ಭಾರತದ ಪ್ರಧಾನಮಂತ್ರಿ ಭೂತಾನ್ ಭೇಟಿಯ ಕುರಿತು ಜಂಟಿ ಪತ್ರಿಕಾ ಪ್ರಕಟಣೆ
November 12th, 10:00 am
ಭೂತಾನ್ ನ ದೊರೆ ಗೌರವಾನ್ವಿತ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್ಚುಕ್ ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ನವೆಂಬರ್ 11-12, ರವರೆಗೆ ಭೂತಾನ್‌ಗೆ ಎರಡು ದಿನಗಳ ಅಧಿಕೃತ ಭೇಟಿಯಲ್ಲಿದ್ದರು.ಭೂತಾನ್ ನ ರಾಜರೊಂದಿಗೆ ಸಭಿಕರನ್ನು ಬರಮಾಡಿಕೊಂಡ ಪ್ರಧಾನಮಂತ್ರಿ
November 11th, 06:14 pm
ಉಭಯ ದೇಶಗಳ ನಡುವಿನ ಸ್ನೇಹ ಮತ್ತು ಸಹಕಾರದ ನಿಕಟ ಸಂಬಂಧಗಳನ್ನು ರೂಪಿಸುವಲ್ಲಿ ಸತತವಾಗಿ ಅಧಿಕಾರಕ್ಕೆ ಬಂದ ಡ್ರೂಕ್ ಗಯಾಲ್ಪೋಸ್ (ರಾಜರು) ಒದಗಿಸಿದ ಮಾರ್ಗದರ್ಶಿ ದೃಷ್ಟಿಕೋನದ ಕುರಿತಾಗಿ ಪ್ರಧಾನಮಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಭೂತಾನ್ ನ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಭಾರತ ಸರ್ಕಾರ ನೀಡಿದ ಅಮೂಲ್ಯ ಬೆಂಬಲಕ್ಕೆ ಘನತೆವೆತ್ತ ದೊರೆ ಮೆಚ್ಚುಗೆ ವ್ಯಕ್ತಪಡಿಸಿದರು.ಹೊಸ ವರ್ಷದಂದು ಪ್ರಧಾನಮಂತ್ರಿಯವರಿಂದ ದೂರವಾಣಿ ಕರೆಗಳು
January 01st, 05:38 pm
ಹೊಸ ವರ್ಷದ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿಶ್ವದ ವಿವಿಧ ನಾಯಕರಿಗೆ ದೂರವಾಣಿ ಕರೆ ಮಾಡಿ ಶುಭಾಶಯ ವಿನಿಮಯ ಮಾಡಿಕೊಂಡರು. ಭೂತಾನ್ ದೊರೆ ಶ್ರೀ ಜಿಗ್ಮೆ ಖೇಸರ್ ನಂಗೆಲ್ ವಾಂಗ್ಚುಕ್ ಮತ್ತು ಪ್ರಧಾನ ಮಂತ್ರಿ ಶ್ರೀ ಲಿಯೊನ್ಚೆನ್ (ಡಾ) ಲೋಟೇ ಶೇರಿಂಗ್, ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಮತ್ತು ಪ್ರಧಾನಿ ಶ್ರೀ ಮಹಿಂದಾ ರಾಜಪಕ್ಸೆ, ಮಾಲ್ಡೀವ್ಸ್ ಅಧ್ಯಕ್ಷ ಶ್ರೀ ಇಬ್ರಾಹಿಂ ಮೊಹಮ್ಮದ್ ಸೊಲಿಹ್, ಬಾಂಗ್ಲಾದೇಶದ ಪ್ರಧಾನಿ ಶ್ರೀಮತಿ ಶೇಖ್ ಹಸೀನಾ ಮತ್ತು ನೇಪಾಳ ಪ್ರಧಾನಿ ಶ್ರೀ ಕೆ.ಪಿ. ಶರ್ಮಾ ಒಲಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.