ನಮೀಬಿಯಾ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ

July 09th, 07:55 pm

ತಮ್ಮ ನಮೀಬಿಯಾ ಅಧಿಕೃತ ಪ್ರವಾಸದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಂಡ್‌ಹೋಕ್‌ ನಲ್ಲಿರುವ ಸ್ಟೇಟ್ ಹೌಸ್‌ ನಲ್ಲಿ ನಮೀಬಿಯಾ ಅಧ್ಯಕ್ಷರಾದ ಗೌರವಾನ್ವಿತ ಡಾ. ನೆಟುಂಬೊ ನಂದಿ-ನದೈತ್ವಾ ಅವರನ್ನು ಭೇಟಿಯಾದರು. ಸ್ಟೇಟ್ ಹೌಸ್‌ ಗೆ ಆಗಮಿಸಿದ ಪ್ರಧಾನಮಂತ್ರಿಯವರನ್ನು ಅಧ್ಯಕ್ಷೆ ನಂದಿ-ನದೈತ್ವಾ ಅವರು ಆತ್ಮೀಯವಾಗಿ ಬರಮಾಡಿಕೊಂಡು, ಅವರಿಗೆ ವಿಧ್ಯುಕ್ತ ಸ್ವಾಗತವನ್ನು ನೀಡಿದರು. ಭಾರತದಿಂದ ನಮೀಬಿಯಾ ಗೆ ಪ್ರಧಾನಮಂತ್ರಿ ಮಟ್ಟದಲ್ಲಿ ಈ ಭೇಟಿಯು 27 ವರ್ಷಗಳ ನಂತರ ನಡೆದಿದೆ. ಅಲ್ಲದೆ, ಈ ವರ್ಷದ ಮಾರ್ಚ್‌ ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅಧ್ಯಕ್ಷೆ ನಂದಿ-ನದೈತ್ವಾ ಅವರು ಆಯೋಜಿಸಿದ ಮೊದಲ ದ್ವಿಪಕ್ಷೀಯ ಅಧಿಕೃತ ಭೇಟಿ ಇದಾಗಿತ್ತು.

ಹೀರೋಸ್ ಎಕ್ರೆ ಸ್ಮಾರಕದಲ್ಲಿ ನಮೀಬಿಯಾದ ಸಂಸ್ಥಾಪಕ ಪಿತಾಮಹ ಮತ್ತು ಮೊದಲ ರಾಷ್ಟ್ರಾಧ್ಯಕ್ಷ ಡಾ. ಸ್ಯಾಮ್ ನುಜೋಮಾ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ

July 09th, 07:42 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀರೋಸ್ ಎಕ್ರೆ ಸ್ಮಾರಕದಲ್ಲಿ ನಮೀಬಿಯಾದ ಸಂಸ್ಥಾಪಕ ಪಿತಾಮಹ ಮತ್ತು ಪ್ರಥಮ ರಾಷ್ಟ್ರಾಧ್ಯಕ್ಷ ಡಾ. ಸ್ಯಾಮ್ ನುಜೋಮಾ ಅವರಿಗೆ ಗೌರವ ನಮನ ಸಲ್ಲಿಸಿದರು.