಭಾರತವು ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯ ಜಾಗತಿಕ ಸಂಕೇತವಾಗಿ ನಿಂತಿದೆ ಎಂದು ಪ್ರಧಾನಿ ಹೇಳಿದರು. ಮುಂಬರುವ ವರ್ಷದಲ್ಲಿ ದೇಶದ ಈ ಚಿತ್ರಣವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಅವರು ಹೇಳಿದರು. ಭಾರತವು ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರವಾಗಲು, ನವೋದ್ಯಮಗಳು ಮತ್ತು ಉದ್ಯಮಶೀಲತೆಗೆ ಯುವಜನರನ್ನು ಸಬಲೀಕರಣಗೊಳಿಸಲು, ಹೊಸ ಕೃಷಿ ದಾಖಲೆಗಳನ್ನು ಸ್ಥಾಪಿಸಲು, ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಜೀವನವನ್ನು ಸುಲಭಗೊಳಿಸುವತ್ತ ಗಮನ ಹರಿಸುವ ಮೂಲಕ ಪ್ರತಿಯೊಬ್ಬ ನಾಗರಿಕನ ಜೀವನದ ಗುಣಮಟ್ಟವನ್ನು ಸುಧಾರಿಸುವ ವರ್ಷವಾಗಿ 2025 ಮೂಡಿ ಬರುವ ಕುರಿತ ತಮ್ಮ ಚಿಂತನೆ/ದೃಷ್ಟಿಕೋನವನ್ನು ಶ್ರೀ ಮೋದಿ ವಿವರಿಸಿದರು.

ಪ್ರಧಾನಮಂತ್ರಿಯವರು ಜುಲೈ 13 ರಂದು ಮುಂಬೈಗೆ ಭೇಟಿ ನೀಡಲಿದ್ದಾರೆ

July 12th, 05:23 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಅವರು ಜುಲೈ 13, 2024 ರಂದು, ಮಹಾರಾಷ್ಟ್ರದ ಮುಂಬೈಗೆ ಭೇಟಿ ನೀಡಲಿದ್ದಾರೆ. ಅದೇ ದಿನ ಸಂಜೆ 5:30 ರ ಸುಮಾರಿಗೆ ಪ್ರಧಾನಮಂತ್ರಿಯವರು ಮುಂಬೈನ ಗೋರೆಗಾಂವ್‌ ನಲ್ಲಿ ನೆಸ್ಕೋ ಪ್ರದರ್ಶನ ಕೇಂದ್ರವನ್ನು ತಲುಪಲಿದ್ದಾರೆ, ಅಲ್ಲಿ ಅವರು ಅದನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಮತ್ತು ರೂ.29,400 ಕೋಟಿಗೂ ಹೆಚ್ಚು ಮೌಲ್ಯದ ರಸ್ತೆ, ರೈಲ್ವೆ ಮತ್ತು ಬಂದರು ವಲಯಕ್ಕೆ ಸಂಬಂಧಿಸಿದ ನೂತನ ಬಹು ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ. ಅದರ ನಂತರ, ಸುಮಾರು ಸಂಜೆ 7 ಗಂಟೆ ಸುಮಾರಿಗೆ, ಐ.ಎನ್‌.ಎಸ್ ಟವರ್‌ ಗಳನ್ನು ಉದ್ಘಾಟಿಸಲು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ನ ಜಿ-ಬ್ಲಾಕ್‌ ನಲ್ಲಿರುವ ಇಂಡಿಯನ್ ನ್ಯೂಸ್‌ ಪೇಪರ್ ಸೊಸೈಟಿ (ಐ.ಎನ್‌.ಎಸ್) ಸೆಕ್ರೆಟರಿಯೇಟ್‌ ಗೆ ಪ್ರಧಾನಮಂತ್ರಿಯವರು ಭೇಟಿ ನೀಡಲಿದ್ದಾರೆ.