LDF and UDF have deprived Keralam of its youth power: PM Modi in Ernakulam
March 11th, 03:00 pm
Amid a massive gathering in Ernakulam today, Prime Minister Narendra Modi said the enthusiasm and confidence of the people reflected a strong aspiration for Keralam’s development and a new political direction in the state. He emphasised that the aspirations of the people clearly indicate a desire for faster growth and new opportunities.PM Modi addresses a mega public meeting in Ernakulam, Keralam
March 11th, 02:20 pm
Amid a massive gathering in Ernakulam today, Prime Minister Narendra Modi said the enthusiasm and confidence of the people reflected a strong aspiration for Keralam’s development and a new political direction in the state. He emphasised that the aspirations of the people clearly indicate a desire for faster growth and new opportunities.ಸ್ಟಾರ್ಟಪ್ ಇಂಡಿಯಾ ಮಹತ್ವಾಕಾಂಕ್ಷಿ ಉಪಕ್ರಮ 1 ದಶಕ ಗುರುತಿಸುವ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
January 16th, 01:30 pm
ಇದೀಗ ಸ್ಟಾರ್ಟಪ್ ಜಗತ್ತಿನ ಕೆಲವು ಜನರನ್ನು ಭೇಟಿ ಮಾಡಲು, ಅವರ ಸಾಧನೆಗಳು ಮತ್ತು ಪ್ರಯೋಗಗಳನ್ನು ನೋಡಲು ಮತ್ತು ಅವರಲ್ಲಿ ಕೆಲವರೊಂದಿಗೆ ಚರ್ಚೆ ನಡೆಸಲು ನನಗೆ ಅವಕಾಶ ಸಿಕ್ಕಿದೆ. ಕೃಷಿ, ಹಣಕಾಸು ತಂತ್ರಜ್ಞಾನ, ಚಲನಶೀಲತೆ, ಆರೋಗ್ಯ ಮತ್ತು ಸುಸ್ಥಿರತೆಯಲ್ಲಿ ಕೆಲಸ ಮಾಡುತ್ತಿರುವ ಸ್ಟಾರ್ಟಪ್‌ಗಳು - ಅವರ ಆಲೋಚನೆಗಳು ನನಗೆ ಮಾತ್ರವಲ್ಲದೆ ಎಲ್ಲರಿಗೂ ಪ್ರಭಾವಶಾಲಿಯಾಗಿವೆ. ಆದರೂ, ನನ್ನನ್ನು ಹೆಚ್ಚು ಪ್ರಭಾವಿತಗೊಳಿಸಿದ್ದು ನಿಮ್ಮ ಆತ್ಮವಿಶ್ವಾಸ ಮತ್ತು ನಿಮ್ಮ ಮಹತ್ವಾಕಾಂಕ್ಷೆಗಳೇ ಕಾರಣವಾಗಿವೆ.ವಿಕಸಿತ ಭಾರತ ಯುವ ನಾಯಕರ ಸಂವಾದ-2026ರ ಸಮಾರೋಪ ಕಲಾಪ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
January 12th, 06:45 pm
ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೆ, ಎಲ್ಲಾ ಸಂಸತ್ ಸದಸ್ಯರೆ, ವಿಕಸಿತ ಭಾರತ ಯುವ ನಾಯಕರ ಸ್ಪರ್ಧೆಯ ವಿಜೇತರೆ, ಇತರೆ ಗಣ್ಯರೆ ಮತ್ತು ವಿದೇಶದಿಂದ ಮತ್ತು ದೇಶದೆಲ್ಲೆಡೆಯಿಂದ ಇಲ್ಲಿಗೆ ಬಂದಿರುವ ನನ್ನ ಯುವ ಸ್ನೇಹಿತರೆ, ನೀವೆಲ್ಲರೂ ಇಲ್ಲಿ ಹೊಸ ಅನುಭವ ಪಡೆದಿರಬೇಕು. ನಿಮಗೆ ದಣಿವಾಗಿರಬೇಕು? ನೀವು 2 ದಿನಗಳ ಕಾರ್ಯಕ್ರಮದಲ್ಲಿ ತೊಡಗಿದ್ದೀರಿ, ಆದ್ದರಿಂದ ಮತ್ತೊಮ್ಮೆ ಕೇಳಲು ನಿಮಗೆ ಆಯಾಸವಾಗುತ್ತಿರಬಹುದು? ನಾನು ಮೊದಲು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ, ನಿಮ್ಮಲ್ಲಿ ಹಲವರು ಜನಿಸಿರಲಿಲ್ಲ ಎಂದು ನಾನು ನಂಬುತ್ತೇನೆ. 2014ರಲ್ಲಿ ನಾನು ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ, ನಿಮ್ಮಲ್ಲಿ ಹೆಚ್ಚಿನವರು ಇನ್ನೂ ಮಕ್ಕಳಾಗಿದ್ದಿರಿ. ಆದರೆ ನಾನು ಮುಖ್ಯಮಂತ್ರಿಯೇ ಆಗಿದ್ದಿರಲಿ ಅಥವಾ ಈಗ ಪ್ರಧಾನಮಂತ್ರಿಯೇ ಆಗಿರಲಿ, ನಾನು ಯಾವಾಗಲೂ ಯುವ ಪೀಳಿಗೆಯ ಮೇಲೆ ಅಪಾರ ನಂಬಿಕೆ ಹೊಂದಿದ್ದೇನೆ. ನಾನು ಯಾವಾಗಲೂ ನಿಮ್ಮ ಸಾಮರ್ಥ್ಯ ಮತ್ತು ನಿಮ್ಮ ಪ್ರತಿಭೆಯಿಂದ ಅದ್ಭುತ ಶಕ್ತಿ ಪಡೆದುಕೊಂಡಿದ್ದೇನೆ. ಇಂದು ನೀವು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಧ್ಯೇಯದ ಮೇಲೆ ನಿಯಂತ್ರಣ ಹೊಂದಿದ್ದೀರಿ ಎಂದು ನಾನು ನೋಡುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಕಸಿತ ಭಾರತ ಯುವ ನಾಯಕರ ಸಂವಾದ 2026 ಅನ್ನು ಉದ್ದೇಶಿಸಿ ಮಾತನಾಡಿದರು
January 12th, 06:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ 'ವಿಕಸಿತ ಭಾರತ ಯುವ ನಾಯಕರ ಸಂವಾದ 2026'ರ ಸಮಾರೋಪ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿಯವರು, ತಾವು ಮೊದಲು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಇಂದಿನ ಅನೇಕ ಯುವ ನಾಗರಿಕರು ಇನ್ನೂ ಜನಿಸಿರಲಿಲ್ಲ ಮತ್ತು 2014ರಲ್ಲಿ ತಾವು ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಅವರಲ್ಲಿ ಹೆಚ್ಚಿನವರು ಇನ್ನೂ ಮಕ್ಕಳಾಗಿದ್ದರು ಎಂದು ಹೇಳಿದರು. ಇಷ್ಟು ಕಾಲ ಉರುಳಿದರೂ ಸಹ, ಯುವ ಪೀಳಿಗೆಯ ಮೇಲೆ ತಮಗಿರುವ ಭರವಸೆ ಎಂದಿಗೂ ಕುಗ್ಗಿಲ್ಲ ಮತ್ತು ಅದು ಅಚಲವಾಗಿದೆ ಎಂದು ಅವರು ಒತ್ತಿಹೇಳಿದರು. ನಿಮ್ಮ ಸಾಮರ್ಥ್ಯ, ನಿಮ್ಮ ಪ್ರತಿಭೆ - ನಾನು ಯಾವಾಗಲೂ ನಿಮ್ಮಿಂದ ಶಕ್ತಿಯನ್ನು ಪಡೆದಿದ್ದೇನೆ. ಮತ್ತು ಇಂದು ನೋಡಿ, ನೀವೆಲ್ಲರೂ ವಿಕಸಿತ ಭಾರತದ ಗುರಿಯ ಲಗಾಮನ್ನು ಹಿಡಿದಿದ್ದೀರಿ ಎಂದು ಶ್ರೀ ಮೋದಿ ಹೇಳಿದರು.ಗುಜರಾತ್‌ನಲ್ಲಿ ಆಯೋಜಿಸಿದ್ದ ಸೋಮನಾಥ್ ಸ್ವಾಭಿಮಾನ್ ಪರ್ವ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
January 11th, 12:00 pm
ಗುಜರಾತ್‌ನ ಗೌರವಾನ್ವಿತ ಮತ್ತು ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಶಕ್ತಿಶಾಲಿ ಉಪಮುಖ್ಯಮಂತ್ರಿ ಹರ್ಷ ಸಂಘವಿ ಜಿ, ಗುಜರಾತ್ ಸರ್ಕಾರದ ಸಚಿವರಾದ ಜಿತುಭಾಯಿ ವಾಘಾನಿ, ಅರ್ಜುನ್‌ಭಾಯಿ ಮೋಧ್ವಾಡಿಯಾ, ಡಾ. ಪ್ರದ್ಯುಮ್ನ ವಾಜ, ಕೌಶಿಕ್‌ಭಾಯಿ ವೆಕಾರಿಯಾ, ಸಂಸತ್ ಸದಸ್ಯ ರಾಜೇಶ್‌ಭಾಯಿ, ಇಲ್ಲಿರುವ ಇತರೆ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ. ಇಂದು ದೇಶದ ವಿವಿಧೆಡೆಯಿಂದ ಲಕ್ಷಾಂತರ ಜನರು ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರಿಗೂ ಸಹ ನಾನು ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ - ಸೋಮನಾಥನಿಗೆ ವಿಜಯವಾಗಲಿ.ಗುಜರಾತ್ ನ ಸೋಮನಾಥದಲ್ಲಿ ನಡೆದ 'ಸೋಮನಾಥ ಸ್ವಾಭಿಮಾನ ಪರ್ವ' ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
January 11th, 11:41 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಸೋಮನಾಥದಲ್ಲಿ ನಡೆದ 'ಸೋಮನಾಥ ಸ್ವಾಭಿಮಾನ ಪರ್ವ' ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಈ ಸಮಯ ಅಸಾಧಾರಣವಾದುದು, ಈ ವಾತಾವರಣ ಅಸಾಧಾರಣವಾದುದು ಮತ್ತು ಈ ಆಚರಣೆಯೂ ಅಸಾಧಾರಣವಾದುದು ಎಂದು ಅವರು ಬಣ್ಣಿಸಿದರು. ಒಂದು ಕಡೆ ಸಾಕ್ಷಾತ್ ಮಹಾದೇವನಿದ್ದರೆ, ಮತ್ತೊಂದೆಡೆ ಸಮುದ್ರದ ಬೃಹತ್ ಅಲೆಗಳು, ಸೂರ್ಯನ ಕಿರಣಗಳು, ಮಂತ್ರಘೋಷಗಳ ಅನುರಣನ ಮತ್ತು ಭಕ್ತಿಯ ಉಲ್ಬಣವಿದೆ ಎಂದು ಅವರು ವಿವರಿಸಿದರು. ಈ ದೈವಿಕ ಪರಿಸರದಲ್ಲಿ ಸೋಮನಾಥನ ಭಕ್ತರ ಉಪಸ್ಥಿತಿಯು ಈ ಸಂದರ್ಭವನ್ನು ಮತ್ತಷ್ಟು ಭವ್ಯ ಹಾಗೂ ಪವಿತ್ರವಾಗಿಸಿದೆ ಎಂದು ಅವರು ತಿಳಿಸಿದರು. ಸೋಮನಾಥ ದೇವಾಲಯ ಟ್ರಸ್ಟ್‌ನ ಅಧ್ಯಕ್ಷರಾಗಿ, ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ತಮ್ಮ ಮಹಾನ್ ಸೌಭಾಗ್ಯ ಎಂದು ಶ್ರೀ ಮೋದಿ ಹಂಚಿಕೊಂಡರು. ಕಳೆದ 72 ಗಂಟೆಗಳಿಂದ ನಿರಂತರವಾಗಿ ನಡೆಯುತ್ತಿರುವ ಓಂಕಾರ ಜಪ ಮತ್ತು ಮಂತ್ರಘೋಷಗಳ ಪಠಣವನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು. ನಿನ್ನೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಾವಿರ ಡ್ರೋನ್ ಗಳು ಮತ್ತು ವೇದ ಪಾಠಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಸೋಮನಾಥದ ಸಾವಿರ ವರ್ಷಗಳ ಭವ್ಯ ಇತಿಹಾಸವನ್ನು ಪ್ರಸ್ತುತಪಡಿಸಿದ್ದನ್ನು ಅವರು ಉಲ್ಲೇಖಿಸಿದರು. ಅಲ್ಲದೆ, ಇಂದು 108 ಕುದುರೆಗಳನ್ನೊಳಗೊಂಡ 'ಶೌರ್ಯ ಯಾತ್ರೆ' ದೇವಾಲಯವನ್ನು ತಲುಪಿದೆ ಎಂದು ತಿಳಿಸಿದರು. ಮಂತ್ರಗಳು ಮತ್ತು ಭಜನೆಗಳ ಈ ಮನಮೋಹಕ ಪ್ರಸ್ತುತಿಯು ಪದಗಳಿಗೆ ನಿಲುಕದ್ದು, ಈ ಅನುಭವವನ್ನು ಕಾಲ ಮಾತ್ರವೇ ಸೆರೆಹಿಡಿಯಲು ಸಾಧ್ಯ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಸಂಭ್ರಮವು ಕೇವಲ ಒಂದು ಉತ್ಸವವಲ್ಲ; ಇದು ಸ್ವಾಭಿಮಾನ, ಗೌರವ, ಘನತೆ, ಜ್ಞಾನ, ಭವ್ಯತೆ, ಪರಂಪರೆ, ಆಧ್ಯಾತ್ಮಿಕತೆ, ಸಾಕ್ಷಾತ್ಕಾರ, ಆನಂದ ಮತ್ತು ಆತ್ಮೀಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಎಲ್ಲಕ್ಕಿಂತ ಮಿಗಿಲಾಗಿ, ಈ ಕಾರ್ಯಕ್ರಮವು ಭಗವಾನ್ ಮಹಾದೇವನ ಆಶೀರ್ವಾದವನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು.ಸೋಮನಾಥ ದೇಗುಲ ಭೇಟಿಯ ಕ್ಷಣಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
January 10th, 11:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ಸೋಮನಾಥ ದೇಗುಲಕ್ಕೆ ಭೇಟಿ ನೀಡಿದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.ಪ್ರಧಾನಮಂತ್ರಿ ಜನವರಿ 10-11 ರಂದು ಗುಜರಾತ್‌ನ ಸೋಮನಾಥಕ್ಕೆ ಭೇಟಿ, ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಭಾಗಿ
January 09th, 12:10 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜನವರಿ 10-11 ರಂದು ಗುಜರಾತ್‌ನ ಸೋಮನಾಥಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಭಾಗವಹಿಸಲಿದ್ದಾರೆ. ಜನವರಿ 10 ರಂದು ರಾತ್ರಿ 8 ಗಂಟೆಗೆ ಪ್ರಧಾನಮಂತ್ರಿ ಓಂಕಾರ ಮಂತ್ರ ಪಠಣದಲ್ಲಿ ಭಾಗವಹಿಸಲಿದ್ದಾರೆ ಮತ್ತು ನಂತರ ಸೋಮನಾಥ ದೇವಾಲಯದಲ್ಲಿ ಡ್ರೋಣ್ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ.ಪ್ರಧಾನಮಂತ್ರಿ ಜನವರಿ 10-12 ರವರೆಗೆ ಗುಜರಾತ್ ಭೇಟಿ
January 09th, 12:02 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜನವರಿ 10 ರಿಂದ 12 ರವರೆಗೆ ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಪ್ರಧಾನಮಂತ್ರಿ ಅವರು ಜನವರಿ 10 ರಂದು ಸಂಜೆ ಸೋಮನಾಥಕ್ಕೆ ಆಗಮಿಸಲಿದ್ದಾರೆ ಮತ್ತು ರಾತ್ರಿ 8 ಗಂಟೆ ಸುಮಾರಿಗೆ ಪ್ರಧಾನಮಂತ್ರಿ ಓಂಕಾರ ಮಂತ್ರ ಪಠಣದಲ್ಲಿ ಭಾಗವಹಿಸಲಿದ್ದಾರೆ ಮತ್ತು ನಂತರ ಅವರು ಸೋಮನಾಥ ದೇವಾಲಯದಲ್ಲಿ ಡ್ರೋಣ್ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ.'ಮನ್ ಕಿ ಬಾತ್' ಜನರ ಸಾಮೂಹಿಕ ಪ್ರಯತ್ನಗಳನ್ನು ಸಾರ್ವಜನಿಕರಿಗೆ ತಿಳಿಸಲು ಅತ್ಯುತ್ತಮ ವೇದಿಕೆಯಾಗಿದೆ: ಪ್ರಧಾನಿ ಮೋದಿ
November 30th, 11:30 am
ಈ ತಿಂಗಳ ಮನ್ ಕಿ ಬಾತ್ ನಲ್ಲಿ, ಪ್ರಧಾನಿ ಮೋದಿ ಅವರು ಸಂವಿಧಾನ ದಿನಾಚರಣೆ, ವಂದೇ ಮಾತರಂನ 150 ನೇ ವಾರ್ಷಿಕೋತ್ಸವ, ಅಯೋಧ್ಯೆಯಲ್ಲಿ ಧರ್ಮ ಧ್ವಜಾರೋಹಣ, ಐಎನ್ಎಸ್ 'ಮಹೆ' ಸೇರ್ಪಡೆ ಮತ್ತು ಕುರುಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಗೀತಾ ಮಹೋತ್ಸವ ಸೇರಿದಂತೆ ನವೆಂಬರ್ ತಿಂಗಳ ಪ್ರಮುಖ ಘಟನೆಗಳನ್ನು ಹೈಲೈಟ್ ಮಾಡಿದರು. ದಾಖಲೆಯ ಆಹಾರ ಧಾನ್ಯ ಮತ್ತು ಜೇನುತುಪ್ಪ ಉತ್ಪಾದನೆ, ಭಾರತದ ಕ್ರೀಡಾ ಯಶಸ್ಸುಗಳು, ವಸ್ತು ಸಂಗ್ರಹಾಲಯಗಳು ಮತ್ತು ನೈಸರ್ಗಿಕ ಕೃಷಿಯಂತಹ ಹಲವಾರು ಪ್ರಮುಖ ವಿಷಯಗಳನ್ನು ಸಹ ಅವರು ಸ್ಪರ್ಶಿಸಿದರು. ಎಲ್ಲರೂ ಕಾಶಿ-ತಮಿಳು ಸಂಗಮದ ಭಾಗವಾಗಬೇಕೆಂದು ಪ್ರಧಾನಿ ಒತ್ತಾಯಿಸಿದರು.