2277.397 ಕೋಟಿ ರೂ. ವೆಚ್ಚದ ಡಿ ಎಸ್ ಐ ಆರ್ ನ "ಸಾಮರ್ಥ್ಯ ನಿರ್ಮಾಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ" ಯೋಜನೆಗೆ ಸಂಪುಟದ ಅನುಮೋದನೆ

September 24th, 05:38 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ, ಹದಿನೈದನೇ ಹಣಕಾಸು ಆಯೋಗದ 2021-22 ರಿಂದ 2025-26 ರವರೆಗಿನ ಆವರ್ತನ ಅವಧಿಗೆ ಒಟ್ಟು 2277.397 ಕೋಟಿ ರೂ.ಗಳ ಸಾಮರ್ಥ್ಯ ನಿರ್ಮಾಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕುರಿತ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ/ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಡಿ ಎಸ್ ಐ ಆರ್ / ಸಿ ಎಸ್ ಐ ಆರ್ ) ಯೋಜನೆಗೆ ಅನುಮೋದನೆ ನೀಡಿದೆ.