ನೀತಿ ಆಯೋಗದ ಪೂರ್ಣಾವಧಿ ಸದಸ್ಯರಾಗಿ ನೇಮಕಗೊಂಡಿರುವ ಡಾ. ಆರ್. ಬಾಲಸುಬ್ರಮಣ್ಯಂ ಮತ್ತು ಡಾ. ಜೋರಾಮ್ ಅನಿಯಾ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
May 02nd, 09:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀತಿ ಆಯೋಗದ ಪೂರ್ಣಾವಧಿ ಸದಸ್ಯರಾಗಿ ನೇಮಕಗೊಂಡಿರುವ ಡಾ. ಆರ್. ಬಾಲಸುಬ್ರಮಣ್ಯಂ ಮತ್ತು ಡಾ. ಜೋರಾಮ್ ಅನಿಯಾ ಅವರನ್ನು ಅಭಿನಂದಿಸಿದ್ದಾರೆ.ಡಾ. ಆರ್. ಬಾಲಸುಬ್ರಹ್ಮಣ್ಯಂ ಅವರ 'ಪವರ್ ವಿಥಿನ್: ದಿ ಲೀಡರ್ಶಿಪ್ ಲೆಗಸಿ ಆಫ್ ನರೇಂದ್ರ ಮೋದಿ' ಎಂಬ ಪುಸ್ತಕದ ಪ್ರತಿಗೆ ಪ್ರಧಾನಮಂತ್ರಿಯವರಿಂದ ಸಹಿ
July 17th, 09:08 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಡಾ. ಆರ್. ಬಾಲಸುಬ್ರಹ್ಮಣ್ಯಂ ಅವರನ್ನು ಭೇಟಿ ಮಾಡಿ, ಅವರು ರಚಿಸಿದ 'ಪವರ್ ವಿಥಿನ್: ದಿ ಲೀಡರ್ಶಿಪ್ ಲೆಗಸಿ ಆಫ್ ನರೇಂದ್ರ ಮೋದಿ' ಎಂಬ ಪುಸ್ತಕದ ಪ್ರತಿಗೆ ಸಹಿ ಹಾಕಿದರು. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದ ಪ್ರಯಾಣವನ್ನು ಸೆರೆಹಿಡಿಯುವ ಪುಸ್ತಕವಾಗಿದ್ದು, ಪಾಶ್ಚಿಮಾತ್ಯ ಮತ್ತು ಭಾರತೀಯ ದೃಷ್ಟಿಕೋನಗಳ ಮೂಲಕ ನರೇಂದ್ರ ಮೋದಿಯವರ ನಾಯಕತ್ವವನ್ನು ವ್ಯಾಖ್ಯಾನಿಸಿ, ಸಾರ್ವಜನಿಕ ಸೇವೆಯ ಜೀವನವನ್ನು ಬಯಸುವ ಎಲ್ಲರಿಗೂ ಮಾರ್ಗಸೂಚಿಯನ್ನು ಒದಗಿಸುತ್ತದೆ.