Indian diaspora in Malaysia acts as a living bridge between the two countries PM Modi at the community programme in Kuala Lumpur
February 07th, 03:59 pm
PM Modi participated and addressed a community programme in Malaysia. In his address, the PM lauded the Indian diaspora in Malaysia for being a living bridge between the two countries, describing the India–Malaysia relationship as IMPACT. Having already established the Thiruvalluvar Chair at the University of Malaya, the PM announced the setting up of a Thiruvalluvar Centre in Malaysia.PM Modi addresses a community programme in Kuala Lumpur, Malaysia
February 07th, 03:15 pm
PM Modi participated and addressed a community programme in Malaysia. In his address, the PM lauded the Indian diaspora in Malaysia for being a living bridge between the two countries, describing the India–Malaysia relationship as IMPACT. Having already established the Thiruvalluvar Chair at the University of Malaya, the PM announced the setting up of a Thiruvalluvar Centre in Malaysia.ಭಗವಾನ್ ಬುದ್ಧನಿಗೆ ಸಂಬಂಧಿಸಿದ ಪವಿತ್ರ ಪಿಪ್ರಹ್ವಾ ಅವಶೇಷ(ಕಳೇಬರ)ಗಳ ಭವ್ಯ ಅಂತಾರಾಷ್ಟ್ರೀಯ ಪ್ರದರ್ಶನದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
January 03rd, 12:00 pm
ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಗಜೇಂದ್ರ ಸಿಂಗ್ ಶೇಖಾವತ್ ಜಿ, ಕಿರಣ್ ರಿಜಿಜು ಜಿ, ರಾಮದಾಸ್ ಅಠಾವಳೆ ಜಿ, ದೆಹಲಿಯ ಮುಖ್ಯಮಂತ್ರಿ ರಾವ್ ಇಂದರ್ಜಿತ್ ಜಿ, ದೆಹಲಿಯ ಎಲ್ಲಾ ಸಚಿವರೆ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ಸಕ್ಸೇನಾ ಜಿ, ಗೌರವಾನ್ವಿತ ರಾಜತಾಂತ್ರಿಕ ಸದಸ್ಯರೆ, ಬೌದ್ಧ ವಿದ್ವಾಂಸರು, ಧಮ್ಮ ಅನುಯಾಯಿಗಳು, ಮಹಿಳೆಯರೆ ಮತ್ತು ಮಹನೀಯರೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಭಗವಾನ್ ಬುದ್ಧನಿಗೆ ಸಂಬಂಧಿಸಿದ ಪವಿತ್ರ ಪಿಪ್ರಹ್ವಾ ಅವಶೇಷಗಳ ಭವ್ಯ ಅಂತಾರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಿದರು
January 03rd, 11:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ರಾಯ್ ಪಿತೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ಭಗವಾನ್ ಬುದ್ಧನಿಗೆ ಸಂಬಂಧಿಸಿದ ಪವಿತ್ರ ಪಿಪ್ರಹ್ವಾ ಅವಶೇಷಗಳ ದಿ ಲೈಟ್ ಅಂಡ್ ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್ಡ್ ಒನ್ ಎಂಬ ಹೆಸರಿನ ಬೃಹತ್ ಅಂತಾರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ನೂರ ಇಪ್ಪತ್ತೈದು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಭಾರತದ ಪರಂಪರೆ ಮತ್ತು ಸಾಂಸ್ಕೃತಿಕ ಆಸ್ತಿ ಇಂದು ಮರಳಿ ಬಂದಿದೆ, ಎಂದು ಹರ್ಷ ವ್ಯಕ್ತಪಡಿಸಿದರು. ಇಂದಿನಿಂದ ಭಾರತದ ಜನತೆ ಭಗವಾನ್ ಬುದ್ಧನ ಈ ಪವಿತ್ರ ಅವಶೇಷಗಳನ್ನು ದರ್ಶಿಸಲು ಮತ್ತು ಅವರ ಆಶೀರ್ವಾದವನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಅವರು ಒತ್ತಿ ಹೇಳಿದರು. ಈ ಮಂಗಳಕರ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಲ್ಲಾ ಅತಿಥಿಗಳನ್ನು ಶ್ರೀ ಮೋದಿ ಅವರು ಸ್ವಾಗತಿಸಿ, ಶುಭಾಶಯಗಳನ್ನು ಕೋರಿದರು. ಬೌದ್ಧ ಪರಂಪರೆಯ ಭಿಕ್ಷುಗಳು ಮತ್ತು ಧರ್ಮಾಚಾರ್ಯರ ಉಪಸ್ಥಿತಿಯನ್ನು ಶ್ಲಾಘಿಸಿದ ಅವರು, ಅವರ ಸಮ್ಮುಖವು ಈ ಕಾರ್ಯಕ್ರಮಕ್ಕೆ ಹೊಸ ಚೈತನ್ಯವನ್ನು ನೀಡಿದೆ ಎಂದು ಗೌರವಪೂರ್ವಕವಾಗಿ ತಿಳಿಸಿದರು. 2026ರ ವರ್ಷದ ಆರಂಭದಲ್ಲಿಯೇ ನಡೆಯುತ್ತಿರುವ ಈ ಮಂಗಳಕರ ಆಚರಣೆಯು ಅತ್ಯಂತ ಸ್ಪೂರ್ತಿದಾಯಕವಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಭಗವಾನ್ ಬುದ್ಧನ ಆಶೀರ್ವಾದದೊಂದಿಗೆ, 2026ನೇ ವರ್ಷವು ಇಡೀ ಜಗತ್ತಿಗೆ ಶಾಂತಿ, ಸಮೃದ್ಧಿ ಮತ್ತು ಸಾಮರಸ್ಯದ ಹೊಸ ಯುಗವನ್ನು ತರಲಿ ಎಂದು ಅವರು ಹಾರೈಸಿದರು.ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ನಡೆದ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಮಾಡಿದ ಭಾಷಣದ ಅನುವಾದ
November 19th, 11:00 am
ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಜಿ, ಕೇಂದ್ರದಲ್ಲಿರುವ ನನ್ನ ಸಹೋದ್ಯೋಗಿಗಳು, ರಾಮಮೋಹನ್ ನಾಯ್ಡು ಜಿ, ಜಿ. ಕಿಶನ್ ರೆಡ್ಡಿ ಜಿ, ಭೂಪತಿ ರಾಜು ಶ್ರೀನಿವಾಸ ವರ್ಮಾ ಜಿ, ಸಚಿನ್ ತೆಂಡೂಲ್ಕರ್ ಜಿ, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಜಿ, ರಾಜ್ಯ ಸರ್ಕಾರದ ಸಚಿವ ನಾರಾ ಲೋಕೇಶ್ ಜಿ, ಶ್ರೀ ಸತ್ಯಸಾಯಿ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಆರ್. ಜೆ. ರತ್ನಾಕರ್ ಜಿ, ಉಪಕುಲಪತಿ ಕೆ. ಚಕ್ರವರ್ತಿ ಜಿ, ಐಶ್ವರ್ಯ ಜಿ, ಇತರ ಎಲ್ಲಾ ಗಣ್ಯರು, ಮಹಿಳೆಯರೇ ಮತ್ತು ಮಹನೀಯರೇ, ಎಲ್ಲರಿಗೂ ಸಾಯಿ ರಾಮ್!ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಶ್ರೀ ಸತ್ಯ ಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಆಚರಣೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
November 19th, 10:30 am
ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಇಂದು ನಡೆದ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಪ್ರಧಾನಮಂತ್ರಿ ಅವರು ತಮ್ಮ ಮಾತುಗಳನ್ನು ಸಾಯಿ ರಾಮ್ ನೊಂದಿಗೆ ಪ್ರಾರಂಭಿಸಿದರು ಮತ್ತು ಪುಟ್ಟಪರ್ತಿಯ ಪವಿತ್ರ ಭೂಮಿಯಲ್ಲಿ ಎಲ್ಲರೊಂದಿಗೆ ಇರುವುದು ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅನುಭವ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸ್ವಲ್ಪ ಸಮಯದ ಹಿಂದೆ, ಬಾಬಾ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸುವ ಅವಕಾಶ ತಮಗೆ ಸಿಕ್ಕಿತು ಎಂಬುದನ್ನೂ ಅವರು ಹಂಚಿಕೊಂಡರು. ಬಾಬಾ ಅವರ ಪಾದಗಳಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆಯುವುದು ಸದಾ ಹೃದಯವನ್ನು ತುಂಬುವ ಆಳವಾದ ಭಾವನಾತ್ಮಕ ಕ್ಷಣ ಎಂದವರು ಬಣ್ಣಿಸಿದರು.ಫಿಲಿಪೈನ್ಸ್‌ನಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಜೀವಹಾನಿಗೆ ಪ್ರಧಾನಮಂತ್ರಿ ಸಂತಾಪ
October 01st, 03:23 pm
ಫಿಲಿಪೈನ್ಸ್‌ನಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಜೀವಹಾನಿ ಮತ್ತು ವ್ಯಾಪಕ ಹಾನಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
October 01st, 10:45 am
ವೇದಿಕೆಯಲ್ಲಿ ಉಪಸ್ಥಿತರಿರುವ ಗೌರವಾನ್ವಿತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ(ಸರ್ಕಾರ್ಯವ್ಹ) ಶ್ರೀ ದತ್ತಾತ್ರೇಯ ಹೊಸಬಾಳೆ ಜಿ, ಕೇಂದ್ರ ಸಚಿವರಾದ ಶ್ರೀ ಗಜೇಂದ್ರ ಶೇಖಾವತ್ ಜಿ, ದೆಹಲಿಯ ಜನಪ್ರಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಜಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಎಲ್ಲಾ ಸ್ವಯಂಸೇವಕರೆ, ಇತರ ಗಣ್ಯರೆ, ಮಹನೀಯರೆ ಮತ್ತು ಮಹಿಳೆಯರೆ!ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು
October 01st, 10:30 am
ನವದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮೋದಿ ಅವರು, ಎಲ್ಲಾ ನಾಗರಿಕರಿಗೆ ನವರಾತ್ರಿ ಶುಭಾಶಯಗಳನ್ನು ತಿಳಿಸಿದರು, ಇಂದು ಮಹಾ ನವಮಿ ಮತ್ತು ಸಿದ್ಧಿದಾತ್ರಿ ದೇವಿಯ ದಿನವಾಗಿದೆ ಎಂದು ಹೇಳಿದರು. ನಾಳಿನ ವಿಜಯದಶಮಿಯು ಭವ್ಯ ಹಬ್ಬವಾಗಿದ್ದು, ಇದು ಭಾರತೀಯ ಸಂಸ್ಕೃತಿಯ ಅನ್ಯಾಯದ ವಿರುದ್ಧ ನ್ಯಾಯದ ವಿಜಯ, ಸುಳ್ಳಿನ ವಿರುದ್ದ ಸತ್ಯದ ವಿಜಯ ಮತ್ತು ಕತ್ತಲೆಯ ವಿರುದ್ಧ ಬೆಳಕಿನ ವಿಜಯವನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನೂರು ವರ್ಷಗಳ ಹಿಂದೆ ಇಂತಹ ಪವಿತ್ರ ಸಂದರ್ಭದಲ್ಲಿ ಸ್ಥಾಪಿಸಲಾಗಿದ್ದು, ಇದು ಕಾಕತಾಳೀಯವಲ್ಲ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಸಾವಿರಾರು ವರ್ಷಗಳ ಹಿಂದಿನ ಪ್ರಾಚೀನ ಪರಂಪರೆಯ ಪುನರುಜ್ಜೀವನ ಇದಾಗಿದ್ದು, ಇದರಲ್ಲಿ ರಾಷ್ಟ್ರೀಯ ಪ್ರಜ್ಞೆಯು ಪ್ರತಿ ಯುಗದ ಸವಾಲುಗಳನ್ನು ಎದುರಿಸಲು ಹೊಸ ರೂಪಗಳಲ್ಲಿ ಪ್ರಕಟವಾಗುತ್ತದೆ ಎಂದು ಅವರು ಹೇಳಿದರು. ಈ ಯುಗದಲ್ಲಿ, ಸಂಘವು ಆ ಶಾಶ್ವತ ರಾಷ್ಟ್ರೀಯ ಪ್ರಜ್ಞೆಯ ಸಾಕಾರವಾಗಿದೆ ಎಂದು ಅವರು ಹೇಳಿದರು.ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ ಮಡಿದವರಿಗೆ ಪ್ರಧಾನಮಂತ್ರಿ ಸಂತಾಪ
September 01st, 02:16 pm
ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಜೀವಹಾನಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತಾಪ ವ್ಯಕ್ತಪಡಿಸಿದ್ದಾರೆ.ಗುಜರಾತ್‌ನ ಭುಜ್‌ನಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
May 26th, 05:00 pm
ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ಮನೋಹರ್ ಲಾಲ್ ಜಿ, ಸಂಪುಟದ ಎಲ್ಲಾ ಇತರೆ ಸದಸ್ಯರೆ, ಸಂಸತ್ ಸದಸ್ಯರೆ, ವಿಧಾನಸಭೆ ಸದಸ್ಯರೆ, ಇತರೆ ಎಲ್ಲಾ ಗೌರವಾನ್ವಿತ ಗಣ್ಯರೆ ಮತ್ತು ಕಛ್‌ನ ನನ್ನ ಪ್ರೀತಿಯ ಸಹೋದರ ಸಹೋದರಿಯರೆ!ಗುಜರಾತ್‌ನ ಭುಜ್‌ನಲ್ಲಿ 53,400 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
May 26th, 04:45 pm
ಗುಜರಾತ್‌ನ ಭುಜ್‌ನಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 53,400 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ, ದೇಶಕ್ಕೆ ಸಮರ್ಪಿಸಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಚ್ ಜನರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು, ಕ್ರಾಂತಿಕಾರಿಗಳು ಮತ್ತು ಹುತಾತ್ಮರಿಗೆ, ವಿಶೇಷವಾಗಿ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಶ್ಯಾಮ್‌ಜಿ ಕೃಷ್ಣ ವರ್ಮಾ ಅವರಿಗೆ ಗೌರವ ನಮನ ಸಲ್ಲಿಸಿದರು. ಕಚ್‌ನ ಪುತ್ರರು ಮತ್ತು ಪುತ್ರಿಯರಿಗೆ ಪ್ರಧಾನಿ ತಮ್ಮ ನಮನಗಳನ್ನು ಸಲ್ಲಿಸಿ, ಅವರ ಕೊಡುಗೆಗಳನ್ನು ಶ್ಲಾಘಿಸಿದರು.ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
April 27th, 11:30 am
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಇಂದು ನಿಮ್ಮೊಂದಿಗೆ ನಾನು 'ಮನದ ಮಾತು' ಆಡುತ್ತಿರುವಾಗ, ನನ್ನ ಹೃದಯ ನೋವಿನಿಂದ ಭಾರವಾಗಿದೆ. ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ಘಟನೆ ದೇಶದ ಪ್ರತಿಯೊಬ್ಬ ನಾಗರಿಕನನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ. ಸಂತ್ರಸ್ತ ಕುಟುಂಬಗಳ ಬಗ್ಗೆ ಪ್ರತಿ ಭಾರತೀಯನಲ್ಲೂ ಅಪಾರ ಸಹಾನುಭೂತಿಯಿದೆ. ರಾಜ್ಯ, ಭಾಷೆಯನ್ನು ಮೀರಿ ಎಲ್ಲ ಜನರು ಈ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವನ್ನು ಸ್ವತಃ ಅನುಭವಿಸುತ್ತಿದ್ದಾರೆ. ಭಯೋತ್ಪಾದಕ ದಾಳಿಯ ಚಿತ್ರಗಳನ್ನು ನೋಡಿದ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ ಎಂದು ನನಗೆ ಅನಿಸುತ್ತದೆ. ಪಹಲ್ಗಾಮ್‌ನಲ್ಲಿ ನಡೆದ ಈ ದಾಳಿಯು ಭಯೋತ್ಪಾದನೆಗೆ ಉತ್ತೇಜನ ನೀಡುವವರ ಹತಾಶೆಯನ್ನು ತೋರಿಸುತ್ತದೆ ಮತ್ತು ಅವರ ಹೇಡಿತನವನ್ನು ಪ್ರದರ್ಶಿಸುತ್ತದೆ. ಶಾಲಾ ಕಾಲೇಜುಗಳಲ್ಲಿ ಹುರುಪು ತುಂಬಿರುವಂತಹ ಕಾಲದಲ್ಲಿ, ನಿರ್ಮಾಣ ಕಾರ್ಯಗಳು ಅಭೂತಪೂರ್ವ ವೇಗವನ್ನು ಪಡೆದುಕೊಂಡಿರುವಾಗ, ಕಾಶ್ಮೀರದಲ್ಲಿ ಶಾಂತಿ ಮರುಕಳಿಸುತ್ತಿರುವ ಇಂತಹ ಸಮಯದಲ್ಲಿ, ಪ್ರಜಾಪ್ರಭುತ್ವ ಬಲಿಷ್ಠಗೊಳ್ಳುತ್ತಿರುವಾಗ, ಪ್ರವಾಸಿಗರ ಸಂಖ್ಯೆಯಲ್ಲಿ ದಾಖಲೆಯ ಏರಿಕೆ ಕಂಡುಬರುತ್ತಿರುವಾಗ, ಜನರ ಆದಾಯ ಹೆಚ್ಚುತ್ತಿರುವಾಗ, ಯುವಕರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿದ್ದಾಗ, ದೇಶದ ಶತ್ರುಗಳು, ಜಮ್ಮು ಮತ್ತು ಕಾಶ್ಮೀರದ ವೈರಿಗಳಿಗೆ ಇದನ್ನು ಸಹಿಸಲಾಗಲಿಲ್ಲ. ಭಯೋತ್ಪಾದಕರು ಮತ್ತಷ್ಟು ಭಯೋತ್ಪಾದನೆ ಹೆಚ್ಚಿಸಲು ಬಯಸುತ್ತಿದ್ದಾರೆ. ಕಾಶ್ಮೀರವನ್ನು ಮತ್ತೆ ನಾಶಮಾಡಲು ಹುನ್ನಾರದಿಂದ ಇಷ್ಟು ದೊಡ್ಡ ಘಟನೆ ನಡೆಯುವಂತೆ ಪಿತೂರಿ ನಡೆಸಿದರು. ದೇಶದ ಏಕತೆ, 140 ಕೋಟಿ ಭಾರತೀಯರ ಒಗ್ಗಟ್ಟು, ಭಯೋತ್ಪಾದನೆಯ ವಿರುದ್ಧದ ಈ ಯುದ್ಧದಲ್ಲಿ ನಮ್ಮ ದೊಡ್ಡ ಶಕ್ತಿಯಾಗಿದೆ. ಈ ಒಗ್ಗಟ್ಟೆ ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ನಿರ್ಣಾಯಕ ಪಾತ್ರವಾಹಿಸಲಿದೆ. ದೇಶ ಎದುರಿಸುತ್ತಿರುವ ಈ ಸವಾಲನ್ನು ಎದುರಿಸಲು ನಾವು ನಮ್ಮ ಸಂಕಲ್ಪವನ್ನು ಬಲಪಡಿಸಿಕೊಳ್ಳಬೇಕು. ಒಂದು ರಾಷ್ಟ್ರ ರೂಪದಲ್ಲಿ ಬಲವಾದ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಈ ಭಯೋತ್ಪಾದಕ ದಾಳಿಯ ನಂತರ ಸಂಪೂರ್ಣ ದೇಶ ಒಕ್ಕೊರಲಿನಿಂದ ಧ್ವನಿಯೆತ್ತಿರುವುದನ್ನು ಇಂದು ಜಗತ್ತೇ ನೋಡುತ್ತಿದೆ.ಪ್ರಧಾನಮಂತ್ರಿ ಅವರು 6ನೇ ಬಿಮ್ ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಿದ ವೇಳೆ ನೀಡಿದ ಹೇಳಿಕೆಯ ಕನ್ನಡ ಅನುವಾದ
April 04th, 12:59 pm
ಮೊದಲಿಗೆ ನಾನು ಈ ಶೃಂಗಸಭೆಯನ್ನು ಅತ್ಯುತ್ತಮವಾಗಿ ಆಯೋಜಿಸಿರುವುದಕ್ಕಾಗಿ ಪ್ರಧಾನ ಮಂತ್ರಿ ಘನತೆವೆತ್ತ ಶಿನವತ್ರಾ ಮತ್ತು ಥೈಲ್ಯಾಂಡ್ ಸರ್ಕಾರಕ್ಕೆ ನಾನು ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇನೆ.ಥಾಯ್ಲೆಂಡ್ ನಲ್ಲಿ ನಡೆದ 6ನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರು ಪಾಲ್ಗೊಂಡರು
April 04th, 12:54 pm
ಥಾಯ್ಲೆಂಡ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ 6ನೇ ಬಿಮ್‌ಸ್ಟೆಕ್ (ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಉಪಕ್ರಮ) ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದರು. ಶೃಂಗಸಭೆಯ ವಿಷಯ - ಬಿಮ್‌ಸ್ಟೆಕ್: ಸಮೃದ್ಧ, ಸ್ಥಿತಿಸ್ಥಾಪಕ ಮತ್ತು ಮುಕ್ತ. ಇದು ಬಿಮ್‌ಸ್ಟೆಕ್ ಪ್ರದೇಶದ ನಾಯಕರ ಆದ್ಯತೆಗಳು ಮತ್ತು ಜನರ ಆಕಾಂಕ್ಷೆಗಳನ್ನು ಹಾಗೂ ಜಾಗತಿಕ ಅನಿಶ್ಚಿತತೆಯ ಸಮಯದಲ್ಲಿ ಹಂಚಿಕೆಯ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಬಿಮ್‌ಸ್ಟೆಕ್ ನ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ.ʻಬಿಮ್‌ಸ್ಟೆಕ್ʼ ರಾಷ್ಟ್ರಗಳ ನಡುವಿನ ಸಹಕಾರದ ವಿವಿಧ ವಿಚಾರಗಳನ್ನು ಒಳಗೊಂಡ 21 ಅಂಶಗಳ ʻಕ್ರಿಯಾ ಯೋಜನೆʼಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ
April 04th, 12:53 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಥಾಯ್ಲೆಂಡ್ ನ ಬ್ಯಾಂಕಾಕ್ ನಲ್ಲಿ ನಡೆದ 6ನೇ ʻಬಿಮ್‌ಸ್ಟೆಕ್ʼ ಶೃಂಗಸಭೆಯಲ್ಲಿ ʻಬಿಮ್‌ಸ್ಟೆಕ್ʼ ರಾಷ್ಟ್ರಗಳ ನಡುವಿನ ಸಹಕಾರದ ವಿವಿಧ ವಿಚಾರಗಳನ್ನು ಒಳಗೊಂಡ 21 ಅಂಶಗಳ ʻಕ್ರಿಯಾ ಯೋಜನೆʼಯನ್ನು ಪ್ರಸ್ತಾಪಿಸಿದರು. ʻಬಿಮ್‌ಸ್ಟೆಕ್ʼ ರಾಷ್ಟ್ರಗಳಾದ್ಯಂತ ವ್ಯಾಪಾರವನ್ನು ಉತ್ತೇಜಿಸಲು ಮತ್ತು ಐಟಿ ಕ್ಷೇತ್ರದ ಶ್ರೀಮಂತ ಸಾಮರ್ಥ್ಯವನ್ನು ಬಳಸಿಕೊಳ್ಳಲು ಅವರು ಒತ್ತಾಯಿಸಿದರು. ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡಲು ಮತ್ತು ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ಶ್ರೀ ಮೋದಿ ಅವರು ಕರೆ ನೀಡಿದರು. ʻಬಿಮ್‌ಸ್ಟೆಕ್ʼಗೆ ಸಾಮೂಹಿಕವಾಗಿ ಶಕ್ತಿ ತುಂಬುವಂತೆ ಒತ್ತಾಯಿಸಿದ ಅವರು, ನಾಯಕತ್ವ ವಹಿಸುವ ಯುವಕರ ಪಾತ್ರವನ್ನು ಒತ್ತಿಹೇಳಿದರು. ಸಾಂಸ್ಕೃತಿಕ ಸಂಪರ್ಕಗಳು ʻಬಿಮ್‌ಸ್ಟೆಕ್ʼ ರಾಷ್ಟ್ರಗಳನ್ನು ಮತ್ತಷ್ಟು ಹತ್ತಿರ ತರುತ್ತವೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.ಮ್ಯಾನ್ಮಾರ್ ಭೂಕಂಪದ ಹಿನ್ನೆಲೆಯಲ್ಲಿ ಹಿರಿಯ ಸೇನಾ ಮುಖ್ಯಸ್ಥರಾದ ಮಿನ್ ಆಂಗ್ ಹ್ಲೈಂಗ್ ಅವರೊಂದಿಗೆ ಪ್ರಧಾನಮಂತ್ರಿ ಮಾತುಕತೆ
March 29th, 01:41 pm
ಮ್ಯಾನ್ಮಾರ್‌ನಲ್ಲಿ ಭೂಕಂಪದ ದುರಂತ ಸನ್ನಿವೇಶದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೇನಾ ಮುಖ್ಯಸ್ಥರಾದ ಮಿನ್ ಆಂಗ್ ಹ್ಲೈಂಗ್ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸವಾಲಿನ ಸಮಯದಲ್ಲಿ ಮ್ಯಾನ್ಮಾರ್‌ನೊಂದಿಗೆ ಒಗ್ಗಟ್ಟಿನಿಂದ ನಿಲ್ಲಲು ಆಪ್ತ ಸ್ನೇಹಿತ ಮತ್ತು ನೆರೆಹೊರೆಯ ದೇಶವಾದ ಭಾರತದ ದೃಢವಾದ ಬದ್ಧತೆಯನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು. ಈ ವಿಪತ್ತಿಗೆ ಪ್ರತಿಕ್ರಿಯೆಯಾಗಿ, ಭಾರತ ಸರ್ಕಾರವು ಆಪರೇಷನ್ ಬ್ರಹ್ಮ ಪ್ರಾರಂಭಿಸಿದೆ, ಇದು ವಿಕೋಪದಿಂದ ಬಾಧಿತವಾಗಿರುವ ಪ್ರದೇಶಗಳಿಗೆ ತಕ್ಷಣದ ಪರಿಹಾರ ಮತ್ತು ಸಹಾಯವನ್ನು ಒದಗಿಸುವ ಉಪಕ್ರಮವಾಗಿದೆ.ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ನಲ್ಲಿ ಭೂಕಂಪ – ಪ್ರಧಾನಮಂತ್ರಿ ಕಳವಳ
March 28th, 02:18 pm
ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ನಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಭೂಕಂಪಗಳ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.ದೆಹಲಿಯಲ್ಲಿ ಕಂಪನದ ಅನುಭವವಾದ ಹಿನ್ನೆಲೆ ಪ್ರತಿಯೊಬ್ಬರೂ ಶಾಂತವಾಗಿರುವಂತೆ ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಪಾಲಿಸುವಂತೆ ಪ್ರಧಾನಮಂತ್ರಿ ಮನವಿ
February 17th, 08:08 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಕಂಪನದ ಅನುಭವವಾದ ಹಿನ್ನೆಲೆಯಲ್ಲಿ ಎಲ್ಲರೂ ಶಾಂತವಾಗಿರುವಂತೆ ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ. ಪ್ರಾಧಿಕಾರಗಳು ಪರಿಸ್ಥಿತಿಯ ಸೂಕ್ಷ್ಮವಾಗಿ ನಿಗಾ ವಹಿಸಿವೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.ಕಾರ್ಯಕಾರ್ ಸುವರ್ಣ ಮಹೋತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
December 07th, 05:52 pm
ಕಾರ್ಯಕಾರ್(ಕಾರ್ಯಕರ್ತರು) ಸುವರ್ಣ ಮಹೋತ್ಸವದ ಶುಭ ಸಂದರ್ಭದಲ್ಲಿ ನಾನು ಭಗವಾನ್ ಸ್ವಾಮಿನಾರಾಯಣ ಅವರ ಪಾದಗಳಿಗೆ ತಲೆಬಾಗಿ ನಮಸ್ಕರಿಸುತ್ತೇನೆ. ಇಂದು ಪ್ರಮುಖ್ ಸ್ವಾಮಿ ಮಹಾರಾಜ್ ಅವರ 103ನೇ ಜನ್ಮದಿನ ಆಚರಿಸಲಾಗುತ್ತಿದೆ, ಅವರಿಗೂ ಸಹ ನಾನು ಗೌರವಪೂರ್ವಕವಾಗಿ ನಮಸ್ಕರಿಸುತ್ತೇನೆ, ಏಕೆಂದರೆ ಅವರು ದೈವಿಕ ಗುರು ಹರಿ ಪ್ರಗತ್ ಬ್ರಹ್ಮನ ಮೂರ್ತರೂಪವಾಗಿದ್ದರು. ಭಗವಾನ್ ಸ್ವಾಮಿನಾರಾಯಣ ಅವರ ಬೋಧನೆಗಳು ಮತ್ತು ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಸಂಕಲ್ಪಗಳು ಮತ್ತು ನಿರ್ಣಯಗಳು ಪರಮ ಪೂಜ್ಯ ಗುರು ಹರಿ ಮಹಂತ್ ಸ್ವಾಮಿ ಮಹಾರಾಜ್ ಅವರ ಅವಿರತ ಪ್ರಯತ್ನ ಮತ್ತು ಸಮರ್ಪಣೆಯ ಮೂಲಕ ಇಂದು ಸಾಕಾರಗೊಳ್ಳುತ್ತಿವೆ. 1 ಲಕ್ಷ ಸ್ವಯಂಸೇವಕರು, ಯುವಕರು ಮತ್ತು ಮಕ್ಕಳನ್ನು ಒಳಗೊಂಡ ಈ ಭವ್ಯವಾದ ಸಾಂಸ್ಕೃತಿಕ ಕಾರ್ಯಕ್ರಮವು ಬೀಜ, ಮರ ಮತ್ತು ಹಣ್ಣುಗಳ ಸಾರವನ್ನು ಸುಂದರವಾಗಿ ಪ್ರತಿನಿಧಿಸುತ್ತಿದೆ. ನಾನು ನಿಮ್ಮ ನಡುವೆ ದೈಹಿಕವಾಗಿ ಇರಲು ಸಾಧ್ಯವಾಗದಿದ್ದರೂ, ಈ ಘಟನೆಯ ಚೈತನ್ಯ ಮತ್ತು ಶಕ್ತಿಯನ್ನು ನನ್ನ ಹೃದಯದಲ್ಲಿ ಆಳವಾಗಿ ಅನುಭವಿಸುತ್ತೇನೆ. ಇಂತಹ ಭವ್ಯವಾದ ಮತ್ತು ದಿವ್ಯವಾದ ಆಚರಣೆಯನ್ನು ಆಯೋಜಿಸಿದ್ದಕ್ಕಾಗಿ ಪರಮ ಪೂಜ್ಯ ಗುರು ಹರಿ ಮಹಂತ್ ಸ್ವಾಮಿ ಮಹಾರಾಜ್ ಮತ್ತು ಎಲ್ಲಾ ಪೂಜ್ಯ ಸಾಧು ಸಂತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ಅವರಿಗೆ ಅಪಾರ ಗೌರವದಿಂದ ನಮಸ್ಕರಿಸುತ್ತೇನೆ.